ಲೋಕಸಭೆ ಮಾಜಿ ಸ್ಪೀಕರ್, ಕಮ್ಯುನಿಸ್ಟ್ ನಾಯಕ ಸೋಮನಾಥ ಚಟರ್ಜಿ ನಿಧನ

news18
Updated:August 13, 2018, 10:55 AM IST
ಲೋಕಸಭೆ ಮಾಜಿ ಸ್ಪೀಕರ್, ಕಮ್ಯುನಿಸ್ಟ್ ನಾಯಕ ಸೋಮನಾಥ ಚಟರ್ಜಿ ನಿಧನ
news18
Updated: August 13, 2018, 10:55 AM IST

ನ್ಯೂಸ್ 18 ಕನ್ನಡ


ಕೊಲ್ಕತ್ತ (ಆ.13): ಅನಾರೋಗ್ಯದಿಂದ ಬಳಲುತ್ತಿದ್ದ ಲೋಕಸಭೆಯ ಮಾಜಿ ಸ್ಪೀಕರ್ ಸೋಮನಾಥ ಚಟರ್ಜಿ (89) ಸೋಮವಾರ ಬೆಳಗ್ಗೆ ನಿಧನರಾದರು.


ಕಳೆದೊಂದು ವಾರದಿಂದ ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಚಟರ್ಜಿ ಅವರಿಗೆ  ಭಾನುವಾರ ಲಘು ಹೃದಯಾಘಾತವಾಗಿತ್ತು. ಚಟರ್ಜಿ ಅವರಿಗೆ ಐಸಿಸಿಯುನಲ್ಲಿ ಕೃತಕ ಆಮ್ಲಜನಕ ನೀಡಲಾಗಿತ್ತು.


ಕಳೆದ 40 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚಟರ್ಜಿ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಯಾದ ಮೂರು ದಿನದಲ್ಲಿಯೇ ಮತ್ತೆ ಅವರಿಗೆ ಕಿಡ್ನಿ ಸಂಬಂಧಿತ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಮತ್ತೆ ಅವರನ್ನು ಕಳೆದ ಮಂಗಳವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಹತ್ತು ಬಾರಿ ಲೋಕಸಭಾ ಸದಸ್ಯರಾಗಿದ್ದ ಚಟರ್ಜಿ ಸಿಪಿಐ(ಎಂ) ಕೇಂದ್ರೀಯ ಸಮಿತಿ ನಾಯಕರಾಗಿದ್ದರು. 2004-09ರ ಅವಧಿಯಲ್ಲಿ ಲೋಕಸಭಾ ಸ್ಪೀಕರ್ ಆಗಿದ್ದರು. 2008ರಲ್ಲಿ ಸಿಪಿಐ(ಎಂ) ಯುಪಿಎ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆದಾಗ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದ ಚಟರ್ಜಿ ಅವರನ್ನು ಸಿಪಿಐ(ಎಂ) ಅಮಾನತು ಮಾಡಿತ್ತು.


ಸೋಮನಾಥ ಚಟರ್ಜಿ ನಿಧನಕ್ಕೆ ಸಿಎಂ ಎಚ್​ಡಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ  ಸೇರಿದಂತೆ  ರಾಜ್ಯದ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.

 
Loading...


First published:August 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...