ಶಾರದಾ ಚಿಟ್​ಫಂಡ್​; 7 ದಿನಗಳ ನಂತರ ಕೋಲ್ಕತಾ ಮಾಜಿ ಪೊಲೀಸ್​ ಕಮಿಷನರ್​ನನ್ನು ಬಂಧಿಸಬಹುದು ಎಂದ ಸುಪ್ರೀಂಕೋರ್ಟ್​​

ಈ ಪ್ರಕರಣ ಸಂಬಂಧ ರಾಜೀವ್ ಕುಮಾರ್ ಅವರನ್ನು ಸಿಬಿಐ ಬಂಧಿಸಲು ಮುಂದಾದಾಗ ಕಳೆದ ಫೆಬ್ರವರಿ 5ರಂದು ಸುಪ್ರೀಂಕೋರ್ಟ್​, ರಾಜೀವ್​ ಕುಮಾರ್ ಅವರನ್ನು ಬಂಧಿಸದಂತೆ ರಕ್ಷಣೆ ನೀಡಿತ್ತು. ಹಾಗೂ ತನಿಖೆಗೆ ನಿಷ್ಠೆಯಿಂದ ಸಹಕರಿಸುವಂತೆ ರಾಜೀವ್​ಕುಮಾರ್​ಗೂ ತಿಳಿಸಿತ್ತು.

HR Ramesh | news18
Updated:May 17, 2019, 7:06 PM IST
ಶಾರದಾ ಚಿಟ್​ಫಂಡ್​; 7 ದಿನಗಳ ನಂತರ ಕೋಲ್ಕತಾ ಮಾಜಿ ಪೊಲೀಸ್​ ಕಮಿಷನರ್​ನನ್ನು ಬಂಧಿಸಬಹುದು ಎಂದ ಸುಪ್ರೀಂಕೋರ್ಟ್​​
ರಾಜೀವ್​ ಕುಮಾರ್
HR Ramesh | news18
Updated: May 17, 2019, 7:06 PM IST
ನವದೆಹಲಿ: ಕೋಲ್ಕತಾದ ನಿವೃತ್ತ ಪೊಲೀಸ್​ ಕಮಿಷನರ್​ ರಾಜೀವ್​ ಅವರನ್ನು ಬಂಧಿಸದಂತೆ ಸುಪ್ರೀಂಕೋರ್ಟ್​ ನೀಡಿದ್ದ ರಕ್ಷಣೆ ಇನ್ನೊಂದು ವಾರದ ನಂತರ ಹಿಂಪಡೆಯಾಗುವುದು ಎಂದು ಶುಕ್ರವಾರ ಆದೇಶ ನೀಡಿದೆ. ಹೀಗಾಗಿ ಹಿರಿಯ ಐಪಿಎಸ್ ಅಧಿಕಾರಿ ಏಳು ದಿನಗಳ ನಂತರ ಸಿಬಿಐನಿಂದ ಬಂಧನಕ್ಕೆ ಒಳಗಾಗುವ ಸಾಧ್ಯತೆ ಇದೆ.

ಕಾನೂನು ಪ್ರಕಾರ ಕೇಂದ್ರೀಯ ತನಿಖಾ ಸಂಸ್ಥೆ ಕ್ರಮ ತೆಗೆದುಕೊಳ್ಳಬಹುದು. ರಾಜೀವ್ ಕುಮಾರ್ ಅವರನ್ನು ಬಂಧಿಸಲು ಸಿಬಿಐ ಸ್ವತಂತ್ರವಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.

ವಿಚಾರವಣೆ ವೇಳೆ ಸಿಬಿಐ ಪರ ವಾದ ಮಂಡಿಸಿದ ವಕೀಲರು, ರಾಜೀವ್ ಕುಮಾರ್ ಅವರಿಗೆ ಬಂಧಿಸದಂತೆ ನೀಡಿರುವ ಮಧ್ಯಂತರ ರಕ್ಷಣೆಯನ್ನು ಹಿಂಪಡೆಯಬೇಕು. ರಾಜೀವ್ ಕುಮಾರ್, ಶಾರದಾ ಚಿಟ್​ಫಂಡ್​ ಪ್ರಕರಣ ವಿಶೇಷ ತನಿಖಾ ತಂಡದ  ಮುಖ್ಯಸ್ಥರಾಗಿದ್ದರು. ಆ ವೇಳೆ ಅವರು ಪ್ರಕರಣ ಸಂಬಂಧ ಪ್ರಮುಖ ಮತ್ತು ಮಹತ್ವಪೂರ್ಣ ಸಾಕ್ಷ್ಯಗಳನ್ನು ನಾಶಮಾಡಿದ್ದಾರೆ ಅಥವಾ ತಿರುಚಿದ್ದಾರೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ ಎಂದು ಮನವಿ ಮಾಡಿದರು.

ಆದಾಗ್ಯು, ರಾಜೀವ್ ಕುಮಾರ್ ಅವರ ಪರ ವಕೀಲರು ಪ್ರತಿವಾದ ಮಂಡಿಸಿ, ರಾಜೀವ್​ ಕುಮಾರನ್ನು ಸಿಬಿಐ ಬಂಧಿಸುತ್ತಿರುವುದು ಕೇವಲ ಅವಮಾನ ಮಾಡಲು ಮಾತ್ರ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್​ ನೇತೃತ್ವದ ನ್ಯಾಯಪೀಠದ ಗಮನಕ್ಕೆ ತಂದರು. ಮತ್ತು ಕಾನೂನು ಪ್ರಕ್ರಿಯೆಯನ್ನು ದುರುಪಯೋಗ ಮಾಡಿಕೊಳ್ಳಲು ಸಿಬಿಐಗೆ ಅವಕಾಶ ನೀಡಬಾರದು ಎಂದು ಕೇಳಿಕೊಂಡರು.

ರಾಜೀವ್ ಕುಮಾರ್ ಶಾರದಾ ಚಿಟ್​ ಫಂಡ್​ ಪ್ರಕರಣ ಸಂಬಂಧ ನೇಮಿಸಲಾಗಿದ್ದ ಪಶ್ಚಿಮಬಂಗಾಳ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿದ್ದರು. 2014ರ ಮೇ ನಲ್ಲಿ ಈ ಪ್ರಕರಣವನ್ನು ಸುಪ್ರೀಂಕೋರ್ಟ್​ ಸಿಬಿಐ ತನಿಖೆಗೆ ನಿರ್ದೇಶನ ನೀಡಿತ್ತು.

ಇದನ್ನು ಓದಿ: Mamata vs CBI | ಕೋಲ್ಕತ್ತ ಮಾಜಿ ಪೊಲೀಸ್​ ಕಮಿಷನರ್ ರಾಜೀವ್​ ಕುಮಾರ್ ಬಂಧನಕ್ಕೆ ಅವಕಾಶ ಕೇಳಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಸಿಬಿಐಈ ಪ್ರಕರಣ ಸಂಬಂಧ ರಾಜೀವ್ ಕುಮಾರ್ ಅವರನ್ನು ಸಿಬಿಐ ಬಂಧಿಸಲು ಮುಂದಾದಾಗ ಕಳೆದ ಫೆಬ್ರವರಿ 5ರಂದು ಸುಪ್ರೀಂಕೋರ್ಟ್​, ರಾಜೀವ್​ ಕುಮಾರ್ ಅವರನ್ನು ಬಂಧಿಸದಂತೆ ರಕ್ಷಣೆ ನೀಡಿತ್ತು. ಹಾಗೂ ತನಿಖೆಗೆ ನಿಷ್ಠೆಯಿಂದ ಸಹಕರಿಸುವಂತೆ ರಾಜೀವ್​ಕುಮಾರ್​ಗೂ ತಿಳಿಸಿತ್ತು.

ಪಶ್ಚಿಮಬಂಗಾಳ ಸಿಐಡಿಯಲ್ಲಿ ಹೆಚ್ಚುವರಿ ಪ್ರಧಾನ ನಿರ್ದೇಶಕರಾಗಿರುವ ರಾಜೀವ್​ಕುಮಾರ್ ಅವರನ್ನು ತೆಗೆಯುವಂತೆ ಚುನಾವಣಾ ಆಯೋಗ ಕಳೆದ ಬುಧವಾರ ಆದೇಶ ನೀಡಿದೆ. ಅವರ ಬಗ್ಗೆ ವರದಿ ನೀಡುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಗುರುವಾರ ಹೇಳಿತ್ತು.

'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ