• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಫರ್ನಿಚರ್, ಬೆಡ್​ಶೀಟ್​, ಟಿವಿಗಾಗಿಯೇ 82ಲಕ್ಷ ಖರ್ಚು ಮಾಡಿದ್ದರು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ!

ಫರ್ನಿಚರ್, ಬೆಡ್​ಶೀಟ್​, ಟಿವಿಗಾಗಿಯೇ 82ಲಕ್ಷ ಖರ್ಚು ಮಾಡಿದ್ದರು ಜಮ್ಮು ಕಾಶ್ಮೀರದ ಮಾಜಿ ಸಿಎಂ ಮೆಹಬೂಬ ಮುಫ್ತಿ!

ಮೆಹಬೂಬ ಮುಫ್ತಿ.

ಮೆಹಬೂಬ ಮುಫ್ತಿ.

ಮಾಹಿತಿ ಪ್ರಕಾರ, ಮುಫ್ತಿ ಅವರು ಸಿಎಂ ಆಗಿದ್ದಾಗ ಬೆಡ್​​ಶೀಟ್​​​, ಪೀಠೋಪಕರಣಗಳು, ಟಿವಿ ಹಾಗೂ ಇನ್ನಿತರೆ ವಸ್ತುಗಳನ್ನು ಖರೀದಿಸಲು ಸುಮಾರು 82 ಲಕ್ಷ ರೂಗಳನ್ನು ಖರ್ಚು ಮಾಡಿದ್ದರು ಎಂದು ತಿಳಿದುಬಂದಿದೆ. ಇದರಲ್ಲಿ ಒಂದು ದಿನದಲ್ಲಿ ​ ಕಾರ್ಪೆಟ್​ ಕೊಂಡುಕೊಳ್ಳಲು 28 ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದೆ ಓದಿ ...
  • Share this:

    ಶ್ರೀನಗರ(ಜ.06): ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರಿ ಬಂಗಲೆಯ ಅಲಂಕಾರಕ್ಕಾಗಿ ಹೆಚ್ಚುವರಿಯಾಗಿ ಪೀಠೋಪಕರಣಗಳು(ಫರ್ನಿಚರ್) ಮತ್ತು ಬೆಡ್​ಶೀಟ್​​ಗಳು, ಟಿವಿ ಸೇರಿ ಇತರೆ ವಸ್ತುಗಳ ಖರೀದಿಗೆ ಸುಮಾರು 82 ಲಕ್ಷ ರೂ ಖರ್ಚು ಮಾಡಿದ್ದರು ಎಂದು ತಿಳಿದು ಬಂದಿದೆ. ಇಷ್ಟು ವೆಚ್ಚದ ಹಣವನ್ನು ಕೇವಲ 6 ತಿಂಗಳ ತಮ್ಮ ಅಧಿಕಾರಾವಧಿಯಲ್ಲಿ ವ್ಯಯಿಸಿದ್ದರು ಎನ್ನಲಾಗಿದೆ. ವ್ಯಕ್ತಿಯೊಬ್ಬರು ಆರ್​ಟಿಐ(ಮಾಹಿತಿ ಹಕ್ಕು)ಗೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಮಾಹಿತಿಯನ್ನು ಬಹಿರಂಗಪಡಿಸಲಾಗಿದೆ. ಈ ಎಲ್ಲಾ ಖರ್ಚನ್ನು ಭಾರತ ಸರ್ಕಾರವೇ ಭರಿಸಿದೆ ಎಂದು ಆರ್​ಟಿಐ ತಿಳಿಸಿದೆ.


    ಮಾಹಿತಿ ಪ್ರಕಾರ, ಮುಫ್ತಿ ಅವರು ಸಿಎಂ ಆಗಿದ್ದಾಗ ಬೆಡ್​​ಶೀಟ್​​​, ಪೀಠೋಪಕರಣಗಳು, ಟಿವಿ ಹಾಗೂ ಇನ್ನಿತರೆ ವಸ್ತುಗಳನ್ನು ಖರೀದಿಸಲು ಸುಮಾರು 82 ಲಕ್ಷ ರೂಗಳನ್ನು ಖರ್ಚು ಮಾಡಿದ್ದರು ಎಂದು ತಿಳಿದುಬಂದಿದೆ. ಇದರಲ್ಲಿ ಒಂದು ದಿನದಲ್ಲಿ ​ ಕಾರ್ಪೆಟ್​ ಕೊಂಡುಕೊಳ್ಳಲು 28 ಲಕ್ಷ ರೂ.ಗಳನ್ನು ವ್ಯಯಿಸಿದ್ದಾರೆ ಎಂದು ತಿಳಿದು ಬಂದಿದೆ.


    ಉತ್ತರಪ್ರದೇಶ; 50 ವರ್ಷದ ಮಹಿಳೆಯ ಸಾಮೂಹಿಕ ಅತ್ಯಾಚಾರ-ಕೊಲೆ, 2 ಆರೋಪಿಗಳ ಬಂಧನ


    ಶ್ರೀನಗರದ ನಿವಾಸಿ ಇನಾಮ್​-ಅನ್​-ನಬಿ-ಸೌದಾಗರ್ ಅವರು ಆರ್​ಟಿಐ ಅರ್ಜಿ ಸಲ್ಲಿಸುವ ಮೂಲಕ ಈ ಮಾಹಿತಿಯನ್ನು ಕೇಳಿದ್ದರು. ಇದಾದ ನಂತರ ಪ್ರೋಟೋಕಾಲ್ ಮತ್ತು ಹಾಸ್ಪಿಟಾಲಿಟಿ ಇಲಾಖೆಯು, ಮೆಹಬೂಬಾ ಮುಫ್ತಿ ಅವರು ಸಿಎಂ ಆದ ಬಳಿಕ ಅಂದರೆ 2018ರ ಜನವರಿ ಮತ್ತು ಜೂನ್​ ನಡುವೆ ಸರ್ಕಾರಿ ವಸತಿಗಾಗಿ ಮಾಡಿದ ಖರ್ಚುಗಳ ಬಗ್ಗೆ ಎಲ್ಲಾ ಅಂಕಿ-ಅಂಶಗಳ ವಿವರಗಳನ್ನು ನೀಡಿದೆ.


    ಜೂನ್​ 2018ರಲ್ಲಿ ಮಾತ್ರ ಮುಫ್ತಿ ಅವರು 22 ಲಕ್ಷ ರೂಗಳ ಎಲ್​ಇಡಿ ಟಿವಿಗಳು ಸೇರಿದಂತೆ ಇತರೆ ವಸ್ತುಗಳಿಗೆ ಒಟ್ಟು 25 ಲಕ್ಷ ಹಣವನ್ನು ವ್ಯಯ ಮಾಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

    Published by:Latha CG
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು