annamalai | ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಇಂದು ಬಿಜೆಪಿಗೆ ಸೇರ್ಪಡೆ

ಇದೇ ವೇಳೇ ಅವರು ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ರಾಜಕೀಯದ ದ್ವಂದ್ವವನ್ನು ಹೊಂದಿರುವ ದ್ರಾವಿಡ ಪಕ್ಷಗಳನ್ನು ಸೇರುವುದಕ್ಕೆ ನನಗೆ ಆಸೆ ಇಲ್ಲ. ಅಣ್ಣಾದೂರೈ, ಪೆರಿಯಾರ್ ಮತ್ತು ಎಂಜಿಆರ್ ಆದರ್ಶಗಳು ಇಂದಿನ ನಾಯಕರ ಆದರ್ಶಗಳಿಗಿಂತ ಭಿನ್ನವಾಗಿವೆ ಎಂದು ಹೇಳಿದ್ದಾರೆ.

ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ

ಮಾಜಿ ಐಪಿಎಸ್​ ಅಧಿಕಾರಿ ಅಣ್ಣಾಮಲೈ

 • Share this:
  ಬೆಂಗಳೂರು: ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರು ಇಂದು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಲಿದ್ದಾರೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಅಣ್ಣಾಮಲೈ ಅವರು ಅಧಿಕೃತವಾಗಿ ಕಮಲ ಪಕ್ಷ ಸೇರಲಿದ್ದಾರೆ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಅಣ್ಣಾಮಲೈ, 2019 ರ ಮೇ ತಿಂಗಳಲ್ಲಿ ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿದ್ದರು.

  ಮೂಲತಃ ತಮಿಳುನಾಡಿನವರಾದ ಅಣ್ಣಾಮಲೈ ಅವರು ಪೊಲೀಸ್‌ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ತಾವು ರಾಜಕೀಯಕ್ಕೆ ಸೇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಅವರು ರಾಜಕೀಯ ಸೇರುವುದು ಈಗ ನಿಶ್ಚಿತವಾಗಿದೆ. ರಾಜಕೀಯಕ್ಕೆ ಸೇರುವ ಸಲುವಾಗಿಯೇ ಅವರು ಪೊಲೀಸ್‌ ಇಲಾಖೆಗೆ ರಾಜೀನಾಮೆ ನೀಡಿದ್ದರು, ಈ ಕಾರಣಕ್ಕಾಗಿಯೇ ಅವರು ಐಪಿಎಸ್‌ ಮಾಡಿದ್ದರು ಎನ್ನಲಾಗುತ್ತಿದೆ. ಅವರು ರಾಜೀನಾಮೆ ನೀಡಿದ ಬಳಿಕ ಆರ್​ಎಸ್​ಎಸ್​ನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಈ ಮೂಲಕ ತಾವು ಬಿಜೆಪಿ ಸೇರುವ ಸುಳಿವನನು ಆಗಲೇ ನೀಡಿದ್ದರು. ಅದರಂತೆ ಈಗ ಬಿಜೆಪಿ ಸೇರುತ್ತಿದ್ದಾರೆ.

  ಇದನ್ನು ಓದಿ: Petrol Rate | ಕಳೆದ 10 ದಿನಗಳಲ್ಲಿ 9 ಬಾರಿ ಪೆಟ್ರೋಲ್ ದರ ಏರಿಸಿದ ಕೇಂದ್ರ ಸರ್ಕಾರ

  ಮುಂದಿನ ವರ್ಷ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಅಣ್ಣಾಮಲೈ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ತಮಿಳುನಾಡಿನಲ್ಲಿ ಅಷ್ಟೆನೂ ಪ್ರಬಲವಾಗಿಲ್ಲದ ಬಿಜೆಪಿ ಈಗ ಯುವಕನ್ನು ಸೆಳೆಯುವಂತಹ ಖಡಕ್​ ಪೊಲೀಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರನ್ನು ಅಖಾಡಕ್ಕೆ ಇಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

  ಇದೇ ವೇಳೇ ಅವರು ಖಾಸಗಿ ಮಾಧ್ಯಮವೊಂದರ ಜೊತೆಗೆ ಮಾತನಾಡುತ್ತ ಅಣ್ಣಾಮಲೈ ಅವರು ತಮಿಳುನಾಡಿನಲ್ಲಿ ರಾಜಕೀಯದ ದ್ವಂದ್ವವನ್ನು ಹೊಂದಿರುವ ದ್ರಾವಿಡ ಪಕ್ಷಗಳನ್ನು ಸೇರುವುದಕ್ಕೆ ನನಗೆ ಆಸೆ ಇಲ್ಲ. ಅಣ್ಣಾದೂರೈ, ಪೆರಿಯಾರ್ ಮತ್ತು ಎಂಜಿಆರ್ ಆದರ್ಶಗಳು ಇಂದಿನ ನಾಯಕರ ಆದರ್ಶಗಳಿಗಿಂತ ಭಿನ್ನವಾಗಿವೆ ಎಂದು ಹೇಳಿದ್ದಾರೆ.
  Published by:HR Ramesh
  First published: