ಮತ್ತೊಬ್ಬ ಬಿಜೆಪಿ ನಾಯಕನ ಮೇಲೆ ಅತ್ಯಾಚಾರ ಆರೋಪ; ವಿಜಯ್​ ಜೋಲಿ ವಿರುದ್ಧ ದೂರು ದಾಖಲು

ಬಿಜೆಪಿ ನಾಯಕ ಜೋಲಿ ಫೆಬ್ರವರಿ 10ರಂದು ಆಪ್ನೋ ಘರ್​ ರೆಸಾರ್ಟ್​ನಲ್ಲಿ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿ, ಲೈಂಗಿಕ ಹಲ್ಲೆ ನಡೆಸಿದ್ದಾನೆ, ಎಂದು ಆರೋಪಿಸಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Latha CG | news18-kannada
Updated:September 23, 2019, 2:24 PM IST
ಮತ್ತೊಬ್ಬ ಬಿಜೆಪಿ ನಾಯಕನ ಮೇಲೆ ಅತ್ಯಾಚಾರ ಆರೋಪ; ವಿಜಯ್​ ಜೋಲಿ ವಿರುದ್ಧ ದೂರು ದಾಖಲು
ಬಿಜೆಪಿ ನಾಯಕ ವಿಜಯ್​ ಜೋಲಿ
Latha CG | news18-kannada
Updated: September 23, 2019, 2:24 PM IST
ನವದೆಹಲಿ(ಸೆ.23): ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದ ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಜೈಲು ಪಾಲಾಗಿರುವ ಬೆನ್ನಲ್ಲೇ, ಮತ್ತೊಬ್ಬ ಬಿಜೆಪಿ ನಾಯಕನ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ.   ದೆಹಲಿಯ ಮಾಜಿ ಬಿಜೆಪಿ ಎಂಎಲ್ಎ ವಿಜಯ್​ ಜೋಲಿ ವಿರುದ್ಧ ಅತ್ಯಾಚಾರ ಪ್ರಕರಣವೊಂದು ದಾಖಲಾಗಿದೆ. ದೂರು ನೀಡಿರುವ ಮಹಿಳೆ ತನಗೆ ಮಾದಕ ವಸ್ತು ನೀಡಿ, ಲೈಂಗಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮೂಲದ ಮಹಿಳೆ ಮಹಿಳಾ ಪೊಲೀಸ್​ ಠಾಣೆಯಲ್ಲಿ ಫೆಬ್ರವರಿ 21ರಂದು ದೂರು ನೀಡಿದ್ದರು. ಬಳಿಕ ಐಪಿಸಿ ಸೆಕ್ಷನ್​ 376(ಅತ್ಯಾಚಾರ), 328 ಮತ್ತು 506ರ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

'ಬಿಜೆಪಿ ನಾಯಕ ಜೋಲಿ ಫೆಬ್ರವರಿ 10ರಂದು ಆಪ್ನೋ ಘರ್​ ರೆಸಾರ್ಟ್​ನಲ್ಲಿ ನನಗೆ ಬಲವಂತವಾಗಿ ಮದ್ಯಪಾನ ಮಾಡಿಸಿ, ಲೈಂಗಿಕ ಹಲ್ಲೆ ನಡೆಸಿದ್ದಾನೆ,' ಎಂದು ಆರೋಪಿಸಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜೋಲಿ ಮಾಡಿರುವ ಆರೋಪಗಳು

2003-2008ರವರೆಗೆ ಬಿಜೆಪಿ ಶಾಸಕರಾಗಿದ್ದ ಜೋಲಿ, ಓರ್ವ ಮಹಿಳೆ ತನಗೆ ಬ್ಲಾಕ್​ ಮೇಲ್​ ಮಾಡುತ್ತಿದ್ದಾಳೆ ಎಂದು ಆ ಮಹಿಳೆ ವಿರುದ್ಧ ಫೆಬ್ರವರಿ 17ರಲ್ಲಿ ದೂರು ದಾಖಲಿಸಿದ್ದರು.  ಆಕೆ ಕಟ್ಟು ಕಥೆ ಹೇಳಿದ್ದಾರೆ. ನನ್ನ ರಾಜಕೀಯ ಇಮೇಜ್​ ಹಾಳುಮಾಡಲು ಈ ತಂತ್ರ ರೂಪಿಸಿದ್ದಾರೆ ಎಂದು ಜೋಲಿ ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್​​ಗೆ ನೂತನ 4 ನ್ಯಾಯಮೂರ್ತಿಗಳ ನೇಮಕ

ದೂರು ನೀಡಿರುವ ಮಹಿಳೆ ಬಿಜೆಪಿಯ ಮಹಿಳಾ ಘಟಕದ ಸದಸ್ಯೆಯಾಗಿದ್ದು, ಫೆಬ್ರವರಿ 10ರಂದು ರೆಸಾರ್ಟ್​​ನಲ್ಲಿ ನನ್ನನ್ನು ಏಕಾಂಗಿಯಾಗಿ ಭೇಟಿಯಾಗಿದ್ದರು. ಆಗ ಆಕೆ ನನ್ನ ಬಳಿ 5 ಲಕ್ಷ ಸುಲಿಗೆ ಮಾಡಲು ಯತ್ನಿಸಿದಳು. ನಾನು ಕೊಡಲು ಒಪ್ಪದಿದ್ದಾಗ ನನ್ನ ವಿರುದ್ಧ ಅತ್ಯಾಚಾರದ ಕೇಸ್​ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ಜೋಲಿ ಗಂಭೀರ ಆರೋಪ ಮಾಡಿದ್ದಾರೆ.
Loading...

ಮಹಿಳೆ ವಿರುದ್ಧ ಎಫ್​ಐಆರ್​ ದಾಖಲು

ಐಪಿಸಿ ಸೆಕ್ಷನ್​ 384(ಸುಲಿಗೆ), 120ಬಿ ಮತ್ತು ಪ್ರಕರಣಕ್ಕೆ  ಸಂಬಂಧಿಸಿದ ಇನ್ನಿತರೆ ಸೆಕ್ಷನ್​ಗಳ ಅಡಿಯಲ್ಲಿ ಮಹಿಳೆ ವಿರುದ್ಧ ಖಿದ್ಕಿ ದೌಲಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ಜೋಲಿ ಮಹಿಳೆ ವಿರುದ್ಧ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುಲಿಗೆ ಮತ್ತು ಬೆದರಿಕೆ ಮಾಡಿದ್ದಾಳೆಂದು ನಾನು ಮಹಿಳೆ ವಿರುದ್ಧ ದೂರು ನೀಡಿದ ಬಳಿಕ, ನನ್ನ ವಿರುದ್ಧ ಪಿತೂರಿ ಮಾಡಲು ಹೀಗೆ ಮಾಡಿದ್ದಾರೆ. ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿದ್ದಾರೆ ಎಂದು ಜೋಲಿ ಆರೋಪಿಸಿದ್ದಾರೆ. 

First published:September 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...