ಮಾಜಿ ಸಿಎಂ ಸಿದ್ದರಾಮಯ್ಯಗೆ ಎಸ್​ಪಿಜಿ-ಬ್ಲಾಕ್​​ ಕಮಾಂಡೋ ಭದ್ರತೆ?

ಸಿದ್ದರಾಮಯ್ಯನವರ ಆಪ್ತರಾದ ಅಶೋಕ್ ಪಟ್ಟಣಶೆಟ್ಟಿ, ಪ್ರಕಾಶ್ ರಾಥೋಡ್ ಎಸ್ ಪಿ ಜಿ ಕಮಾಂಡೋಗಳಂತೆ. ಇವರಿಬ್ಬರೂ ಯಾವಾಗಲೂ ಸಿದ್ದರಾಮಯ್ಯನ ರ ಅಕ್ಕಪಕ್ಕ ಇರುವುದರಿಂದ ಇವರನ್ನು ಎಸ್ ಪಿಜಿ ಅಂತಾ ಕರೆಯಲಾಗುತ್ತದೆಯಂತೆ. 

news18-kannada
Updated:January 15, 2020, 2:04 PM IST
ಮಾಜಿ ಸಿಎಂ ಸಿದ್ದರಾಮಯ್ಯಗೆ ಎಸ್​ಪಿಜಿ-ಬ್ಲಾಕ್​​ ಕಮಾಂಡೋ ಭದ್ರತೆ?
ಸಿದ್ದರಾಮಯ್ಯನವರ ಆಪ್ತರಾದ ಅಶೋಕ್ ಪಟ್ಟಣಶೆಟ್ಟಿ, ಪ್ರಕಾಶ್ ರಾಥೋಡ್ ಎಸ್ ಪಿ ಜಿ ಕಮಾಂಡೋಗಳಂತೆ. ಇವರಿಬ್ಬರೂ ಯಾವಾಗಲೂ ಸಿದ್ದರಾಮಯ್ಯನ ರ ಅಕ್ಕಪಕ್ಕ ಇರುವುದರಿಂದ ಇವರನ್ನು ಎಸ್ ಪಿಜಿ ಅಂತಾ ಕರೆಯಲಾಗುತ್ತದೆಯಂತೆ. 
  • Share this:
ನವದೆಹಲಿ(ಜ.15): ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್​ ಗಾಂಧಿಯವರಿಗೆ ಕೊಟ್ಟಿದ್ದ ಎಸ್​ಪಿಜಿ ಭದ್ರತೆಯನ್ನೇ ಕೇಂದ್ರ ಸರ್ಕಾರ ವಾಪಸ್​ ತೆಗೆದುಕೊಂಡಿದೆ. ಇನ್ನೂ, ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಎಸ್​ಪಿಜಿ-ಬ್ಲಾಕ್​ ಕಮಾಂಡೋ ಭದ್ರತೆ ಇದೆ ಎಂದರೆ ನೀವು ನಂಬ್ತೀರಾ? ನಂಬಲೇಬೇಕು, ಯಾಕೆಂದರೆ ಇದು ನಿಜ.

ಸಿದ್ದರಾಮಯ್ಯನವರಿಗೆ ಎಸ್ಪಿಜಿ-ಬ್ಲಾಕ್​​ ಕಮಾಂಡೋ ಭದ್ರತೆ ಇರುವುದು ನಿಜ. ಅಷ್ಟಕ್ಕೂ ಈ ಎಸ್​ಪಿಜಿ ಮತ್ತು ಬ್ಲಾಕ್​ ಕಮಾಂಡೋ ಭದ್ರತೆ ಕೊಟ್ಟಿರುವುದು ಕೇಂದ್ರ ಸರ್ಕಾರವೂ ಅಲ್ಲ. ರಾಜ್ಯ ಸರ್ಕಾರವೂ ಅಲ್ಲ, ಅಥವಾ ಸಿದ್ದರಾಮಯ್ಯನವರೇ ಮಾಡಿಕೊಂಡಿರುವ ವ್ಯವಸ್ಥೆಯೂ ಅಲ್ಲ. ಬದಲಾಗಿ ಸಿದ್ದರಾಮಯ್ಯನವರ ಆಪ್ತರು ನೀಡಿರುವ ಉಡುಗೊರೆ ಆಗಿದೆ.

‘ನಿರಾಣಿಯನ್ನು ಮಂತ್ರಿ ಮಾಡಲೇಬೇಕೆಂದು ಸಿಎಂಗೆ ಸ್ವಾಮೀಜಿ ಬೆದರಿಕೆ ಹಾಕುವುದು ಸರಿಯಲ್ಲ‘: ದಿನೇಶ್​​ ಗುಂಡೂರಾವ್​​

ಸಿದ್ದರಾಮಯ್ಯನವರ ಆಪ್ತರಾದ ಅಶೋಕ್ ಪಟ್ಟಣಶೆಟ್ಟಿ, ಪ್ರಕಾಶ್ ರಾಥೋಡ್ ಎಸ್ ಪಿ ಜಿ ಕಮಾಂಡೋಗಳಂತೆ. ಇವರಿಬ್ಬರೂ ಯಾವಾಗಲೂ ಸಿದ್ದರಾಮಯ್ಯನ ರ ಅಕ್ಕಪಕ್ಕ ಇರುವುದರಿಂದ ಇವರನ್ನು ಎಸ್ ಪಿಜಿ ಅಂತಾ ಕರೆಯಲಾಗುತ್ತದೆಯಂತೆ. ಇನ್ನು, ಶಾಸಕರಾದ ರಾಘವೇಂದ್ರ ಹಿಟ್ನಾಳ್ ಮತ್ತು ಭೀಮಾನಾಯಕ್ ಬ್ಲಾಕ್ ಕಮಾಂಡೋಗಳಂತೆ. ಎಸ್ ಪಿ ಜಿ ಇಲ್ಲದೇ ಇದ್ದಾಗ ಈ ಬ್ಲಾಕ್ ಕಮಾಂಡೋಗಳು ಸಿದ್ದರಾಮಯ್ಯನವರ ಭದ್ರತೆಯ ಉಸ್ತುವಾರಿ ನೋಡಿಕೊಳ್ಳುತ್ತಾರಂತೆ.

ಕೆಲವೊಮ್ಮೆ ಈ ಎಸ್ ಪಿಜಿ ಮತ್ತು ಬ್ಲಾಕ್ ಕಮಾಂಡೋ ನಡುವೆ ಪೈಪೋಟಿ ಕೂಡ ಇರುತ್ತಂತೆ. ಎಸ್ ಪಿಜಿ, ಬ್ಲಾಕ್ ಕಮಾಂಡೋಗಳನ್ನು ಹೊರತುಪಡಿಸಿ ಸಿದ್ದರಾಮಯ್ಯ ಅವರಿಗೆ ಬೇರಾವುದೇ ಸೈಲೆಂಟ್ ಆಪರೇಷನ್ ಟೀಮ್ ಇಲ್ಲವಂತೆ. ಹಾಗಂತ ಹೇಳಿದವರು ಶಾಸಕ ಭೈರತಿ ಸುರೇಶ್. ಇನ್ನೂ ಜಮೀರ್ ಅಹಮದ್ ರಾಜಕೀಯ ಕಾರ್ಯದರ್ಶಿಯಂತೆ.

ಗರ್ಭಿಣಿಯನ್ನು ಹೆಗಲ ಮೇಲೆ ಹೊತ್ತು ಹಿಮದಲ್ಲಿ ಸಾಗಿದ ಯೋಧರು; ವಿಡಿಯೋ ನೋಡಿ ಸಲಾಂ ಎಂದ ಪ್ರಧಾನಿ ಮೋದಿ
Published by: Latha CG
First published: January 15, 2020, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading