• Home
  • »
  • News
  • »
  • national-international
  • »
  • Uday Lalit: ನಿವೃತ್ತಿ ಬಳಿಕವೂ ಮಾಜಿ ಸಿಜೆಐ ಬಳಿ ಇದ್ದಾರೆ 28 ಸಿಬ್ಬಂದಿಗಳು, ಅಷ್ಟಕ್ಕೂ ಇಷ್ಟೊಂದು ವರ್ಕರ್ಸ್​​​ ಯಾಕೆ?

Uday Lalit: ನಿವೃತ್ತಿ ಬಳಿಕವೂ ಮಾಜಿ ಸಿಜೆಐ ಬಳಿ ಇದ್ದಾರೆ 28 ಸಿಬ್ಬಂದಿಗಳು, ಅಷ್ಟಕ್ಕೂ ಇಷ್ಟೊಂದು ವರ್ಕರ್ಸ್​​​ ಯಾಕೆ?

ಉದಯ್ ಉಮೇಶ್ ಲಲಿತ್

ಉದಯ್ ಉಮೇಶ್ ಲಲಿತ್

Uday Lalit: ನಿವೃತ್ತ ನ್ಯಾಯಮೂರ್ತಿ ಉದಯ್ ಲಲಿತ್ (Uday Lalit) ಅವರು ಒಬ್ಬ ಮೇಧಾವಿ, ಚಾಣಾಕ್ಷ್ಯರು. ಆಗಸ್ಟ್ 2014ರಲ್ಲಿ ನ್ಯಾಯಾಧೀಶರಾಗಿ ಉನ್ನತೀಕರಿಸುವ ಮೊದಲು, ಲಲಿತ್ ಅವರು ಹಲವಾರು ವಿವಾದಾತ್ಮಕ ಪ್ರಕರಣಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. 

  • Trending Desk
  • 3-MIN READ
  • Last Updated :
  • Share this:

ನಿವೃತ್ತ ನ್ಯಾಯಮೂರ್ತಿ ಉದಯ್ ಲಲಿತ್ (Uday Lalit) ಅವರು ಒಬ್ಬ ಮೇಧಾವಿ, ಚಾಣಾಕ್ಷ್ಯರು. ಆಗಸ್ಟ್ 2014ರಲ್ಲಿ ನ್ಯಾಯಾಧೀಶರಾಗಿ ಉನ್ನತೀಕರಿಸುವ ಮೊದಲು, ಲಲಿತ್ ಅವರು ಹಲವಾರು ವಿವಾದಾತ್ಮಕ ಪ್ರಕರಣಗಳಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ಬಳಿಕವೂ ಸಹ ನಿರಂತರವಾಗಿ ಕೆಲಸ ಮಾಡುತ್ತಿರುವ ಮಾಜಿ ಸಿಜೆಐ ಉದಯ್ ಲಲಿತ್ ಬಳಿ 28 ಸಿಬ್ಬಂದಿ (Staff) ಕೆಲಸ ಮಾಡುತ್ತಿದ್ದಾರಂತೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯ ನಿವಾಸದಲ್ಲಿ ಕೆಲಸ ಮಾಡುವ ಅಧಿಕೃತ ಗುಮಾಸ್ತರು ಹಾಗೂ ಸಹಾಯಕ ಸಿಬ್ಬಂದಿಯ ಅಂಕಿಅಂಶಗಳನ್ನು ನೋಡುವುದಾದರೆ, ಈ ವಿಚಾರವಾಗಿ ಸುಪ್ರೀಂಕೋರ್ಟ್‌ನ ನಿವೃತ್ತಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ದಾಖಲೆ ನಿರ್ಮಿಸಲಿದ್ದಾರೆ ಎಂದು ಹೇಳಬಹುದು.


ಈ ಹಿಂದೆ 40ಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದ್ದ‌  ಲಲಿತ್:


ಸುಪ್ರೀಂ ಕೋರ್ಟ್ ಸಿಜೆಐ ಆಗಿ 74 ದಿನ ಕಾರ್ಯ ನಿರ್ವಹಿಸಿದ ಉದಯ್ ಲಲಿತ್ ಅವರು ನೆಲೆಸಿದ್ದ ಅಕ್ಬರ್ ರಸ್ತೆ ನಂ 19 ಅಧಿಕೃತ ನಿವಾಸದಲ್ಲಿ 40ಕ್ಕೂ ಹೆಚ್ಚು ಮಂದಿಯನ್ನು ನಿಯೋಜಿಸಲಾಗಿತ್ತು. ರಾಷ್ಟ್ರಪತಿ ಭವನದಲ್ಲಿ ಅಥವಾ ಪ್ರಧಾನಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಸಹಾಯಕ ಸಿಬ್ಬಂದಿಯನ್ನು ಹೊರತುಪಡಿಸಿ, ದೇಶದ ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗುಮಾಸ್ತರು ಹಾಗೂ ಸಹಾಯಕ ಸಿಬ್ಬಂದಿಯನ್ನು ತಮ್ಮ ನಿವಾಸಗಳಲ್ಲಿ ಹೊಂದಿರುವುದಿಲ್ಲ.


ಆಗಸ್ಟ್ 27 ರಿಂದ ನವೆಂಬರ್ 8ರ ವರೆಗೆ ಭಾರತದ 49ನೇ ಸಿಜೆಐ ಆಗಿದ್ದ ನ್ಯಾಯಮೂರ್ತಿ ಲಲಿತ್ ಅವರು ತಮ್ಮ ಮನೆ ಮತ್ತು ಕಚೇರಿಯ ಸುಗಮ ಕಾರ್ಯನಿರ್ವಹಣೆಗಾಗಿ ಈ ಎಲ್ಲಾ ಸಿಬ್ಬಂದಿಗಳನ್ನು ತೊಡಗಿಸಿಕೊಂಡಿದ್ದರು. ಪ್ರಸ್ತುತ ನಿವೃತ್ತಿಯ ನಂತರ ಈ ಸಿಬ್ಬಂದಿಗಳಲ್ಲಿ ಕೆಲವರನ್ನು ಕೈಬಿಟ್ಟಿದ್ದಾರೆ. ಆದರೂ ಸಹ, ನಿವೃತ್ತರಾಗಿ ಒಂದೂವರೆ ತಿಂಗಳು ಕಳೆದರೂ 19, ಅಕ್ಬರ್ ರಸ್ತೆಯಲ್ಲಿನ ನಿವಾಸದಲ್ಲಿ ಈಗಲೂ 28 ಗುಮಾಸ್ತರು ಹಾಗೂ ಸಹಾಯಕ ಸಿಬ್ಬಂದಿ ಇವರ ಜೊತೆ ಕೆಲಸ ಮಾಡುತ್ತಿದ್ದಾರೆ.


ಸ್ವಚ್ಛತೆ ಹಾಗೂ ನಿರ್ವಹಣೆ ಕಾರ್ಯಗಳಿಗಾಗಿ ಸುಪ್ರೀಂಕೋರ್ಟ್ ಹೆಚ್ಚಿನ ಭಾಗವನ್ನು ಹೊರಗುತ್ತಿಗೆ ನೀಡಿರುವ ಬಿವಿಜಿ ಇಂಡಿಯಾ ಕಂಪನಿಗೆ ಸೇರಿದ ಕೆಲವು ಸಿಬ್ಬಂದಿಗಳು ಇದರಲ್ಲಿದ್ದಾರೆ. ಈ ಹಿಂದಿನ ಸಿಜೆಐಗಳು ತಮ್ಮ ಅಧಿಕೃತ ನಿವಾಸದಲ್ಲಿ ಸರಾಸರಿ 12ರಿಂದ 15 ಸಹಾಯಕ ಸಿಬ್ಬಂದಿಯನ್ನು ಹೊಂದಿದ್ದರು ಮತ್ತು ನಿವೃತ್ತಿಯ ನಂತರ ಕೇವಲ ಇಬ್ಬರು ಅಥವಾ ಮೂವರನ್ನು ಮಾತ್ರ ಉಳಿಸಿಕೊಳ್ಳುತ್ತಿದ್ದರು. ಅವರು ನಿವೃತ್ತಿ ನಂತರ ದಿಲ್ಲಿಯಲ್ಲಿಯೇ ಉಳಿದುಕೊಳ್ಳಲು ಬಯಸಿದ್ದರೆ ಅಥವಾ ಅವರು ತಮ್ಮ ತವರು ರಾಜ್ಯಕ್ಕೆ ಮರಳಲು ನಿರ್ಧರಿಸಿದರೆ ಸಿಬ್ಬಂದಿಗಳನ್ನು ಸಂಬಂಧಿತ ಹೈಕೋರ್ಟ್ ಸಿಬ್ಬಂದಿ ನೇಮಕ ಮಾಡುತ್ತದೆ.


ಶಹಜಹಾನ್ ರಸ್ತೆಯಲ್ಲಿನ ಬಂಗಲೆ ನಿರಾಕರಿಸಿದ ಲಿಲಿತ್


ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನಿಯಮ, 1959ಕ್ಕೆ ಆಗಸ್ಟ್‌ನಲ್ಲಿ ತಿದ್ದುಪಡಿ ತಂದಿದ್ದ ಕೇಂದ್ರ ಸರ್ಕಾರ, ನಿವೃತ್ತ ಸಿಜೆಐಗಳಿಗೆ ಆರು ತಿಂಗಳವರೆಗೆ ಬಾಡಿಗೆ ರಹಿತ VII ಮಾದರಿ ನಿವಾಸಗಳನ್ನು ನೀಡಲು ನಿರ್ಧರಿಸಿತ್ತು. ನಿವೃತ್ತ ಸಿಜೆಐ ಎನ್‌ವಿ ರಮಣ ಅವರಿಗೆ ತುಘಲಕ್ ರಸ್ತೆಯಲ್ಲಿ ಆರು ತಿಂಗಳಿಗೆ ನಿವಾಸ ಹಂಚಿಕೆ ಮಾಡಿತ್ತು. ಶಹಜಹಾನ್ ರಸ್ತೆಯಲ್ಲಿ ಲಲಿತ್ ಅವರಿಗೂ ಸಹ ಮನೆ ನೀಡಲಾಗಿತ್ತು. ಆದರೆ ಇವರು ಕಟ್ಟಡ ಸರಿಯಾಗಿಲ್ಲ ಎಂದು ಪ್ರಸ್ತಾಪವನ್ನು ತಿರಸ್ಕರಿಸಿದರು.


ನಂ. 17 ಸಫ್ದರ್‌ಜಂಗ್ ರಸ್ತೆಯಲ್ಲಿನ ಬಂಗಲೆಗೆ ನ್ಯಾ. ಲಲಿತ್


ಇನ್ನೂ ಹೊಸ ಸಿಜೆಐ ಡಿವೈ ಚಂದ್ರಚೂಡ್ ಅವರು 19 ಅಕ್ಬರ್ ರಸ್ತೆ ನಿವಾಸಕ್ಕೆ ಸ್ಥಳಾಂತರಗೊಳ್ಳಲು ನಿರ್ಧರಿಸಿದ್ದರಿಂದ, 17 ಸಫ್ದರ್‌ಜಂಗ್ ರಸ್ತೆಯಲ್ಲಿನ ಬಂಗಲೆಗೆ ಹೋಗುವಂತೆ ನ್ಯಾ. ಲಲಿತ್ ಅವರಿಗೆ ಸುಪ್ರೀಂಕೋರ್ಟ್ ಮನವಿ ಮಾಡಿತ್ತು. ಅದನ್ನು ಅವರು ಒಪ್ಪಿಕೊಂಡಿದ್ದಾರೆ. ಈ ಹಿಂದೆ ನ್ಯಾ. ಎಲ್ ನಾಗೇಶ್ವರರಾವ್, ಸಫ್ದರ್‌ಜಂಗ್ ಬಂಗಲೆಯಲ್ಲಿ ವಾಸವಿದ್ದರು. ಸದ್ಯ ಅಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದು, ಹೊಸ ವರ್ಷದಲ್ಲಿ ಲಲಿತ್ ಅವರು ಅಲ್ಲಿಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ.


ಇದನ್ನೂ ಓದಿ: PM Modi Mother Health Updates: ಹದಗೆಟ್ಟ ಪ್ರಧಾನಿ ಮೋದಿ ತಾಯಿ ಹೀರಾಬೆನ್ ಮೋದಿ ಆರೋಗ್ಯ, ಆಸ್ಪತ್ರೆಗೆ ದಾಖಲು


ಅಲ್ಲಿಯೂ ಸಹ ನ್ಯಾ ಲಲಿತ್ ಅವರು ತಾವು ಕಚೇರಿಯಲ್ಲಿ ಬಳಸಿಕೊಂಡಿದ್ದ ಬಹುತೇಕ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ. ಪ್ರಸ್ತುತ ತಮ್ಮ ಬಳಿ ಇರುವ 28 ನೌಕರರಲ್ಲಿ, ಅಕ್ಬರ್ ರಸ್ತೆಯಿಂದ ಸಫ್ದರ್‌ಜಂಗ್ ರಸ್ತೆಯ ಬಂಗಲೆಗೆ ಸ್ಥಳಾಂತರವಾದ ಬಳಿಕ ಹನ್ನೆರಡು ಜನರನ್ನು ಉಳಿಸಿಕೊಳ್ಳಲು ಅನುಮತಿ ನೀಡುವಂತೆ ಮನವಿ ಮಾಡಿದ್ದರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಜನವರಿಯಲ್ಲಿ ಐವರು ಹೊಸ ನ್ಯಾಯಮೂರ್ತಿಗಳ ನೇಮಕವಾಗುವ ಸಾಧ್ಯತೆ ಇದೆ. ಸುಪ್ರೀಂಕೋರ್ಟ್‌ನಿಂದ ಬಂಗಲೆಯನ್ನು ನ್ಯಾ. ಲಲಿತ್ ಪಡೆದುಕೊಳ್ಳುತ್ತಿರುವುದರಿಂದ ನೂತನ ನ್ಯಾಯಮೂರ್ತಿಗಳಿಗೆ ನಿವಾಸಗಳ ಕೊರತೆ ಎದುರಾಗಲಿದೆ.


ಅಕ್ಬರ್ ರಸ್ತೆ ನಿವಾಸದ ಇತಿಹಾಸ


ಅಕ್ಬರ್ ರಸ್ತೆ ನಿವಾಸ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಈ ನಿವಾಸವನ್ನು 1977ರಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಫಖ್ರುದ್ದೀನ್ ಅಲಿ ಅಹ್ಮದ್ ಅವರ ಪತ್ನಿ ಬೇಗಂ ಅಬಿದಾ ಅಹ್ಮದ್ ಅವರಿಗೆ ಆರಂಭದಲ್ಲಿ ಹಂಚಿಕೆ ಮಾಡಲಾಗಿತ್ತು. ಅವರ ವಕೀಲ ಮಗ ಬಾದರ್ ಡುರೆಜ್ ಅಹ್ಮದ್ ಅವರು 2002ರಲ್ಲಿ ದಿಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾದಾಗ ಅದೇ ಬಂಗಲೆಯಲ್ಲಿ ವಾಸವಿದ್ದರು.


2003ರಲ್ಲಿ ತಾಯಿಯ ನಿಧನದ ಬಳಿಕ ಆ ಬಂಗಲೆಯನ್ನು ಅಹ್ಮದ್ ಅವರಿಗೆ ನೀಡಲಾಗಿತ್ತು. ನ್ಯಾ. ಅಹ್ಮದ್ ಅವರನ್ನು 2017ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಸಿಜೆಯನ್ನಾಗಿ ನೇಮಿಸಿದ ನಂತರ ಅದು ಸುಪ್ರೀಂಕೋರ್ಟ್ ನಿಯಂತ್ರಣಕ್ಕೆ ಬಂದಿತ್ತು.

Published by:shrikrishna bhat
First published: