HOME » NEWS » National-international » FORMER CJI RANJAN GOGOI TAKES OATH AS RAJYA SABHA MEMBER IN PRESENCE OF MODI SHAH AND CONGRESS SHOUTS DEAL SNVS

ಕಾಂಗ್ರೆಸ್ಸಿಗರ ಪ್ರತಿಭಟನೆ ನಡುವೆ ರಂಜನ್ ಗೊಗೋಯ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ಸ್ವೀಕಾರ

65 ವರ್ಷದ ಗೊಗೋಯ್ ಅವರು 13 ತಿಂಗಳ ಕಾಲ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿ ಕಳೆದ ನವೆಂಬರ್​ನಲ್ಲಿ ನಿವೃತ್ತರಾಗಿದ್ದರು.

news18
Updated:March 19, 2020, 1:28 PM IST
ಕಾಂಗ್ರೆಸ್ಸಿಗರ ಪ್ರತಿಭಟನೆ ನಡುವೆ ರಂಜನ್ ಗೊಗೋಯ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ಸ್ವೀಕಾರ
ರಂಜನ್ ಗೊಗೋಯ್
  • News18
  • Last Updated: March 19, 2020, 1:28 PM IST
  • Share this:
ನವದೆಹಲಿ(ಮಾ. 19): ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಇಂದು ರಾಜ್ಯಸಭಾ ಸದಸ್ಯರಾಗಿ ಸಂಸತ್​ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಬೆಳಗ್ಗೆ 11ಗಂಟೆಗೆ ಅವರು ಪ್ರಮಾಣ ವಚನ ಸ್ವೀಕರಿಸುವಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಕೂಡ ಉಪಸ್ಥಿತರಿದ್ದರು. ಈ ವೇಳೆ, ಕಾಂಗ್ರೆಸ್ ಪಕ್ಷದ ಹಲವು ಸದಸ್ಯರು ತೀವ್ರ ಪ್ರತಿಭಟನೆಗಳನ್ನ ನಡೆಸಿದರು. ‘ಶೇಮ್’, ’ಡೀಲ್’ ಇತ್ಯಾದಿ ಆಕ್ರೋಶಭರಿತ ನುಡಿಗಳು ಕೇಳಿಬಂದವು. ಮಾಜಿ ಸಿಜೆಐ ರಂಜನ್ ಗೋಗೊಯ್ ಅವರು ಬಿಜೆಪಿಗೆ ಮಾರಾಟಗೊಂಡಿದ್ದಾರೆ ಎಂಬುದು ಕಾಂಗ್ರೆಸ್ಸಿಗರ ಆರೋಪವಾಗಿದೆ.

65 ವರ್ಷದ ಗೊಗೋಯ್ ಅವರು 13 ತಿಂಗಳ ಕಾಲ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿ ಕಳೆದ ನವೆಂಬರ್​ನಲ್ಲಿ ನಿವೃತ್ತರಾಗಿದ್ದರು. ರಾಜ್ಯಸಭೆಗೆ ಆಯ್ಕೆಯಾದ ಮೊದಲ ನಿವೃತ್ತ ಸಿಜೆಐ ಅವರಾಗಿದ್ದಾರೆ. ಮೂರು ದಿನಗಳ ಹಿಂದೆ (ಮಾ. 16) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಂಜನ್ ಗೋಗೊಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದ್ದರು. ಕೆಟಿಎಸ್ ತುಳಸಿ ಅವರಿಂದ ತೆರವಾದ ಸ್ಥಾನಕ್ಕೆ ರಂಜನ್ ಗೊಗೋಯ್ ಅವರು ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್‌; ನಿರಂತರ ಕುಸಿತದ ಹಾದಿಯಲ್ಲಿ ವಿಶ್ವ ಷೇರುಪೇಟೆ, ಮೌಲ್ಯ ಕಳೆದುಕೊಳ್ಳುತ್ತಿರುವ ರೂಪಾಯಿ

ಅಸ್ಸಾಮ್ ರಾಜ್ಯದವರಾದ ರಂಜನ್ ಗೊಗೋಯ್ ಅವರು ಮಾಜಿ ಸಿಎಂ ಕೇಸಬ್ ಚಂದ್ರ ಗೋಗೊಯ್ ಅವರ ಮಗ. ದೇಶದ 48ನೇ ಮುಖ್ಯನ್ಯಾಯಮೂರ್ತಿಯಾಗಿ ಕೆಲಸ ಮಾಡುವ ಮುನ್ನ ಅವರು ಮುಖ್ಯನ್ಯಾಯಮೂರ್ತಿ ವಿರುದ್ಧವೇ ಬಹಿರಂಗವಾಗಿ ಬಂಡೆದ್ದು ಗಮನ ಸೆಳೆದಿದ್ದರು. ಮುಖ್ಯನ್ಯಾಯಮೂರ್ತಿಯಾಗಿ ಅವರು ರಾಜಕೀಯ ಹಾಗೂ ಧರ್ಮ ಸೂಕ್ಷ್ಮವಾದ ಅಯೋಧ್ಯೆ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳ ತೀರ್ಪು ನೀಡಿದ್ದಾರೆ. ರಂಜನ್​ ಗೊಗೋಯ್ ಅವರು ರಫೇಲ್​ ಫೈಟರ್ ಜೆಟ್ ಒಪ್ಪಂದ ಪ್ರಕರಣ ಹಾಗೂ ಕೇರಳದ ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತಾದ ಪ್ರಕರಣಗಳ ತೀರ್ಪು ನೀಡಿದ ನ್ಯಾಯಪೀಠದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು.

ಸುಪ್ರೀಂಕೋರ್ಟ್​ ನಿವೃತ್ತ ಮುಖ್ಯ ನ್ಯಾಯಮೂರ್ತಿಯನ್ನು ರಾಷ್ಟ್ರಪತಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ರಂಜನ್ ಗೊಗೋಯ್ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದಕ್ಕೆ ಕೇಂದ್ರ ಸರ್ಕಾರವನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿವೆ.

Youtube Video
First published: March 19, 2020, 1:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories