Konijeti Kosaiah: ಆಂಧ್ರಪ್ರದೇಶದ ಮಾಜಿ ಸಿಎಂ ಕೊನಿಜೆಟಿ ರೋಸಯ್ಯ ವಿಧಿವಶ

Kinijeti Rosaiah Passed Away: ಅನಾರೋಗ್ಯದಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ 89 ವರ್ಷದ ಕೊನಿಜೆಟಿ ರೋಸಯ್ಯ (Former Andhra Pradesh CM Konijeti Rosaiah)  ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರೋಸಯ್ಯ ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಕೊನಿಜೆಟಿ ರೋಸಯ್ಯ ವಿಧಿವಶ

ಕೊನಿಜೆಟಿ ರೋಸಯ್ಯ ವಿಧಿವಶ

  • Share this:
ಅನಾರೋಗ್ಯದಿಂದ ಬಳಲುತ್ತಿದ್ದ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ 89 ವರ್ಷದ ಕೊನಿಜೆಟಿ ರೋಸಯ್ಯ (Former Andhra Pradesh CM Konijeti Rosaiah)  ಇಂದು ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ರೋಸಯ್ಯ ಅವರನ್ನು ಹೈದರಾಬಾದ್​ನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್(Congress)​​ನಲ್ಲಿ ಪ್ರಮುಖ ನಾಯಕರಾಗಿ ಗುರುತಿಸಿಕೊಂಡಿದ್ದ ರೋಸಯ್ಯ ಅವರು, ಶಾಸಕರಾಗಿ, ಸಂಸದರಾಗಿ ಮುಖ್ಯಮಂತ್ರಿಯಾಗಿ, ತಮಿಳುನಾಡಿನ ಗವರ್ನರ್(Governor) ಆಗಿ ಸೇವೆ ಸಲ್ಲಿಸಿದ್ದಾರೆ. ಜುಲೈ 4, 1933ರಂದು ಗುಂಟೂರು ಜಿಲ್ಲೆ ವೇಮೂರ್ ಗ್ರಾಮದಲ್ಲಿ ಜನಿಸಿದ ರೋಸಯ್ಯ. ಗುಂಟೂರು ಹಿಂದೂ ಕಾಲೇಜಿನಲ್ಲಿ ವಾಣಿಜ್ಯ ಪದವಿ ಪೂರ್ಣಗೊಳಿಸಿದರು.  ಅವರು ಕಾಂಗ್ರೆಸ್ ನಿಂದ 1968, 1974 ಮತ್ತು 1980ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದರು. ರೋಸಯ್ಯ ಅವರು ಸೆಪ್ಟೆಂಬರ್ 3, 2009 ರಿಂದ ನವೆಂಬರ್ 24, 2010 ರವರೆಗೆ ಆಂಧ್ರಪ್ರದೇಶ(Andhra Pradesh)ದ ಮುಖ್ಯಮಂತ್ರಿಯಾಗಿದ್ದರು. ಆಗಸ್ಟ್ 31, 2011 ರಂದು ರೋಸಯ್ಯ ಅವರು ತಮಿಳುನಾಡಿ(Tamil nadu)ನ ರಾಜ್ಯ ರಾಜ್ಯಪಾಲರಾಗಿದ್ದರು. ಅವರು ಆಗಸ್ಟ್ 30, 2016 ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು. ವಯೋಸಹಜ ಕಾಯಿಲೆಯಿಂದ ಕೊನಿಜೆಟಿ ರೋಸಯ್ಯ ಬಳಲುತ್ತಿದ್ದರು. ಇಂದು ಇಗಲೋಕ ತ್ಯಜಿಸಿದ್ದಾರೆ. 
 1933 ಜುಲೈ 4ರಂದು ಜನನ
ರೋಸಯ್ಯ 1933ರ ಜುಲೈ 4ರಂದು, ಆಂಧ್ರದ ಗುಂಟೂರು ಜಿಲ್ಲೆಯ ವೆಮೂರಿನಲ್ಲಿ ಹುಟ್ಟಿದ್ದಾರೆ. ಗುಂಟೂರಿನ ಹಿಂದು ಕಾಲೇಜಿನಲ್ಲಿ ವಾಣಿಜ್ಯದಲ್ಲಿ ಪದವಿ ಪಡೆದಿದ್ದಾರೆ. ಅವರು 1968, 1974 ಮತ್ತು 1980 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾದರು. ಅವರು ಮೊಟ್ಟಮೊದಲ ಬಾರಿಗೆ ಆಂಧ್ರಪ್ರದೇಶದ ಮರಿ ಚೆನ್ನಾ ರೆಡ್ಡಿ ಸರ್ಕಾರದಲ್ಲಿ ರಸ್ತೆ ಮತ್ತು ಸಾರಿಗೆ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಅವಿಭಜಿತ ಆಂಧ್ರಪ್ರದೇಶವಿದ್ದಾಗಿನಿಂದಲೂ ಆ ಸರ್ಕಾರದ ಸಂಪುಟದಲ್ಲಿ ಅಪಾರ ಅನುಭವ ಹೊಂದಿದ್ದ ಅವರು 2009ರ ಸೆಪ್ಟೆಂಬರ್​ 13ರಿಂದ, 2010ರ ನವೆಂಬರ್​ 24ರವರೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ.
Koo App


ಕರ್ನಾಟಕ ರಾಜ್ಯಪಾಲರಾಗಿದ್ದ ಕೊನಿಜೆಟಿ ರೋಸಯ್ಯ


ಅದಾದ ಬಳಿಕ 2011ರ ಆಗಸ್ಟ್​ 31ರಿಂದ 2016ರ ಆಗಸ್ಟ್​ 30ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿದ್ದರು. ಈ ಮಧ್ಯೆ 2014ರಲ್ಲಿ ಎರಡು ತಿಂಗಳು (ಜೂನ್​-ಆಗಸ್ಟ್​) ಕರ್ನಾಟಕ ರಾಜ್ಯಪಾಲರಾಗಿದ್ದರು. ಆಗ ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ನಂತರ ವಜುಭಾಯಿ ವಾಲಾ ಕರ್ನಾಟಕಕ್ಕೆ ರಾಜ್ಯಪಾಲರಾಗಿ ಬಂದರು. ಸುಮಾರು ಏಳು ಬಾರಿ ಬಜೆಟ್​ ಮಂಡನೆ ಮಾಡುವ ದಾಖಲೆ ನಿರ್ಮಿಸಿದ್ದರು. ವೈ.ಎಸ್​. ರಾಜಶೇಖರ್​ ರೆಡ್ಡಿ ನಿಧನದ ನಂತರ ಅವಿಭಜಿತ ಆಂಧ್ರಪ್ರದೇಶದ ಸಿಇಒ ಆಗಿದ್ದರು. ಅಷ್ಟೇ ಅಲ್ಲ, ತಮಿಳು ನಾಡು ಮತ್ತು ಕರ್ನಾಟಕದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

Published by:Vasudeva M
First published: