Ajit Jogi - ಕೋಮಾ ಸ್ಥಿತಿಗೆ ಜಾರಿದ ಛತ್ತೀಸ್ಗಡ ಮಾಜಿ ಸಿಎಂ ಅಜಿತ್ ಜೋಗಿ
ಅಜಿತ್ ಜೋಗಿ ಅವರ ಚಿಕಿತ್ಸೆಗೆ ಎಂಟು ನುರಿತ ವೈದ್ಯರ ತಂಡವೊಂದು ಟೊಂಕಕಟ್ಟಿ ನಿಂತಿದೆ. ಮುಂದಿನ 48 ಗಂಟೆಗಳಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆಗೆ ಜೋಗಿ ಅವರ ದೇಹ ಹೇಗೆ ಸ್ಪಂದನೆ ನೀಡುತ್ತದೆ ಎಂಬುದನ್ನು ವೈದ್ಯರು ಸೂಕ್ಷ್ಮವಾಗಿ ಅವಲೋಕಿಸಲಿದ್ದಾರೆ.

ಅಜಿತ್ ಜೋಗಿ
- News18 Kannada
- Last Updated: May 10, 2020, 3:49 PM IST
ನವದೆಹಲಿ(ಮೇ 10): ನಿನ್ನೆ ಹೃದಯಾಘಾತಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಛತ್ತೀಸ್ಗಡ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಅವರ ಆರೋಗ್ಯ ಇನ್ನಷ್ಟು ಬಿಗಡಾಯಿಸಿದೆ. ಇವತ್ತು ಅವರು ಕೋಮಾದಂಥ ಸ್ಥಿತಿಗೆ ಜಾರಿದ್ಧಾರೆ. ಅವರನ್ನು ದಾಖಲಿಸಲಾಗಿರುವ ರಾಯಪುರ್ನ ಶ್ರೀ ನಾರಾಯಣ ಆಸ್ಪತ್ರೆಯ ವೈದ್ಯರು ಈ ಮಾಹಿತಿ ನೀಡಿದ್ಧಾರೆ. ಅಜಿತ್ ಜೋಗಿ ಅವರ ನರ ವ್ಯೂಹದ ಚಟುವಟಿಕೆ ಬಹುತೇಕ ಸ್ತಬ್ಭಗೊಂಡಿದೆ. ವೆಂಟೆಲೇಟರ್ನಲ್ಲೇ ಅವರನ್ನ ಇರಿಸಲಾಗಿದೆ. ಅವರ ಹೃದಯ ಬಡಿತ ಸದ್ಯಕ್ಕೆ ಸಹಜವಾಗಿದೆ. ಔಷಧಗಳ ಮೂಲಕ ರಕ್ತದೊತ್ತಡವನ್ನು ಹತೋಟಿಗೆ ತೆಗೆದುಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಲಾಗಿದೆ.
ಹೃದಯಾಘಾತವಾದ ಬಳಿಕ ಜೋಗಿ ಅವರ ಮಿದುಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಅವರ ಮಿದುಳಿಗೆ ಹಾನಿಯಾಗಿರಬಹುದು ಎಂದು ಶ್ರೀ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುನೀಲ್ ಖೇಮ್ಕ ತಿಳಿಸಿದ್ದಾರೆ. “ಅವರು ಕೋಮಾಗೆ ಜಾರಿದ್ದಾರೆಂದು ನಿಶ್ಚಿತವಾಗಿ ಹೇಳಲು ಆಗುವುದಿಲ್ಲ. ಕೃತಕ ಉಸಿರಾಟದ ವ್ಯವಸ್ಥೆ (ವೆಂಟಿಲೇಟರ್) ಸಹಾಯದಲ್ಲಿದ್ದಾರೆ.ಅವರ ಆರೋಗ್ಯ ಸುಧಾರಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಸದ್ಯಕ್ಕಂತೂ ಅವರ ಆರೋಗ್ಯ ಸ್ಥಿತಿ ಕಳವಳಕಾರಿಯಾಗಿದೆ” ಎಂದು ವೈದ್ಯರು ಹೇಳಿದರೆಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: ಖಜಾನೆ ಭರ್ತಿ ಮಾಡಲು ಮದ್ಯದಂಗಡಿಯೇ ಬೇಕಾ? ತಮಿಳುನಾಡು ಸರ್ಕಾರ ವಿರುದ್ಧ ರಜಿನೀಕಾಂತ್ ಗುಡುಗು
ಅಜಿತ್ ಜೋಗಿ ಅವರ ಚಿಕಿತ್ಸೆಗೆ ಎಂಟು ನುರಿತ ವೈದ್ಯರ ತಂಡವೊಂದು ಟೊಂಕಕಟ್ಟಿ ನಿಂತಿದೆ. ಮುಂದಿನ 48 ಗಂಟೆಗಳಲ್ಲಿ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆಗೆ ಜೋಗಿ ಅವರ ದೇಹ ಹೇಗೆ ಸ್ಪಂದನೆ ನೀಡುತ್ತದೆ ಎಂಬುದನ್ನು ವೈದ್ಯರು ಸೂಕ್ಷ್ಮವಾಗಿ ಅವಲೋಕಿಸಲಿದ್ದಾರೆ.
74 ವರ್ಷದ ಅಜಿತ್ ಜೋಗಿ ಅವರು ನಿನ್ನೆ ಬೆಳಗ್ಗೆ ತಮ್ಮ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಜೋಗಿಗೆ ಹೃದಯಸ್ತಂಭನವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಆವತ್ತೇ ಅವರನ್ನು ವೆಂಟಿಲೇಟರ್ನಲ್ಲಿಡಲಾಗಿತ್ತು.
ಛತ್ತೀಸ್ಗಡ ರಾಜ್ಯ ನಿರ್ಮಾಣವಾದಾಗ 2000ರ ವರ್ಷದಲ್ಲಿ ಅಜಿತ್ ಜೋಗಿ ಅವರು ಮೊತ್ತಮೊದಲ ಮುಖ್ಯಮಂತ್ರಿಯಾಗಿದ್ದರು. ಕಾಂಗ್ರೆಸ್ ನಾಯಕರಾಗಿದ್ದ ಅವರನ್ನು ಕೆಲ ವರ್ಷಗಳ ಹಿಂದೆ ಉಚ್ಛಾಟಿಸಲಾಗಿತ್ತು. ಆ ನಂತರ ಅವರು ಜನತಾ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಅವರ ಮಗ ಅಮಿತ್ ಜೋಗಿ ಕೂಡ ರಾಜಕಾರಣದಲ್ಲಿದ್ದಾರೆ. ಜೋಗಿ ಅವರು ರಾಜಕಾರಣಕ್ಕೆ ಬರುವ ಮೊದಲು ಸರ್ಕಾರಿ ಅಧಿಕಾರಿಯಾಗಿದ್ದರು.
ಹೃದಯಾಘಾತವಾದ ಬಳಿಕ ಜೋಗಿ ಅವರ ಮಿದುಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಅವರ ಮಿದುಳಿಗೆ ಹಾನಿಯಾಗಿರಬಹುದು ಎಂದು ಶ್ರೀ ನಾರಾಯಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುನೀಲ್ ಖೇಮ್ಕ ತಿಳಿಸಿದ್ದಾರೆ.