ವರದಕ್ಷಿಣೆ ಕಿರುಕುಳ: ಭಾರತದ ಹಾಕಿ ಮಹಿಳಾ ತಂಡದ ಮಾಜಿ ನಾಯಕಿ ಮೇಲೆ ಗಂಡನಿಂದ ಮಾರಣಾಂತಿಕ ಹಲ್ಲೆ

ಭಾರತದ ಮಾಜಿ ಮಹಿಳಾ ಹಾಕಿ ತಂಡದ ನಾಯಕಿ ಸೂರಜ್ ಲತಾ ದೇವಿ ಮೂಲಕ ಮಣಿಪುರದವರು. 39 ವರ್ಷದ ಈಕೆ ತನ್ನ ಸಾಧನೆಗೆ ಅರ್ಜುನ ಪ್ರಶಸ್ತಿಯೂ ಪಡೆದಿದ್ಧಾರೆ. ಜತೆಗೆ 2002 ಕಾಮನ್​​ ವೆಲ್ತ್​​​​​ ಗೇಮ್ಸ್​ನ ಭಾಗವಾಗಿದ್ದರು. ನಂತರ ಚಕ್​​​​ ದೇ ಇಂಡಿಯಾ ಸಿನಿಮಾ ಇವರ ಜೀವನಾಧಾರಿತ ಚಿತ್ರವಾಗಿದೆ.

news18-kannada
Updated:February 20, 2020, 8:04 PM IST
ವರದಕ್ಷಿಣೆ ಕಿರುಕುಳ: ಭಾರತದ ಹಾಕಿ ಮಹಿಳಾ ತಂಡದ ಮಾಜಿ ನಾಯಕಿ ಮೇಲೆ ಗಂಡನಿಂದ ಮಾರಣಾಂತಿಕ ಹಲ್ಲೆ
ಸೂರಜ್​​ ಲತಾ ದೇವಿ
  • Share this:
ನವದೆಹಲಿ(ಫೆ.20): ಭಾರತದ ಮಾಜಿ ಮಹಿಳಾ ಹಾಕಿ ತಂಡದ ನಾಯಕಿ ಮತ್ತು ಅರ್ಜುನ ಪ್ರಶಸ್ತಿ ಪುರಸ್ಕೃತೆ ಸೂರಜ್ ಲತಾ ದೇವಿ ತನ್ನ ಗಂಡನ ವಿರುದ್ದ ಪೊಲೀಸ್​​ ಮೆಟ್ಟಿಲೇರಿದ್ದಾರೆ. ತನ್ನ ಗಂಡ ವರದಕ್ಷಿಣೆ ಕಿರುಕುಳ ನೀಡಿ ಮಾರಣಾಂತಿಕ ಹಲ್ಲೆ ನಡೆಸಿದ್ಧಾರೆ ಎಂದು ಕೇಸ್​​ ದಾಖಲಿಸಿದ್ದಾರೆಕಳೆದ ವರ್ಷ ನವೆಂಬರ್​​​​​​ 9ನೇ ತಾರೀಕು ರಾತ್ರಿ ವೇಳೆ ಪಂಜಾಬ್​ ಕಪುರ್ತಲದಲ್ಲಿ ರೂಮಿನಲ್ಲಿದ್ದಾಗ ಗಂಡ ತನ್ನ ಮೇಲೆ ವರದಕ್ಷಿಣೆ ತರುವಂತೆ ಹಲ್ಲೆ ನಡೆಸಿರುವುದಾಗಿ ಪೊಲೀಸ್​​ ದೂರಿನಲ್ಲಿ ಆರೋಪಿಸಲಾಗಿದೆ.

ಇದಾದ ಒಂದು ತಿಂಗಳ ನಂತರ ಜನವರಿ 10ನೇ ತಾರೀಕಿನಂದು ಮಣಿಪುರದ ಹೆಗ್ನಾಂಗ್ ಪೊಲೀಸ್​​​ ಠಾಣೆಯಲ್ಲಿ ಈ ಸಂಬಂಧ ಕೇಸ್​​ ದಾಖಲಾಗಿದೆ. ಘಟನೆ ನಡೆದ ದಿನವೇ ಪಂಜಾಬ್​​​​​ನ ಸುತನ್​​ಪುರ ಪೊಲೀಸ್​​ ಠಾಣೆಯಲ್ಲೂ ಈ ವಿಚಾರವಾಗಿ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

ಸೂರಜ್ ಲತಾ ದೇವಿ ಗಂಡನ ಹೆಸರು ಕ್ಷಾ ಸಾಂತಾ ಕುಮಾರ್​​. ಇವರು ನೈರುತ್ಯ ರೈಲ್ವೆ ಮುಂಬೈನ ಮಾಜಿ ಸಿಬ್ಬಂದಿ. ಈತ ವರದಕ್ಷಿಣೆಗಾಗಿ ಸೂರಜ್​​ ಲತಾ ದೇವಿ ಮೇಲೆ ಸತತ ಮೂರು ಗಂಟೆಗಳ ಕಾಲ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿಎಎ ವಿರೋಧ ಪ್ರತಿಭಟನೆ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಯುವತಿ

ಇನ್ನು, ನನ್ನ ಗಂಡ  ವರದಕ್ಷಿಣೆಯಾಗಿ ಜಮೀನು ನೀಡುವಂತೆ ಎರಡು ಬಾರಿ ಕಳೆದ ನವೆಂಬರ್​​ನಲ್ಲಿ ಪೀಡಿಸಿದ್ದರು. ಮಾನಸಿಕ ಮತ್ತು ದೈಹಿಕವಾಗಿ ಕಿರುಕುಳ ನೀಡಿದರು. ಜತೆಗೆ ತಾನು ಮಾಡುತ್ತಿರುವ ಕೆಲಸದಿಂದ ಸ್ವಯಂ ನಿವೃತ್ತಿ ತೆಗೆದುಕೊಳ್ಳುವಂತೆ ಬಲವಂತ ಮಾಡುತ್ತಿದ್ಧಾರೆ ಎಂದು ಸೂರಜ್​​ ಲತಾ ದೇವಿ ತನ್ನ ಗಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಭಾರತದ ಮಾಜಿ ಮಹಿಳಾ ಹಾಕಿ ತಂಡದ ನಾಯಕಿ ಸೂರಜ್ ಲತಾ ದೇವಿ ಮೂಲಕ ಮಣಿಪುರದವರು. 39 ವರ್ಷದ ಈಕೆ ತನ್ನ ಸಾಧನೆಗೆ ಅರ್ಜುನ ಪ್ರಶಸ್ತಿಯೂ ಪಡೆದಿದ್ಧಾರೆ. ಜತೆಗೆ 2002 ಕಾಮನ್​​ ವೆಲ್ತ್​​​​​ ಗೇಮ್ಸ್​ನ ಭಾಗವಾಗಿದ್ದರು. ನಂತರ ಚಕ್​​​​ ದೇ ಇಂಡಿಯಾ ಸಿನಿಮಾ ಇವರ ಜೀವನಾಧಾರಿತ ಚಿತ್ರವಾಗಿದೆ.
First published: February 20, 2020, 7:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading