ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಮಾಜಿ ಸಚಿವ ರಾಜೀಬ್​ ಬ್ಯಾನರ್ಜಿ: ಈಗ ಬಿಜೆಪಿಯಿಂದಲೂ ಉಚ್ಚಾಟನೆ ಸಾಧ್ಯತೆ

ಹಿಂದಿನ ತೃಣಮೂಲ ಸರ್ಕಾರದಲ್ಲಿ ಬ್ಯಾನರ್ಜಿ ಮಂತ್ರಿಯಾಗಿದ್ದರು,  ಬಿಜೆಪಿ ಸೇರಿದ ನಂತರ ಮೊದಲು ಶಾಸಕರಾಗಿದ್ದ ದೊಮ್ಮೂರು ವಿಧಾನಸಭಾ ಕ್ಷೇತ್ರದಿಂದ ಕೇಸರಿ ಪಕ್ಷದ ಪರವಾಗಿ ಸ್ಪರ್ಧಿಸಿದರು, ಆದರೆ ಸೋತರು. ಸೋಲಿನ ನಂತರ ಬಿಜೆಪಿಯ ವಿರುದ್ದವೇ ಬಂಡಾಯಗಾರರಾದರು ಮತ್ತು ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಲು ಅಥವಾ ಪಕ್ಷದ ಸಭೆಗಳನ್ನು ತಪ್ಪಿಸಲು ಪ್ರಾರಂಭಿಸಿದರು.

ರಾಜೀಬ್​ ಬ್ಯಾನರ್ಜಿ

ರಾಜೀಬ್​ ಬ್ಯಾನರ್ಜಿ

 • Share this:

  ಪಶ್ಚಿಮ ಬಂಗಾಳದ ಮಾಜಿ ಸಚಿವ ರಾಜೀಬ್ ಬ್ಯಾನರ್ಜಿ ಅವರನ್ನು ಬಿಜೆಪಿಯಿಂದ ಕೆಲವೇ ಹೊತ್ತಿನಲ್ಲಿ  ಹೊರಹಾಕಲಾಗುವುದು ಎಂದು ಬಿಜೆಪಿ ಪಕ್ಷದ ಮೂಲಗಳು ತಿಳಿಸಿವೆ, ಬಂಡಾಯ ನಾಯಕ ತೃಣಮೂಲ ಕಾಂಗ್ರೆಸ್‌ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಶನಿವಾರ ಸಂಜೆ ದಕ್ಷಿಣ ಕೊಲ್ಕತ್ತಾ ಕಚೇರಿಯಲ್ಲಿ ಭೇಟಿಯಾದ ನಂತರ ಈ ರೀತಿಯ ಬೆಳವಣಿಗೆ ನಡೆದಿದೆ ಎಂದು ಹೇಳಲಾಗಿದೆ.


  ವಿಧಾನಸಭೆ ಚುನಾವಣೆಗೆ ಮುನ್ನವೇ ತೃಣಮೂಲದಿಂದ ಬಿಜೆಪಿಗೆ ಸೇರ್ಪಡೆಗೊಂಡ ರಾಜೀಬ್ ಬ್ಯಾನರ್ಜಿ ಅವರಿಗೆ ಬಿಜೆಪಿಯು, ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವುದಾಗಿ ಹೇಳಿ ಎರಡು ಬಾರಿ ಎಚ್ಚರಿಕೆ ನೀಡಿದ್ದರೂ ಯಾವುದೇ ಪರಿಣಾಮ ಬೀರಿದಂತೆ ಕಂಡು ಬಂದಿಲ್ಲ ಎಂದು ಹೇಳಲಾಗಿದೆ. ಪದೇ, ಪದೇ ಟಿಎಂಸಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಇವರನ್ನು ಬಿಜೆಪಿ ಸಂಪೂರ್ಣವಾಗಿ ಹೊರಗಿಡಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.


  "ಅವರಿಗೆ ಎರಡು ಶೋಕಾಸ್ ನೋಟಿಸ್ ನೀಡಲಾಗಿದೆ ಆದರೆ ಅವುಗಳಲ್ಲಿ ಒಂದಕ್ಕೂ ಕೂಡ ಆತ ಉತ್ತರ ನೀಡಿಲ್ಲ. ಹಾಗಾಗಿ, ಅವರು ಪಕ್ಷದಲ್ಲಿ ಮುಂದುವರಿಯಲು ಸಿದ್ದರಿಲ್ಲ ಎಂದು ನಿರೀಕ್ಷಿಸಲಾಗಿದೆ, "ಎಂದು ಬಿಜೆಪಿಯ ಶಿಸ್ತಿನ ಸಮಿತಿಯ ಹೆಸರು ಹೇಳಲು ಇಚ್ಚಿಸದ ಸದಸ್ಯರೊಬ್ಬರು ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ಹೇಳಿದರು.


  "ಅವರು ಬಿಜೆಪಿಯ ಸದಸ್ಯರಾಗಿದ್ದಾರೆ ಮತ್ತು ವಿರೋಧ ಪಕ್ಷದ ನಾಯಕರೊಂದಿಗೆ ರಹಸ್ಯ ಸಭೆಗಳನ್ನು ನಡೆಸುತ್ತಾರೆ. ಇದು ಪಕ್ಷ ವಿರೋಧಿ ಚಟುವಟಿಕೆಗಳಿಗೆ ಸಮ. ಆದ್ದರಿಂದ, ನಾವು ಈಗ ಒಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ತೀರ್ಮಾನಿಸಿದ್ದೇವೆ, ಅದನ್ನು ಒಂದು ವಾರ ಅಥವಾ ಎರಡು ದಿನಗಳಲ್ಲಿ ಘೋಷಿಸಲಾಗುವುದು "ಎಂದು ಸದಸ್ಯರು ಹೇಳಿದರು.


   ಬ್ಯಾನರ್ಜಿ ಕೇಸರಿ ದಳವನ್ನು ತೊರೆಯುವ ಮೊದಲು, ಪಕ್ಷವು ಅವರನ್ನು ಉಚ್ಚಾಟಿಸಲು ಮುಂದಾಗಿದೆ ಮತ್ತು ಅದರ ಪ್ರಕಾರ, ನವದೆಹಲಿಯಲ್ಲಿ ಪಕ್ಷದ ಹೈಕಮಾಂಡ್‌ಗೆ ವಿವರಗಳನ್ನು ಕಳುಹಿಸಲಾಗಿದೆ. ಈಗ, ಶಿಸ್ತಿನ ಸಮಿತಿಯ ಸದಸ್ಯರು ಹೈಕಮಾಂಡ್​​ನಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದ್ದಾರೆ.


  ಇದನ್ನೂ ಓದಿ: ಯುಪಿ ಚುನಾವಣೆ: ಬಿಜೆಪಿ ಜೊತೆ ಹೋಗುವುದಿಲ್ಲ ಎಂದ ಯೋಗಿ ಆದಿತ್ಯನಾಥ್​ ಮಾಜಿ ಆಪ್ತ ರಾಜ್​ಭರ್​

  ಹಿಂದಿನ ತೃಣಮೂಲ ಸರ್ಕಾರದಲ್ಲಿ ಬ್ಯಾನರ್ಜಿ ಮಂತ್ರಿಯಾಗಿದ್ದರು,  ಬಿಜೆಪಿ ಸೇರಿದ ನಂತರ ಮೊದಲು ಶಾಸಕರಾಗಿದ್ದ ದೊಮ್ಮೂರು ವಿಧಾನಸಭಾ ಕ್ಷೇತ್ರದಿಂದ ಕೇಸರಿ ಪಕ್ಷದ ಪರವಾಗಿ ಸ್ಪರ್ಧಿಸಿದರು, ಆದರೆ ಸೋತರು. ಸೋಲಿನ ನಂತರ ಬಿಜೆಪಿಯ ವಿರುದ್ದವೇ ಬಂಡಾಯಗಾರರಾದರು ಮತ್ತು ಪಕ್ಷ ವಿರೋಧಿ ಹೇಳಿಕೆಗಳನ್ನು ನೀಡಲು ಅಥವಾ ಪಕ್ಷದ ಸಭೆಗಳನ್ನು ತಪ್ಪಿಸಲು ಪ್ರಾರಂಭಿಸಿದರು.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: