HOME » NEWS » National-international » FORMER BENGAL CM AND LEFT LEADER BUDDHADEB BHATTACHARYA ADMITTED IN ICU WITH BREATHING TROUBLE MAK

ಉಸಿರಾಟದ ತೊಂದರೆಯಿಂದ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾದ ಬಂಗಾಳದ ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ

ಹಿರಿಯ ಸಿಪಿಎಂ ನಾಯಕರಾದ ಬುದ್ಧದೇವ ಭಟ್ಟಾಚಾರ್ಯ ಅವರು 2000 ರಿಂದ 2011 ರವರೆಗೆ ದೀರ್ಘ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಅವರು ಉಸಿರಾಟದ ತೊಂದರೆ ಮತ್ತು ವೃದ್ಧಾಪ್ಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ.

news18india
Updated:December 9, 2020, 6:00 PM IST
ಉಸಿರಾಟದ ತೊಂದರೆಯಿಂದ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲಾದ ಬಂಗಾಳದ ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ
ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ದದೇವ ಭಟ್ಟಾಚಾರ್ಯ.
  • Share this:
ಕೋಲ್ಕತ್ತಾ (ಡಿಸೆಂಬರ್​ 09); ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ದೇಶದ ಹಿರಿಯ ಸಿಪಿಎಂ ನಾಯಕ ಬುದ್ಧದೇವ ಭಟ್ಟಾಚಾರ್ಯ ಅವರಿಗೆ ಉಸಿರಾಟದಲ್ಲಿ ದಿಢೀರ್​ ತೊಂದರೆ ಕಾಣಿಸಿಕೊಂಡಿದ್ದು, ಅವರನ್ನು ಇಂದು ಮಧ್ಯಾಹ್ನ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಬುದ್ಧದೇವ ಭಟ್ಟಾಚಾರ್ಯ ಅವರು ಎಂದಿನಂತೆ ನಿನ್ನೆ ರೊಟೀನ್ ಪರೀಕ್ಷೆಗಾಗಿ ಆಸ್ಪತ್ರೆಗೆ ಆಗಮಿಸಿ ನಂತರ ತೆರಳಿದ್ದರು. ಆದರೆ, ಇಂದು ಉಸಿರಾಟ ಸಂಬಂಧಿತ ಸಮಸ್ಯೆ ಉಲ್ಬಣಗೊಂಡಿರುವ ಕಾರಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ವರದಿಯಾಗಿದೆ. 

ಮಾಜಿ ಸಿಎಂ ಬುದ್ಧದೇವ ಭಟ್ಟಾಚಾರ್ಯ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, "ಅವರನ್ನು ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಅಗತ್ಯವಾದ ಎಲ್ಲಾ ಚಿಕಿತ್ಸೆಗಳನ್ನೂ ನೀಡುತ್ತಿದ್ದೇವೆ. ಅಗತ್ಯವಾದ ಎಲ್ಲಾ ಪರೀಕ್ಷೆಗಳನ್ನೂ ಮಾಡಲಾಗಿದೆ. ನಂತರ ಅವರಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸುವ ಕುರಿತು ನಿರ್ಧರಿಸಲಾಗುವುದು" ಎಂದು ಆಸ್ಪತ್ರೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ : ಬುಡಕಟ್ಟು ಜನರಿಗಾಗಿ ಧ್ವನಿ ಎತ್ತಿದ ಮೆಹಬೂಬಾ ಮುಫ್ತಿ; ಕಳೆದ 15 ದಿನಗಳಲ್ಲಿ 3 ಬಾರಿ ಗೃಹ ಬಂಧನಕ್ಕೊಳಪಡಿಸಿದ ಕೇಂದ್ರ

ಹಿರಿಯ ಸಿಪಿಎಂ ನಾಯಕರಾದ ಬುದ್ಧದೇವ ಭಟ್ಟಾಚಾರ್ಯ ಅವರು 2000 ರಿಂದ 2011 ರವರೆಗೆ ದೀರ್ಘ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ, ಕಳೆದ ಕೆಲವು ವರ್ಷಗಳಿಂದ ಅವರು ಉಸಿರಾಟದ ತೊಂದರೆ ಮತ್ತು ವೃದ್ಧಾಪ್ಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಸಿಪಿಐ(ಎಂ) ನ ಪೊಲಿಟ್‌ಬ್ಯುರೊ, ಕೇಂದ್ರ ಸಮಿತಿ ಮತ್ತು 2018 ರಲ್ಲಿ ರಾಜ್ಯ ಕಾರ್ಯದರ್ಶಿ ಸ್ಥಾನದಿಂದ ಕೆಳಗಿಳಿದಿದ್ದರು.
Published by: MAshok Kumar
First published: December 9, 2020, 6:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories