ಎಸ್‌ಬಿಐ ನಕಲಿ ಶಾಖೆ ನಡೆಸಿದ ಮಾಜಿ ಬ್ಯಾಂಕ್ ಉದ್ಯೋಗಿಯ ಮಗ ಸೇರಿ ಮೂವರು ಇದೀಗ ಪೊಲೀಸರ ಅತಿಥಿ

ಎಸ್‌ಬಿಐ ಅಧಿಕಾರಿಗಳು ಈ ಸ್ಥಳಕ್ಕೆ (ನಕಲಿ ಶಾಖೆ) ಭೇಟಿ ನೀಡಿದಾಗ ಅಲ್ಲಿ ಅಸಲಿ ಬ್ಯಾಂಕ್‌ ಶಾಖೆಯಂತೆಯೇ ಎಲ್ಲಾ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಸಂಪೂರ್ಣ ಸೆಟ್ ಅನ್ನು ನೋಡಿದಾಗ ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಎಸ್​ಬಿಐ ಬ್ಯಾಂಕ್

ಎಸ್​ಬಿಐ ಬ್ಯಾಂಕ್

  • Share this:
ಚೆನ್ನೈ (ಜುಲೈ 11); ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ನಕಲಿ ಶಾಖೆ ನಡೆಸುತ್ತಿದ್ದ ಮೂವರನ್ನು ತಮಿಳುನಾಡು ಪೊಲೀಸರು ಇಂದು ಬಂಧಿಸಿದ್ದಾರೆ. ಮೂವರಲ್ಲಿ, ಓರ್ವ ವ್ಯಕ್ತಿ ಮಾಜಿ ಬ್ಯಾಂಕ್ ಉದ್ಯೋಗಿಯ ಮಗ ಎಂಬುದು ತಿಳಿದು ಬಂದಿದೆ.

ತಮಿಳುನಾಡಿನ ಪನ್ರುಟ್ಟಿ ಪೊಲೀಸ್ ಇನ್ಸ್‌ಪೆಕ್ಟರ್‌ ಅಂಬೇಡ್ಕರ್ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ. ಅಲ್ಲದೆ, "ಈ ಪ್ರಕರಣದ ಹಿಂದಿದ್ದ ಮಾಸ್ಟರ್ ಮೈಂಡ್ ಕಮಲ್ ಬಾಬು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಬಂದಿತ ಕಮಲ್ ಬಾಬು ಅವರ ಪೋಷಕರಿಬ್ಬರೂ ಮಾಜಿ ಬ್ಯಾಂಕ್ ಉದ್ಯೋಗಿ: ಎಂಬುದನ್ನೂ ಅವರು ಖಚಿತಪಡಿಸಿದ್ದಾರೆ.

ಹಲವು ವರ್ಷಗಳ ಕಾಲ ಈತನ ತಂದೆ ಬ್ಯಾಂಕ್‌ನಲ್ಲಿ ಕೆಲಸ ನಿರ್ವಹಿಸಿ 10 ವರ್ಷಗಳ ಹಿಂದೆ ಮೃತಪಟ್ಟಿದ್ದರೆ, ಆತನ ತಾಯಿ ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದಾರೆ.

ಬಂಧನಕ್ಕೊಳಗಾದ ಇತರ ಇಬ್ಬರು ವ್ಯಕ್ತಿಗಳಲ್ಲೊಬ್ಬ ಮುದ್ರಣಾಲಯವನ್ನು ನಡೆಸುತ್ತಿದ್ದ. ಈ ಮುದ್ರಣಾಲಯದಿಂದ ಬ್ಯಾಂಕಿನ ಎಲ್ಲಾ ರಶೀದಿಗಳು, ಚಲನ್‌ಗಳು ಮತ್ತು ಇತರ ದಾಖಲೆಗಳನ್ನು ಮುದ್ರಿಸಲಾಗಿದೆ. ಅಲ್ಲದೆ, ರಬ್ಬರ್ ಅಂಚೆ ಚೀಟಿಗಳನ್ನೂ ಇಲ್ಲಿ ಮುದ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪನ್ರುಟ್ಟಿಯಲ್ಲಿ ಹೊಸ ಎಸ್‌ಬಿಐ ಶಾಖೆ ಆರಂಭವಾಗಿರುವುದನ್ನು ಗಮನಿಸಿದ ಎಸ್‌ಬಿಐ ಗ್ರಾಹಕರೊಬ್ಬರು ಜಿಲ್ಲೆಯ ಮುಖ್ಯ ಶಾಖಾ ವ್ಯವಸ್ಥಾಪಕರ ಗಮನಕ್ಕೆ ತಂದಿದ್ದಾರೆ. ಈ ವೇಳೆ ಮಾಹಿತಿ ನೀಡಿದ್ದ ಪನ್ರುಟ್ಟಿ ಮುಖ್ಯ ಶಾಖಾ ವ್ಯವಸ್ಥಾಪಕರು ಈ ಭಾಗದಲ್ಲಿ ಎರಡು ಶಾಖೆಗಳನ್ನು ಮಾತ್ರ ತೆರೆಯಲಾಗಿದೆ. ಮೂರನೇ ಶಾಖೆಯನ್ನು ತೆರೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಎಸ್‌ಬಿಐ ಅಧಿಕಾರಿಗಳೊಂದಿಗೆ ಗ್ರಾಹಕರಂತೆ ಈ ಬ್ಯಾಂಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಕೋವಿಡ್​​-19 ಅವ್ಯವಹಾರ ಆರೋಪ: ಸಿದ್ದರಾಮಯ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಿ - ನಳಿನ್​​ ಕುಮಾರ್​ ಕಟೀಲ್

ಎಸ್‌ಬಿಐ ಅಧಿಕಾರಿಗಳು ಈ ಸ್ಥಳಕ್ಕೆ (ನಕಲಿ ಶಾಖೆ) ಭೇಟಿ ನೀಡಿದಾಗ ಅಲ್ಲಿ ಅಸಲಿ ಬ್ಯಾಂಕ್‌ ಶಾಖೆಯಂತೆಯೇ ಎಲ್ಲಾ ವ್ಯವಸ್ಥೆಗಳು ಮತ್ತು ಮೂಲಸೌಕರ್ಯಗಳನ್ನು ಹೊಂದಿರುವ ಸಂಪೂರ್ಣ ಸೆಟ್ ಅನ್ನು ನೋಡಿದಾಗ ಆಶ್ಚರ್ಯಚಕಿತರಾಗಿದ್ದಾರೆ. ಅಲ್ಲದೆ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು, ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅದೃಷ್ಟವಶಾತ್ ಈ ಬ್ಯಾಂಕ್‌ನಲ್ಲಿ ಯಾವುದೇ ವಹಿವಾಟು ನಡೆದಿಲ್ಲ. ಹೀಗಾಗಿ ಯಾರೂ ಹಣ ಕಳೆದುಕೊಂಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Published by:MAshok Kumar
First published: