Mission Paani: ಗ್ರಾಮಗಳಲ್ಲಿ ಮಳೆ ನೀರು ಕೊಯ್ಲು ಮೂಲಕ ಭಗೀರಥರಾದ ಮಾಜಿ ಸೇನಾ ನಾಯಕ

ಮಾಜಿ ಸೇನಾ ನಾಯಕರಾಗಿರುವ ಇವರು ನೂರಾರು ಹಳ್ಳಿಗಳಲ್ಲಿ ನೀರಿನ ಒರೆತಗಳಿಗೆ ಪುನರ್​ಜೀವನ ತುಂಬುವ ಕೆಲಸವನ್ನು ನಿರಂತರವಾಗಿ ನಡೆಸಿದ್ದಾರೆ.

ನಿವೃತ್ತ ಕರ್ನಲ್​ ಎಸ್​.ಜಿ.ಡಾಲ್ವಿ

ನಿವೃತ್ತ ಕರ್ನಲ್​ ಎಸ್​.ಜಿ.ಡಾಲ್ವಿ

 • Share this:
  ಗ್ರಾಮೀಣ ಪ್ರದೇಶಗಳಲ್ಲಿ ನೀರುನ ಸಂಕಷ್ಟ ಜನ ಜೀವನದ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ನೈಸರ್ಗಿಕ ಜೀವನ ಜಲ ಕ್ಷೀಣಿಸಿದಂತೆ ನೋಡಿಕೊಳ್ಳುವ ಮೂಲಕ ನೀರಿನ ಸಮಸ್ಯೆ ವಿರುದ್ದ ಹೋರಾಡಬೇಕಿದೆ. ನೀರು ಸಂರಕ್ಷಣೆಗೆ ಪ್ರಮುಖ ಮಾರ್ಗ ಎಂದರೆ ಮಳೆ ನೀರು ಕೊಯ್ಲಾಗಿದೆ. ಹಲವು ದಶಕಗಳಿಂದ ನೀರಿನ ಸಂರಕ್ಷಣೆ ಪ್ರಮುಖ ಹಾಗೂ ಸಮರ್ಥ ಮಾರ್ಗ ಇದಾಗಿದೆ.  ಇದೇ ಮಾರ್ಗದ ಮೂಲಕ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ನೀಗಿಸಿ  ಸಂರಕ್ಷಣೆಗೆ ವ್ಯಕ್ತಿಯೊಬ್ಬರು ತಮ್ಮ ಜೀವನವನ್ನೇ ದಶಕಗಳಿಂದ ಮುಡುಪಾಗಿಟ್ಟಿದ್ದಾರೆ. ಅವರೇ ನಿವೃತ್ತ ಕರ್ನಲ್​ ಎಸ್​.ಜಿ.ಡಾಲ್ವಿ. ಪ್ರಸ್ತುತ ಡಾಲ್ವಿ ಭಾರತದ ಕ್ಲೈಮೆಟ್​ ರಿಯಾಲಿಟಿ ಪ್ರಾಜೆಕ್ಟ್​ನಲ್ಲಿ ರಾಷ್ಟ್ರೀಯ ಸಂಯೋಜಕರಾಗಿರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮೂಲಕ ಮಾಜಿ ಸೇನಾ ನಾಯಕರಾಗಿರುವ ಇವರು ನೂರಾರು ಹಳ್ಳಿಗಳಲ್ಲಿ ನೀರಿನ ಒರೆತಗಳಿಗೆ ಪುನರ್​ಜೀವನ ತುಂಬುವ ಕೆಲಸವನ್ನು ನಿರಂತರವಾಗಿ ನಡೆಸಿದ್ದಾರೆ.

  ಗ್ರಾಮಗಳಲ್ಲಿ ಅತಿಹೆಚ್ಚಿನ ನೀರನ ಸಮಸ್ಯೆಯಿಂದ ಬಳಲುತ್ತಿರುವ ರಾಜ್ಯಗಳಲ್ಲಿ ಒಂದು ಮಹಾರಾಷ್ಟ್ರ. ಪುಣೆಯೊಂದರಲ್ಲಿಯೇ ಎರಡು ವರ್ಷಗಳ ಕಾಲ ಜನರು ನೀರಿನ ಬಿಕ್ಕಟ್ಟು ಎದುರಿಸಿದರು ಎಂದು ಪುಣೆ ನಗರಸಭೆ ತಿಳಿಸಿದೆ. 2000ನೇ ಇಸುವಿಯಿಂದ ಇಲ್ಲಿ  ಆರಂಭವಾದ  ನೀರಿನ ಬಿಕ್ಕಟ್ಟು ಸಾಕಷ್ಟು ಸಮಸ್ಯೆ ತಂದೊಡ್ಡಿತು. ಇದರ ಪರಿಹಾರಕ್ಕೆ ಮುಂದಾದ ಸರ್ಕಾರ 2007ರಲ್ಲಿ ಇಲ್ಲಿನ ಎಲ್ಲಾ ಹೊಸ ವಸತಿ ಗೃಹ ಸೇರಿದಂತೆ ಸರ್ಕಾರಿ, ಖಾಸಗಿ ಕಟ್ಟಡಗಳಲ್ಲಿ ಮಳೆ ಕೊಯ್ಲನ್ನು ಅಳವಡಿಸುವುದು ಕಡ್ಡಾಯಗೊಳಿಸಿತು.

  ಈ ನೀರಿನ ಸಮಸ್ಯೆ  ಕುರಿತು ಹಾರ್ಪಿಕ್​-ನ್ಯೂಸ್​ 18 ನೇತೃತ್ವದ ಮಿಷನ್​ ಪಾನಿ ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಲ್​, ನೀತಿ ಆಯೋಗ ಅಂಕಿ ಅಂಶದಂತೆ 600 ಮಿಲಿಯನ್​ ಭಾರತೀಯರು ನೀರಿನ ತೀವ್ರ ಸಮಸ್ಯೆಯನ್ನು ಎದುರಿಸಿದ್ದಾರೆ.  ಹಲವು  ಸಂದರ್ಭದಲ್ಲಿ ನಾವು ಮನೆಯ ಮೇಲ್ಛಾವಣಿ ಮೇಲೆ ಸಿಗುವ ನೀರನ್ನು ನಿರ್ಲಕ್ಷಿಸುತ್ತೇವೆ ಎಂದರು.

  ಇದೇ  ವೇಳೆ  ಮಳೆ ಎಲ್ಲಾ ಪ್ರದೇಶಗಳಲ್ಲಿ ಸದಾ ಬೀಳುವುದಿಲ್ಲ. ಕೆಲವು ಪ್ರದೇಶಗಳಲ್ಲಿ ನಿರಂತರವಾಗಿ ಮಳೆಯಾದರೆ, ಕೆಲವು ಪ್ರದೇಶಗಳಲ್ಲಿ ಮಳೆಗಾಲದ ಸಂದರ್ಭದಲ್ಲಿಯೂ ಒಂದಿಂಚೂ ಮಳೆಯಾಗುವುದಿಲ್ಲ ಎಂದು ವಿವರಿಸಿದರು.

  ಇನ್ನು ಪುಣೆಯ ತಮ್ಮ ಯೋಜನೆಯನ್ನು ಈ ಸಂದರ್ಭದಲ್ಲಿ ಉದಾಹರಿಸಿ ವಿವರಣೆ ನೀಡಿದ ಅವರು, ಪುಣೆಯಲ್ಲಿ ಸುಮಾರು 750 ಮಿ.ಮೀ ಮಳೆಯಾದರೆ, ನೆರೆಯ ಮುಂಬೈನಲ್ಲಿ 2500ಮಿ.ಮೀ ಮಳೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಪುಣೆಯಂತಹ ಪುಟ್ಟ ಪಟ್ಟಣದಲ್ಲಿ 1000 ಚದರ ಮೀ ಮೇಲ್ಚಾವಣಿ ಮೇಲೆ 60 ಸಾವಿರ ಲೀಟರ್​ ನೀರನ್ನು ಹೇಗೆ ಸಂಗ್ರಹಿಸಬಹುದು. ಅದೇ ರೀತಿ ಮುಂಬೈನ ಮೇಲ್ಛಾವಣಿಯಿಂದ ಹೇಗೆ 2,50,000 ಲೀಟರ್​ ನೀರು ಸಂಗ್ರಹಿಸಬಹುದು ಎಂದು ತಿಳಿಸಿದರು.

  ವಿಶ್ವಸಂಸ್ಥೆಯ ಪ್ರಕಾರ, ಒಬ್ಬ ವ್ಯಕ್ತಿ ಕುಡಿಯುವ ನೀರು, ನೈರ್ಮಲ್ಯ ಸೇರಿದಂತೆ ಇತರೆ ಚಟುವಟಿಕೆಗೆ ದಿನವೊಂದಕ್ಕೆ 100 ಲೀ ಬಳಕೆ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಕೆಲವು ಸಮಿತಿಗಳು 135ಲೀ ಬೇಕು ಎನ್ನುತ್ತವೆ.

  ಇದನ್ನು ಓದಿ: Mission Paani - ಬದಲಾಗುತ್ತಿರುವ ಸಾಮಾಜಿಕ ರಚನೆಯಿಂದ ಜಲ ಸಂಪನ್ಮೂಲ ಮತ್ತು ನೈರ್ಮಲ್ಯಕ್ಕೆ ಧಕ್ಕೆ

  ಪುಣೆ ಮುಂಬೈ ಮತ್ತು ಅದರ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಅಂತರ್ಜಲವೇ ಇಲ್ಲ. ಅವರೆಲ್ಲ ಅಲ್ಲಿನ ಮಳೆ ಆಶ್ರಯಿತ ಸಂಗ್ರಹಿತ ಅಣೆಕಟ್ಟು ಮತ್ತು ಕರೆಗಳಲ್ಲಿ ನೀರನ್ನೇ ಬಳಸಬೇಕಿದೆ, ಇವುಗಳು ಒಂದು ಸಾಮರ್ಥ್ಯ ಪೂರೈಸುವವರೆಗೂ ಬಳಕೆಗೆ ಸಲಭ್ಯವಿಲ್ಲ. ಇಂತಹ ಸಂದರ್ಭದಲ್ಲಿ ಬಡವರು ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾಗುತ್ತಾರೆ. ಕಾರಣ ಅವರು ಟ್ಯಾಂಕರ್​ ಮೂಲಕ ನೀರನ್ನು ಪೂರೈಸಿಕೊಳ್ಳಲು ವಿಫಲರಾಗುತ್ತಾರೆ ಎಂದರು

  ಇಂತಜ ಜನರ ಜೀವನವನ್ನು ಈಗ ಈ ಕರ್ನಲ್​ ಬದಲಾಯಿಸುತ್ತಿದ್ದಾರೆ. ಅದಕ್ಕೆ ಅವರಿಗೆ ಧನ್ಯವಾದ ತಿಳಿಸಬೇಕಿದೆ. ಅವರ ಪರಿಶ್ರಮದ ಫಲವಾಗಿ ಕಾಮ್​ ಖೇಡಾ ಗ್ರಾಮದಲ್ಲಿ ಈಗ  ಸಾಕಷ್ಟು ನೀರು ಲಭ್ಯವಾಗುತ್ತಿದೆ. ಎಷ್ಟು ಪ್ರಮಾಣದ ನೀರು ಅಲ್ಲಿ ಸಿಗುತ್ತಿದೆ ಎಂದು ಬಳಕೆ ಮಾಡಿ ಉಳಿದ ನೀರನ್ನು ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಯಲ್ಲಿರುವ ಗಿಡಗಳಿಗೆ ಹಾಕುತ್ತಿದ್ದಾರೆ. ಕರ್ನಲ್​ ಅವರ ಕಾರ್ಯಕ್ಕೆ ಗ್ರಾಮಸ್ಥರು ಅವರಿಗೆ ಅಭಾರಿಯಾಗಿದ್ದು, ಅವರನ್ನು ಜಲ ಧೂತ ಅಥವಾ ಮಳೆ ಮನುಷ್ಯ ಎಂದು ಆಧಾರಿಸುತ್ತಿದ್ದಾರೆ. ಕಾಮ್​ ಖೇಡಾ ಗ್ರಾಮದಲ್ಲಿ ನೀರಿನ ಸಂಗ್ರಹಕ್ಕೆ ಬಳಕೆ ಮಾಡಿರುವ ಪ್ರಯತ್ನವನ್ನು ಸ್ಪೂರ್ತಿಯಾಗಿ ಪಡೆದು, ಉಳಿದ ಜನರು ನೀರಿನ ಸಮಸ್ಯೆ ನೀಗಿಸಿಕೊಳ್ಳುವಂತೆ ಅವರು ಇದೇ ವೇಳೆ ಕರೆ ನೀಡಿದ್ದಾರೆ. ಈ ಮೂಲಕ ನಾವು ಆತ್ಮ ನಿರ್ಭರ ಆಗಲು ಸಾಧ್ಯ ಎಂದಿದ್ದಾರೆ .
  Published by:Seema R
  First published: