Donald Trump: ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್! ಅಮೆರಿಕಾ ಮಾಜಿ ಅಧ್ಯಕ್ಷರ ಮನೆ ಮೇಲೆ ಎಫ್‌ಬಿಐ ಅಧಿಕಾರಿಗಳ ದಾಳಿ

ನ್ಯೂಜೆರ್ಸಿಯ ಬೆಡ್‌ಮಿನ್‌ಸ್ಟರ್‌ನಲ್ಲಿರುವ ತನ್ನ ಗಾಲ್ಫ್ ಕ್ಲಬ್‌ನಲ್ಲಿ ಬೇಸಿಗೆಯನ್ನು ಕಳೆಯುವ ಟ್ರಂಪ್, ದಾಳಿಯ ಸಮಯದಲ್ಲಿ ಮಾರ್-ಎ-ಲಾಗೊದಲ್ಲಿ ಇರಲಿಲ್ಲ ಎಂದು ಎನ್‌ಬಿಸಿ ವರದಿ ಮಾಡಿದೆ. ಈ ಬಗ್ಗೆ ಅವರ ಸೊಸೆ ಮಾಹಿತಿ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಸಂಗ್ರಹಚಿತ್ರ

ಡೊನಾಲ್ಡ್ ಟ್ರಂಪ್ ಸಂಗ್ರಹಚಿತ್ರ

  • Share this:
ಫೋರಿಡಾ, ಅಮೆರಿಕ: ಮಾಜಿ ಅಧ್ಯಕ್ಷ (Former President) ಡೊನಾಲ್ಡ್ ಟ್ರಂಪ್‌ಗೆ (Donald Trump) ಇಂದು ಬಿಗ್ ಶಾಕ್ (Big Shock) ಎದುರಾಗಿದೆ. ಅಮೆರಿಕಾದ (Amica) ಫ್ಲೋರಿಡಾದಲ್ಲಿರುವ (Florida) ಟ್ರಂಪ್ ನಿವಾಸದ ಮೇಲೆ ದಾಳಿ ನಡೆದಿದೆ. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ಅಧಿಕಾರಿಗಳು ಟ್ರಂಪ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ಟ್ರಂಪ್‌ರ ಮಾರ್-ಎ-ಲಾಗೊ ಎಸ್ಟೇಟ್ ಮೇಲೆ ದಾಳಿ ನಡೆಸಿರುವ ಎಫ್‌ಬಿಐ ಅಧಿಕಾರಿಗಳು ಪ್ರಮುಖ ದಾಖಲೆಗಳ (Documents) ಪರಿಶೀಲನೆ ನಡೆಸಿದ್ದಾರೆ. ಟ್ರಂಪ್ ತಮ್ಮ ಅಧಿಕಾರದ ಅವಧಿಯಲ್ಲಿ ಅಮೆರಿಕಾ ಸರ್ಕಾರಕ್ಕೆ ಸೇರಿದ ಕೆಲವೊಂದು ಗೌಪ್ಯ ಹಾಗೂ ಮಹತ್ವದ ದಾಖಲೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಫ್‌ಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಎಫ್‌ಬಿಐ ದಾಳಿ ಬಗ್ಗೆ ಮಾಹಿತಿ ನೀಡಿರುವ ಟ್ರಂಪ್

ಎಫ್‌ಬಿಐ ದಾಳಿ ಬಗ್ಗೆ ಫೆಡರಲ್ ಕಾನೂನು ಜಾರಿ ಸಂಸ್ಥೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಆದರೆ ಇದರ ಬಗ್ಗೆ ಖುದ್ದು ಡೊನಾಲ್ಡ್ ಟ್ರಂಪ್ ಅವರೇ ಸೋಶಿಯಲ್ ಮೀಡಿಯಾಗಳಲ್ಲಿ ಬರೆದುಕೊಂಡಿದ್ದಾರೆ. ತನ್ನ ಮಾರ್-ಎ-ಲಾಗೊ ಎಸ್ಟೇಟ್‌ ಮೇಲೆ ದಾಳಿ ನಡೆಸಿರುವ ಎಫ್‌ಬಿಐ ಅಧಿಕಾರಿಗಳು, ಹುಡುಕಾಟ ನಡೆಸುತ್ತಿದ್ದಾರೆ ಅಂತ ಟ್ರಂಪ್ ಹೇಳಿದ್ದಾರೆ. "ನನ್ನ ಸುಂದರವಾದ ಮನೆಯು ಪ್ರಸ್ತುತ ಮುತ್ತಿಗೆಗೆ ಒಳಗಾಗಿದೆ, ದಾಳಿ ಮಾಡಲಾಗಿದೆ ಮತ್ತು FBI ಏಜೆಂಟ್‌ಗಳ ದೊಡ್ಡ ಗುಂಪು ಆಕ್ರಮಿಸಿಕೊಂಡಿದೆ" ಅಂತ ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ರ ಎಸ್ಟೇಟ್


ಎಫ್‌ಐಐ ದಾಳಿಗೆ ಟ್ರಂಪ್ ಕಿಡಿಕಿಡಿ

"ಅಮೆರಿಕ ಸಂಯುಕ್ತ ಸಂಸ್ಥಾನದ ಯಾವುದೇ ಅಧ್ಯಕ್ಷರಿಗೆ ಈ ರೀತಿ ಆಗಿಲ್ಲ. ಸಂಬಂಧಿತ ಸರ್ಕಾರಿ ಏಜೆನ್ಸಿಗಳೊಂದಿಗೆ ಕೆಲಸ ಮಾಡಿದ ನಂತರ ಮತ್ತು ಸಹಕರಿಸಿದ ನಂತರ, ನನ್ನ ಮನೆಯ ಮೇಲೆ ಈ ಅಘೋಷಿತ ದಾಳಿ ಅಗತ್ಯ ಅಥವಾ ಸೂಕ್ತವಲ್ಲ. ಇದು ಪ್ರಾಸಿಕ್ಯೂಟೋರಿಯಲ್ ದುರ್ನಡತೆ, ನ್ಯಾಯ ವ್ಯವಸ್ಥೆಯ ಶಸ್ತ್ರಾಸ್ತ್ರ, ಮತ್ತು ನಾನು 2024 ರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ತೀವ್ರವಾಗಿ ಬಯಸದೇ ವಿರೋಧಿಗಳು ದಾಳಿ ಮಾಡಿಸಿದ್ದಾರೆ ” ಎಂದು ಟ್ರಂಪ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Maharashtra Cabinet: ಶಿಂಧೆ ಸಂಪುಟ ಸೇರಿದ 18 ಶಾಸಕರು, 50:50 ಸೂತ್ರದಲ್ಲಿ ಕ್ಯಾಬಿನೆಟ್ ವಿಸ್ತರಣೆ

ಅಮೂಲ್ಯ ದಾಖಲೆ ತಂದಿದ್ದರಾ ಟ್ರಂಪ್?

ಈ ಹಿಂದೆ ಡೊನಾಲ್ಡ್ ಟ್ರಂಪ್ ಅಮೆರಿಕಾ ಅಧ್ಯಕ್ಷರಾಗಿದ್ದಾಗ ತಮ್ಮ ಶ್ವೇತಭವನದಿಂದ ಫ್ಲೋರಿಡಾದಲ್ಲಿರುವ ನಿವಾಸಕ್ಕೆ ವರ್ಗೀಕೃತ ಅಧ್ಯಕ್ಷೀಯ ದಾಖಲೆಗಳನ್ನು ತೆಗೆದುಕೊಂಡು ಬಂದಿದ್ದಾರೆ ಎಂಬ ಆರೋಪ ಇದೆ.

ಟ್ರಂಪ್ ಮನೆ ಸುತ್ತುವರೆದಿರುವ ಅಧಿಕಾರಿಗಳು

ಮೂಲಗಳ ಪ್ರಕಾರ ಭದ್ರತಾ ಪಡೆ ಟ್ರಂಪ್ ಮನೆಯನ್ನು ಸುತ್ತುವರಿದಿದ್ದು, ಶೋಧ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಈ ದಾಳಿಯ ಬಗ್ಗೆ ವಿವರ ನೀಡಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

ಟ್ರಂಪ್‌ ಅವರ ಎಸ್ಟೇಟ್


ದಾಳಿ ವೇಳೆ ಮನೆಯಲ್ಲಿ ಇರದ ಟ್ರಂಪ್

ನ್ಯೂಜೆರ್ಸಿಯ ಬೆಡ್‌ಮಿನ್‌ಸ್ಟರ್‌ನಲ್ಲಿರುವ ತನ್ನ ಗಾಲ್ಫ್ ಕ್ಲಬ್‌ನಲ್ಲಿ ಬೇಸಿಗೆಯನ್ನು ಕಳೆಯುವ ಟ್ರಂಪ್, ದಾಳಿಯ ಸಮಯದಲ್ಲಿ ಮಾರ್-ಎ-ಲಾಗೊದಲ್ಲಿ ಇರಲಿಲ್ಲ ಎಂದು ಎನ್‌ಬಿಸಿ ವರದಿ ಮಾಡಿದೆ. ಈ ಬಗ್ಗೆ ಅವರ ಸೊಸೆ ಮಾಹಿತಿ ನೀಡಿದ್ದಾರೆ. ಇನ್ನು ಟ್ರಂಪ್ ನಿನ್ನೆ ಸಂಜೆ ನ್ಯೂಯಾರ್ಕ್ ನಗರದ ಟ್ರಂಪ್ ಟವರ್‌ನಿಂದ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸದೆ ನಿರ್ಗಮಿಸಿದರು ಅಂತ ವರದಿಯಾಗಿವೆ.

ಇದನ್ನೂ ಓದಿ: Independence Day 2022: ಗೂಗಲ್‌ನಿಂದ 'ಇಂಡಿಯಾ ಕಿ ಉಡಾನ್‌' ಲಾಂಚ್! ಏನಿದು ಗೊತ್ತಾ ಹೊಸ ಯೋಜನೆ?

 ಟ್ರಂಪ್ ಬೆಂಬಲಿಗರಿಂದ ಪ್ರತಿಭಟನೆ

ಇನ್ನು ಟ್ರಂಪ್ ನಿವಾಸದ ಮೇಲೆ ಎಫ್‌ಬಿಐ ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಟ್ರಂಪ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿ ವೇಳೆ ಬೆಂಬಲಿಗರು ಅವರ ಮನೆಯ ಹೊರಗೆ ಜಮಾಯಿಸಿದ್ದರು. ಟ್ರಂಪ್ ಹೆಸರಿನ ಬ್ಯಾನರ್,  ಫೋಟೋಗಳನ್ನು ಹಿಡಿದುಕೊಂಡು, ಅಮೆರಿಕನ್ ಧ್ವಜಗಳನ್ನು ಹಿಡಿದು, ಘೋಷಣೆ ಕೂಗಿದರು.
Published by:Annappa Achari
First published: