ಈ ದೇಶದವರಿಗೆ ಮದುವೆ ಭಯ!; ಇಲ್ಲಿ ಹುಡುಗ-ಹುಡುಗಿಯರು ಜೊತೆಯಾಗಿ ಓಡಾಡಲ್ಲ

ಮದುವೆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿರುವುದರಿಂದ ಜನನ ಪ್ರಮಾಣದಲ್ಲೂ ಇಳಿಕೆಯಾಗುತ್ತಿದೆ. ಹಾಗಾಗಿ ದಕ್ಷಿಣ ಕೋರಿಯಾಕ್ಕೆ ಈಗ ಭಯವೊಂದು ಕಾಡುತ್ತಿದೆ. ಅದೇನೆಂದರೆ, ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಯುವಕರಿಗಿಂತ ವೃದ್ಧರ ಸಂಖ್ಯೆಯೇ ಹೆಚ್ಚಾಗಲಿದೆ.

Rajesh Duggumane | news18
Updated:January 21, 2019, 9:13 PM IST
ಈ ದೇಶದವರಿಗೆ ಮದುವೆ ಭಯ!; ಇಲ್ಲಿ ಹುಡುಗ-ಹುಡುಗಿಯರು ಜೊತೆಯಾಗಿ ಓಡಾಡಲ್ಲ
ಸಾಂದರ್ಭಿಕ ಚಿತ್ರ
  • News18
  • Last Updated: January 21, 2019, 9:13 PM IST
  • Share this:
ಶಿಕ್ಷಣ ಮುಗಿಸಿ ಕೆಲಸಕ್ಕೆ ಸೇರಿಕೊಂಡರೆ ಸಾಕು, ಮನೆಯಲ್ಲಿ ಮದುವೆ ವಿಚಾರ ಪ್ರಸ್ತಾಪವಾಗಿ ಬಿಡುತ್ತದೆ. ಭಾರತೀಯರು ಸರಾಸರಿ 25 ವರ್ಷಕ್ಕೆ ವಿವಾಹವಾಗುತ್ತಾರೆ. ಜೀವನದಲ್ಲಿ ಮದುವೆ ಒಂದು ಪ್ರಮುಖ ಘಟ್ಟ ಎಂಬುದು ಭಾರತೀಯರ ಭಾವನೆ. ಆದರೆ, ಇಲ್ಲೊಂದು ದೇಶವಿದೆ. ಇಲ್ಲಿನ ಮಂದಿ ಮದುವೆಯಾಗಲು ಹಿಂಜರಿಯುತ್ತಾರೆ. ಡೇಟಿಂಗ್​ ಮಾಡಿದರೆ, ನಂತರ ವಿವಾಹವಾಗುವ ಪರಿಸ್ಥಿತಿ ಬಂದೊದಗಿ ಬಿಟ್ಟರೆ ಎಂಬ ಭಯಕ್ಕೆ ಗಂಡು-ಹೆಣ್ಣು ಸುತ್ತಾಟ ನಡೆಸುವುದು ಕಡಿಮೆ!

ನಾವು ಈಗ ಹೇಳುತ್ತಿರುವುದು ದಕ್ಷಿಣ ಕೊರಿಯಾದ ಕಥೆ. ಹೌದು, ಈ ದೇಶದಲ್ಲಿ ಮದುವೆ ಬಗ್ಗೆ ಎಲ್ಲರೂ ತಾತ್ಸಾರ ಮನೋಭಾವನೆ ಹೊಂದುತ್ತಿದ್ದಾರಂತೆ! ಸದಾ ಒಂಟಿಯಾಗಿ ಬಯಸುತ್ತಿರುವ ಅನೇಕರು ಮದುವೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಸಂಗಾತಿ ಬದಲು ಗೊಂಬೆಯನ್ನು ಖರೀದಿಸಿ ಮನೆಯೊಳಗೆ ಇಟ್ಟುಕೊಳ್ಳುತ್ತಿದ್ದಾರೆ. ಅದರ ಜೊತೆ ಕಾಲ ಕಳೆಯುತ್ತಿದ್ದಾರೆ!

ಇದು ಅಚ್ಚರಿ ಎನಿಸಿದರೂ ಸತ್ಯ. ಈ ದೇಶದ ಜನತೆಯ ಮನೋಭಾವನೆ ಬದಲಾಗುತ್ತಿದೆ. ಸದಾ ಒಟಿಯಾಗಿರಲು ಬಯಸುವ ಯುವಕ-ಯುವತಿಯರು ಒಟ್ಟಿಗೆ ಸುತ್ತಾಟ ನಡೆಸುವುದಿಲ್ಲ. ಹಾಗೆ ಮಾಡಿದರೆ, ಮನೆಯವರು ಒತ್ತಾಯ ಪೂರ್ವಕವಾಗಿ ವಿವಾಹ ಮಾಡಿಬಿಡುತ್ತಾರೆ! ಪಾಲಕರ ಒತ್ತಾಯಕ್ಕೆ ಮಣಿಯಲು ಇವರಿಗೆ ಇಷ್ಟವಿಲ್ಲ. ಕಾರಣ ಇವರಿಗೆ ಒಂಟಿಯಾಗಿರಬೇಕು.

ಇದನ್ನೂ ಓದಿ: ಇದು ಅಭಿವೃದ್ಧಿ ಹೊಂದಿದ ದೇಶದ ಕಥೆ: ಇಲ್ಲಿನ ವೃದ್ಧರು ಬೇಕಂತಲೇ ಅಪರಾಧ ಮಾಡಿ ಜೈಲು ಸೇರುತ್ತಿದ್ದಾರೆ..!

2012ರ ಗಣತಿ ಪ್ರಕಾರ, 20-44 ವರ್ಷ ವಯಸ್ಸಿನ ಶೇ. 40 ಮಂದಿ ಮಾತ್ರ ಡೇಟಿಂಗ್​ ಮಾಡುತ್ತಿದ್ದರು. ಇದರಲ್ಲಿ ಮದುವೆಯಾಗುವವರ ಪ್ರಮಾಣ ಕಡಿಮೆ. 2015ರ ವರದಿ ಪ್ರಕಾರ 25-29 ವಯಸ್ಸಿನ ಶೇ. 90 ಪುರುಷರು ಹಾಗೂ ಶೇ.77 ಮಹಿಳೆಯರು ಮದುವೆ ಆಗಿಲ್ಲ! ಶೇ.23 ಮಂದಿ 50ನೇ ವಯಸ್ಸಿನವರೆಗೂ ವಿವಾಹವಾಗಿಲ್ಲ!

ಮದುವೆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿರುವುದರಿಂದ ಜನನ ಪ್ರಮಾಣದಲ್ಲೂ ಇಳಿಕೆಯಾಗುತ್ತಿದೆ. ಹಾಗಾಗಿ ದಕ್ಷಿಣ ಕೋರಿಯಾಕ್ಕೆ ಈಗ ಭಯವೊಂದು ಕಾಡುತ್ತಿದೆ. ಅದೇನೆಂದರೆ, ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಯುವಕರಿಗಿಂತ ವೃದ್ಧರ ಸಂಖ್ಯೆಯೇ ಹೆಚ್ಚಾಗಲಿದೆ. 2030ರ ವೇಳೆಗೆ ಮೂರರಲ್ಲಿ ಒಂದು ಭಾಗ ವೃದ್ಧರೇ ಇರಲಿದ್ದಾರಂತೆ. ಇದು ಹೀಗೆಯೇ ಮುಂದುವರಿದರೆ ದೇಶಕ್ಕೆ ಅಪಾಯ ಎಂಬುದು ತಜ್ಞರ ಅಭಿಪ್ರಾಯ.

ಇದನ್ನೂ ಓದಿ: ಪುರುಷರ ಕಣ್ಣೀರಿಗೆ ಕಾರಣವಾಗುತ್ತಿದೆ ಲೈಂಗಿಕ ಜೀವನ!ಈ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮದುವೆ ಮಾಡಿಸಲು ಸರ್ಕಾರವೇ ಮುಂದೆಬರುತ್ತಿದೆ. 2005ರಿಂದ ಈವರೆಗೆ ಬರೋಬ್ಬರಿ 228 ಕೋಟಿ ರೂ. ಮೊತ್ತವನ್ನು ಇದಕ್ಕಾಗಿಯೇ ವೆಚ್ಛ ಮಾಡಿದೆ! ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಸರ್ಕಾರ ಮಾಡುತ್ತಿದೆ.

First published:January 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading