• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಹತ್ರಸ್​ ಪ್ರಕರಣ: ವಿಧಿ ವಿಜ್ಞಾನ ವರದಿ ಅನ್ವಯ ಯುವತಿ ಮೇಲೆ ಅತ್ಯಾಚಾರವಾಗಿಲ್ಲ ಎಂದ ಪೊಲೀಸ್​ ಅಧಿಕಾರಿ

ಹತ್ರಸ್​ ಪ್ರಕರಣ: ವಿಧಿ ವಿಜ್ಞಾನ ವರದಿ ಅನ್ವಯ ಯುವತಿ ಮೇಲೆ ಅತ್ಯಾಚಾರವಾಗಿಲ್ಲ ಎಂದ ಪೊಲೀಸ್​ ಅಧಿಕಾರಿ

ಯುವತಿ ಕೂಡ ಪೊಲೀಸರಿಗೆ ಹೇಳಿಕೆ ದಾಖಲಿಸುವಾಗ  ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿಸಿಲ್ಲ. ಆದರೆ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿಸಿದಳು ಎಂದಿದ್ದಾರೆ.

ಯುವತಿ ಕೂಡ ಪೊಲೀಸರಿಗೆ ಹೇಳಿಕೆ ದಾಖಲಿಸುವಾಗ  ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿಸಿಲ್ಲ. ಆದರೆ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿಸಿದಳು ಎಂದಿದ್ದಾರೆ.

ಯುವತಿ ಕೂಡ ಪೊಲೀಸರಿಗೆ ಹೇಳಿಕೆ ದಾಖಲಿಸುವಾಗ  ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿಸಿಲ್ಲ. ಆದರೆ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿಸಿದಳು ಎಂದಿದ್ದಾರೆ.

  • Share this:

ಲಕ್ನೋ (ಅ.1): ಹತ್ರಸ್​ನಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರದ ಕುರಿತು ದೇಶಾದಾದ್ಯಂತ ಖಂಡನೆ ವ್ಯಕ್ತವಾಗುತ್ತಿದೆ. ಅನೇಕ ಸಂಘಟನೆ ಮತ್ತು ರಾಜಕೀಯ ಪಕ್ಷಗಳು ಉತ್ತರ ಪ್ರದೇಶದ ಸರ್ಕಾರದ  ಕುರಿತು  ಟೀಕಿಸುತ್ತಿವೆ. ಯುವತಿಯ ಕುಟುಂಬಕ್ಕೆ ಕೊನೆಯ ಬಾರಿ ಕೂಡ ಸಂತ್ರಸ್ತೆ ಮುಖ ನೋಡಲು   ಪೊಲೀಸರು ಅಸ್ಪದ ನೀಡಲಿಲ್ಲ ಎಂದು ಯುವತಿ ಕುಟುಂಬ ಆರೋಪಿಸಿದೆ.  ಈಗ ಈ ಕುರಿತು ಮಾತನಾಡಿರುವ ಹಿರಿಯ ಅಧಿಕಾರಿಗಳು ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದೆ ಇರಲಿಲ್ಲ ಎಂದು ವಿಧಿ ವಿಜ್ಞಾನ ಪರೀಕ್ಷೆ ಪರೀಕ್ಷೆ ವರದಿ ತಿಳಿಸಿದೆ ಎಂದು ತಿಳಿಸಿದ್ದಾರೆ. ಯುವತಿ ಮೇಲೆ ಯಾವುದೇ ಅತ್ಯಾಚಾರ ನಡೆದಿರಲಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ ಎಂದು ಹೆಚ್ಚುವರಿ ಪೊಲೀಸ್​ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್​ ಕುಮಾರ್​ ಹೇಳಿದ್ದಾರೆ.


ಮರಣೋತ್ತರ ಪರೀಕ್ಷೆಯಲ್ಲಿ ಸಂತ್ರಸ್ತೆ ಕತ್ತಿಗೆ ಮುರಿತದಿಂದ ಆದ ಗಂಭೀರ ಗಾಯದಿಂದ ಮೃತಪಟ್ಟಿದ್ದಾಳೆ ಎಂದು ತಿಳಿಸಿದೆ. ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಯುವತಿಯ ದೇಹದಲ್ಲಿ ಯಾವುದೇ ವೀರ್ಯದ ಗುರುತು ಪತ್ತೆಯಾಗಿಲ್ಲ ಎಂದಿದ್ದಾರೆ.


ಯುವತಿ ಕೂಡ ಪೊಲೀಸರಿಗೆ ಹೇಳಿಕೆ ದಾಖಲಿಸುವಾಗ  ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ತಿಳಿಸಿಲ್ಲ. ಆದರೆ, ತನ್ನ ಮೇಲೆ ಹಲ್ಲೆ ನಡೆದಿದೆ ಎಂದು ತಿಳಿಸಿದಳು ಎಂದಿದ್ದಾರೆ.


ಸಮಾಜದ ಸಾಮರಸ್ಯ ಹಾಳು ಮಾಡುವ ಸಲುವಾಗಿ ಹಾಗೂ ಜಾತಿ ಗಲಭೆ ಸೃಷ್ಟಿಸಲು ಕೆಲವರು ಘಟನೆಯನ್ನು ತಪ್ಪಾಗಿ ಬಿಂಬಿಸುತ್ತಿದ್ದಾರೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.


ಯುವತಿಯ ಸಾವಿಗೆ ಕುತ್ತಿಗೆ ಮುರಿತ ಮತ್ತು ಆಘಾತಗಳೇ ಕಾರಣ ಎಂದು ಇದೇ ವೇಳೆ ಪುನರ್​ ಉಚ್ಚರಿಸಿದರು.


ಮಂಗಳವಾರ ದೆಹಲಿಯ ಸಫ್ಧರ್​ಜಂಗ್​ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಯುವತಿಯ ಮರಣೊತ್ತರ ಪರೀಕ್ಷೆ ಅತ್ಯಾಚಾರಕ್ಕೆ ಒಳಗಾದ ಯುವತಿ ಕತ್ತನ್ನು ಪದೇ ಪದೇ ಹಿಸುಕಿದ ಪರಿಣಾಮ ಕುತ್ತಿಗೆ ಮುರಿದಿದೆ ಎಂದು ವರದಿ ತಿಳಿಸಿದೆ.


ವರದಿಯ ಪ್ರಕಾರ ಪರೋಕ್ಷ ಆಘಾತ ಮತ್ತು ಅದರ ಪರಿಣಾಮದಿಂದ ಬೆನ್ನು ಮೂಳೆ ಮುರಿದಿದೆ. ಆರೋಪಿ, ಯುವತಿಯ ಕತ್ತನ್ನು ಪದೇ ಪದೇ  ಹಿಸುಕಲಾಗಿದೆ. ಇದರ ಪರಿಣಾಮ ಆಕೆ ಕುತ್ತಿಗೆ ಮುರಿತವಾಗಿದೆ. ಈ ವೇಳೆ ಬೆರಳಿನ ಕಲೆ ಕೂಡ ಕುತ್ತಿಗೆ ಮೇಲೆ ದಾಖಲಾಗಿದೆ. ಕುತ್ತಿಗೆ ಹಿಸುಕಿದ ಪರಿಣಾಮ ಆಕೆ ನರಳಾಡಿದ್ದಾಳೆ ಎಂದಿದ್ದಾರೆ.


ಇದನ್ನು ಓದಿ: ಲಾಠಿ ಚಾರ್ಜ್ ಮಾಡಿ, ತಳ್ಳಿದರು; ಉತ್ತರ ಪ್ರದೇಶ ಪೊಲೀಸರ ವಿರುದ್ಧ ರಾಹುಲ್ ಗಾಂಧಿ ಆರೋಪ


ಸಫ್ಧರ್​ಜಂಗ್​ ಆಸ್ಪತ್ರೆಯ ಸಿಬ್ಬಂದಿ ಪೊಲೀಸರ ಸಮ್ಮುಖದಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಸಿ6 ಗರ್ಭಕಂಠದ ಕಶೇರುಖಂಡ (ಬೆನ್ನಿನ ಮಧ್ಯದ ಮೂಳೆ) ಮುರಿತಗೊಂಡಿದೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐಗೆ ತಿಳಿಸಿದೆ.


ಸೆಪ್ಟೆಂಬರ್ 14ರಂದು ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ತನ್ನ ಕುಟುಂಬದೊಂದಿಗೆ ಹೊಲದಲ್ಲಿ ಹುಲ್ಲು ಕತ್ತರಿಸುತ್ತಿದ್ದ 19 ವರ್ಷದ ಯುವತಿಯನ್ನು ಆಕೆಯ ದುಪಟ್ಟಾದಿಂದ ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿತ್ತು. ಈ ವೇಳೆ ಕುತ್ತಿಗೆ ಹಿಸುಕಿದ್ದರಿಂದ ಉಸಿರಾಡಲಾಗದೆ ಆಕೆ ಪರದಾಡಿದ್ದಳು. ಹಾಗೇ, ಈ ವೇಳೆ ಆಕೆಯ ನಾಲಿಗೆ ಕೂಡ ಅರ್ಧ ತುಂಡಾಗಿತ್ತು. ಆಕೆಯನ್ನು ಉತ್ತರ ಪ್ರದೇಶದ ಆಸ್ಪತ್ರೆಯಲ್ಲಿ ಐಸಿಯುನಲ್ಲಿರಿಸಲಾಗಿತ್ತು. ಆದರೂ ಆಕೆ ಚೇತರಿಸಿಕೊಳ್ಳದ ಕಾರಣ ದೆಹಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮಂಗಳವಾರ ಸಾವನ್ನಪ್ಪಿದ್ದಳು

top videos
    First published: