• Home
 • »
 • News
 • »
 • national-international
 • »
 • Foreign Policy: ವಿದೇಶಾಂಗ ನೀತಿಯ ಆಯ್ಕೆಗಳಲ್ಲಿ ಭಾರತದ ಹೊಸ ಬ್ಯಾಲೆನ್ಸಿಂಗ್ ತಂತ್ರಗಾರಿಕೆ ಹೇಗಿದೆ?

Foreign Policy: ವಿದೇಶಾಂಗ ನೀತಿಯ ಆಯ್ಕೆಗಳಲ್ಲಿ ಭಾರತದ ಹೊಸ ಬ್ಯಾಲೆನ್ಸಿಂಗ್ ತಂತ್ರಗಾರಿಕೆ ಹೇಗಿದೆ?

ಸಚಿವ ಎಸ್. ಜೈಶಂಕರ್

ಸಚಿವ ಎಸ್. ಜೈಶಂಕರ್

ಅಮೇರಿಕನ್ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ದೇಶಗಳೊಂದಿಗೆ ಕೂಡ ಪುಟಿನ್ ಯುದ್ಧ ನಡೆಸುತ್ತಿದ್ದು ತನ್ನ ಶತ್ರುವಿಗಿಂತ ಇಂತಹ ದೇಶಗಳ ಮೇಲೆ ಪುಟಿನ್ ಹೆಚ್ಚು ಕಿಡಿಕಾರುತ್ತಿದ್ದಾರೆ.

 • Trending Desk
 • 4-MIN READ
 • Last Updated :
 • Delhi, India
 • Share this:

  ವಿದೇಶಾಂಗ ನೀತಿಯ (Foreign Policy) ಆಯ್ಕೆಗಳನ್ನು ಉದ್ದೇಶಪೂರ್ವಕವಾಗಿ ವೈವಿಧ್ಯಗೊಳಿಸುವ ಭಾರತದ ತಂತ್ರವನ್ನು ಯಾರಿಗೂ ಅಷ್ಟೊಂದು ಸುಲಭವಾಗಿ ಅರಿತುಕೊಳ್ಳಲಾಗುವುದಿಲ್ಲ. ಏಕೆಂದರೆ ಕಳೆದ 48 ಗಂಟೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ( S. Jaishankar) ರಷ್ಯಾದಲ್ಲಿದ್ದಾರೆ; ನೌಕಾಪಡೆಯ ಮುಖ್ಯಸ್ಥ ಆರ್. ಹರಿ ಕುಮಾರ್ ಅವರು ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್‌ನ ಎಲ್ಲಾ ನೌಕಾಪಡೆಗಳ ತಮ್ಮ ಸಹವರ್ತಿಗಳನ್ನು ಭೇಟಿ ಮಾಡಿದ್ದಾರೆ. ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಯುಎಸ್‌ನಲ್ಲಿದ್ದರೆ, ಭಾರತ ಮತ್ತು ಫ್ರಾನ್ಸ್ ಪಶ್ಚಿಮ ಹಿಂದೂ ಮಹಾಸಾಗರದ ರಿಯೂನಿಯನ್ ದ್ವೀಪದಲ್ಲಿ ಜಂಟಿ ಸಮರಾಭ್ಯಾಸ ನಡೆಸುತ್ತಿವೆ.


  ಹೊಸ-ಯುಗದ ತ್ರಿಪಕ್ಷೀಯ ಸಂಭಾಷಣೆ


  ಮಾಸ್ಕೋದಲ್ಲಿ ಜೈಶಂಕರ್ ಮತ್ತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಡುವೆ ಮತ್ತು ವಾಷಿಂಗ್ಟನ್ ಡಿಸಿಯಲ್ಲಿ ಕ್ವಾತ್ರಾ ಮತ್ತು ಯುಎಸ್ ಡೆಪ್ಯುಟಿ ಸೆಕ್ರೆಟರಿ ಆಫ್ ಸ್ಟೇಟ್ ವೆಂಡಿ ಶೆರ್ಮನ್ ನಡುವಿನ ಸಂಭಾಷಣೆಯು ವಿಶೇಷವಾಗಿ ಆಸಕ್ತಿದಾಯಕವಾಗಿದ್ದು 21 ನೇ ಶತಮಾನಕ್ಕೆ ಸೂಕ್ತವಾಗಿರುವ ಹೊಸ-ಯುಗದ ತ್ರಿಪಕ್ಷೀಯ ಸಂಭಾಷಣೆಯಾಗಿದೆ ಎಂದು ವರದಿಗಳು ತಿಳಿಸಿವೆ.


  ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಶ್ವಕ್ಕೆ ಅಹಿತಕರವಾದ ಯುದ್ಧದಲ್ಲಿ ಪಾಲ್ಗೊಂಡಿದ್ದಾರೆ. ನೋವನ್ನು ತಡೆದುಕೊಳ್ಳುವ ರಷ್ಯಾದ ಸಾಮರ್ಥ್ಯವು ದೀರ್ಘ ಮತ್ತು ನಿರಂತರವಾಗಿದೆ ಎಂಬುದನ್ನು ಪುಟಿನ್ ತೋರಿಸಿಕೊಟ್ಟಿದ್ದಾರೆ. ಈ ಯುದ್ಧದಲ್ಲಿ ಸಾವಿರಾರು ರಷ್ಯನ್ನರು ಮರಣವನ್ನಪ್ಪಿದರೂ ಪುಟಿನ್ ತಮ್ಮ ಗುರಿ ಸಾಧಿಸುವವರೆಗೆ ಯುದ್ಧದಿಂದ ಹಿಂಜರಿಯುವ ಮಾತಿಲ್ಲ ಎಂದು ತಿಳಿಸಿದ್ದಾರೆ. ಪುಟಿನ್ ಯುದ್ಧದ ಗುರಿಗಳನ್ನು ಆಗಾಗ್ಗೆ ಬದಲಿಸುತ್ತಿದ್ದು ಇದುವರೆಗೆ ಉಕ್ರೇನ್ ಮೇಲೆ ಸಮರ ಸಾರಿರುವ ಕುರಿತು ಸರಿಯಾದ ವಿವರಣೆ ನೀಡಿಲ್ಲ.


  ರಿಯಾಯಿತಿಯ ಕಚ್ಚಾತೈಲದ ಅಗತ್ಯ


  ಅಮೇರಿಕನ್ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ದೇಶಗಳೊಂದಿಗೆ ಕೂಡ ಪುಟಿನ್ ಯುದ್ಧ ನಡೆಸುತ್ತಿದ್ದು ತನ್ನ ಶತ್ರುವಿಗಿಂತ ಇಂತಹ ದೇಶಗಳ ಮೇಲೆ ಪುಟಿನ್ ಹೆಚ್ಚು ಕಿಡಿಕಾರುತ್ತಿದ್ದಾರೆ. ಯುಎಸ್‌ ಒತ್ತಡಕ್ಕೆ ಮಣಿದು ರಷ್ಯಾದ ತೈಲವನ್ನು ಖರೀದಿಸದ ಕಾರಣ ಇಂದು ಯುರೋಪ್ ಅದಕ್ಕಾಗಿ ಸೂಕ್ತ ಬೆಲೆ ತೆರುತ್ತಿದೆ.


  ಇದನ್ನೂ ಓದಿ: PM Modi: ಭಾರತದೊಂದಿಗೆ ಮೈತ್ರಿಗೆ ಮುಂದಾದ ಅಮೆರಿಕಾ! ರಷ್ಯಾ ಜೊತೆಗಿನ ಒಪ್ಪಂದ ಕಾರಣವೇ?


  ಹೀಗಾಗಿಯೇ ಜೈಶಂಕರ್ ರಷ್ಯಾದೊಂದಿಗೆ ಸಮತೋಲನದ ಮಾತುಕತೆಗಳನ್ನು ನಿರ್ವಹಿಸುತ್ತಿದ್ದಾರೆ. ಭಾರತವು ರಷ್ಯನ್ನರನ್ನು ಹೆಚ್ಚು ವಿರೋಧಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ತೊಂದರೆಗೊಳಗಾದ ಆರ್ಥಿಕತೆಯನ್ನು ಮರಳಿ ಹಿಂದಕ್ಕೆ ತರಲು ರಷ್ಯಾ ಒದಗಿಸುವ ರಿಯಾಯಿತಿಯ ಕಚ್ಚಾತೈಲದ ಅಗತ್ಯ ಭಾರತಕ್ಕಿದೆ.


  ಭಾರತವನ್ನು ಕೊಂಡಿಯನ್ನಾಗಿರಿಸಿರುವ ರಷ್ಯಾ


  ದೆಹಲಿಯನ್ನು ದಾಳವನ್ನಾಗಿರಿಸಿಕೊಳ್ಳಲು ರಷ್ಯನ್ನರು ಸಾಧ್ಯವಿರುವ ಎಲ್ಲಾ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಹೀಗಾಗಿಯೇ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಭಾರತವನ್ನು ಅತ್ಯಂತ ವಿಶೇಷವಾದ ಹಾಗೂ ಸವಲತ್ತು ಹೊಂದಿರುವ ಪಾಲುದಾರ ಎಂದು ಪದೇ ಪದೇ ಉಲ್ಲೇಖಿಸುತ್ತಿದ್ದು, ಪುಟಿನ್ ಕೂಡ ಭಾರತವನ್ನು ಹೊಗಳುವ ಕಾರ್ಯದಲ್ಲಿ ಹಿಂದಿಲ್ಲ. ಸ್ವತಂತ್ರ ವಿದೇಶಾಂಗ ನೀತಿಯನ್ನು ಅನುಸರಿಸಲು ಸಮರ್ಥವಾಗಿರುವ ಮಹಾನ್ ದೇಶಭಕ್ತ ಎಂದು ಪುಟಿನ್ ನರೇಂದ್ರ ಮೋದಿಯನ್ನು ಬಣ್ಣಿಸಿದ್ದಾರೆ.


  ಅಫ್ಘಾನಿಸ್ತಾನದ ಮೇಲಿನ ರಷ್ಯಾದ ನೇತೃತ್ವದ ಮಾತುಕತೆಗಳಲ್ಲಿ ಭಾಗವಹಿಸಲು ಭಾರತಕ್ಕಾಗಿ ತಾಲಿಬಾನ್‌ಗಳನ್ನು ಆಹ್ವಾನಿಸುತ್ತಿದೆ. ಇದೇ ಸಮಯದಲ್ಲಿ ಪಾಕ್‌ನ ಬಲವಾದ ಪ್ರಭಾವಕ್ಕೊಳಗಾಗಿರುವ ದೇಶದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ದೆಹಲಿ ಕೂಡ ಬಯಸುತ್ತದೆ.


  ಬಿಕ್ಕಟ್ಟಿನ ಸಮಯದಲ್ಲಿ ಭಾರತದ ನೆರವು


  ಉಕ್ರೇನ್‌ನಲ್ಲಿ ರಷ್ಯಾದ ಕೃತ್ಯವು ಭಾರತವನ್ನು ಅಸಮಾಧಾನಗೊಳಿಸಿದೆ ಎಂಬುದನ್ನು ಇಲ್ಲಿ ಪುಟಿನ್ ಅರಿತುಕೊಳ್ಳಬೇಕು. ಏಕೆಂದರೆ ಸಮರ್‌ಕಂಡ್‌ನಲ್ಲಿ ನಡೆದ 2022 ರ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಮೋದಿ ಪುಟಿನ್ ಅವರನ್ನು ನಿಂದಿಸುವ ಮೂಲಕ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.


  ಚೀನಾವನ್ನು ಎದುರಿಸಲು ಇಂಡೋ-ಪೆಸಿಫಿಕ್‌ನಲ್ಲಿ ಭಾರತದ ಅಗತ್ಯ ಬಿದ್ದಾಗ ಯುಎಸ್‌ಗೆ ಭಾರತವನ್ನು ಹೆಚ್ಚು ಅಪರಾಧಿಯಾಗಿ ಕಾಣಲು ಸಾಧ್ಯವಾಗುವುದಿಲ್ಲ ಎಂಬುದನ್ನು ಯುಎಸ್ ಕಂಡುಕೊಂಡಿದೆ. ಬಿಕ್ಕಟ್ಟಿನ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಭಾರತದ ನೆರವನ್ನು ಪಡೆದುಕೊಳ್ಳುತ್ತವೆ ಎಂಬ ವಿಷಯ ಭಾರತಕ್ಕೂ ತಿಳಿದಿದೆ. ಹಾಗಾಗಿಯೇ ಜೈಶಂಕರ್ ಲಾವ್ರೊವ್ ಅವರ ವಿಶೇಷ ಮತ್ತು ಕಾರ್ಯತಂತ್ರದ ಪಾಲುದಾರ ಎಂದು ಭಾರತವನ್ನು ಹೊಗಳಿದಾಗ ಅದಕ್ಕೆ ಪ್ರತಿಯಾಗಿ ರಷ್ಯಾವನ್ನು ಗಣನೀಯ, ಸಮಯ-ಪರೀಕ್ಷಿತ ಪಾಲುದಾರಿಕೆ ಎಂದು ಬಣ್ಣಿಸಲಾಗಿದೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು