ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ (UN Security Council) ಕಾಶ್ಮೀರದ ವಿಚಾರ ಪ್ರಸ್ತಾಪಿಸಿದ ಪಾಕಿಸ್ತಾನಕ್ಕೆ (Pakistan) ಭಾರತ ಮುಟ್ಟಿ ನೋಡುಕೊಳ್ಳುವಂತೆ ಕೌಂಟರ್ ಕೊಟ್ಟಿದೆ. ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ (Bilawal Bhutto Zardari ), ಯುಎನ್ ಸಭೆಯಲ್ಲಿ ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿದ ಬಳಿಕ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ (Foreign Minister S Jaishankar ) ಖಡಕ್ ಆಗಿಯೇ ಕೌಂಟರ್ ನೀಡಿದ್ದಾರೆ. ಪಾಕಿಸ್ತಾನ ಮಾತ್ರವಲ್ಲದೇ ಚೀನಾ ವಿರುದ್ಧವೂ ಜೈ ಶಂಕರ್ ಕಿಡಿಕಾರಿದ್ದಾರೆ. ಭಯೋತ್ಪಾದನೆಗೆ (Terrorism) ಬೆಂಬಲ ನೀಡುತ್ತಿರುವವರನ್ನು ಸಮರ್ಥಿಸಿವುದು, ಅವರಿಗೆ ಸಹಾಯ ಮಾಡುವುದು. ಅಲ್ಲದೇ ವಿಶ್ವಸಂಸ್ಥೆಯ ವೇದಿಕೆಗಳನ್ನ ಇಂತಹ ಕಾರ್ಯಗಳಿಗೆ ದುರುಪಯೋಗ ಮಾಡಿಕೊಳುತ್ತಿದ್ದಾರೆ ಎಂದು ಫೈರ್ ಆಗಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (ಯುಎಸ್ಎನ್ಸಿ) 'ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ ಮತ್ತು ಸುಧಾರಿತ ಬಹುಪಕ್ಷೀಯತೆಗಾಗಿ ಹೊಸ ದಿಕ್ಕುಗಳು' ('Maintenance of International Peace and Security: New Orientation for Reformed Multilateralism') ಎಂಬ ಅಂಶದ ಕುರಿತು ಬಹಿರಂಗ ಚರ್ಚೆಗೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜೈ ಶಂಕರ್ ಅವರು, ಭಯೋತ್ಪಾದನೆ ವಿರುದ್ಧ ವಿಶ್ವ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಒಸಾಮಾ ಬಿನ್ ಲಾಡೆನ್ಗೆ ರಾಜಾತಿಥ್ಯ, ಪಾರ್ಲಿಮೆಂಟ್ ಮೇಲೆ ಆಟ್ಯಾಕ್
ಸಭೆಯಲ್ಲಿ ಕಾಶ್ಮೀರದ ಅಂಶವನ್ನು ಪ್ರಸ್ತಾಪಿಸಿ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ಕೊಟ್ಟು ಮಾತನಾಡಿದ ಜೈ ಶಂಕರ್ ಅವರು, ಅಲ್-ಖೈದಾ ನಾಯಕ ಒಸಾಮಾ ಬಿನ್ ಲಾಡೆನ್ಗೆ ವಿಶೇಷ ಅತಿಥ್ಯ ಕೊಟ್ಟಿದ್ದ, ನೆರೆಯ ದೇಶದ ಸಂಸತ್ ಭವನದ ಮೇಲೆ ದಾಳಿ ಮಾಡಿದ್ದ ದೇಶಕ್ಕೆ ವಿಶ್ವಸಂಸ್ಥೆಯ ಸಭೆಯಲ್ಲಿ ಭೋದನೆ ಮಾಡುವ ಅರ್ಹತೆಯೇ ಇಲ್ಲ. ಇದು ಗಡಿಯುದ್ದಕ್ಕೂ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವ ದೇಶಕ್ಕೆ ಖಂಡಿತ ಅನ್ವಯಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: Delhi: ದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ, ಸಂತ್ರಸ್ತೆ ಸ್ಥಿತಿ ಚಿಂತಾಜನಕ, ಶಾಕಿಂಗ್ ವಿಡಿಯೋ ವೈರಲ್!
ಮಾನವ ಕುಲಕ್ಕೆ ಸವಾಲಾಗಿರೋ ಅಂಶಗಳ ಬಗ್ಗೆ ಬದ್ಧತೆ ಹೊಂದಿದ್ದೇವೆ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಶ್ವಾಸಾರ್ಹತೆಯೂ ಮಾನವ ಕುಲಕ್ಕೆ ಪ್ರಸ್ತುತ ಸಂದರ್ಭದಲ್ಲಿ ಸವಾಲಾಗಿರುವ ಉಗ್ರವಾದ-ಸಂಘರ್ಷ, ಸಾಂಕ್ರಾಮಿಕ ರೋಗಗಳು, ಹವಾಮಾನ ಬದಲಾವಣೆಯಂತಹ ಅಂಶಗಳ ಬಗ್ಗೆ ಕೈಗೊಳ್ಳುವ ಕ್ರಮಗಳ ಮೇಲೆ ನಿಂತಿದೆ.
Chaired the open debate in the Security Council on New Orientation for Reformed Multilateralism.
Underlined the three challenges inherent in the IGN process:
1. It is the only one in the United Nations that is conducted without any time frame. pic.twitter.com/HtA7eoex8c
— Dr. S. Jaishankar (@DrSJaishankar) December 14, 2022
ಎಲ್ಲರಿಗೂ ಸಮಾನ ಪ್ರಾತಿನಿಧ್ಯ ನೀಡಬೇಕು
ಭದ್ರತಾ ಮಂಡಳಿಯಲ್ಲಿ ಸಮಾನ ಪ್ರಾತಿನಿಧ್ಯ ಮತ್ತು ಸದಸ್ಯತ್ವ ಹೆಚ್ಚಳದ ವಿಚಾರ ಕಳೆದ ಮೂರು ದಶಕಗಳಿಂದ ಭದ್ರತಾ ಮಂಡಳಿಯ ಅಜೆಂಡಾದಲ್ಲಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಇದಕ್ಕೆ ಸಂಬಂಧಿಸಿದ ಸುಧಾರಣೆಗಳ ಮೇಲಿನ ಚರ್ಚೆ ಮಾತ್ರ ಗುರಿ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Indian Army: ರಫೇಲ್, ಸುಖೋಯ್ ಚಿನೂಕ್: ಚೀನಾ ಗಡಿಯಲ್ಲಿ IAF ಯುದ್ಧ ವಿಮಾನಗಳ ಗುಡುಗು!
ವಾಸ್ತವದಲ್ಲಿ ವಿಶ್ವ ನಾಟಕೀಯವಾಗಿ ಬದಲಾಗಿದೆ. ಭದ್ರತಾ ಮಂಡಳಿಯಲ್ಲಿ ಲ್ಯಾಟಿನ್ ಅಮೆರಿಕಾ, ಆಫ್ರಿಕಾ, ಏಷ್ಯಾ, ಸಣ್ಣ ದ್ವೀಪ ರಾಷ್ಟ್ರಗಳು, ಅಭಿವೃದ್ಧಿಯ ಪಥದಲ್ಲಿರೋ ಸಭ್ಯ ದೇಶಗಳಿಗೆ ಸ್ಥಿರವಾದ ಪ್ರಾತಿನಿಧ್ಯ ಲಭಿಸಬೇಕು ಎಂದು ಎಸ್ ಜೈಶಂಕರ್ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ