ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹ್ಯಾಟ್ರಿಕ್; ಈ ಬಾರಿಯು ಅಗ್ರಸ್ಥಾನ ಉಳಿಸಿಕೊಂಡ ಸಲ್ಲು

2018 Forbes India Celebrity 100 | ಫೋರ್ಬ್ಸ್ ಪಟ್ಟಿಯಲ್ಲಿರುವ 100 ಭಾರತೀಯ ಗಣ್ಯರ ಪೈಕಿ ಸಲ್ಮಾನ್​ ಈ ವರ್ಷ ಸಿನಿಮಾ, ಉತ್ಪನ್ನಗಳ ಪ್ರಚಾರ ಮೊದಲಾದವುಗಳಿಂದ ಒಟ್ಟು 253 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದಾರೆ.

Rajesh Duggumane | news18
Updated:December 5, 2018, 12:35 PM IST
ಫೋರ್ಬ್ಸ್ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಹ್ಯಾಟ್ರಿಕ್; ಈ ಬಾರಿಯು ಅಗ್ರಸ್ಥಾನ ಉಳಿಸಿಕೊಂಡ ಸಲ್ಲು
ಸಲ್ಮಾನ್​
  • News18
  • Last Updated: December 5, 2018, 12:35 PM IST
  • Share this:
ಮುಂಬೈ (ಡಿ.05): 2018ನೇ ಸಾಲಿನ ಭಾರತೀಯ​ ಸೆಲೆಬ್ರಿಟಿ ಪಟ್ಟಿಯನ್ನು ಫೋರ್ಬ್ಸ್ ಇಂದು ಬಿಡುಗಡೆ ಮಾಡಿದೆ. ಸತತ ಮೂರನೇ ಬಾರಿ ಸಲ್ಮಾನ್​ ಖಾನ್​ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಭಾರತೀಯ ಕ್ರಿಕೆಟ್​ ತಂಡದ ನಾಯಕ ವಿರಾಟ್​ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಫೋರ್ಬ್ಸ್ ಪಟ್ಟಿಯಲ್ಲಿರುವ 100 ಭಾರತೀಯ ಗಣ್ಯರ ಪೈಕಿ ಸಲ್ಮಾನ್​ ಈ ಬಾರಿ  (ಅಕ್ಟೋಬರ್​,2017-ಸೆಪ್ಟೆಂಬರ್​ 2018) ಸಿನಿಮಾ, ಉತ್ಪನ್ನಗಳ ಪ್ರಚಾರ ಮೊದಲಾದವುಗಳಿಂದ ಒಟ್ಟು 253 ಕೋಟಿ ರೂ. ಆದಾಯ ಗಳಿಕೆ ಮಾಡಿದ್ದಾರೆ. ಈ ಮೂಲಕ ಅವರು ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. 2016,2017ರ ಅವಧಿಯಲ್ಲೂ ಈ ಲಿಸ್ಟ್​ನಲ್ಲಿ  ಸಲ್ಲು ಅಗ್ರ ಶ್ರೇಯಾಂಕದಲ್ಲಿದ್ದರು.  ವಿರಾಟ್​ ಕೊಹ್ಲಿ (228 ಕೋಟಿ.ರೂ) ಎರಡನೇ ಸ್ಥಾನ ಹಾಗೂ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ (185 ಕೋಟಿ ರೂ.) ಮೂರನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿರುವ 100 ಗಣ್ಯರ ಒಟ್ಟೂ ಆದಾಯ 3,140 ಕೋಟಿ ರೂ. ತಲುಪಿದೆ.

ಇದನ್ನೂ ಓದಿ: ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಪುನೀತ್ ಸಿಹಿ ಸುದ್ದಿ!; ‘ನಟಸಾರ್ವಭೌಮ’ನ ಕಡೆಯಿಂದ ಬರಲಿದೆ ಆಡಿಯೋ

ಅಚ್ಚರಿ ಎಂದರೆ ಈ ಪಟ್ಟಿಯಲ್ಲಿ ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಶಾರುಖ್​ ಖಾನ್​ ಈ ಬಾರಿ 13ನೇ ಸ್ಥಾನಕ್ಕೆ ಇಳಿದಿದ್ದಾರೆ. ಅದಕ್ಕೆ ಕಾರಣ, ಈ ಅವಧಿಯಲ್ಲಿ ಅವರ ಯಾವ ಚಿತ್ರವೂ ತೆರೆಕಂಡಿಲ್ಲ. ಕಳೆದ ಬಾರಿ ಅವರ ಗಳಿಕೆ 170 ಕೋಟಿ ರೂ. ಆಗಿತ್ತು. ಈ ವರ್ಷ ಅವರ ಆದಾಯ 56 ಕೋಟಿ ರೂ.ಗೆ ಇಳಿಕೆ ಆಗಿದೆ. ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ 112 ಕೋಟಿ ರೂ. ಗಳಿಕೆ ಮಾಡಿಕೊಳ್ಳುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ವರ್ಷದ ಆರಂಭದಲ್ಲಿ ಅವರ ನಟನೆಯ ‘ಪದ್ಮಾವತ್​’ ಚಿತ್ರ 300 ಕೋಟಿ ರೂ. ಕ್ಲಬ್​ ಸೇರಿತ್ತು. ಅಲ್ಲದೆ, ಸಾಕಷ್ಟು ಉತ್ಪನ್ನಗಳಿಗೆ ಅವರು ರಾಯಭಾರಿ ಆಗಿದ್ದಾರೆ. ಹಾಗಾಗಿ ಅವರ ಗಳಿಕೆ ಹೆಚ್ಚಿದೆ.

ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಎಂ.ಎಸ್​.ಧೋನಿ(5), ಬಾಲಿವುಡ್​ ನಟ ಅಮೀರ್​ ಖಾನ್​(6), ಅಮಿತಾಭ್​ ಬಚ್ಚನ್​ (7), ರಣವೀರ್​ ಸಿಂಗ್​ (8), ಸಚಿನ್​ ತೆಂಡೂಲ್ಕರ್​ (9), ಅಜಯ್​ ದೇವಗನ್​ (10) ಈ ಪಟ್ಟಿಯಲ್ಲಿದ್ದಾರೆ. ಎ.ಆರ್​. ರೆಹ್ಮಾನ್​, ಆಲಿಯಾ ಭಟ್​, ರಜನಿಕಾಂತ್​ ಕೂಡ ಈ ಬಾರಿಯ ಫೋರ್ಬ್ಸ್​ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ಚಿತ್ರಕ್ಕೂ-ಅಯೋಧ್ಯೆಗೂ ನಂಟು?; ರಾಮ ಜನ್ಮಭೂಮಿಯಲ್ಲಿ ನಡೆಯಲಿದೆ 53ನೇ ಸಿನಿಮಾ ಶೂಟಿಂಗ್

First published:December 5, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading