ಒತ್ತೆಯಾಳು ಅಪ್ರಾಪ್ತನ ಕತ್ತು ಸೀಳಿ ಕೊಂದ ಉಗ್ರರು; ಭದ್ರತಾ ಪಡೆಗಳ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆ

ಉಗ್ರರಿಗೆ ಬಲಿಯಾದ ಆತಿಫ್ ಕಾಶ್ಮೀರದ ಸೈನಿಕ್ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದ. ಆತನ ಮನೆಯಲ್ಲೇ ವಾಸವಿದ್ದ ಉಗ್ರರೇ ಆತನನ್ನು ಕೊಂದು ಹಾಕಿದರು.

Vijayasarthy SN | news18
Updated:March 23, 2019, 10:19 AM IST
ಒತ್ತೆಯಾಳು ಅಪ್ರಾಪ್ತನ ಕತ್ತು ಸೀಳಿ ಕೊಂದ ಉಗ್ರರು; ಭದ್ರತಾ ಪಡೆಗಳ ದಾಳಿಯಲ್ಲಿ ಇಬ್ಬರು ಉಗ್ರರು ಹತ್ಯೆ
ಉಗ್ರರಿದ್ದ ಮನೆ
Vijayasarthy SN | news18
Updated: March 23, 2019, 10:19 AM IST
ಶ್ರೀನಗರ(ಮಾ. 22): ಕಾಶ್ಮೀರದ ಉತ್ತರ ಭಾಗದಲ್ಲಿರುವ ಬಾಂಡೀಪೂರ್ ಜಿಲ್ಲೆಯ ಹಾಜಿನ್ ಪಟ್ಟಣದಲ್ಲಿ ಇಬ್ಬರು ಲಷ್ಕರ್ ಉಗ್ರರು ಸೇರಿ ಮೂವರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆ. ಹಾಜಿನ್​ನಲ್ಲಿ ಹಲವು ದಿನಗಳಿಂದ ಭಯೋತ್ಪಾದನೆ, ಸುಲಿಗೆ ಕಾರ್ಯಗಳಲ್ಲಿ ತೊಡಗಿ ಕುಖ್ಯಾತನಾಗಿದ್ದ ಲಷ್ಕರ್-ಎ-ತೊಯ್ಬಾ ಸಂಘಟನೆಯ ಕಮಾಂಡರ್ ಅಲಿ ಹಾಗೂ ಆತನ ಸಹಚರ ಹುಬೇಬ್ ಇಬ್ಬರೂ ಹತ್ಯೆಯಾದ ಉಗ್ರರಾಗಿದ್ಧಾರೆ. ಆದರೆ, ಈ ಇಬ್ಬರು ಉಗ್ರರಿಂದ ಒತ್ತೆಯಾಳಾಗಿದ್ದ 16 ವರ್ಷದ ಆತಿಫ್ ಹುಸೇನ್ ದುರ್ದೈವವಶಾತ್ ಬಲಿಯಾಗಿದ್ಧಾನೆ. ಭದ್ರತಾ ಪಡೆಗಳಿಂದ ರಕ್ಷಿಸಿಕೊಳ್ಳಲು ಈತನನ್ನು ಒತ್ತೆಯಾಗಿರಿಸಿಕೊಂಡಿದ್ದ ಉಗ್ರರೇ ಈತನನ್ನು ಕೊಂದಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಉಗ್ರರಿಗೆ ಬಲಿಯಾದ ಅಪ್ರಾಪ್ತ ಬಾಲಕನು ಸೈನಿಕ್ ಶಾಲೆಯಲ್ಲಿ ಓದುತ್ತಿದ್ದನೆನ್ನಲಾಗಿದೆ.

ಲಷ್ಕರ್ ಉಗ್ರರು ಹಾಜಿನ್​ನ ಮೀರ್ ಮೊಹಲ್ಲಾದಲ್ಲಿ ಅಬ್ದುಲ್ ಹಮೀದ್ ಮೀರ್ ಮತ್ತು ಮೊಹಮ್ಮದ್ ಶಫಿ ಅವರ ಮಾಲೀಕತ್ವದ ಮನೆಯಲ್ಲೇ ವಾಸವಿದ್ದಿರುತ್ತಾರೆ. ಉಗ್ರರು ಇರುವ ಸುಳಿವು ಬೆನ್ನತ್ತಿದ ಭದ್ರತಾ ಪಡೆಗಳು ಈ ಮನೆಯನ್ನು ಸುತ್ತುವರಿಯುತ್ತಾರೆ. ಇಬ್ಬರು ಉಗ್ರರ ಜೊತೆಗೆ ಆ ಮನೆಯ ಮಾಲೀಕರ ಕುಟುಂಬದ 8 ಮಂದಿಯೂ ಮನೆಯಲ್ಲಿ ಸಿಲುಕುತ್ತಾರೆ. ನಂತರ ಆ ಕುಟುಂಬದ ಆರು ಮಂದಿ ಅಲ್ಲಿಂದ ತಪ್ಪಿಸಿಕೊಂಡು ಹೊರಬರುತ್ತಾರೆ. 60 ವರ್ಷದ ಅಬ್ದುಲ್ ಹಮೀದ್ ಮೀರ್ ಮತ್ತು 16 ವರ್ಷದ ಆತಿಫ್ ಹುಸೇನ್ ಅವರನ್ನು ಉಗ್ರರು ಒತ್ತೆಯಾಗಿಟ್ಟುಕೊಳ್ಳುತ್ತಾರೆ.

ಇದನ್ನೂ ಓದಿ: ಯೋಧರಿಗಾಗಿ 175 ಎಕರೆ ಭೂಮಿ ದಾನ ಮಾಡಿದ ಕನ್ನಡ ನಟ ಸುಮನ್

ಭದ್ರತಾ ಪಡೆಗಳು ನಮ್ಮ ಮನೆಯನ್ನು ಸುತ್ತುವರಿದಾಗ ಉಗ್ರರು ಎರಡನೇ ಮಹಡಿಯಲ್ಲಿ ಆತಿಫ್ ಮತ್ತು ಅಬ್ದುಲ್ ಹಮೀದ್ ಅವರಿಬ್ಬರನ್ನೂ ಹಿಡಿದಿಟ್ಟುಕೊಂಡಿರುತ್ತಾರೆ. ಪೊಲೀಸರು ಬಂದಿರುವುದರಿಂದ ಅವರಿಬ್ಬರನ್ನು ಬಿಟ್ಟುಬಿಡಿ ಎಂದು ಕೇಳಿದೆ. ಆದರೆ ಅವರು ನನ್ನನ್ನು ಹೋಗುವಂತೆ ತಿಳಿಸಿದರು. ಉಗ್ರರು ಅವರಿಬ್ಬರನ್ನೂ ಬಿಟ್ಟುಬಿಡುವ ನಿರೀಕ್ಷೆಯಲ್ಲಿ ನಾವು ಹೊರಬಂದೆವು ಎಂದು ಆತಿಫ್​ನ ತಾಯಿ ಶರೀಫಾ ಬಾನು ಹೇಳುತ್ತಾರೆ. ಬಾನು ಜೊತೆ ಮನೆಯಿಂದ ಹೊರಬಂದ ಎಲ್ಲಾ ಆರು ಮಂದಿ ಕೂಡ ಮಹಿಳೆಯರೇ.

ಸಂಜೆಯಾಗುತ್ತಿದ್ದಂತೆಯೇ 60 ವರ್ಷದ ಮೀರ್ ಅವರು ಮನೆಯಿಂದ ಸುರಕ್ಷಿತವಾಗಿ ಹೊರಬಂದರು. ತಾನು ಅಲ್ಲಿಂದ ತಪ್ಪಿಸಿಕೊಂಡಿದ್ಧಾಗಿಯೂ, ಆತಿಫ್ ಇನ್ನೂ ಅಲ್ಲೇ ಸಿಕ್ಕಿಕೊಂಡಿರುವುದಾಗಿಯೂ ಮೀರ್ ಹೇಳಿದರು. ಈ ಕುಟುಂದವರು ಹಾಗೂ ಊರಿನ ಗ್ರಾಮಸ್ಥರು ಮಸೀದಿಯ ಲೌಡ್​ಸ್ಪೀಕರ್ ಮೂಲಕ ಉಗ್ರರಿಗೆ ಆತಿಫ್​ನನ್ನು ಬಿಟ್ಟುಬಿಡುವಂತೆ ಪರಿಪರಿಯಾಗಿ ಮನವಿ ಮಾಡಿಕೊಳ್ಳಲಾಯಿತು.

ಇದನ್ನೂ ಓದಿ: ಯಡಿಯೂರಪ್ಪ ವಿರುದ್ಧ 1800 ಕೋಟಿ ಕಪ್ಪಕಾಣಿಕೆಯ ಆರೋಪ; ಡೈರಿ ದಾಖಲೆ ಪ್ರದರ್ಶಿಸಿದ ಕಾಂಗ್ರೆಸ್​ ವಕ್ತಾರ ಸುರ್ಜೆವಾಲಾದೇವರಿಗೋಸ್ಕರ, ಪ್ರವಾದಿಗೋಸ್ಕರ ಅವರನ್ನು ಬಿಟ್ಟುಬಿಡಿ. ನಾವು ನಿಮಗೆ ಅನ್ನ ಹಾಕಿದ್ದೇವೆ. ನಾವೇನು ಅನ್ಯಾಯ ಮಾಡಿದ್ದೇವೆ ಎಂದು ಆತಿಫ್​ನ ತಾಯಿ ಅಳುತ್ತಾರೆ. ಇದಾಗಿ ಕೆಲ ಕ್ಷಣಗಳ ನಂತರ ಲಷ್ಕರ್ ಕಮಾಂಡರ್ ಅಲಿ ಒಂದು ಕಿಟಕಿ ತೆಗೆದು ಆತಿಫ್​ನನ್ನು ಹಿಡಿದುಕೊಂಡಿರುವುದನ್ನು ತೋರಿಸುತ್ತಾನೆ. ಆತಿಫ್​ನನ್ನು ಆತನ ಕುಟುಂಬದವರು ಜೀವಂತವಾಗಿ ನೋಡಿದ್ದು ಅದೇ ಕೊನೆ.

ರಾತ್ರಿಯಾಗುತ್ತಿದ್ದಂತೆಯೇ ಭದ್ರತಾ ಪಡೆಗಳು ಆ ಮನೆಯ ಮೇಲೆ ಬಾಂಬ್ ದಾಳಿ ಮಾಡುತ್ತಾರೆ. ಬೆಳಗ್ಗೆ ಮತ್ತೊಂದು ಸ್ಫೋಟವಾಗುತ್ತದೆ. ಇಡೀ ಮನೆ ಕುಸಿದುಬಿದ್ದಿರುತ್ತದೆ. ಆ ಮನೆಯಲ್ಲಿ ಆತಿಫ್ ಸೇರಿ ಸುಟ್ಟು ಕರಕಲಾದ ಮೂವರು ವ್ಯಕ್ತಿಗಳ ಮೃತದೇಹ ಕಾಣಸಿಗುತ್ತದೆ. ಆತಿಫ್​ನನ್ನು ಉಗ್ರರು ಕೊಂದ ಬಳಿಕ ಅವರ ಮೇಲೆ ದಾಳಿ ಮಾಡಲಾಯಿತೆಂದು ಪೊಲೀಸರು ಹೇಳಿದ್ದಾರೆ.

(ವರದಿ: ಆಕಾಶ್ ಹಸನ್)
First published:March 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ