ಇದೇ ಮೊದಲ ಬಾರಿಗೆ ಸಂಸತ್ತಿನ ಹೊರಗೆ ಸಂಸದೀಯ ಸಭೆ ನಡೆಸಲಿರುವ ಬಿಜೆಪಿ

BJP Parliamentary Party Meeting: ಬಿಜೆಪಿ ಕಚೇರಿಯ ಅಧಿಕಾರಿಗಳು ಸಭೆಯನ್ನು ಆಯೋಜಿಸಲು ಸಂಸತ್ತಿನ ಸಂಕೀರ್ಣಃದಲ್ಲಿ ಸಭೆಯನ್ನು ಆಯೋಜಿಸಲು ಹಲವಾರು ಕೊಠಡಿಗಳನ್ನು ಪರಿಶೀಲನೆ ನಡೆಸಿ, ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿನ ಸಮಿತಿ ಕೊಠಡಿಗಳು ಸೇರಿದಂತೆ ಹಲವು ಸ್ಥಳಗಳನ್ನು ಸ್ಕ್ಯಾನ್ ಮಾಡಿ ನೋಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಭಾರತೀಯ ಜನತಾ ಪಕ್ಷದ (BJP)ಇತಿಹಾಸದಲ್ಲಿ(History) ಮೊದಲ ಬಾರಿಗೆ, ಪ್ರತಿ ಮಂಗಳವಾರ ನಡೆಯುವ ಪಕ್ಷದ ವಾರದ ಸಂಸದೀಯ ಸಭೆಯು(Parliamentary Meet) ಈಗ ಸಂಸತ್ತಿನ ಸಂಕೀರ್ಣದ ಹೊರಗೆ ನಡೆಯಲಿದೆ. ಈ ಬಾರಿ ಸಂಸತ್ ಭವನದಿಂದ ಒಂದು ಕಿಲೋ ಮೀಟರ್ ದೂರದಲ್ಲಿರುವ ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಭೆ ನಡೆಯಲಿದೆ. ಸಭೆ ನಡೆಯುವ ಸಾಮಾನ್ಯ ಸ್ಥಳವಾಗಿರುವ ಸಂಸದೀಯ ಗ್ರಂಥಾಲಯ ಕಟ್ಟಡದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಕಾರಣ ಈ ಬಾರಿ ಒಂದು ಕಿಲೋ ಮೀಟರ್ ದೂರದಲ್ಲಿರುವ ದೆಹಲಿಯ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಸಭೆ ನಡೆಸಲಾಗುತ್ತಿದೆ.  

ಸಂಸತ್ತಿನ ಒಳಗೆ ಸಭೆ ನಡೆಸದಿರಲು ಕಾರಣವೇನು? 

ಬಿಜೆಪಿಯು ಉಭಯ ಸದನಗಳಲ್ಲಿ 400 ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದು, ಇಂತಹ ದೊಡ್ಡ ಸಂಖ್ಯೆಯಲ್ಲಿ ಜನರಿರುವ ಕಾರಣ ಸಾಮಾಜಿಕ ಅಂತರ ಹಾಗೂ ಕೋವಿಡ್ ಪ್ರೋಟೋಕಾಲ್‌ಗಳ ಅನ್ವಯ ಈ ಸಂಸತ್ತಿನ ಸಂಕೀರ್ಣದಲ್ಲಿ ಸ್ಥಳವನ್ನು ಹುಡುಕಿದರೂ ಸಹ ಯಾವುದೇ ಜಾಗ ಸೂಕ್ತವಾಗಿ ಸಿಗದ ಕಾರಣ ಈ ಸಭೆಯನ್ನು ಹೊರಗೆ ನಡೆಸಲು ನಿರ್ಧರಿಸಲಾಗಿದೆ. ಸಂಸದೀಯ ಗ್ರಂಥಾಲಯ ಕಟ್ಟಡದಲ್ಲಿರುವ ಬಾಲಯೋಗಿ ಆಡಿಟೋರಿಯಂನಲ್ಲಿ ಬಿಜೆಪಿ ಬಹಳ ದಿನಗಳಿಂದ ಈ ಸಭೆ ನಡೆಸುತ್ತಿತ್ತು.

ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನಿ ಸೇರಿದಂತೆ ಪಕ್ಷದ ಉನ್ನತ ನಾಯಕರು ಹೆಚ್ಚಾಗಿ ನಡೆಯುತ್ತಿರುವ ಸಂಸತ್ತಿನ ಅಧಿವೇಶನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಪಕ್ಷದ ಸಂಸದರೊಂದಿಗೆ ಮಾತನಾಡುತ್ತಾರೆ.ಅಲ್ಲದೇ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಕುರಿತು ಸಹ ಸಲಹೆಯನ್ನು ಕೇಳಿ, ಪರಿಣಾಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ.

ಇದನ್ನೂ ಓದಿ: ಇಂಡೋ-ರಷ್ಯಾ ಸ್ನೇಹವನ್ನು ಬಣ್ಣಿಸಿದ ಮೋದಿ- ಶೃಂಗಸಭೆಯಲ್ಲಿ ಹಲವಾರು ಒಪ್ಪಂದಕ್ಕೆ ಸಹಿ

ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ಅಧಿವೇಶನದ ಸಮಯದಲ್ಲಿ ಯಾವಾಗಲೂ ಸಭೆಗೆ ಹಾಜರಾಗುತ್ತಾರೆ ಮತ್ತು ಈ ಸಭೆಯಲ್ಲಿ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡುತ್ತಾರೆ. ಇತ್ತೀಚಿನ ಆಗು ಹೊಗುಗಳು ಸೇರಿದಂತೆ ಸಂಸದರ ನಡುವಳಿಕೆಯ ಬಗ್ಗೆ ಸಹ ಅಲ್ಲಿ ಚರ್ಚೆಯಾಗುತ್ತದೆ.

ಕಳೆದ ವಾರ, ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ವಾರವಾಗಿತ್ತು ಹಾಗಾಗಿ ಮಂಗಳವಾರ ಯಾವುದೇ ಸಂಸದೀಯ ಪಕ್ಷದ ಸಭೆ ಇರಲಿಲ್ಲ ಏಕೆಂದರೆ ಸೋಮವಾರದಂದು ಅಧಿವೇಶನ ಪ್ರಾರಂಭವಾಗಿದ್ದು, ಈ ಸಭೆಗೆ ಒಂದು ಸ್ಥಳವನ್ನು ನಿಗದಿಪಡಿಸಲು ಸಮಯದ ಅಭಾವವಿದ್ದ ಕಾರಣ ಸಭೆಯನ್ನು ಮುಂದೂಡಲಾಗಿತ್ತು.

ಬಿಜೆಪಿ ಕಚೇರಿಯ ಅಧಿಕಾರಿಗಳು ಸಭೆಯನ್ನು ಆಯೋಜಿಸಲು ಸಂಸತ್ತಿನ ಸಂಕೀರ್ಣಃದಲ್ಲಿ ಸಭೆಯನ್ನು ಆಯೋಜಿಸಲು ಹಲವಾರು ಕೊಠಡಿಗಳನ್ನು ಪರಿಶೀಲನೆ ನಡೆಸಿ, ಸಂಸತ್ತಿನ ಅನೆಕ್ಸ್ ಕಟ್ಟಡದಲ್ಲಿನ ಸಮಿತಿ ಕೊಠಡಿಗಳು ಸೇರಿದಂತೆ ಹಲವು ಸ್ಥಳಗಳನ್ನು ಸ್ಕ್ಯಾನ್ ಮಾಡಿ ನೋಡಿದ್ದಾರೆ. ಆದರೆ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಮಾಡಿರುವುದರಿಂದ ಅವರಿಗೆ ಸಮಿತಿ ಕೊಠಡಿ ಸೇರಿದಂತೆ ಯಾವುದೇ ಬೇರೆ ಕೊಠಡಿ ಸಿಗಲಿಲ್ಲ.

ಸಭೆಯಲ್ಲಿ ಏನೆಲ್ಲಾ ಚರ್ಚೆಯಾಗಬಹುದು?

ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವುದರಿಂದ ಅಷ್ಟು ಜನರನ್ನು ಸೇರಿಸುವ ಕೊಠಡಿ ಲಭ್ಯವಿರಲಿಲ್ಲ ಎನ್ನಲಾಗಿದೆ.  ಈ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರು ತಮ್ಮ ಸದಸ್ಯರ ಜೊತೆ ಮುಂದಿನ ಆಗ ಹೋಗುಗಳನ್ನು ಚರ್ಚಿಸುವುದು ಮಾತ್ರವಲ್ಲದೇ ಅವರ ಸಮಸ್ಯೆಗಳಿಗೆ ಸಹ ಇಲ್ಲಿ ಪರಿಹಾರ ನೀಡಲಾಗುತ್ತೆ.

ಇದನ್ನೂ ಓದಿ: ಪುಟಿನ್-ಮೋದಿ ಭೇಟಿಗೆ ಮುನ್ನ, ಅಸಾಲ್ಟ್ ರೈಫಲ್ ಖರೀದಿ ಸೇರಿ ಹಲವು ಒಪ್ಪಂದಗಳಿಗೆ ಭಾರತ-ರಷ್ಯಾ ಸಹಿ

ಅಲ್ಲದೇ ಪಕ್ಷದ ಮುಂದಿನ ಕಾರ್ಯತಂತ್ರವನ್ನು ರೂಪಿಸಲಾಗುತ್ತದೆ ಹಾಗೂ ಸಂಸದರ ಕೆಲಸಗಳ ಬಗ್ಗೆ ಪ್ರಧಾನಿ ಮಾಹಿತಿ ಪಡೆಯುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಸಂಸತ್ತಿನ ಹೊರಭಾಗದಲ್ಲಿ ಸಭೆ ನಡೆಸಲಾಗುತ್ತಿದೆ.
Published by:Sandhya M
First published: