ಇಡೀ ವಿಶ್ವವೇ ಕೊರೊನಾ(Corona) ಕೈಗೆ ಸಿಲುಕಿ ನಲುಗಿ ಹೊಗಿತ್ತು. ಪ್ರತಿ ದಿನ ಸೋಂಕಿತರ ಸಂಖ್ಯೆ, ಸಾವಿನ ಪ್ರಮಾಣ ಹೆಚ್ಚುತ್ತಲೇ ಇತ್ತು. ಎಲ್ಲ ದೇಶಗಳಲ್ಲೂ ಲಾಕ್ಡೌನ್(Lockdown) ಮಾಡಲಾಗಿತ್ತು. ಇದೀಗ ಮತ್ತೆ ಚೀನಾ(China)ದಲ್ಲಿ ಕೋವಿಡ್(Covid) ತನ್ನ ಆರ್ಭಟವನ್ನು ಮತ್ತೆ ಶುರುಮಾಡಿಕೊಂಡಿದೆ. ಚೀನಾದ ಕೆಲವೆಡೆ ಮತ್ತೆ ಲಾಕ್ಡೌನ್ ಮಾಡಲಾಗಿದೆ. ಆದರೆ ಕೊರೋನಾ ಬಂದಾಗಿನಿಂದಲೂ ಈವರೆಗೆ ಅತ್ಯಂತ ಕಡಿಮೆ(Very Low) ಕೊರೋನಾ ಕೇಸ್ ದಾಖಲಾಗಿದ್ದ ನ್ಯೂಜಿಲೆಂಡ್(New Zealand)ನಲ್ಲಿ ಏಕಾಏಕಿ ಕೊರೋನಾ ಸ್ಫೋಟಗೊಂಡಿದೆ(Corona Exploded). ಒಂದೇ ದಿನ 206 ಕೇಸ್ಗಳು ದಾಖಲಾಗಿವೆ. . ಇದು ಕೋವಿಡ್ ಸಾಂಕ್ರಾಮಿಕ ಆರಂಭದ ಬಳಿಕ ದಾಖಲಾದ ಅತ್ಯಂತ ಗರಿಷ್ಠ ಸಂಖ್ಯೆಯಾಗಿದೆ. ಇಲ್ಲಿಯವರೆಗೂ ಈ ಪ್ರಮಾಣದಲ್ಲಿ ಪ್ರಕರಣ ಪತ್ತೆಯಾಗಿರಲಿಲ್ಲ. ಈ 206 ಪ್ರಕರಣಗಳ ಪೈಕಿ ನ್ಯೂಜಿಲೆಂಡ್ನ ಪ್ರಮುಖ ನಗರ ಮತ್ತು ರಾಜಧಾನಿ ಆಕ್ಲೆಂಡ್(Auckland)ಒಂದರಲ್ಲೇ 200 ಕೇಸ್ಗಳು ದಾಖಲಾಗಿವೆ. ಇದು ದೇಶದಲ್ಲಿ ಆತಂಕ ಮೂಡಿಸಿದೆ.
ಒಂದೇ ಕೇಸ್ಗೆ ನ್ಯೂಜಿಲೆಂಡ್ನಲ್ಲಿ ಲಾಕ್ಡೌನ್!
ಈ ಹಿಂದೆ 1 ಕೇಸ್ ದಾಖಲಾಗುತ್ತಿದ್ದಂತೆ, ನ್ಯೂಜಿಲೆಂಡ್ ಸರ್ಕಾರ ಸಂಪೂರ್ಣ ಲಾಕ್ಡೌನ್ ಘೋಷಿಸಿತ್ತು. ಗಡಿಯಲ್ಲಿ ಸಾಕಷ್ಟು ನಿರ್ಬಂಧಗಳನ್ನು ವಿದೇಶಿಗರ ಮೇಲೆ ಅದು ಹೇರಿತ್ತು. ಈ ಮೂಲಕ ಕೋವಿಡ್ ಮೇಲೆ ನಿಯಂತ್ರಣ ಸಾಧಿಸಿತ್ತು. ಆದಾಗ್ಯೂ ತನ್ನ 50 ಲಕ್ಷ ಜನಕ್ಕೆ ಲಸಿಕೆ ನೀಡಲು ನ್ಯೂಜಿಲೆಂಡ್ ಸರ್ಕಾರ ಹರಸಾಹಸ ಪಡುತ್ತಿದೆ. ಡೆಲ್ಟಾಕೊರೋನಾ ತಳಿ ಭೀತಿಯಿಂದ ಜನತೆ ಸುಮಾರು 3 ತಿಂಗಳಿನಿಂದ ನಿರ್ಬಂಧದ ನಡುವೆಯೇ ಬದುಕುತ್ತಿದ್ದಾರೆ. ಇಂದು ನಿರ್ಬಂಧ ಸಡಿಲಿಸುವ ಸಾಧ್ಯತೆ ಇತ್ತು. ಆದರೆ ಅದರ ನಡುವೆಯೇ ಇದೀಗ ಡೆಲ್ಟಾರೂಪಾಂತರಿ ವೈರಸ್ ಸ್ಫೋಟಗೊಂಡಿದೆ. ಅದಾಗ್ಯೂ ಪ್ರಧಾನಿ ಜಸಿಂದಾ ಆರ್ಡೆರ್ನ್ ಅವರು ಆಕ್ಲೆಂಡ್ ನಿವಾಸಿಗಳು, ಬೇಸಿಗೆ ರಜೆ ಮತ್ತು ಕ್ರಿಸ್ಮಸ್ಗಾಗಿ ಪ್ರಯಾಣಿಸಬಹುದು ಎಂದಿದ್ದಾರೆ. ‘ನಾವು ಆಕ್ಲೆಂಡ್ ನಿವಾಸಿಗಳನ್ನು ಐಸೋಲೇಶನ್ನಲ್ಲಿ ಇರಿಸಲು ಬಯಸುವುದಿಲ್ಲ. ಆದರೆ ಈಗಿನ ಸೋಂಕು ಜನರಿಗೆ ವ್ಯಾಕ್ಸಿನ್ ಮಹತ್ವವನ್ನು ತಿಳಿಸಿದೆ’ ಎಂದಿದ್ದಾರೆ.
ಇದನ್ನು ಓದಿ: ಜೈಲಿನಲ್ಲಿ ಚೀನಾ ಪತ್ರಕರ್ತೆಯ ನರಕಯಾತನೆ, ಕೊರೋನಾ ಬಗ್ಗೆ ವರದಿ ಮಾಡಿದ್ದಕ್ಕೆ ಘೋರ ಶಿಕ್ಷೆನಾ?
ಕಳವಳ ವ್ಯಕ್ತಪಡಿಸಿದ ವಿಶ್ವ ಆರೋಗ್ಯ ಸಂಸ್ಥೆ
ಯುರೋಪ್ನಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಕೋವಿಡ್ ಅಲೆಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ, ಸೋಂಕು ಮತ್ತು ಸಾವಿನ ಗತಿಯ ಹೀಗೆಯೇ ಮುಂದುವರೆದರೆ ಮುಂದಿನ ಫೆಬ್ರವರಿ ವೇಳೆಗೆ ಇನ್ನೂ 5 ಲಕ್ಷ ಜನರು ಸಾವನ್ನಪ್ಪಲಿದ್ದಾರೆ ಎಂದು ಎಚ್ಚರಿಕೆ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ವಲಯದ ಮುಖ್ಯಸ್ಥ ಡಾ. ಹನ್ಸ್ ಕ್ಲೂಗೆ ‘ಯುರೋಪ್ ಹಾಗೂ ಮಧ್ಯಏಷ್ಯಾ ಪ್ರಾಂತ್ಯದ 53 ದೇಶಗಳಲ್ಲಿ ಮುಂಬರುವ ದಿನಗಳಲ್ಲಿ ಪುನರುತ್ಥಾನಗೊಳ್ಳಲಿರುವ ಮತ್ತು ಈಗಾಗಲೇ ಹೊಸ ಅಲೆಗೆ ಕಾರಣವಾಗಿರುವ ಸೋಂಕು ನಿಜವಾದ ಅಪಾಯವನ್ನು ನಮ್ಮ ಮುಂದಿಟ್ಟಿದೆ.
ಇದನ್ನು ಓದಿ:
ಕೋವಿಡ್ ಗೆ ಇನ್ಮೇಲೆ ಮಾತ್ರೆ ತಗೊಂಡ್ರೆ ಸಾಕು !? ಯುಕೆಯಲ್ಲಿ ಆಗ್ಲೇ ಬಳಕೆ ಶುರು!
‘ಕಳೆದ ವರ್ಷವಿದ್ದ ಪರಿಸ್ಥಿತಿ ಮತ್ತೆ ಮರುಕಳಿಸಿದೆ’
ಕಳೆದ ಕೆಲ ವಾರಗಳಿಂದ ದಾಖಲಾಗುತ್ತಿರುವ ಹೊಸ ಸೋಂಕು, ಸಾವಿನ ಪ್ರಮಾಣ, ಅದು ಹರಡುತ್ತಿರುವ ವೇಗ ಹಾಗೂ ವ್ಯಾಪ್ತಿ ಇಡೀ ಪ್ರದೇಶವನ್ನು ಸಾಂಕ್ರಾಮಿಕದ ಕೇಂದ್ರಬಿಂದುವನ್ನಾಗಿಸಿದೆ. ಒಂದು ವರ್ಷದ ಹಿಂದೆ ಯಾವ ಪರಿಸ್ಥಿತಿ ಇತ್ತೋ ಅದೇ ಮತ್ತೆ ಮರುಕಳಿಸಿದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ 53 ದೇಶಗಳಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಕಳೆದ ವಾರ ದ್ವಿಗುಣಗೊಂಡಿದೆ. ಈ ಏರಿಕೆ ಗತಿ ಹೀಗೆಯೇ ಮುಂದುವರೆದರೆ ಫೆಬ್ರವರಿ ವೇಳೆಗೆ ಇನ್ನೂ 5 ಲಕ್ಷ ಜನರು ಸೋಂಕಿಗೆ ಬಲಿಯಾಗಲಿದ್ದಾರೆ. ಈ ದೇಶಗಳಲ್ಲಿ ಪ್ರತಿ ವಾರ 18 ಲಕ್ಷ ಜನರಿಗೆ ಹೊಸದಾಗಿ ಸೋಂಕು ತಗುಲುತ್ತಿದೆ ಎಂದು ಡಾ. ಹನ್ಸ್ ಕ್ಲೂ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ