Meteorite: ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಲ್ಲಿ ಭೂಗ್ರಹದ ನೀರು ಪತ್ತೆ!

ಯುಕೆಯಲ್ಲಿ (UK) ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಲ್ಲಿ (Meteorite) ಮೊದಲ ಬಾರಿಗೆ ಭೂಮಿಯಲ್ಲಿ ಲಭ್ಯವಿರುವಂತಹ ನೀರು ಕಂಡುಬಂದಿದೆ. ಉಲ್ಕಾಶಿಲೆಯು ಫೆಬ್ರವರಿ 2021 ರಲ್ಲಿ ಗ್ಲೌಸೆಸ್ಟರ್‌ಶೈರ್ ಪಟ್ಟಣದ ಡ್ರೈವಾಲ್‌ಗೆ ಅಪ್ಪಳಿಸಿತು ಮತ್ತು ಅದರಿಂದ ಭೂಮಿಯ (Earth) ವಿಶಾಲವಾದ ಸಾಗರಗಳಲ್ಲಿನ ನೀರು ಎಲ್ಲಿಂದ ಬಂದಿದೆ ಎಂಬುದರ ಕುರಿತು ಅನೇಕ ಸುಳಿವುಗಳನ್ನು ನೀಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 

 ಉಲ್ಕಾ ಶಿಲೆಯಲ್ಲಿ ನೀರು

ಉಲ್ಕಾ ಶಿಲೆಯಲ್ಲಿ ನೀರು

  • Share this:
ಕಳೆದ ವರ್ಷ ಯುಕೆಯಲ್ಲಿ (UK) ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಲ್ಲಿ (Meteorite) ಮೊದಲ ಬಾರಿಗೆ ಭೂಮಿಯಲ್ಲಿ ಲಭ್ಯವಿರುವಂತಹ ನೀರು ಕಂಡುಬಂದಿದೆ. ಉಲ್ಕಾಶಿಲೆಯು ಫೆಬ್ರವರಿ 2021 ರಲ್ಲಿ ಗ್ಲೌಸೆಸ್ಟರ್‌ಶೈರ್ ಪಟ್ಟಣದ ಡ್ರೈವಾಲ್‌ಗೆ ಅಪ್ಪಳಿಸಿತು ಮತ್ತು ಅದರಿಂದ ಭೂಮಿಯ (Earth) ವಿಶಾಲವಾದ ಸಾಗರಗಳಲ್ಲಿನ ನೀರು ಎಲ್ಲಿಂದ ಬಂದಿದೆ ಎಂಬುದರ ಕುರಿತು ಅನೇಕ ಸುಳಿವುಗಳನ್ನು ನೀಡಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಬ್ರಿಟಿಷ್‌ ಆನ್‌ಲೈನ್‌ ಸುದ್ದಿ ಪತ್ರಿಕೆಯಾದ ದಿ ಇಂಡಿಪೆಂಡೆಂಟ್ ಪ್ರಕಾರ, “ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿನ ಗ್ರಹಗಳ (Planet) ವಸ್ತುಗಳ ಗುಂಪಿನ ಸಂಶೋಧಕ ಆಗಿರುವ ಆಶ್ಲೇ ಕಿಂಗ್, ಸುಮಾರು 12% ರಷ್ಟು ಮಾದರಿಯು ನೀರಿನಿಂದ (Water) ಮಾಡಲ್ಪಟ್ಟಿದೆ.  ಇಲ್ಲಿಯವರೆಗೆ ಸಂಗ್ರಹಿಸಲಾದ ಅತ್ಯಂತ ಕಡಿಮೆ ಕಲುಷಿತ ಮಾದರಿಯಾಗಿದೆ” ಎಂದು ಮಾಹಿತಿ ನೀಡಿರುವ ಸಂಗತಿಯನ್ನು ವರದಿ ಮಾಡಿದೆ.

ಆಕಾಶದಿಂದ ಬಿದ್ದ ಉಲ್ಕಾ ಶಿಲೆಯಲ್ಲಿ ಮೊದಲ ಬಾರಿಗೆ ಕಂಡು ಬಂದ ನೀರು
ಈಗ ದೊರಕಿರುವ ಉಲ್ಕಾ ಶಿಲೆಯು ವೈಜ್ಞಾನಿಕವಾಗಿ ಸಾಕಷ್ಟು ಒಳನೋಟಗಳನ್ನು ನೀಡುತ್ತದೆ ಮತ್ತು ಆ ನೀರಿನ ಸಂಯೋಜನೆಯು ಭೂಮಿಯ ಸಾಗರಗಳಲ್ಲಿನ ನೀರಿನ ಸಂಯೋಜನೆಯನ್ನು ಬಹಳಷ್ಟು ಹೋಲುತ್ತದೆ” ಎಂದು ಅವರು ವಿವರಿಸಿದರು.

ಸಂಶೋಧಕರು ಏನ್‌ ಹೇಳ್ತಿದಾರೆ?
"ಕ್ಷುದ್ರಗ್ರಹಗಳು ಮತ್ತು ವಿಂಚ್‌ಕೊಂಬೆಯಂತಹ ಕಾಯಗಳು ಭೂಮಿಯ ಸಾಗರಗಳಿಗೆ ಬಹಳ ಮುಖ್ಯವಾದ ಕೊಡುಗೆಯನ್ನು ನೀಡಿವೆ ಎಂಬುದಕ್ಕೆ ಇದು ನಿಜಕ್ಕೂ ಉತ್ತಮ ಪುರಾವೆಯಾಗಿದೆ" ಎಂದು ಆಶ್ಲೆ ಕಿಂಗ್‌ ಅವರು ಬ್ರಿಟಿಷ್ ಸೈನ್ಸ್ ಫೆಸ್ಟಿವಲ್‌ ಸುದ್ದಿ ಪತ್ರಿಕೆಗೆ ತಿಳಿಸಿದರು.

ಇದನ್ನೂ ಓದಿ: Explained: ಝೋಂಬಿ ಐಸ್​ನಿಂದ ವಿಶ್ವಾದ್ಯಂತ ಆತಂಕ: ಜಾಗತಿಕ ಸಮುದ್ರ ಮಟ್ಟ ಭಾರೀ ಹೆಚ್ಚಳ!

ಇದಲ್ಲದೆ, ಕಿಂಗ್ ಅವರು “ಇದೇ ಮೊದಲ ಬಾರಿಗೆ, ಖನಿಜಗಳಲ್ಲಿ ಬಂಧಿಸಲ್ಪಟ್ಟಿರುವ ಭೂ-ಹೊರಗಿನ ನೀರನ್ನು ಹೊಂದಿರುವ ಉಲ್ಕಾ ಶಿಲೆಯು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಬಿದ್ದಿದೆ” ಎಂದು ದೃಢಪಡಿಸಿದರು. “ಯುನೈಟೆಡ್‌ ಕಿಂಗ್‌ಡಮ್‌ನಲ್ಲಿ ಕಾಣಿಸಿಕೊಂಡಿರುವ ಉಲ್ಕಾ ಶಿಲೆಯು 0.5 ಕೆಜಿಯಷ್ಟು ತೂಕವನ್ನು ಹೊಂದಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ. 12 ಗಂಟೆಗಳ ಕಾಲ ಅದರೂ ಸಹ ಇದು ಭೂಮಿಯ ಮೇಲಿನ ನೀರು ಮತ್ತು ವಸ್ತುಗಳಿಂದ ಕಲುಷಿತಗೊಂಡಿಲ್ಲ” ಎಂದು ಅವರು ವಿವರಿಸಿದರು.

ಭೂ ಗ್ರಹದಲ್ಲಿ ನೀರು ಹೇಗೆ ಬಂತು?
ಈಗ " ವೈಜ್ಞಾನಿಕವಾಗಿ ಯಾವಾಗಲೂ ಚರ್ಚೆಯಾಗುವ ಒಂದೇ ಒಂದು ಪ್ರಶ್ನೆ ಎಂದರೆ ಅದು ಭೂ ಗ್ರಹದಲ್ಲಿ ನೀರು ಹೇಗೆ ಬಂತು? ಇದು ಯಾವಾಗಲೂ ಅತ್ಯಂತ ದೊಡ್ಡ ಪ್ರಶ್ನೆ ಆಗಿದೆ. ಅದು ಎಲ್ಲ‌ ಕಡೆ ಅಲ್ಲ, ಕೆಲವು ಸ್ಪಷ್ಟ ಜಾಗಗಳಲ್ಲಿ ಮಾತ್ರ ನೀರಿನ ಮೂಲಗಳು ಇರುತ್ತವೆ ಇದು ಹೇಗೆ ಸಾಧ್ಯ? ಒಂದೋ ಧೂಮಕೇತುಗಳು ಅಲ್ಲಿ ಬಿದ್ದಿರುತ್ತವೆ ಅಥವಾ ಕ್ಷುದ್ರಗ್ರಹಗಳು ಅಲ್ಲಿ ಬಿದ್ದಿರುತ್ತವೆ ಎಂಬುದು ಯಾವಾಗಲೂ ಚರ್ಚೆಯಾಗುವ ಸಂಗತಿ ಆಗಿದೆ. ಈ ನೀರಿನ ಮೂಲಗಳಿಗೆ ಧೂಮಕೇತುಗಳು ಮುಖ್ಯ ಮೂಲವಾಗಿವೆಯೇ? ಅಥವಾ ಕ್ಷುದ್ರಗ್ರಹಗಳು ಮುಖ್ಯ ಮೂಲವಾಗಿವೆಯೇ?" ಎಂದು ಕಿಂಗ್‌ ಅವರು ಸ್ಕೈ ನ್ಯೂಸ್‌ಗೆ ತಿಳಿಸಿದರು.

ಅದರ ಜೊತೆಗೆ, ಕೆಲವು ಅಧ್ಯಯನಗಳ ಪ್ರಕಾರ “ಧೂಮಕೇತುಗಳಲ್ಲಿನ ಅಂಶಗಳು ಭೂಮಿಯ ಮೇಲಿನ ನೀರಿಗೆ ಯಾವುದೇ ರೀತಿಯಲ್ಲಿ ಹೋಲುವುದಿಲ್ಲ” ಎಂದು ಸೂಚಿಸುತ್ತದೆ ಎಂದು ಸಂಶೋಧಕರು ವಿವರಿಸಿದರು. "ವಿಂಚ್‌ಕಾಂಬ್‌ ಕಾಯದಲ್ಲಿರುವ ನೀರಿನ ಸಂಯೋಜನೆಯು ಭೂ ಗ್ರಹದಲ್ಲಿರುವ ನೀರಿನ ಮೂಲಗಳಿಗೆ ಉತ್ತಮವಾಗಿ ಹೋಲುತ್ತದೆ. ಆದ್ದರಿಂದ ಕ್ಷುದ್ರಗ್ರಹಗಳು ಮತ್ತು ಕಾರ್ಬನೇಸಿಯಸ್ ಕ್ಷುದ್ರಗ್ರಹಗಳು ಬಹುಶಃ ಒಳ ಸೌರವ್ಯೂಹಕ್ಕೆ ಮತ್ತು ಭೂಮಿಗೆ ನೀರಿನ ಮುಖ್ಯ ಮೂಲವಾಗಿವೆ ಎಂದು ಸೂಚಿಸುತ್ತದೆ" ಎಂದು ಅವರು ಹೇಳಿದರು.

ಇದನ್ನೂ ಓದಿ:  Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?

ಉಲ್ಕಾಶಿಲೆ ಗುರುಗ್ರಹದ ಬಳಿ ಎಲ್ಲೋ ಕ್ಷುದ್ರಗ್ರಹದಿಂದ ಬಂದಿದೆ ಎಂದು ಆಶ್ಲೆ ಕಿಂಗ್ ಅವರು ಬಹಿರಂಗಪಡಿಸಿದರು. ಇದು ಸುಮಾರು 4.6 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿದೆ ಮತ್ತು ಅದು ಭೂಮಿಗೆ ಬರಲು ತೆಗೆದುಕೊಂಡಿರುವ ಪ್ರಯಾಣದ ವರ್ಷಗಳು ಅಂದಾಜು 300,000 ವರ್ಷಗಳಷ್ಟು ಆಗಿರಬಹುದು ಎಂದು ಅವರು ಮಾಹಿತಿ ನೀಡಿದರು.
Published by:Ashwini Prabhu
First published: