Cholesterol Treatment: ಕೇವಲ ಒಂದೇ ಒಂದು ಇಂಜೆಕ್ಷನ್; ಎಲ್ಲಾ ಕೆಟ್ಟ ಕೊಲೆಸ್ಟ್ರಾಲ್ ಮಾಯ!

ಹೃದಯ ಶಾಸ್ತ್ರದಲ್ಲಿ ಪರಿಣಿತಿ ಪಡೆದಿರುವ ಒಬ್ಬರಿಂದ ನಿರ್ಮಿಸಲಾದ ಒಂದು ಟಾಪ್ ಬಯೋಟೆಕ್ ಕಂಪನಿಯು ಈಗ ಹೊಸದೊಂದು ಪ್ರಾಯೋಗಿಕ ಚಿಕಿತ್ಸೆಗೆ ಸಜ್ಜಾಗುತ್ತಿದೆ. ಅದು ನಿತ್ಯ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಕೇವಲ ಒಂದೇ ಒಂದು ಇಂಜೆಕ್ಷನ್ ತೆಗೆದುಕೊಳ್ಳುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಶಾಶ್ವತವಾಗಿ ನಿಯಂತ್ರಿಸುವಂತೆ ಮಾಡುವ ಕೆಲಸಕ್ಕೆ ಸಜ್ಜಾಗುತ್ತಿದೆ ಎನ್ನಲಾಗಿದೆ.

ಕೊಲೆಸ್ಟ್ರಾಲ್ ಗಳನ್ನು ಶಾಶ್ವತವಾಗಿ ನಿಯಂತ್ರಿಸಲು ಇಂಜೆಕ್ಷನ್

ಕೊಲೆಸ್ಟ್ರಾಲ್ ಗಳನ್ನು ಶಾಶ್ವತವಾಗಿ ನಿಯಂತ್ರಿಸಲು ಇಂಜೆಕ್ಷನ್

  • Share this:
ಹೃದಯಕ್ಕೆ (Heart) ಸಂಬಂಧಿಸಿದಂತೆ ಎಲ್ಲರೂ ತಲೆ ಕೆಡಿಸಿಕೊಳ್ಳುವ ವಿಚಾರವೆಂದರೆ ತಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (bad cholesterol) ಎಂದು ಕರೆಯಲಾಗುವ LDL ಅನ್ನು ನಿಯಂತ್ರಿಸುವುದು ಅಥವಾ ಹೋಗಲಾಡಿಸುವುದೇ ಆಗಿರುತ್ತದೆ. ಏಕೆಂದರೆ ಈ ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾದರೆ ಹೃದಯಕ್ಕೆ ಸಾಕಷ್ಟು ಅಪಾಯ ತಂದೊಡ್ಡುವುದಲ್ಲದೆ ಅದು ಮಾರಣಾಂತಿಕವೂ ಆಗಬಹುದು. ಹಾಗಾಗಿಯೇ ಜಗತ್ತಿನಲ್ಲಿ ಸುಮಾರು 200 ಮಿಲಿಯನ್ ಗಳಷ್ಟು ಜನರು (People) ತಮ್ಮ ದೇಹದಲ್ಲಿ (Body) LDL ಗಳನ್ನು ನಿಯಂತ್ರಿಸಲು ನಿತ್ಯ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಆದರೆ, ದುರದೃಷ್ಟವೆಂದರೆ ಎಲ್ಲರೂ ನಿತ್ಯವೂ ಮಾತ್ರೆಗಳನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುವುದು ಮರೆಯುತ್ತಾರೆ ಹಾಗೂ ಈ ಮೂಲಕ ಅವರು ಕೆಟ್ಟ ಕೊಲೆಸ್ಟ್ರಾಲ್ ಅಧಿಕವಾಗುವಂತೆ ಪರೋಕ್ಷವಾಗಿ ಉತ್ತೇಜನ ನೀಡಿದಂತಾಗುತ್ತದೆ.

ಕೊಲೆಸ್ಟ್ರಾಲ್ ಕಾಯಿಲೆಗೆ ಶಾಶ್ವತ ಪರಿಹಾರ 

ಈ ನಿಟ್ಟಿನಲ್ಲಿ ಹೃದಯ ಶಾಸ್ತ್ರದಲ್ಲಿ ಪರಿಣಿತಿ ಪಡೆದಿರುವ ಒಬ್ಬರಿಂದ ನಿರ್ಮಿಸಲಾದ ಒಂದು ಟಾಪ್ ಬಯೋಟೆಕ್ ಕಂಪನಿಯು ಈಗ ಹೊಸದೊಂದು ಪ್ರಾಯೋಗಿಕ ಚಿಕಿತ್ಸೆಗೆ ಸಜ್ಜಾಗುತ್ತಿದೆ. ಅದು ನಿತ್ಯ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಕೇವಲ ಒಂದೇ ಒಂದು ಇಂಜೆಕ್ಷನ್ ತೆಗೆದುಕೊಳ್ಳುವ ಮೂಲಕ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಶಾಶ್ವತವಾಗಿ ನಿಯಂತ್ರಿಸುವಂತೆ ಮಾಡುವ ಕೆಲಸಕ್ಕೆ ಸಜ್ಜಾಗುತ್ತಿದೆ ಎನ್ನಲಾಗಿದೆ.

ಈ ಚಿಕಿತ್ಸೆಯು ಮೂಲತಃ ನೋಬಲ್ ಪ್ರಶಸ್ತಿ ಪುರಸ್ಕೃತ ಜೀನ್ ಎಡಿಟಿಂಗ್ ತಂತ್ರಜ್ಞಾನವಾದ Crispr ಮೇಲೆ ಆಧಾರಿತವಾಗಿದೆ. ಸಾಂಪ್ರದಾಯಿಕ Crispr ಚಿಕಿತ್ಸಾ ವಿಧಾನವು ಶಸ್ತ್ರಚಿಕಿತ್ಸೆಯನ್ನು ಒಳಗೊಂಡಿದ್ದರೆ, ಈಗ ಬಯೋಟೆಕ್ ಕಂಪನಿಯಾದ ವರ್ವ್ (Verve) ಈ ನಿಟ್ಟಿನಲ್ಲಿ ಬೆಸಿಕ್ ಎಡಿಟಿಂಗ್ ತಂತ್ರಜ್ಞಾನ ಬಳಸಿಕೊಳ್ಳುವಲ್ಲಿ ಕಾರ್ಯನಿರತವಾಗಿದೆ. ಈ ಮೂಲಕ ಕಂಪನಿಯು PCSK9 (ಇದೊಂದು ಎಂಜೈಮ್ ಆಗಿದೆ) ಅನ್ನು ಎಡಿಟ್ ಮಾಡುವ ಮೂಲಕ ದೇಹದಲ್ಲಿ LDL ಮಟ್ಟಗಳನ್ನು ನಿಯಂತ್ರಿಸುವ ಉದ್ದೇಶ ಹೊಂದಿದೆ.

ಲಿವರ್ ಕಾಯಿಲೆಗೂ ಚಿಕಿತ್ಸೆ

ಇನ್ನು ಪ್ರಯೋಗದಲ್ಲಿರುವ ಈ ಚಿಕಿತ್ಸಾ ವಿಧಾನವು ಹೆಚ್ಚು ಪ್ರಾಯೋಗಿಕವಾಗಿದೆಯಾದರೂ ವೈಫಲ್ಯದ ಸಾಧ್ಯತೆಯೂ ಹೆಚ್ಚಿದೆ. ಆದಾಗ್ಯೂ ಇದರಲ್ಲಿ ಪ್ರಾರಂಭಿಕ ಫಲಿತಾಂಶಗಳು ಭರವಸೆ ಮೂಡಿಸಿದೆ ಎನ್ನಲಾಗಿದೆ. ಈ ಪ್ರಗತಿಯಿಂದಾಗಿಯೇ ಸದ್ಯ ಈ ಬಯೋಟೆಕ್ ಕಂಪನಿಯು ಈ ನಿಟ್ಟಿನಲ್ಲಿ ಮುಂದುವರೆಯಲು ಹೆಚ್ಚಿನ ಬಂಡವಾಳದ ಅಗತ್ಯತೆಯಲ್ಲಿದ್ದು ಈ ಕಾರಣಕ್ಕಾಗಿಯೇ ಕಳೆದ ತಿಂಗಳು 259 ಮಿಲಿಯನ್ ಡಾಲರ್ ಹಣ ಕ್ರೋಢಿಕರಿಸುವಲ್ಲಿ ಯಶಸ್ವಿಯಾಗಿದೆ. ಅಲ್ಲದೆ, ಇತ್ತೀಚಿಗಷ್ಟೇ ಈ ಕಂಪನಿಯು ಮತ್ತೊಂದು ಒಪ್ಪಂದವನ್ನು ದೊಡ್ಡ ಜೈವಿಕ ಕಂಪನಿಯಾದ ವರ್ಟೆಕ್ಸ್ ನೊಂದಿಗೆ ಮಾಡಿಕೊಂಡಿದ್ದು ಹಣ ಸಂಗ್ರಹಿಸಿದೆ. ಈ ಒಪ್ಪಂದದ ಪ್ರಕಾರ ಅದು ಲಿವರ್ ಕಾಯಿಲೆಗೆ ಚಿಕಿತ್ಸೆಯೊಂದನ್ನು ಅಭಿವೃದ್ಧಿಪಡಿಸಲಿದೆ.

ಇದನ್ನೂ ಓದಿ: Tomato Flu: ಟೊಮ್ಯಾಟೋ ಜ್ವರದ ರೋಗಲಕ್ಷಣಗಳೇನು? ಚಿಕ್ಕಮಕ್ಕಳಲ್ಲಿ ಈ ರೋಗ ಕಂಡುಬರಲು ಕಾರಣವೇನು?

ಸದ್ಯ, ಶೇಕರ್ ಕದಿರೇಶನ್ ಎಂಬುವವರು Verve ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಹಾಗೂ ಸಹ-ಸಂಸ್ಥಾಪಕರಾಗಿದ್ದಾರೆ. ಶೇಕರ್ ಮೂಲತಃ ಹೃದಯ ತಜ್ಞರು ಹಾಗೂ ಹಾರ್ವರ್ಡ್ ವೈದ್ಯಕೀಯ ಶಾಲೆಯ ಮಾಜಿ ಪ್ರೊಫೆಸರ್. ಅಲ್ಲದೆ ಅವರು ಮಸ್ಸಾಚುಸೆಟ್ಸ್ ಜನರಲ್ ಆಸ್ಪತ್ರೆಯ ಜೀನೋಮಿಕ್ ಔಷಧಾಲಯ ವಿಭಾಗದಲ್ಲಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ತಾವು ಪ್ರಯೋಗ ನಡೆಸುತ್ತಿದ್ದ ವೇಳೆ ಸ್ವತಃ ಅವರಾಗಿಯೇ ಆವಿಷ್ಕರಿಸಿದ ಕೆಲ ಅಂಶಗಳು ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವುದನ್ನು ಕಂಡು ಅದರಿಂದ ಪ್ರೇರಿತರಾಗಿ ಆ ನಿಟ್ಟಿನಲ್ಲಿ ಒಂದು ಬಯೋಟೆಕ್ ಕಂಪನಿಯನ್ನು ಪ್ರಾರಂಭಿಸುವ ಉದ್ದೇಶದಿಂದ ಅವರು ತಮ್ಮ ಸೇವೆಯಿಂದ ನಿವೃತ್ತಿ ಪಡೆದಿದ್ದಾರೆ.

ನ್ಯೂಜಿಲ್ಯಾಂಡ್ ಮೂಲದ ವ್ಯಕ್ತಿಗೆ ಮೊದಲ ಇಂಜೆಕ್ಷನ್

ತಮ್ಮ ಕಂಪನಿಯ ಮೂಲಕ ಶೇಕರ್ ಈಗ ಆನುವಂಶಿಕವಾಗಿ ಹೈ ಕೊಲೆಸ್ಟ್ರಾಲ್ ಪ್ರೊಫೈಲ್ ಹೊಂದಿರುವ (ಹೈಪರ್ ಕೊಲೆಸ್ಟೆರೋಲೆಮಿಯಾ) ರೋಗಿಗಳ ಮೇಲೆ ಹೆಚ್ಚಿನ ಗಮನಹರಿಸಿದ್ದಾರೆ. ಈ ವರ್ಷದ ಬೇಸಿಗೆಯಾರಂಭದಲ್ಲಿ ಹೈ ಕೊಲೆಸ್ಟ್ರಾಲ್ ಸ್ಥಿತಿಯಿಂದ ಬಳಲುತ್ತಿದ್ದ ನ್ಯೂಜಿಲ್ಯಾಂಡ್ ವ್ಯಕ್ತಿಯೊಬ್ಬರಿಗೆ ಮೊದಲ ಬಾರಿಗೆ ಇಂಜೆಕ್ಷನ್ ನೀಡಲಾಯಿತು. ಅಲ್ಲದೆ, ಮುಂಬರುವ ತಿಂಗಳುಗಳಲ್ಲಿ ಇನ್ನೂ 39 ರೋಗಿಗಳು ವಿವಿಧ ಡೊಸ್ ಗಳಲ್ಲಿ ಇದನ್ನು ಪಡೆಯಲಿದ್ದಾರೆ ಎನ್ನಲಾಗಿದೆ. ಇವರೆಲ್ಲರ ಫಲಿತಾಂಶಗಳು ಮುಂದಿನ ವರ್ಷದವರೆಗೆ ಸ್ಪಷ್ಟವಾಗಿ ಗೋಚರಿಸಲಿವೆ ಎನ್ನಲಾಗಿದೆ. ಈ ಹಿಂದೆ ಕೋತಿಗಳಲ್ಲಿ ಈ ಪ್ರಯೋಗ ಮಾಡಿದಾಗ ಅವುಗಳಲ್ಲಿದ್ದ ಕೆಟ್ಟ ಕೊಲೆಸ್ಟ್ರಾಲ್ ಏನಿಲ್ಲವೆಂದರೂ 60% ರಷ್ಟು ತಗ್ಗಿರುವುದು ಕಂಡುಬಂದಿದೆ.

ಇದೊಂದು ಪ್ರಯೋಗಶೀಲ ಚಿಕಿತ್ಸೆಯಾಗಿದ್ದು ಇದನ್ನು ಅಭ್ಯಸಿಸಲಾಗುತ್ತಿದೆ ಹಾಗೂ ಇದಕ್ಕಾಗಿ ವರ್ಷಗಳ ತನಕ ಕಾಯಬೇಕಾಗಿದೆ. ಈ ಮಧ್ಯೆ ಶೇಕರ್ ಅವರ ವರ್ವ್ ಸಂಸ್ಥೆಯು ಇದನ್ನು ಪ್ರಯೋಗಿಸಲು ಅನುಮತಿಸುವಂತೆ ಅಮೆರಿಕ ಅನುಮೋದನೆಗಾಗಿ ಕೆಲಸ ಮಾಡಲಿದೆ. ಈ ಬಗ್ಗೆ ಶೇಕರ್ ತಮಗೆ ಖಚಿತವಾಗಿ ಅನುಮತಿ ಸಿಗಲಿದೆ ಎಂಬ ವಿಶ್ವಾಸ ಹೊಂದಿದ್ದು ಈ ವರ್ಷಾಂತ್ಯದವರೆಗೆ ಅವರ ಸಂಸ್ಥೆ ಯುಎಸ್ ಹಾಗೂ ಯುಕೆಗಳಲ್ಲಿ ಕ್ಲಿನಿಕಲ್ ಟ್ರಯಲ್ ಗಳಿಗಾಗಿ ಅರ್ಜಿ ಸಲ್ಲಿಸಲಿದೆ.

ಧೈರ್ಯಶಾಲಿ ಹೂಡಿಕೆದಾರರಿಂದ ಹೂಡಿಕೆಯನ್ನು ನಿರೀಕ್ಷೆ

ಅಲ್ಲದೆ, ಅಮೆರಿಕದಲ್ಲಿ ಈಗಾಗಲೇ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುವ ನಿಟ್ಟಿನಲ್ಲಿ ಕೆಲವು ಚಿಕಿತ್ಸೆಗಳು, ಇಂಜೆಕ್ಷನ್ ಗಳು ಲಭ್ಯವಿದೆ. ಘಟಾನುಘಟಿ ಕಂಪನಿಗಳು ಈ ಆರೋಗ್ಯ ಕ್ಷೇತ್ರದಲ್ಲಿ ನೆಲೆಯೂರಿದ್ದು ಅವುಗಳ ಮಧ್ಯೆ ವರ್ವ್ ತನ್ನದೆ ಆದ ಛಾಪನ್ನು ಮೂಡಿಸಬೇಕಾದ ಒತ್ತಡವನ್ನು ಅನುಭವಿಸಬೇಕಾಗಿರುವುದು ಅನಿವಾರ್ಯ. ಹಾಗಾಗಿ ವರ್ವ್ ಒಂದು ವೇಳೆ ಈ ಚಿಕಿತ್ಸೆ ಯಶಸ್ವಿಯಾಗುವಂತೆ ಮಾಡಿದರೂ ಸಹ ಜನರು ಆ ಚಿಕಿತ್ಸೆಯನ್ನೇ ಪಡೆದುಕೊಳ್ಳಲು ಆಕರ್ಷಣೆ ಉಂಟು ಮಾಡಬೇಕಾಗುತ್ತದೆ.

ಇದನ್ನೂ ಓದಿ:  Scotland: ಈ ದೇಶದಲ್ಲಿ ಸ್ಯಾನಿಟರಿ ಪ್ಯಾಡ್, ಕಪ್ಸ್ ಎಲ್ಲಾ ಉಚಿತ! ಅಭಿಯಾನಕ್ಕೆ ಸಿಕ್ತು ಪ್ರತಿಫಲ

ಈ ನಿಟ್ಟಿನಲ್ಲಿ ಸಂಸ್ಥೆಯು ತನ್ನ ಅಧ್ಯಯನವನ್ನು ಮುಂದುವರೆಸಿದ್ದು ಅದಕ್ಕಾಗಿ ಹೆಚ್ಚಿನ ಹಣ ಕ್ರೋಢಿಕರಿಸುವ ಪ್ರಯತ್ನದಲ್ಲಿ ತೊಡಗಿಕೊಂಡಿದೆ. ಕಳೆದ ತಿಂಗಳು ಸಂಸ್ಥೆಯು ಉತ್ತಮ ಹಣ ಸಂಗ್ರಹಿಸುವಲ್ಲಿ ಸಮರ್ಥವಾಗಿದ್ದು ಇನ್ನೂ ಹೆಚ್ಚಿನ ಹಣದ ಗುರಿಯನ್ನು ಹೊಂದಿದ್ದು ಧೈರ್ಯಶಾಲಿ ಹೂಡಿಕೆದಾರರಿಂದ ಹೂಡಿಕೆಯನ್ನು ನಿರೀಕ್ಷಿಸುತ್ತಿದೆ ಎಂದರೂ ತಪ್ಪಾಗಲಾರದು.
Published by:Ashwini Prabhu
First published: