ನವದೆಹಲಿ(ಡಿ.23): ಮೆಸ್ಸಿ (Messi) ತನ್ನ ಸಹ ಆಟಗಾರರೊಂದಿಗೆ ಸೇರಿ ಮೊಬೈಲ್ ಕಳ್ಳತನವನ್ನು (Mobile Robbery) ಕರಗತ ಮಾಡಿಕೊಂಡಿದ್ದ. ಈ ಗ್ಯಾಂಗ್ ದಕ್ಷಿಣ ಮತ್ತು ಆಗ್ನೇಯ ದೆಹಲಿಯ ಜನದಟ್ಟಣೆಯ ಮಾರುಕಟ್ಟೆಗಳಲ್ಲಿ ದುಬಾರಿ ಫೋನ್ ಇರುವವರನ್ನೇ ಗುರಿಯಾಗಿಸುತ್ತಿದ್ದರು. ಈ ಗ್ಯಾಂಗ್ ಬಂಧನದ ನಂತರ ದೆಹಲಿ ಪೊಲೀಸರು (Delhi Police) 56 ಪ್ರಕರಣಗಳನ್ನು ಬೇಧಿಸಿದ್ದಾರೆ.
ದೆಹಲಿ ಪೊಲೀಸರು ಫುಟ್ಬಾಲ್ ಆಟಗಾರ ಮೆಸ್ಸಿ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ. ಕಳ್ಳತನ ಆರೋಪಿ ಮೆಸ್ಸಿಯನ್ನು ಬಂಧಿಸಲಾಗಿದೆ. ಅವರ ಬಂಧನದೊಂದಿಗೆ 55 ಪ್ರಕರಣಗಳು ಬೇಧಿಸಲಾಗಿದೆ. ಅರೇ... ಇದೇನಿದು ಎಂದು ಭಾವಿಸುತ್ತಿದ್ದೀರಾ? ಹೌದು ದೆಹಲಿ ಪೊಲೀಸರ ಚಿತ್ತರಂಜನ್ ಪಾರ್ಕ್ ಪೊಲೀಸ್ ಠಾಣೆಯ ಎಸ್ಎಚ್ಒ ಇನ್ಸ್ಪೆಕ್ಟರ್ ರಿತೇಶ್ ಅವರ ತಪಾಸಣಾ ತಂಡವು ಫುಟ್ಬಾಲ್ ಆಟಗಾರ ಮೆಸ್ಸಿಯನ್ನು ಅವನ ಗ್ಯಾಂಗ್ ತಂಡದೊಂದಿಗೆ ಬಂಧಿಸಿದ್ದಾರೆ. ಆದರೆ ಈ ಕಳ್ಳತನದ ಆರೋಪದಲ್ಲಿ ಸಿಕ್ಕಾಕೊಂಡಿರುವ ಮೆಸ್ಸಿ ಆ ಮಹಾನ್ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಅಲ್ಲ. ಈ ಮೆಸ್ಸಿ ಬೇರೊಬ್ಬ ಫುಟ್ಬಾಲ್ ಆಟಗಾರ, ಈತ ದೆಹಲಿಯಾದ್ಯಂತ ತನ್ನ ತಂಡದೊಂದಿಗೆ ಮೊಬೈಲ್ ಫೋನ್ ಕಳ್ಳತನ ಮಾಡುವ ರೂವಾರಿಯಾಗಿದ್ದ.
ಇದನ್ನೂ ಓದಿ: Lionel Messi: ಚರ್ಚೆಗೆ ಕಾರಣವಾಯ್ತು ಮೆಸ್ಸಿ ಧರಿಸಿದ್ದ ಡ್ರೆಸ್, ಏನಿದು ಕತಾರ್ ಬಿಷ್ಟ್?
ಮಾಹಿತಿಯ ಪ್ರಕಾರ, ದೆಹಲಿ ಪೊಲೀಸರ ಸಿಆರ್ ಪಾರ್ಕ್ ಪೊಲೀಸ್ ಠಾಣೆಯ ಪೊಲೀಸರು ಮೆಸ್ಸಿ ಗ್ಯಾಂಗ್ ಮುಖ್ಯಸ್ಥ ಮತ್ತು ಅವನ ಗ್ಯಾಂಗ್ನ ನಾಲ್ವರನ್ನು ಬಂಧಿಸಿದ್ದಾರೆ. ಗ್ಯಾಂಗ್ನ ನಾಯಕ ಮೆಸ್ಸಿ ಫುಟ್ಬಾಲ್ ಆಟಗಾರ, ಅವರ ನಿಜವಾದ ಹೆಸರು ಪಿಂಕು. ಈ ಗ್ಯಾಂಗ್ ಲೀಡರ್ ಪಿಂಕು ಮೆಸ್ಸಿ ಕಾಕತಾಳೀಯವೆಂಬಂತೆ ಫುಟ್ಬಾಲ್ ಆಟಗಾರನೂ ಹೌದು. ಈತ ಮೆಸ್ಸಿಯ ಕಟ್ಟಾ ಅಭಿಮಾನಿಯಾಗಿರುವುದರಿಂದ ಮಸ್ಸಿಯ ಹೆಸರನ್ನೇ ಇಟ್ಟುಕೊಂಡು ಫೇಮಸ್ ಆಗಿದ್ದಾನೆ.
ಇದನ್ನೂ ಓದಿ: Lionel Messi: ಮೆಸ್ಸಿ ವಿನ್ನಿಂಗ್ ಒಂದೇ ಒಂದು ಫೋಟೋ! ರೊನಾಲ್ಡೋ ಜೊತೆ ಮೊಟ್ಟೆಯ ದಾಖಲೆಯೂ ಉಡೀಸ್
ಪಿಂಕು ಅಲಿಯಾಸ್ ಮೆಸ್ಸಿ ತನ್ನ ಸಹೋದ್ಯೋಗಿಗಳೊಂದಿಗೆ ಮೊಬೈಲ್ ಕಳ್ಳತನವನ್ನು ಕರಗತ ಮಾಡಿಕೊಂಡಿದ್ದ. ದಕ್ಷಿಣ ಮತ್ತು ಆಗ್ನೇಯ ದೆಹಲಿಯ ಜನದಟ್ಟಣೆಯ ಮಾರುಕಟ್ಟೆಗಳಲ್ಲಿ ದುಬಾರಿ ಫೋನ್ಗಳನ್ನು ಹೊಂದಿರುವ ಜನರನ್ನು ಗುರಿಯಾಗಿಸುತ್ತಿದ್ದರು. ಈ ಗ್ಯಾಂಗ್ ಬಂಧನದ ನಂತರ ದೆಹಲಿ ಪೊಲೀಸರು 56 ಪ್ರಕರಣಗಳನ್ನು ಬೇಧಿಸಿದ್ದಾರೆ. ಈ ಗ್ಯಾಂಗ್ನಿಂದ 56 ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಂಕು ಅಲ್ಲದೆ ಆತನ ಸಹಚರರಾದ ಅಜಯ್, ಪಮ್ಮಿ, ಜಾಫರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ