Viral Video: ಹೋಟೆಲ್​​ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಫುಡ್​​ ಡೆಲಿವರಿ ಬಾಯ್!

ಮಹಿಳಾ ಸಿಬ್ಬಂದಿ ಮೇಲೆ ಫುಡ್‌ ಡೆಲಿವರಿ ಬಾಯ್‌ನಿಂದ ಹಲ್ಲೆ!

ಮಹಿಳಾ ಸಿಬ್ಬಂದಿ ಮೇಲೆ ಫುಡ್‌ ಡೆಲಿವರಿ ಬಾಯ್‌ನಿಂದ ಹಲ್ಲೆ!

ವಿಡಿಯೋದಲ್ಲಿ ಫುಡ್​ ಡೆಲಿವರಿ ಬಾಯ್​ ಸಿಬ್ಬಂದಿಯ ಮೇಲೆ ವಸ್ತುಗಳನ್ನೂ ಎಸೆದು ಹಲ್ಲೆ ನಡೆಸಿರುವುದನ್ನು ಕಾಣಬಹುದು. ರೆಸ್ಟೋರೆಂಟ್​​ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇದೆಲ್ಲವೂ ಸೆರೆಯಾಗಿದೆ.

  • Share this:

ಫುಡ್ ಡೆಲಿವರಿ ಬಾಯ್‌ಗಳ (Food Delivery Boy ) ಕುರಿತು ನಾವು ಅನೇಕ ಹೃದಯಸ್ಪರ್ಶಿ ಕಥೆಗಳನ್ನು ಕೇಳಿದ್ದೇವೆ. ಅವರು ಯಾವುದೇ ಸಂದರ್ಭವಿರಲಿ ನಮ್ಮ ಊಟವನ್ನು (Food) ತಲುಪಿಸಲು ಶಕ್ತಿ ಮೀರಿ ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಡೆಲಿವರಿ ಬಾಯ್​​ ವರ್ತನೆ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹೌದು, ಡೆಲಿವರಿ ಬಾಯ್ ಒಬ್ಬ ಮಹಿಳಾ (Woman) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಆಘಾತಕಾರಿ ಸನ್ನಿವೇಶದ ವಿಡಿಯೋ (Video) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.


ವಿಡಿಯೋದಲ್ಲಿ ಫುಡ್​ ಡೆಲಿವರಿ ಬಾಯ್​ ಸಿಬ್ಬಂದಿಯ ಮೇಲೆ ವಸ್ತುಗಳನ್ನೂ ಎಸೆದು ಹಲ್ಲೆ ನಡೆಸಿರುವುದನ್ನು ಕಾಣಬಹುದು. ರೆಸ್ಟೋರೆಂಟ್​​ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇದೆಲ್ಲವೂ ಸೆರೆಯಾಗಿದ್ದು, ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ಇದೀಗ ವೈರಲ್‌ ಆಗಿದೆ.


ಇದನ್ನೂ ಓದಿ: Viral Photos: ಮೃತ ತಾತನ ಹಣೆಗೆ ಮುತ್ತಿಟ್ಟ ಕೋತಿ, ಸಂಬಂಧ ಅಂದ್ರೆ ಇದು ಕಣ್ರೀ!


ಘಟನೆಯ ಕುರಿತು ರೆಸ್ಟೋರೆಂಟ್ ವಿಡಿಯೋವನ್ನು ಹಂಚಿಕೊಂಡಿದೆ


ಫ್ಯೂಮಿ ಹನಿ ಹೌಸ್ ನಲ್ಲಿ ಮಾರ್ಚ್ 29 ರಂದು ಈ ಘಟನೆ ನಡೆದಿದೆ. ಇದು ಮಲೇಷ್ಯಾದ ಪೆನಾಂಗ್‌ನಲ್ಲಿರುವ ಸಿಂಪಾಂಗ್ ಅಂಪಾಟ್‌ನಲ್ಲಿರುವ ರೆಸ್ಟೋರೆಂಟ್ ಆಗಿದ್ದು, ಫ್ಯೂಮಿ ಹನಿ ಹೌಸ್ ರೆಸ್ಟೋರೆಂಟ್ ತನ್ನ ಫೇಸ್‌ಬುಕ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ.




ಫ್ಯೂಮಿ ಹನಿ ಹೌಸ್, ಫುಡ್‌ಪಾಂಡಾ ವಿತರಣಾ ಅಪ್ಲಿಕೇಶನ್‌ನಿಂದ ಆಹಾರ ಆದೇಶಗಳನ್ನು ಸ್ವೀಕರಿಸಿದೆ. ಆದರೆ 30 ನಿಮಿಷಗಳು ಕಳೆದರೂ ಡೆಲಿವರಿ ಮಾಡುವ ವ್ಯಕ್ತಿ ಕಾಣಿಸಿಕೊಳ್ಳದ ಕಾರಣ, ಫ್ಯೂಮಿ ಹನಿ ಹೌಸ್ ಸಿಬ್ಬಂದಿಯು ಅದನ್ನು ಅಪ್ಲಿಕೇಶನ್‌ ಮೂಲಕ ವರದಿ ಮಾಡಿದರು.


ಫ್ಯೂಮಿ ಹನಿ ಹೌಸ್ ವರದಿ ಮಾಡಿದ್ದರಿಂದ ಅಪ್ಲಿಕೇಶನ್‌, ಇನ್ನೊಬ್ಬ ಡೆಲಿವರಿ ಬಾಯ್‌ಗೆ ಆ ಕಾರ್ಯವನ್ನು ನಿಯೋಜಿಸಿತು. ಆದರೆ, ಮೊದಲು ನಿಯೋಜಿಸಲಾದ ಡೆಲಿವರಿ ಬಾಯ್‌ 45 ನಿಮಿಷಗಳ ನಂತರ ಸ್ನೇಹಿತನೊಂದಿಗೆ ಬಂದು ಮತ್ತು ತನ್ನ ಡೆಲಿವರಿ ಆಯ್ಕೆಯನ್ನು ರದ್ದುಗೊಳಿಸಿದ್ದಕ್ಕಾಗಿ ಫ್ಯೂಮಿ ಹನಿ ಹೌಸ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು "therakyatpost" (ಟಿಆರ್‌ಪಿ) ವರದಿ ಮಾಡಿದೆ.


ಹೋಟೆಲ್​​ ಮಹಿಳಾ ಸಿಬ್ಬಂದಿ ಮೇಲೆ ಫುಡ್‌ ಡೆಲಿವರಿ ಬಾಯ್‌ನಿಂದ ಹಲ್ಲೆ! (ಸಾಂದರ್ಭಿಕ ಚಿತ್ರ)


ವೈರಲ್ ವಿಡಿಯೋಗೆ ಇದುವರೆಗು 4,80,000 ವೀಕ್ಷಣೆಗಳನ್ನು ಗಳಿಸಿದೆ, 3,000ಕ್ಕೂ ಹೆಚ್ಚು ಲೈಕ್‌ಗಳ ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಗಳಿಸಿದೆ. ತೀವ್ರ ವಾಗ್ವಾದದ ನಂತರ ಕೋಪದ ಭರದಲ್ಲಿ ಡೆಲಿವರಿ ಬಾಯ್‌ ಮಹಿಳಾ ಸಿಬ್ಬಂದಿಯ ಮೇಲೆ ಕೌಂಟರ್‌ನಲ್ಲಿ ಇದ್ದ ಬಾಟಲ್‌ಗಳನ್ನು ಎಸೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದೇ ವೇಳೆ ರೆಸ್ಟೋರೆಂಟ್​​ನ ಇನ್ನೊಬ್ಬ ಸಿಬ್ಬಂದಿ ಮಧ್ಯಪ್ರವೇಶಿಸಿದಾಗ, ಫುಡ್​ ಡೆಲಿವರಿ ಬಾಯ್​, ಫೆಯ ಮೆನುವನ್ನು ಅವರ ಮೇಲೆ ಎಸೆದು ರಂಪಾಟ ಮಾಡಿದ್ದಾನೆ.


ರೆಸ್ಟೋರೆಂಟ್‌ನಲ್ಲಿ ಇಬ್ಬರು ಡೆಲಿವರಿ ಬಾಯ್‌ಗಳು ಇರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದಾಗಿದೆ. ಒಬ್ಬರು ಫುಡ್‌ಪಾಂಡಾ ಸಮವಸ್ತ್ರವನ್ನು ಧರಿಸಿದ್ದರೆ, ಇನ್ನೊಬ್ಬರು ಬಣ್ಣಬಣ್ಣದ ಟೀ ಶರ್ಟ್ ಮತ್ತು ನೀಲಿ ಹೆಲ್ಮೆಟ್ ಧರಿಸಿದ್ದಾರೆ. ಬಣ್ಣಬಣ್ಣದ ಟೀ ಶರ್ಟ್ ಧರಿಸಿದ ವ್ಯಕ್ತಿ ಸಿಬ್ಬಂದಿಯೊಂದಿಗೆ ಮಾತನಾಡಲು ಶುರುಮಾಡಿದ.


ಇದನ್ನೂ ಓದಿ: Kichcha Sudeep: ಸುದೀಪ್, ನಿಮ್ಮನ್ನು-ನಿಮ್ಮ ಪಕ್ಷವನ್ನು ಪ್ರಶ್ನಿಸುವ ಜನದನಿಗೆ ರೆಡಿಯಾಗಿರಿ! just asking ಅಂತ ಪ್ರಕಾಶ್ ರಾಜ್ ಟ್ವೀಟ್


ನಂತರ ಅವರ ಮಾತು ಜಗಳದಲ್ಲಿ ತಿರುಗಿತ್ತು. ಮಾತಿನ ಮಧ್ಯೆ, ಹೆಲ್ಮೆಟ್‌ನಲ್ಲಿದ್ದ ವ್ಯಕ್ತಿ ಕೌಂಟರ್ ಹಿಂದೆ ನಿಂತಿದ್ದ ಸಿಬ್ಬಂದಿಯತ್ತ ಬಾಟಲ್‌ಗಳನ್ನು ಎಸೆದು ಹಲ್ಲೆ ಮಾಡುತ್ತಾನೆ. ಜಗಳವು ಅತಿರೇಕಕ್ಕೆ ಏರಿದಾಗ, ಹೆಲ್ಮೆಟ್‌ನಲ್ಲಿದ್ದ ವ್ಯಕ್ತಿ ಮತ್ತೆ ಮೆನುವಿನಿಂದ ಹೋಟೆಲ್ ಸಿಬ್ಬಂದಿಗೆ ಹೊಡೆಯುತ್ತಾನೆ.




ಫ್ಯೂಮಿ ಹನಿ ಹೌಸ್‌ನಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಡೆಲಿವರಿ ಮ್ಯಾನ್, ಸಿಬ್ಬಂದಿಗೆ ಹೊಡೆದ ಭಯಾನಕ ಘಟನೆಯನ್ನು ಸೆರೆಹಿಡಿದಿದೆ. ಇದು ಸಿಸಿಟಿವಿ ಫೂಟೇಜ್‌ನಲ್ಲಿ ಮಾರ್ಚ್ 29, 2023 ರಂದು ಸುಮಾರು 4:02pm ಕ್ಕೆ ಸಮಯದಲ್ಲಿ ರೆರ್ಕಾಡ್‌ ಆಗಿದೆ ಎಂದು ವರದಿಗಳ ಮೂಲ ತಿಳಿಸಿವೆ.

top videos


    ವಿಳಂಬದ ಬಗ್ಗೆ ಗ್ರಾಹಕರು ದೂರು ನೀಡುತ್ತಾರೆ ಎಂಬ ಭಯದಿಂದ ಅವರು ಡೆಲಿವರಿ ಬಾಯ್‌ ಮೇಲೆ ವರದಿ ಮಾಡಿರುವುದಾಗಿ ಫ್ಯೂಮಿ ಹನಿ ಹೌಸ್ ಸ್ಪಷ್ಟಪಡಿಸಿದೆ. ಹಾಗೂ ಈ ಘಟನೆಯನ್ನು ಕುರಿತು ಫ್ಯೂಮಿ ಹನಿ ಹೌಸ್ ಫುಡ್‌ಪಾಂಡಾಗೆ ವರದಿ ಮಾಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇತ್ತೀಚಿನ ಕೆಲವು ವರದಿಗಳ ಪ್ರಕಾರ, ಡೆಲಿವರಿ ಬಾಯ್‌ ಅನ್ನು ಇದೀಗ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

    First published: