Kabul Airport: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಒಂದು ಬಾಟಲಿ ನೀರಿಗೆ 3,000, ಪ್ಲೇಟ್​ ಅನ್ನಕ್ಕೆ 7,400

Kabul Airport: ಈಗಾಗಲೇ ವಿಮಾನ ನಿಲ್ದಾಣದಲ್ಲಿ ಜನಸಂದಣಿಯಿಂದಾಗಿ, ಮಹಿಳೆಯರು ಮತ್ತು ಮಕ್ಕಳು ಶೋಚನೀಯ ಸ್ಥಿತಿಯಲ್ಲಿದ್ದಾರೆ.

ಅಫ್ಘಾನ್ ನಿರಾಶ್ರಿತರು.

ಅಫ್ಘಾನ್ ನಿರಾಶ್ರಿತರು.

 • Share this:
  ಆಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್​ ಅಧಿಕಾರ ಆರಂಭವಾಗುತ್ತಿದ್ದಂತೆ ದೇಶವನ್ನು ತೊರೆಯಲು ಜನರು ಹತೊರೆಯುತ್ತಿದ್ದಾರೆ. ವಿಮಾನಗಳಲ್ಲಿ ಕುರಿ ಮಂದೆಯಂತೆ ಜನರು ಪ್ರಯಾಣಿಸುತ್ತಿರುವ ದೃಶ್ಯಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ವಾರ ಕಳೆದರೂ ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣಗಳಲ್ಲಿ (Kabul Airport) ಜನ ಜಂಗುಳಿ ಕಡಿಮೆಯಾಗಿಲ್ಲ. ಜನರು ಈ ಪಾಟಿ ದೇಶ ತೊರೆಯಲು ಮುಂದಾಗುತ್ತಿದ್ದಂತೆ ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ನೀರಿನ ದರ ಏಕಾಏಕಿ ಏರಿಕೆ ಆಗಿದ್ದು, ಪ್ರಯಾಣಿಕರಿಗೆ ಈ ದರ ಸಮರದ ಮೂಲಕ ಮತ್ತಷ್ಟು ಬರೆ ಏಳೆಯಲಾಗುತ್ತಿದೆ. ಒಂದು ಬಾಟೆಲ್​ ನೀರಿಗೆ 3 ಸಾವಿರ ರೂ,  ಪ್ಲೇಟ್​ ಅನ್ನಗೆ 7, 400 ರೂ ಮಾರಾಟ ಮಾಡಲಾಗುತ್ತಿದೆ. ವಿಶೇಷ ಎಂದರೆ ಇದು ಡಾಲರ್ (Dollar)​ ಮೊತ್ತ ಅಲ್ಲ. ಬದಲಾಗಿ ಅಫ್ಘಾನ್​ ಕರೆನ್ಸಿ (Afghan currency)ಯಲ್ಲಿ. ಈ ಮೂಲಕ ಜನ ಸಮಾನ್ಯರಿಗೆ ಇದು ಇನ್ನಷ್ಟು ಹೊರೆಯಾಗಿದೆ ಎಂದು ರಾಯಿಟರ್ಸ್​ ವರದಿ ಮಾಡಿದೆ.

  ಈಗಾಗಲೇ ವಿಮಾನ ನಿಲ್ದಾಣದಲ್ಲಿ ಜನಸಂದಣಿಯಿಂದಾಗಿ, ಮಹಿಳೆಯರು ಮತ್ತು ಮಕ್ಕಳು ಶೋಚನೀಯ ಸ್ಥಿತಿಯಲ್ಲಿದ್ದಾರೆ. ಅಮೆರಿಕ ಅಫ್ಘಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸುತ್ತಿದ್ದಾರೆ ಎಂದು ತಿಳಿದ ನಂತರ ಅನೇಕರು ವಿದೇಶಕ್ಕೆ ಹೋಗಲು ಅಲ್ಲಿಯೇ ಇದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೆಯ ವಿಡಿಯೋವನ್ನು ಪ್ರಕಟಿಸಲಾಗಿದೆ
  ಅಫ್ಘಾನಿಸ್ತಾನದಿಂಧ ಇನ್ನು 1, 500 ಮಂದಿ ಅಮೆರಿಕದ ನಾಗರಿಕರನ್ನು ಸ್ಥಳಾಂತರಿಸಬೇಕಾಗಿದೆ. ಆಗಸ್ಟ್ 31 ರಂದು ಯುಎಸ್ ಪಡೆಗಳು ದೇಶವನ್ನು ತೊರೆದ ನಂತರ ಇಲ್ಲಿನ ಅಮೆರಿಕನ್​ ಪ್ರಜೆಗಳ ಸ್ಥಳಾಂತರಿಸುವದಕ್ಕೆ ತಾಲಿಮಾನ್​ಗಳು ಅನುಮತಿ ಮಾಡಿದ್ದವು.

  ಇದನ್ನು ಓದಿ: 25ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ; ಶಿಮ್ಲಾಗೆ ಕುಟುಂಬ ಸಮೇತ ಹಾರಿದ ಆಂಧ್ರ ಸಿಎಂ ಜಗನ್​

  ಅಫ್ಘಾನಿಸ್ತಾನವನ್ನು ತೊರೆಯಲು ಬಯಸಿದ 6,000 ಅಮೆರಿಕನ್ನರಲ್ಲಿ ಕನಿಷ್ಠ 4,500 ಅಮೆರಿಕನ್ ನಾಗರಿಕರು ನಿರ್ಗಮಿಸಿದ್ದಾರೆ ಇನ್ನು ದೇಶ ತೊರೆಯಲು ಸಿದ್ದವಾಗಿರುವ 500 ಅಮೆರಿಕನ್ನರೊಂದಿಗೆ ನಮ್ಮ ಅಧಿಕಾರಿಗಳು ನೇರ ಸಂಪರ್ಕದಲ್ಲಿದ್ದಾರೆ. ಅವರಿಗೆ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಹೇಗೆ ಹೋಗುವುದು ಎಂಬುದರ ಕುರಿತು ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ತಿಳಿಸಿದ್ದಾರೆ

  ಗುರುವಾರ ಕೊನೆಯ ಸ್ಥಳಾಂತರ ಬಳಿಕ ಅಫ್ಘಾನಿಸ್ತಾನಕ್ಕೆ ಭಾರತದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಕಾಬೂಲ್‌ಗೆ ನಿಯಮಿತ ಪ್ರಯಾಣವು ಪ್ರಯಾಣಿಕರ ಮತ್ತು ಸಿಬ್ಬಂದಿಯ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಮೂಲಗಳು ತಿಳಿಸಿವೆ. 1999ರ ಕಂದಹಾರ್​ ನೆನಪು ಇನ್ನು ಹಸಿಯಾಗಿದೆ. ವಿಮಾನ ಹಾರಾಟ ಸಮಯದಲ್ಲಿ ಗಂಭೀರ ಬೆದರಿಕೆಗಳನ್ನು ಹೊಂದಿರುತ್ತವೆ. ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾವು ಅಂತರರಾಷ್ಟ್ರೀಯ ಸಮುದಾಯದ ಕ್ರಮಗಳಿಗಾಗಿ ಕಾಯಬೇಕು. ಒಂದು ವೇಳೆ ಅಫ್ಘಾನಿಸ್ತಾನ ನಮಗೆ ಈ ಭರವಸೆ ನೀಡಿದರೆ ನಾವು ಪ್ರಯಾಣಿಸಲು ಅವಕಾಶ ನೀಡುವುದನ್ನು ಮುಂದುವರಿಸಬಹುದು. ಆದರೆ ನಮಗೆ ಪಾಕಿಸ್ತಾನ ಮತ್ತು ತಾಲಿಬಾನ್​ ಕುರಿತ ಅದರ ಸಂಬಂಧದ ಬಗ್ಗೆ ನಮಗೆ ಯಾವುದೇ ವಿಶ್ವಾಸವಿಲ್ಲ ಎಂದು ಮೂಲಗಳು ನ್ಯೂಸ್​ 18ಗೆ ತಿಳಿಸಿವೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: