ಕೇಂದ್ರ ಸರ್ಕಾರ ಟ್ವಿಟರ್​ ವಿರುದ್ಧ ಹೋರಾಡುವ ಬದಲು ಎಲ್ಲರಿಗೂ ಲಸಿಕೆ ನೀಡಲು ಮುಂದಾಗಲಿ: ಎನ್​ಸಿಪಿ ಛೀಮಾರಿ!

ಟ್ವಿಟರ್ ಬ್ಲೂಟಿಕ್ ವಿಷಯದ ಬಗ್ಗೆ ಬಿಜೆಪಿ ಮತ್ತು ಒಕ್ಕೂಟ ಸರ್ಕಾರ ಟ್ವಿಟ್ಟರ್ ಜೊತೆ ಹೋರಾಡುತ್ತಿರುವಾಗ, ದೇಶದ ನಾಗರಿಕರು ಕೊರೋನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ನವಾಬ್‌ ಮಲಿಕ್ ಸೋಮವಾರ ವಿಷಾಧಿಸಿದ್ದಾರೆ.

ಎನ್​ಸಿಪಿ ಪಕ್ಷದ ನಾಯಕ ನವಾಬ್ ಮಲಿಕ್.

ಎನ್​ಸಿಪಿ ಪಕ್ಷದ ನಾಯಕ ನವಾಬ್ ಮಲಿಕ್.

 • Share this:
  ಮುಂಬೈ (ಜೂನ್ 07); ಟ್ವಿಟರ್​ ಹಾಗೂ ಕೇಂದ್ರ ಸರ್ಕಾರದ ನಡುವಿನ ಜಿದ್ದಾಜಿದ್ದಿ ಮುಂದುವರೆಯುತ್ತಲೇ ಇದೆ. ಕಳೆದ ತಿಂಗಳು ಹೊಸ ಐಟಿ ನೀತಿಯನ್ನು ಜಾರಿಗೆ ತಂದಿದ್ದ ಕೇಂದ್ರ ಸರ್ಕಾರ ಟ್ವಿಟರ್​ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣಗಳಿಗೆ ಹೊಸ ನಿಯಮವನ್ನು ಪಾಲಿಸುವಂತೆ ತಾಕೀತು ಮಾಡಿತ್ತು. ಈ ನಿಯಮಗಳು ಗ್ರಾಹಕರ ಖಾಸಗಿ ತನಕ್ಕೆ ದಕ್ಕೆ ಎಂದು ಟ್ವಿಟರ್​ ಅಸಮಾಧಾನ ವ್ಯಕ್ತಪಡಿಸಿತ್ತು. ಆದರೂ, ಕೇಂದ್ರ ಸರ್ಕಾರ ಸತತ ಒತ್ತಡ ಹೇರಿದ ಬೆನ್ನಿಗೆ ಟ್ವಿಟರ್​ ಇದೀಗ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಬಿಜೆಪಿ ಮುಖಂಡರ ಟ್ವಿಟರ್​ ಖಾತೆಯ ಬ್ಲೂಟಿಕ್ ಬ್ಯಾಡ್ಜ್​ ಅನ್ನು ತೆಗೆದುಹಾಕಿದೆ. ಪರಿಣಾಮ ಟ್ವಟಿರ್​ ವಿರುದ್ಧ ಕೇಂದ್ರ ಸರ್ಕಾರ ಹರಿಹಾಯುತ್ತಿದೆ. ಇದೇ ವೇಳೆ ಈ ಬೆಳವಣಿಗೆಗೆ ತಕ್ಕ ಉತ್ತರ ನೀಡಿರುವ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್‌ಸಿಪಿ)ದ ವಕ್ತಾರ ಹಾಗೂ ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್‌ ಮಲಿಕ್, "ಒಕ್ಕೂಟ ಸರ್ಕಾರದ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ‘ಬ್ಲೂ ಟಿಕ್’ ಬ್ಯಾಡ್ಜ್‌ಗಾಗಿ ಟ್ವಿಟ್ಟರ್ ಜೊತೆ ಹೋರಾಡುವ ಬದಲು ಕೊರೋನಾ ವಿರುದ್ಧ ನಾಗರಿಕರಿಗೆ ಲಸಿಕೆ ಹಾಕುವ ಬಗ್ಗೆ ಹೆಚ್ಚು ಗಮನಹರಿಸಬೇಕು" ಎಂದು ಕಿಡಿಕಾರಿದ್ದಾರೆ.

  ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಆರ್‌ಎಸ್‌ಎಸ್ ಉನ್ನತ ನಾಯಕರ ವೈಯಕ್ತಿಕ ಖಾತೆಗಳ ‘ಬ್ಲೂ ಟಿಕ್’ ಅನ್ನು ಟ್ವಿಟರ್ ತೆಗೆದು ಹಾಕಿತ್ತು ಮತ್ತು ನಂತರ ಅದನ್ನು ಮರು ಸ್ಥಾಪಿಸಿತ್ತು. ಈ ಬಗ್ಗೆ ಆಕ್ರೋಶ ವ್ಯಕ್ತವಾದ ಕೆಲವೇ ದಿನಗಳ ನಂತರ ನವಾಬ್ ಮಲಿಕ್‌ ಸುದ್ದಿಗಾರರೊಂದಿಗೆ ಮಾತನಾಡಿ ಒಕ್ಕೂಟ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.

  ಬ್ಲೂಟಿಕ್ ತೆಗೆದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಟ್ವಿಟರ್‌, "ಬ್ಲೂಟಿಕ್‌ ಬ್ಯಾಡ್ಜ್ ಇರುವ ಟ್ವಿಟರ್‌ ಖಾತೆಯು ಆರು ತಿಂಗಳವರೆಗೆ ನಿಷ್ಕ್ರಿಯವಾಗಿದ್ದರೆ ಅಥವಾ ಅದರ ಪರಿಶೀಲನೆಯು ಅಪೂರ್ಣವಾಗಿದ್ದರೆ ಅದು ಸ್ವಯಂಚಾಲಿತವಾಗಿ ತೆಗೆದುಹಾಕಬಹುದು" ಎಂದು ಹೇಳಿತ್ತು.

  ಟ್ವಿಟರ್ ‘ಬ್ಲೂ ಟಿಕ್’ ವಿಷಯದ ಬಗ್ಗೆ ಬಿಜೆಪಿ ಮತ್ತು ಒಕ್ಕೂಟ ಸರ್ಕಾರ ಟ್ವಿಟ್ಟರ್ ಜೊತೆ ಹೋರಾಡುತ್ತಿರುವಾಗ, ದೇಶದ ನಾಗರಿಕರು ಕೊರೋನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಲು ಹೋರಾಡುತ್ತಿದ್ದಾರೆ ಎಂದು ನವಾಬ್‌ ಮಲಿಕ್ ಸೋಮವಾರ ವಿಷಾಧಿಸಿದ್ದಾರೆ.

  ಇದನ್ನೂ ಓದಿ: PM Narendra Modi: ಇಂದು ಸಂಜೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

  "ಇದು ಬ್ಲೂಟಿಕ್‌‌ ಆಗಿರಲಿ ಅಥವಾ ವ್ಯಾಕ್ಸಿನೇಷನ್ ವಿಷಯ ಸೇರಿದಂತೆ ಯಾವುದೇ ಸಮಸ್ಯೆಯಾಗಲಿ ಒಕ್ಕೂಟ ಸರ್ಕಾರದ ತಪ್ಪು ನಡೆಯನ್ನು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಆದರೆ, ಒಕ್ಕೂಟ ಸರ್ಕಾರವು ತನ್ನೆದುರಿನ ಟೀಕೆಗಳನ್ನು ನಿರ್ಲಕ್ಷಿಸುತ್ತಾ ತನ್ನ ದುರಹಂಕಾರ ಪ್ರದರ್ಶಿಸುತ್ತಿದೆ. ಜನರನ್ನು ಮತ್ತಷ್ಟು ಸಮಸ್ಯೆಗಳತ್ತ ದೂಡುತ್ತಿದೆ. ಇನ್ನು ಮುಂದಾದರೂ ಕೇಂದ್ರ ಸರ್ಕಾರ ಟ್ವಿಟರ್‌ನೊಂದಿಗೆ ಬ್ಲೂಟಿಕ್‌‌ ವಿರುದ್ಧ ಹೋರಾಡುವ ಬದಲು ನಾಗರಿಕರಿಗೆ ಲಸಿಕೆ ಹಾಕುವಲ್ಲಿ ಬಿಜೆಪಿ ಹೆಚ್ಚು ಗಮನ ಹರಿಸಬೇಕು" ಎಂದು ಅವರು ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: NASA: ನಾಸಾದ ಚಂದ್ರಯಾನಕ್ಕೆ ಬೆನ್ನೆಲುಬಾದ ಭಾರತೀಯ ಮೂಲದ ಸುಭಾಷಿಣಿ ಅಯ್ಯರ್

  ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ನವಾಬ್‌ ಮಲಿಕ್‌, "ಜನರು ಕೊರೋನಾ ತಡೆಗಟ್ಟುವ ಸರ್ಕಾರದ ಮಾನದಂಡಗಳನ್ನು ಸರಿಯಾಗಿ ಅನುಸರಿಸಿದರೆ, ಇಡೀ ಮಹಾರಾಷ್ಟ್ರವು ಲಾಕ್‌ಡೌನ್‌ ನಿರ್ಬಂಧಗಳಿಂದ ಹೊರಬರುತ್ತದೆ. ಜನ ಮತ್ತೆ ಎಂದಿನಂತೆ ಜೀವನ ಸಾಗಿಸಬಹುದಾಗಿದೆ" ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆಯ ಆಡಳಿತವಿದೆ.

  ನ್ಯೂಸ್​​​ 18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: