• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಈಗಾಗಲೇ ತೆರಿಗೆ ಕಡಿತ ಮಾಡಿರುವಾಗ ಮತ್ತೆ ಕೇಳೋದೇಕೆ? ಸೀತಾರಾಮನ್ ತಿರುಗೇಟು, ದೀದಿಗೆ ಮುಖಭಂಗ!

ಈಗಾಗಲೇ ತೆರಿಗೆ ಕಡಿತ ಮಾಡಿರುವಾಗ ಮತ್ತೆ ಕೇಳೋದೇಕೆ? ಸೀತಾರಾಮನ್ ತಿರುಗೇಟು, ದೀದಿಗೆ ಮುಖಭಂಗ!

ಮಮತಾ ಬ್ಯಾನರ್ಜಿ, ನಿರ್ಮಲಾ ಸೀತಾರಾಮನ್​

ಮಮತಾ ಬ್ಯಾನರ್ಜಿ, ನಿರ್ಮಲಾ ಸೀತಾರಾಮನ್​

ದೀದಿ ಪತ್ರದಲ್ಲಿ ಉಲ್ಲೇಖಿಸಿರುವ ವಸ್ತುಗಳಿಗೆ ಮೇ 3ರಂದೇ ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿ ನೀಡಿದೆ. ಅದನ್ನು ಸರಿಯಾಗಿ ಅರಿಯದೇ ಮತ್ತೆ ಅದೇ ವಸ್ತುಗಳನ್ನು ಉಲ್ಲೇಖಿಸಿ ತೆರಿಗೆ ವಿನಾಯ್ತಿ ಕೊಡಿ ಎಂದು ಕೇಳುತ್ತಿರುವುದು ತಮಾಷೆಯಾಗಿದೆ.

  • Share this:

ನವದೆಹಲಿ: 3ನೇ ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗದ್ದುಗೆ ಏರಿರುವ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪೇಚಿಗೆ ಸಿಲುಕಿದ್ದಾರೆ. ಆಕ್ಸಿಜನ್​, ಔಷಧಿ, ವಿದೇಶದಿಂದ ವೈದ್ಯಕೀಯ ಉಪಕರಣ ಆಮದು ಸುಂಕ ವಿನಾಯ್ತಿ ಕೋರಿ ಸಿಎಂ ಮಮತಾ ಬ್ಯಾನರ್ಜಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​, ದೀದಿ ಕೇಳಿರುವ ವಸ್ತುಗಳ ಮೇಲಿನ ತೆರಿಗೆ ವಿನಾಯ್ತಿಯನ್ನು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ತೆರಿಗೆ ವಿನಾಯ್ತಿ ಕೊಟ್ಟಿದ್ದರೂ ಮತ್ತೇ ಅದನ್ನೇ ಉಲ್ಲೇಖಿಸಿ ಪತ್ರ ಬರೆದಿರೋದು ವ್ಯರ್ಥವಲ್ಲವೇ ಎಂದು ಭರ್ಜರಿಯಾಗೇ ತಿರುಗೇಟು ಕೊಟ್ಟಿದ್ದಾರೆ.


ಸಿಎಂ ಮಮತಾ ಬ್ಯಾನರ್ಜಿ ಪತ್ರಕ್ಕೆ ಸರಣಿ ಟ್ವೀಟ್​ಗಳ ಮೂಲಕ ಉತ್ತರಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ದಾಟಿ ವ್ಯಂಗ್ಯದಿಂದ ಕೂಡಿದೆ. ದೀದಿ ಪತ್ರದಲ್ಲಿ ಉಲ್ಲೇಖಿಸಿರುವ ವಸ್ತುಗಳಿಗೆ ಮೇ 3ರಿಂದಲೇ ಕೇಂದ್ರ ಸರ್ಕಾರ ತೆರಿಗೆ ವಿನಾಯ್ತಿ ನೀಡಿದೆ. ಅದನ್ನು ಸರಿಯಾಗಿ ಅರಿಯದೇ ಮತ್ತೆ ಅದೇ ವಸ್ತುಗಳನ್ನು ಉಲ್ಲೇಖಿಸಿ ತೆರಿಗೆ ವಿನಾಯ್ತಿ ಕೊಡಿ ಎಂದು ಕೇಳುತ್ತಿರುವುದು ತಮಾಷೆಯಾಗಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವರಿಗೆ ತೆರಿಗೆ ವಿನಾಯ್ತಿ ಬಗ್ಗೆ ಗೊತ್ತೇ ಇಲ್ಲವೇ ಎಂಬ ದಾಟಿಯಲ್ಲಿ ಸೀತಾರಾಮನ್​ ಉತ್ತರಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ದೀದಿ ಈಗ ಪೇಚಿಗೆ ಸಿಲುಕಿದ್ದಾರೆ.


ಮಮತಾ ಬ್ಯಾನರ್ಜಿ ತಮ್ಮ ಪತ್ರದ ಮೂಲಕ ಬೇಡಿಕೆ ಇಟ್ಟಿದನ್ನು ಎಳೆ ಎಳೆಯಾಗಿ ವಿವರಿಸುತ್ತಾ ವಿತ್ತ ಸಚಿವೆ ತಿರುಗೇಟು ನೀಡಿದ್ದಾರೆ. ಪರೋಕ್ಷವಾಗಿ ನಿಮಗೆ ಕೇಂದ್ರ ಸರ್ಕಾರ ನೀಡಿರುವ ತೆರಿಗೆ ವಿನಾಯ್ತಿ ಅರ್ಥವಾದಂತೆ ಕಾಣುತ್ತಿಲ್ಲ. ಹೀಗಾಗಿ ವಿವರವಾಗಿ ನಾನು ಹೇಳುತ್ತಿದ್ದೇನೆ ಎಂಬ ದಾಟಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಕೊರೋನಾ ಸಂಬಂಧ ವಿದೇಶದಿಂದ ಆಮದು ಮಾಡಿಕೊಳ್ಳುವ ವೈದ್ಯಕೀಯ ಉಪಕರಣಗಳ ಮೇಲಿನ ಸುಂಕವನ್ನು ಕಡಿತಗೊಳಿಸಲಾಗಿದೆ. ನೀವು ಮತ್ತೆ ತೆರಿಗೆ ಕಡಿತಗೊಳಿಸಿ ಎಂದು ಮನವಿ ಪತ್ರ ಕಳುಹಿಸುವ ಅಗತ್ಯವಿರಲ್ಲಿಲ್ಲ ಎಂದಿದ್ದಾರೆ.



ಸಿಎಂ ಮಮತಾ ಬ್ಯಾನರ್ಜಿ ಮನವಿ ಮಾಡಿರುವ ಆಮದು ಸುಂಕ ಕಡಿತ, GST ಹಾಗೂ ಆರೋಗ್ಯ ಸೆಸ್​​ನ್ನು ಮೇ 3ರಿಂದಲೇ ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಆಕ್ಸಿಜನ್​ ಸಿಲಿಂಡರ್​, ಆಮ್ಲಜನಕ ಉತ್ಪಾದನ ಘಟಕ, ಸಂಗ್ರಹಣೆ ಮತ್ತು ಸಾಗಾಣೆಗೆ ಬಳಸುವ ಉಪಕರಣಗಳು, ಆಕ್ಸಿಜನ್​ ಕಾನ್ಸಂಟ್ರೇಟರ್​, ವೆಂಟಿಲೇಟರ್​ ಸೇರಿದಂತೆ ಸೋಂಕಿತರ ಚಿಕಿತ್ಸೆಗೆ ಬಳಸುವ ಎಲ್ಲಾ ಉಪಕರಣಗಳ ಮೇಲಿನ ತೆರಿಗೆಯನ್ನೂ ಕಡಿತಗೊಳಿಸಲಾಗಿದೆ. ಬಂಗಾಳ ಸರ್ಕಾರ ಈಗ ಸಲ್ಲಿಸಿರುವ ಎಲ್ಲಾ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಮೊದಲೇ ಈಡೇರಿಸಿದೆ ಎಂದು 15 ಟ್ವೀಟ್​ಗಳ ಮೂಲಕ ಸೀತಾರಾಮನ್​ ಉತ್ತರಿಸಿದ್ದಾರೆ. ಸದಾ ಕೇಂದ್ರ ಸರ್ಕಾರದ ವಿರುದ್ಧ ಉರಿ ಉರಿ ಎನ್ನುವ ದೀದಿಗೆ ಈಗ ಮುಖಭಂಗವಾದಂತೆ ಆಗಿದೆ. ಗೆದ್ದು ಬೀಗುತ್ತಿದ್ದ ದೀದಿಗೆ ಬಿಜೆಪಿಯ ಮಹಿಳಾ ನಾಯಕಿ ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

Published by:Kavya V
First published: