ನವದೆಹಲಿ (ಫೆ.1): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2021-22ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಬಜೆಟ್ ಮಂಡನೆ ಬಳಿಕ ಅವರು ಮೊದಲು ಸಿಎನ್ಎನ್ ನ್ಯೂಸ್ 18ಗೆ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿದರು. ನೆಟ್ವರ್ಕ್ 18 ಸಂಪಾದಕರಾದ ರಾಹುಲ್ ಜೋಷಿ ಅವರೊಡನೆ ತಾವು ಮಂಡಿಸಿದ ಬಜೆಟ್ ಕುರಿತು ಮಾತನಾಡಿದ ಅವರು, ಆರ್ಥಿಕ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಇದೊಂದು ಐತಿಹಾಸಿಕ ಬಜೆಟ್ ಆಗಿದೆ ಎಂದು ತಿಳಿಸಿದರು. ಬಜೆಟ್ನ ಮೂರು ಪ್ರಮುಖ ಅಂಶಗಳು ಕುರಿತು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇಂದ್ರ ಬಜೆಟ್ನ ಉದ್ದೇಶ ಅರ್ಥವಾಗಿದೆ ಎಂದು ಭಾವಿಸುತ್ತೇನೆ. ದೇಶ ಕೂಡ ಇದನ್ನು ಒಪ್ಪಿಕೊಳ್ಳಬೇಕು ಎಂದು ಬಯಸುತ್ತೇವೆ ಎಂದರು. ಕೋವಿಡ್ ನಿಂದಾಗಿ ನಾವು ಜೆಚ್ಚಿನ ಸಂಪನ್ಮೂಲ ಹರಿವಿರಲಿಲ್ಲ. ಇಂತಹ ಸಮಯದಲ್ಲಿ ನಾವು ಪರಿಹಾರ ಪ್ಯಾಕೇಜ್ ಅವಶ್ಯಕವಾಗಿದೆ ಎಂದರು. ಇದೇ ವೇಳೆ ಬ್ಯಾಂಕ್ಗಳ ಖಾಸಗೀಕರಣ ಕುರಿತು ಮಾತನಾಡಿದ ಅವರು, ಇದರಿಂದ ಬ್ಯಾಂಕ್ಗಳಿಗೆ ಲಾಭಾವಾಗಲಿದ್ದು, ಅದರ ಕಾರ್ಯಚರಣೆಯಲ್ಲಿ ಇನ್ನಷ್ಟ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೋವಿಡ್ನಿಂದಾಗಿ ಬೇಡಿಕೆಯನ್ನು ಹೆಚ್ಚಿಸುವುದು ಅಗತ್ಯವಾಗಿತ್ತು. ಖರ್ಚಿನೊಂದಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದಕ್ಕೆ ಪ್ರಚೋದನೆ ಅಗತ್ಯವಾಗಿದ್ದು, ಗುಣಮಟ್ಟದ ವೆಚ್ಚವನ್ನು ನೋಡುತ್ತಿದ್ದೇವೆ. ಜೊತೆಗೆ ಗುಣಾತ್ಮಕ ವೆಚ್ಚವನ್ನು ಮೇಲ್ವಿಚಾರಣೆ ಮಾಡುವ ಬಜೆಟ್ನ್ನು ವಿನ್ಯಾಸಗೊಳಿಸಿದ್ದೇವೆ. ಇದರಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದರು.
News18 पर निर्मला सीतारामन
'माँग को बढ़ाना ज़रूरी था, खर्च के साथ माँग बढ़ेगी' -निर्मला सीतारामन, वित्त मंत्री#Budget2021 #FinanceMinister #बजट2021 #NirmalaSitharaman #Economy #India @nsitharaman @18RahulJoshi pic.twitter.com/KlkKs4sBvx
— News18 India (@News18India) February 1, 2021
ಕೊರೋನಾ ಸಾಂಕ್ರಾಮಿಕದ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೋನಾ ವಾರಿಯರ್ಸ್ಗಳು ದೇಶಕ್ಕಾಗಿ ಸೇವೆ ಸಲ್ಲಿಸಿದ್ದಾರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ