Nirmala Sitharaman: ಭಾರತೀಯರು ಸ್ವಿಸ್ ಬ್ಯಾಂಕ್​ಗಳಲ್ಲಿ ಇಟ್ಟಿರುವ ಹಣದ ಬಗ್ಗೆ ಮಾಹಿತಿಯಿಲ್ಲ; ನಿರ್ಮಲಾ ಸೀತಾರಾಮನ್

Indians Money In Swiss Bank: ಅಲ್ಲದೇ ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತೀಯರು ಠೇವಣಿ ಇಟ್ಟಿರುವ ಹಣ 2020ಕ್ಕಿಂತ 2021ರಲ್ಲೇ ಹೆಚ್ಚಾಗಿದೆ ಎಂದು ಕೆಲವು ಮಾಧ್ಯಮ ವರದಿಗಳನ್ನು ಉಲ್ಲೇಖಿಸ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

  • Share this:
    ದೆಹಲಿ: ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯ ನಾಗರಿಕರು ಮತ್ತು ಕಂಪನಿಗಳು ಠೇವಣಿ ಇಟ್ಟಿರುವ ಹಣದ ಬಗ್ಗೆ ಅಧಿಕೃತ ಅಂದಾಜು ಅಥವಾ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ (FM Nirmala Sitharaman) ಹೇಳಿದ್ದಾರೆ. ಲೋಕಸಭೆಯಲ್ಲಿ (Lok Sabha) ಅವರು ಈ ಕುರಿತು  ಲಿಖಿತ ಉತ್ತರ ನೀಡಿದ್ದಾರೆ. ಲೋಕಸಭೆಯಲ್ಲಿ ಸ್ವಿಸ್​ ಬ್ಯಾಂಕ್​ಗಳಲ್ಲಿ (Swiss Bank) ಭಾರತೀಯರು (Indians Money In Swiss Bank) ಮತ್ತು ಭಾರತದ ಕಂಪನಿಗಳು ಠೇವಣಿ ಇಟ್ಟಿರುವ ಕುರಿತು ಕೇಳಲಾದ ಪ್ರಶ್ನೆಗೆ ಸೋಮವಾರ (ಜುಲೈ 25) ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ನ ಈ ಉತ್ತರ ನೀಡಿದ್ದಾರೆ.

    ಅಲ್ಲದೇ ಸ್ವಿಸ್ ಬ್ಯಾಂಕ್​ಗಳಲ್ಲಿ ಭಾರತೀಯರು ಠೇವಣಿ ಇಟ್ಟಿರುವ ಹಣ 2020ಕ್ಕಿಂತ 2021ರಲ್ಲೇ ಹೆಚ್ಚಾಗಿದೆ ಎಂದು ಕೆಲವು ಮಾಧ್ಯಮ ವರದಿಗಳನ್ನು ಉಲ್ಲೇಖಿಸ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

    ಸ್ವಿಸ್ ನ್ಯಾಷನಲ್ ಬ್ಯಾಂಕ್ (SNB) ವಾರ್ಷಿಕ ಬ್ಯಾಂಕಿಂಗ್ ಅಂಕಿಅಂಶಗಳನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಭಾರತದ ನಿವಾಸಿಗಳು ಹೊಂದಿರುವ ಠೇವಣಿಗಳನ್ನು ವಿಶ್ಲೇಷಿಸಲು ಬಳಸಬಾರದು ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದರು ಎಂದು ಸಚಿವರು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

    ಭಯೋತ್ಪಾದನಾ ಕೃತ್ಯಗಳಿಗೆ ಕ್ರಿಪ್ಟೊಕರೆನ್ಸಿ ಬಳಕೆ ಆಗಬಹುದು
    ಭಾರತದಲ್ಲಿ ಈಗಾಗಲೇ ಅನಿಶ್ಚಿತವಾಗಿರುವ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯ (Cryptocurrency) ಮೇಲೆ ಮತ್ತಷ್ಟು ಅನಿಶ್ಚಿತತೆಯ ಕರಿ ನೆರಳು ಕವಿಯುತ್ತಿದೆ. ಭಾರತದಲ್ಲಿ ಕ್ರಿಪ್ಟೋ ಕರೆನ್ಸಿಗಳ ಅಧಿಕೃತತೆಯ ಕುರಿತು ಈ ಹಿಂದೆಯೇ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಕ್ರಿಪ್ಟೋಕರೆನ್ಸಿಯ ಸುತ್ತ ಇರುವ ದೊಡ್ಡ ಅಪಾಯವೆಂದರೆ ಮನಿ ಲಾಂಡರಿಂಗ್ ಮತ್ತು ಭಯೋತ್ಪಾದಕ ಶಕ್ತಿಗಳು ಸಮಾಜದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಹಣಕಾಸಿಗಾಗಿ ಬಳಸುವ ಸಾಧ್ಯತೆ ಎಂದು ಆತಂಕ ವ್ಯಕ್ತಪಡಿಸಿದರು. ಕ್ರಿಪ್ಟೋಕರೆನ್ಸಿಗಳಿಗೆ ತೆರಿಗಿ ವಿಧಿಸಿದರೂ ಇನ್ನೂ ಅಧಿಕೃತ ಹಣದ ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದಿತ್ತು.

    ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಭವಿಷ್ಯ ಏನಾಗಲಿದೆ?
    ಅಂತರಾಷ್ಟ್ರೀಯ ಹಣಕಾಸು ನಿಧಿಯ ಸೆಮಿನಾರ್ ಒಂದರಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ರಿಪ್ಟೋಕರೆನ್ಸಿಗಳನ್ನು ತಂತ್ರಜ್ಞಾನವನ್ನು ಬಳಸಿಕೊಂಡು ನಿಯಂತ್ರಣ ಮಾಡುವುದೊಂದೇ ಭವಿಷ್ಯದಲ್ಲಿ ಕೈಗೊಳ್ಳಬಹುದಾದ ಕ್ರಮವಾಗಿದೆ ಎಂದು ಭಾವಿಸಿರುವುದಾಗಿ ತಿಳಿಸಿದ್ದರು.

    ಇದನ್ನೂ ಓದಿ: Cryptocurrency: ಭಯೋತ್ಪಾದನಾ ಕೃತ್ಯಗಳಿಗೆ ಕ್ರಿಪ್ಟೊಕರೆನ್ಸಿ ಬಳಕೆ ಆಗಬಹುದು; ಸಚಿವೆ ನಿರ್ಮಲಾ ಸೀತಾರಾಮನ್

    ಕೊವಿಡ್ ಬಂದಿದ್ದರಿಂದ ಡಿಜಿಟಲ್ ಹಣಕಾಸು ಬೆಳೆಯಿತು
    ಡಿಜಿಟಲ್ ಜಗತ್ತಿನಲ್ಲಿ ಭಾರತದ ಕಾರ್ಯಕ್ಷಮತೆ ಮತ್ತು ಕಳೆದ ದಶಕದಲ್ಲಿ ಡಿಜಿಟಲ್ ಮೂಲಸೌಕರ್ಯ ಚೌಕಟ್ಟನ್ನು ನಿರ್ಮಿಸಲು ಸರ್ಕಾರದ ಪ್ರಯತ್ನಗಳನ್ನು ಸೀತಾರಾಮನ್ ವಿವರಿಸಿದರು. COVID-19 ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಡಿಜಿಟಲ್ ಅಳವಡಿಕೆ ದರದ ಹೆಚ್ಚಳವನ್ನು ಒತ್ತಿಹೇಳಿದರು.

    ಇದನ್ನೂ ಓದಿ: Cryptocurrency: ಭಯೋತ್ಪಾದನಾ ಕೃತ್ಯಗಳಿಗೆ ಕ್ರಿಪ್ಟೊಕರೆನ್ಸಿ ಬಳಕೆ ಆಗಬಹುದು; ಸಚಿವೆ ನಿರ್ಮಲಾ ಸೀತಾರಾಮನ್

    ದತ್ತಾಂಶ ಅಥವಾ ಅಂಕಿ ಅಂಶ ಹೇಳುವುದು ಹೀಗೆ
    "ನಾನು 2019 ರ ದತ್ತಾಂಶಗಳನ್ನು ವಿವರಿಸುವುದಾದರೆ ಭಾರತದಲ್ಲಿ ಡಿಜಿಟಲ್ ಅಳವಡಿಕೆ ದರವು ಸುಮಾರು 85 ಶೇಕಡಾ ಆಗಿತ್ತು. ಆದರೆ ಜಾಗತಿಕವಾಗಿ, ಅದೇ ವರ್ಷ ಇದು ಕೇವಲ 64 ಶೇಕಡಾದ ಸಮೀಪದಲ್ಲಿತ್ತು. ಆದ್ದರಿಂದ ಕೊವಿಡ್ ಸಾಂಕ್ರಾಮಿಕ ಸಮಯವು ಡಿಜಿಟಲ್ ಜಗತ್ತಿಗೆ ಭಾರತದ ಜನರನ್ನು ಪ್ರವೇಶಿಸಲು ಸಹಾಯ ಮಾಡಿತು. ಈ ಅವಧಿಯಲ್ಲಿ ಸಾಮಾನ್ಯ ಜನರು ಸಹ ಡಿಜಿಟಲ್ ಹಣಕಾಸು ಸೇವೆಗಳಿಗೆ ಒಗ್ಗಿಕೊಂಡಿದ್ದಾರೆ. ಇದು ವಾಸ್ತವದ ದತ್ತಾಂಶಗಳಲ್ಲೂ ಸಾಬೀತಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರತಿಪಾದಿಸಿದ್ದರು.
    Published by:guruganesh bhat
    First published: