ಕೇವಲ 1313 ರೂ.ಗೆ ವಿಮಾನ ಪ್ರಯಾಣ: ಗೊ ಏರ್​ ನೀಡಿದೆ ದೇಶ-ವಿದೇಶ ಸುತ್ತಲು ಭರ್ಜರಿ ಆಫರ್

ಈ ಬಾರಿ ಗೊ ಏರ್ ವಿಮಾನ ಸಂಸ್ಥೆ ಅಗ್ಗದ ಪ್ರಯಾಣದ ದರ ನಿಗದಿ ಪಡಿಸಿ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದೆ.

zahir | news18
Updated:November 7, 2018, 4:09 PM IST
ಕೇವಲ 1313 ರೂ.ಗೆ ವಿಮಾನ ಪ್ರಯಾಣ: ಗೊ ಏರ್​ ನೀಡಿದೆ ದೇಶ-ವಿದೇಶ ಸುತ್ತಲು ಭರ್ಜರಿ ಆಫರ್
ಈ ಬಾರಿ ಗೊ ಏರ್ ವಿಮಾನ ಸಂಸ್ಥೆ ಅಗ್ಗದ ಪ್ರಯಾಣದ ದರ ನಿಗದಿ ಪಡಿಸಿ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದೆ.
zahir | news18
Updated: November 7, 2018, 4:09 PM IST
-ನ್ಯೂಸ್ 18 ಕನ್ನಡ

ಹಬ್ಬದ ಸೀಸನ್​ ಬರುತ್ತಿದ್ದಂತೆ ಬಸ್​, ರೈಲು ಮತ್ತು ವಿಮಾನಗಳ ಪ್ರಯಾಣ ದರದಲ್ಲಿ ಏರಿಕೆ ಕಾಣುವುದು ಸಾಮಾನ್ಯವಾಗಿ ಬಿಟ್ಟಿದೆ.ಇದರಿಂದ ನಗರಗಳಿಂದ ತಮ್ಮ ಊರುಗಳಿಗೆ ತೆರಳುವ ಹೆಚ್ಚಿನ ಜನರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ ಈ ಬಾರಿ ಗೊ ಏರ್ ವಿಮಾನ ಸಂಸ್ಥೆ ಅಗ್ಗದ ಪ್ರಯಾಣದ ದರ ನಿಗದಿ ಪಡಿಸಿ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದೆ. ಕೇವಲ 1313 ರೂ.ಗೆ ದೇಶದ ಒಂದು ನಗರದಿಂದ ಮತ್ತೊಂದು ನಗರ ವಿಮಾನದಲ್ಲಿ ಪ್ರಯಾಣಿಸಬಹುದು.

ಬುಕ್ಕಿಂಗ್ ಯಾವಾಗ?

ಈ ಆಫರ್ ನವೆಂಬರ್ 5 ರಿಂದ ನ.18 ರವರೆಗೆ ಇರಲಿದ್ದು, ಈ ಸಮಯದಲ್ಲಿ ಟಿಕೆಟ್​ಗಳನ್ನು ಬುಕ್ ಮಾಡಿಕೊಳ್ಳಬಹುದು. 13ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿರುವ ಗೊ ಏರ್ ಕಂಪನಿ ಇದರ ಪ್ರಯುಕ್ತ 13 ಲಕ್ಷ ಟಿಕೆಟ್​ ಮೇಲೆ ಈ ಆಫರ್​ನ್ನು ಘೋಷಿಸಿದೆ.

ಎಲ್ಲೆಲ್ಲಿಗೆ ಪ್ರಯಾಣಿಸಬಹುದು?
ಕೇವಲ 1313 ರೂ. ಆಫರ್​​ನಲ್ಲಿ ನೀವು ಮುಂಬೈ, ದೆಹಲಿ, ಅಹಮದಾಬಾದ್, ವಡೋದರ, ಬೆಂಗಳೂರು, ಭುವನೇಶ್ವರ, ಚಂಡೀಘಢ, ಚೆನೈ, ಗೋವಾ, ಗೌಹಾತಿ, ಹೈದರಾಬಾದ್, ಜೈಪುರ, ಜಮ್ಮು, ಕೊಚ್ಚಿ, ಕೋಲ್ಕತಾ, ಲೇಹ್, ಲಕ್ನೋ, ಮಾಲ್ಡೀವ್ಸ್, ನಾಗ್ಪುರ, ಪಾಟ್ನಾ, ಫುಕೆಟ್ (ಥಾಯ್ಲೆಂಡ್), ಪೋರ್ಟ್ ಬ್ಲೇರ್, ಪುಣೆ, ರಾಂಚಿ, ಶ್ರೀನಗರ ಮತ್ತು ತಿರುವನಂತಪುರಂ ನಗರಗಳಿಗೆ ಪ್ರಯಾಣಿಸಬಹುದು.

ಷರತ್ತುಗಳೇನು?
Loading...

ಈ ವಿಶೇಷ ಆಫರ್​ನಲ್ಲಿ ಬುಕ್ ಮಾಡಲಾಗಿರುವ ಟಿಕೆಟ್​ಗಳನ್ನು ವರ್ಗಾಯಿಸುವಂತಿಲ್ಲ. ಹಾಗೆಯೇ ಬುಕ್ ಮಾಡಿದ ಟಿಕೆಟ್ ದರವನ್ನು ಮರುಪಾವತಿಸಲಾಗುವುದಿಲ್ಲ. ಅಲ್ಲದೆ ಪ್ರಯಾಣದ ದಿನಾಂಕವನ್ನು ಕೂಡ ಬದಲಿಸಲಾಗುವುದಿಲ್ಲ.

ಹೆಚ್ಚುವರಿ ಶುಲ್ಕ?
ಈ ಆಫರ್​ನಲ್ಲಿ ಪ್ರಯಾಣಿಕರು ಸಾಮಾನ್ಯ ಸರಕುಗಳನ್ನು ಮಾತ್ರ ಸಾಗಿಸಲು ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಹೆಚ್ಚುವರಿ ಸರಕುಗಳಿಗೆ ಪ್ರತ್ಯೇಕ ಶುಲ್ಕಗಳನ್ನು ವಿಧಿಸಲಾಗುತ್ತದೆ. ಅಲ್ಲದೆ ಇದಕ್ಕೆ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ. ಈ ಹಿಂದೆ ಬುಕ್ ಮಾಡಿದ ಯಾವುದೇ ಟಿಕೆಟ್​ಗಳಿಗೆ ಈ ಆಫರ್ ಅನ್ವಯಿಸುವುದಿಲ್ಲ.ಇದನ್ನೂ ಓದಿ: ಏರ್​ಟೆಲ್​ ದೀಪಾವಳಿ ಧಮಾಕಾ: 90 ದಿನಗಳವರೆಗೆ ಅನಿಯಮಿತ ಕರೆ ಮತ್ತು ಉಚಿತ ಡೇಟಾ ಪಡೆಯಿರಿ..!

ಆನ್​ಲೈನ್​ ಬುಕ್ಕಿಂಗ್ ಹೇಗೆ?
ಈ ವಿಶೇಷ ರಿಯಾಯಿತಿಯ ಟಿಕೆಟ್​ಗಳನ್ನು https://www.goair.in/promotions/anniversary-offer/?utm_source=Twitter&utm_medium=cpc&utm_campaign=Anniversary%20Offer ಲಿಂಕ್​ಗೆ ಹೋಗಿ ಬುಕ್ ಮಾಡಿಕೊಳ್ಳಬಹುದು.

First published:November 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...