ಕೇರಳಕ್ಕೆ ಯುಎಇ 700 ಕೋಟಿ ನೆರವು; ಹಣ ಸ್ವೀಕಾರಕ್ಕೆ ಅಡ್ಡಿಯಾಗಲಿದೆಯಂತೇ ‘ಕೇಂದ್ರ ನೀತಿ’..!

Ganesh Nachikethu
Updated:August 22, 2018, 9:18 AM IST
ಕೇರಳಕ್ಕೆ ಯುಎಇ 700 ಕೋಟಿ ನೆರವು; ಹಣ ಸ್ವೀಕಾರಕ್ಕೆ ಅಡ್ಡಿಯಾಗಲಿದೆಯಂತೇ ‘ಕೇಂದ್ರ ನೀತಿ’..!
Ganesh Nachikethu
Updated: August 22, 2018, 9:18 AM IST
ನ್ಯೂಸ್​-18 ಕನ್ನಡ 

ಬೆಂಗಳೂರು(ಆಗಸ್ಟ್​​.22): ರಣ ಭೀಕರ ಜಲಪ್ರವಾಹಕ್ಕೆ ತುತ್ತಾಗಿ ಎಲ್ಲವನ್ನೂ ಕಳೆದುಕೊಂಡಿರುವ ಕೇರಳಕ್ಕೆ ಆಸರೆಯಾಗಿ ಯುಎಇ 700 ಕೋಟಿ ನೆರವು ಘೋಷಿಸಿದ್ದ ಬೆನ್ನಲ್ಲೇ  ಹಣ ಸ್ವೀಕರಿಸಲು ‘ಕೇಂದ್ರ ನೀತಿ’ ಅಡ್ಡಿ ಬರಲಿದೆ ಎಂಬ ಚರ್ಚೆ ನಡೆಯುತ್ತಿದೆ.

ಪ್ರಸ್ತುತ ಕೇಂದ್ರ ಸರ್ಕಾರದ ನೀತಿಯಲ್ಲಿ ಕೇರಳಕ್ಕೆ ಘೋಷಿಸಿರುವ ನೆರವು ಸ್ವೀಕಾರಕ್ಕೆ ಕೆಲವು ಅಡಚಣೆಗಳಿವೆ. ಸಾಲ ರೂಪದಲ್ಲಿ ಹಣ ತೆಗದುಕೊಳ್ಳಬಹುದೇ ಹೊರತು, ನೆರವು ರೀತಿಯಲ್ಲಿ ಪಡೆಯಲು ಸಾಧ್ಯವಿಲ್ಲ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಇನ್ನು ನೆರವು ಸ್ವೀಕರಿಸುವ ಮುನ್ನವೇ ರಾಜ್ಯ ಸರ್ಕಾರದ ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕು. ಬಳಿಕ ಹಣಕ್ಕೆ ತೊಂದರೆಯಾಗದಂತೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುಎಇ ನೆರವು ಕರಾರು ಪತ್ರಕ್ಕೆ ರಾಜ್ಯ ಸರ್ಕಾರ ಸಹಿ ಹಾಕಲು ಸಮ್ಮತಿ ಸೂಚಿಸಬೇಕು ಎನ್ನಲಾಗಿದೆ.

ಶತಮಾನದ ಮಹಾ ಪ್ರವಾಹಕ್ಕೆ ಬಲಿಯಾಗಿರುವ ಕೇರಳ ರಾಜ್ಯಕ್ಕೆ ಯುಎಇ 700 ಕೋಟಿ ಹಣಕಾಸಿನ ನೆರವು ನೀಡುವುದಾಗಿ ಹೇಳಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಈ ಬೆನ್ನಲ್ಲೇ ಕೇಂದ್ರ ನೀತಿ ಅಡ್ಡಿ ಸುದ್ದಿ ಕೇಳಿ ಕೂಡಲೇ ಸಿಪಿಎಂ ಸರ್ಕಾರಕ್ಕೆ ಆಘಾತ ಉಂಟಾಗಿದೆ ಎನ್ನುತ್ತಿವೆ ಮೂಲಗಳು.



ಪ್ರಧಾನಿ ಮೋದಿ 500 ಕೋಟಿ ಹಣ ನೆರವು ಘೋಷಿಸಿದ್ದಾರೆ. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಹಣ ಯಾವುದಕ್ಕೂ ಸಾಕಾಗುವುದಿಲ್ಲ. ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವ ಕಾರಣ ಮತ್ತಷ್ಟು ಪರಿಹಾರ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರದಂತೆ ಸಿಎಂ ಪಿಣರಾಯಿ ವಿಜಯನ್​ ಕೂಡ ಒತ್ತಾಯಿಸಿದ್ದರು.

ರಾಜ್ಯಕ್ಕೆ ಸಹಾಯ ನೀಡಲು ಹಲವರು ರಾಜ್ಯಗಳು ಮುಂದೆ ಬರುತ್ತಿವೆ. ವಿದೇಶಗಳು ತಮ್ಮ ನೆರವನ್ನು ನೀಡಿ ನೋವಿಗೆ ಸ್ಪಂದಿಸಿದ್ದಾರೆ, ಅರಬ್​ ಮತ್ತು ಗಲ್ಫ್​ ರಾಷ್ಟ್ರಗಳು ಪರಿಹಾರ ನಿಧಿಯನ್ನು ಒದಗಿಸುತ್ತಿದ್ದಾರೆ. ಅವರ ನೆರವಿಗೆ ನಾವು ಅಭಾರಿಗಳಾಗಿದೆ ಎಂದು ವಿಜಯನ್​ ತಿಳಿಸಿದರು.

ಸಂಕಷ್ಟದಲ್ಲಿದ್ದ ಕೇರಳಕ್ಕೆ ಯುಎಇ ನೆರವು ಘೋಷಣೆ ಮಾಡಿದೆ. ಬಳಿಕ ಸಿಎಂ ಪಿಣರಾಯಿ ವಿಜಯ್​ ಸೇರಿದಂತೆ ಹಲವು ರಾಜಕೀಯ ಗಣ್ಯರು ಶ್ಲಾಘಿಸಿದ್ಧಾರೆ. ಸದ್ಯ ಕೇಂದ್ರ ನೀತಿ ಹಣ ಪಡೆಯಲು ಅಡ್ಡಿಯಾಗುತ್ತಿದೆ ಎಂಬ ಚರ್ಚೆ ನಡೆಯುತ್ತಿದೆ. ಹೀಗಾಗಿ, ಕೇರಳ ಸರ್ಕಾರ ನೆರವು ಹಣ ಪಡೆಯಲು ಕೇಂದ್ರ ಅನುಮತಿ ನೀಡಲಿದೆಯಾ ಎನ್ನುವುದು ಕಾದು ನೋಡಬೇಕಿದೆ.
First published:August 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ