ಕೇರಳದಲ್ಲಿ ಮತ್ತೆ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾದ ಸರ್ಕಾರ

news18
Updated:August 19, 2018, 8:52 AM IST
ಕೇರಳದಲ್ಲಿ ಮತ್ತೆ ಭಾರೀ ಮಳೆಯಾಗುವ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಮುನ್ನೆಚ್ಚರಿಕಾ ಕ್ರಮಕ್ಕೆ ಮುಂದಾದ ಸರ್ಕಾರ
news18
Updated: August 19, 2018, 8:52 AM IST
ನ್ಯೂಸ್​18 ಕನ್ನಡ

ತಿರುವನಂತಪುರಂ (ಆ. 19): ಮಳೆಯ ಆರ್ಭಟಕ್ಕೆ ದೇವರನಾಡು ಕೇರಳ ಬಹುತೇಕ ಕೊಚ್ಚಿಹೋಗಿದೆ. ಕಳೆದ 15 ದಿನಗಳಿಂದ ಉಂಟಾಗಿರುವ ಪ್ರವಾಹದ ಹೊಡೆತಕ್ಕೆ ಅಲ್ಲಿನ ಜನರು ತತ್ತರಿಸಿಹೋಗಿದ್ದಾರೆ. ಈಗಾಗಲೇ ಸಾವಿರಾರು ಜನರನ್ನು ಹೆಲಿಕಾಪ್ಟರ್​ ಮೂಲಕ ಮತ್ತು ರಕ್ಷಣಾಪಡೆಗಳ ಸಿಬ್ಬಂದಿಯ ಸಹಾಯದಿಂದ ರಕ್ಷಿಸಲಾಗಿದ್ದರೂ ಸಾವಿನ ಸಂಖ್ಯೆ 357ಕ್ಕೆ ಏರಿಕೆಯಾಗಿದೆ. ಕಳೆದ 9 ದಿನಗಳಲ್ಲೇ 197 ಜನರು ಪ್ರವಾಹಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ. ನಿನ್ನೆ ಒಂದೇ ದಿನ 33 ಜನ ಸಾವಿಗೀಡಾಗಿದ್ದಾರೆ.

ತೀವ್ರ ಪ್ರವಾಹ ಪೀಡಿತ ಕೇರಳ ರಾಜ್ಯದ ಪ್ರದೇಶಗಳಿಂದ 10 ಸಾವಿರಕ್ಕೂ ಹೆಚ್ಚು ಜನರನ್ನು ಎನ್ ಡಿಆರ್​ಎಫ್ ಸಿಬ್ಬಂದಿ ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. ಒಟ್ಟು 58 ರಕ್ಷಣಾ ತಂಡ ಕಾರ್ಯಕ್ಕೆ ನಿಯೋಜಿತವಾಗಿದ್ದು ಅವರಲ್ಲಿ 55 ತಂಡಗಳು ಈಗಾಗಲೇ ಕಾರ್ಯನಿರತವಾಗಿವೆ.  ಒಟ್ಟು 10,467 ಮಂದಿಯನ್ನು ಮತ್ತು 12 ಪ್ರಾಣಿಗಳನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಿದ್ದಾರೆ. 159 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇಂದು ಕೂಡ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ.ಕೇರಳದಲ್ಲಿ ಇಂದು ಅಥವಾ ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.  ಹಾಗೇನಾದರೂ ಆದರೆ, ಸದ್ಯಕ್ಕೆ ವ್ಯವಸ್ಥೆ ಮಾಡಿರುವ ನಿರಾಶ್ರಿತ ಕೇಂದ್ರಗಳ ಮೇಲೂ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಹಾಗಾಗಿ, ಕಾಸರಗೋಡು ಮತ್ತು ತಿರುವನಂತಪುರ ಹೊರತುಪಡಿಸಿ ಬೇರೆಲ್ಲಾ ಜಿಲ್ಲೆಗಳಿಗೆ ತೀವ್ರ ಕಟ್ಟೆಚ್ಚರ ವಿಧಿಸಲಾಗಿದೆ. ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.


Loading...

ದೇಶ-ವಿದೇಶದಿಂದ ನೆರವಿನ ಹಸ್ತ:

ಪ್ರವಾಸೋದ್ಯಮವನ್ನೇ ಪ್ರಮುಖ ಆದಾಯಮೂಲವನ್ನಾಗಿಸಿಕೊಂಡಿರುವ ಕೇರಳ ಬಹುತೇಕ ಪ್ರವಾಸಿ ಸ್ಥಳಗಳು ಮುಳುಗಡೆಯಾಗಿವೆ, ಮನೆಗಳು ಕೊಚ್ಚಿಹೋಗಿವೆ. ಇಲ್ಲಿನ ಅಲುವಾ, ಚಲಕುಡಿ, ಚೆಂಗನ್ನೂರ್​, ಅಲಪ್ಪುಳ, ಪಠನಾಂತಿಟ್ಟ ಮುಂತಾದ ಪ್ರದೇಶಗಳು ಅತಿಹೆಚ್ಚು ಹಾನಿಗೊಳಗಾಗಿವೆ. ಕೇರಳ ಸರ್ಕಾರದಿಂದ ಈಗಾಗಲೇ ನೂರಾರು ಗಂಜಿಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್​,ಪ್ರಧಾನಿ ಮೋದಿ ಈಗಾಗಲೇ ವೈಮಾನಿಕ ಸಮೀಕ್ಷೆ ನಡೆಸಿ ತುರ್ತು ಪರಿಹಾರ ಮೊತ್ತವನ್ನು ಘೋಷಿಸಿದ್ದಾರೆ.ನಿನ್ನೆ ಛತ್ತೀಸ್​ಗಢದ ಮುಖ್ಯಮಂತ್ರಿ ಕೂಡ 7.5 ಕೋಟಿ ಮೌಲ್ಯದ ಅಕ್ಕಿಯನ್ನು ಒದಗಿಸುವುದಾಗಿ ಘೋಷಿಸಿದ್ದಾರೆ. ಜೊತೆಗೆ, 3 ಲಕ್ಷ ಹಣ ಮತ್ತು ಅಗತ್ಯವಿದ್ದರೆ ತಮ್ಮ ರಾಜ್ಯದಿಂದ ವೈದ್ಯರು, ರಕ್ಷಣಾ ಸಿಬ್ಬಂದಿಯನ್ನು ಕಳುಹಿಸಿವುದಾಗಿ ಭರವಸೆ ನೀಡಿದ್ದಾರೆ.ದೇಶ-ವಿದೇಶದ ಹಲವು ಭಾಗಗಳಿಂದ ಪ್ರವಾಹಪೀಡಿತ ಪ್ರದೇಶಗಳ ನಿರಾಶ್ರಿತರಿಗೆ ಊಟ, ಅಗತ್ಯವಸ್ತುಗಳು, ಆರ್ಥಿಕ ಸಹಾಯ ಹರಿದುಬರುತ್ತಿದೆ. ಇಂದು ಬೆಳಗ್ಗೆ ಕತಾರ್​ ಸರ್ಕಾರ ಕೂಡ ಕೇರಳದ ಸಂತ್ರಸ್ತರಿಗೆ 5 ಮಿಲಿಯನ್​ ಡಾಲರ್​ ಹಣ ಸಹಾಯ ನೀಡುವುದಾಗಿ ಘೋಷಿಸಿದೆ. ನಿನ್ನಯ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ 500 ಕೋಟಿ ಹೆಚ್ಚುವರಿ ಪರಿಹಾರ ಹಣ ಘೋಷಣೆ ಮಾಡಿದ್ದಾರೆ. ಕೇರಳದಲ್ಲಿ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸುರಕ್ಷಿತವಾಗಿಡಲು ಯಾವ ಸ್ಥಳವಿದೆ ಎಂದು ಹುಡುಕಾಟ ನಡೆಸುವಂತಾಗಿದೆ. ಕೇರಳಕ್ಕೆ ಕೇರಳವೇ ಮಹಾಮಳೆಯ ಅಬ್ಬರಕ್ಕೆ ಅದುರಿಹೋಗಿದೆ.

 

 
First published:August 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...