HOME » NEWS » National-international » FLIPKART LIKELY TO BAG CLEARTRIP FOR 40 MILLION DOLLAR IN DISTRESS SALE STG HG

ಆನ್​ಲೈನ್​ ಉದ್ಯಮದಲ್ಲಿ ಫ್ಲಿಪ್‌ಕಾರ್ಟ್‌ ಸಿಂಹ ಹೆಜ್ಜೆ : 40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್​ಟ್ರಿಪ್ Flipkart‌ ಪಾಲು?

FLIPKART: ಮುಂಬೈನಲ್ಲಿ 2006 ರಲ್ಲಿ ಪ್ರಾರಂಭವಾಗಿ 15 ವರ್ಷದಿಂದ ಅಸ್ತಿತ್ವದಲ್ಲಿರುವ ಕ್ಲೀಯರ್​ಟ್ರಿಪ್ ಇಲ್ಲಿಯವರೆಗೂ ಸಾಕಷ್ಟು ಯಶಸ್ಸನ್ನು ತನ್ನ ಮುಡಿಗೇರಿಸಿಕೊಂಡಿದೆ. 40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್​ಟ್ರಿಪ್ ಅನ್ನು ವಾಲ್ ಮಾರ್ಟ್ ಒಡೆತನದ ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ತನ್ನ ಬ್ಯುಸಿನೆಸ್ ಅಂಗಳಕ್ಕೆ ತೆಗೆದುಕೊಳ್ಳಲು ಸಜ್ಜಾಗಿದೆ.

news18-kannada
Updated:April 15, 2021, 3:09 PM IST
ಆನ್​ಲೈನ್​ ಉದ್ಯಮದಲ್ಲಿ ಫ್ಲಿಪ್‌ಕಾರ್ಟ್‌ ಸಿಂಹ ಹೆಜ್ಜೆ : 40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್​ಟ್ರಿಪ್ Flipkart‌ ಪಾಲು?
ಫ್ಲಿಪ್​ಕಾರ್ಟ್​
  • Share this:
ಕೋವಿಡ್ 19 ಹೊಡೆತಕ್ಕೆ ದೊಡ್ಡ ದೊಡ್ಡ ಕಂಪನಿಗಳು ಸಹ ಧೂಳಿಪಟವಾಗುತ್ತಿದೆ. ಹೀಗಿರುವಾಗ ಸಣ್ಣ ಕಂಪನಿಗಳ ಕಥೆ ಕೇಳುವುದಾದರೂ ಹೇಗೆ? ಅದರಲ್ಲೂ ಕೋವಿಡ್‌ಗೂ ಮೊದಲು ಸ್ಟಾರ್ಟ್ ಅಪ್ ಯುಗವೆಂದೇ ಪರಿಗಣಿಸಿದ್ದ ಸಮಯದಲ್ಲಿ ಸ್ಟಾರ್ಟ್ ಕಂಪನಿಗಳು ಭಾರೀ ಹೊಡೆತವನ್ನು ಅನುಭವಿಸಿವೆ. ಮುಖ್ಯವಾಗಿ ಟ್ರಾವೆಲ್ ಏಜೆನ್ಸಿ, ಆನ್​ಲೈನ್ ಟ್ರಾವೆಲ್ಲಿಂಗ್ ಬುಕ್ಕಿಂಗ್ ಪಾಟ್ನರ್ಸ್‌ ಎಲ್ಲವೂ ಕೈ ಚೆಲ್ಲಿ ಕುಳಿತಿವೆ. ಸಂಸ್ಥೆಯನ್ನು ನಡೆಸಲಾಗದೇ, ಉದ್ಯೋಗಿಗಳನ್ನು ಪೋಷಿಸಲಾಗದೇ ದೈತ್ಯವಾಗಿ ಬೆಳೆದು ನಿಂತ ಸ್ಟಾರ್ಟ್ ಅಪ್‌ಗಳು ಇಂದು ದೊಡ್ಡ ಸಂಸ್ಥೆಗಳ ಪಾಲಾಗುತ್ತಿವೆ. ಕ್ಲೀಯರ್​ಟ್ರಿಪ್ ಈ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್‌ ಪಾಲಾಗಲು ಸಜ್ಜಾಗಿದೆ. ಹಾಗಾದರೇ ಈ ಬೆಳವಣಿಗೆ ಕ್ಲೀಯರ್​ಟ್ರಿಪ್ ಮೇಲೆ ಹೇಗೆ ಪರಿಣಾಮ ಬೀರಬಹುದು? ಫ್ಲಿಪ್‌ಕಾರ್ಟ್‌ನ ಡೀಲ್ ಏನಾಗಿರಬಹುದು? ಈ ರೀತಿಯಾದ ಎಷ್ಟು ಸ್ಟಾರ್ಟ್ಅಪ್‌ಗಳು ದೊಡ್ಡ ಸಂಸ್ಥೆಯ ಪಾಲಾಗುತ್ತಿವೆ ಅನ್ನೋದು ಆರ್ಥಿಕ ಲೋಕದಲ್ಲಿ ಹೊಸ ಲೆಕ್ಕಾಚಾರವನ್ನು ಹುಟ್ಟು ಹಾಕಿದೆ.

ಮುಂಬೈನಲ್ಲಿ 2006 ರಲ್ಲಿ ಪ್ರಾರಂಭವಾಗಿ 15 ವರ್ಷದಿಂದ ಅಸ್ತಿತ್ವದಲ್ಲಿರುವ ಕ್ಲೀಯರ್​ಟ್ರಿಪ್ ಇಲ್ಲಿಯವರೆಗೂ ಸಾಕಷ್ಟು ಯಶಸ್ಸನ್ನು ತನ್ನ ಮುಡಿಗೇರಿಸಿಕೊಂಡಿದೆ. 40 ಮಿಲಿಯನ್ ಡಾಲರ್ ಮೌಲ್ಯದ ಕ್ಲೀಯರ್​ಟ್ರಿಪ್ ಅನ್ನು ವಾಲ್ ಮಾರ್ಟ್ ಒಡೆತನದ ಭಾರತದ ಪ್ರಮುಖ ಇ-ಕಾಮರ್ಸ್ ಮಾರುಕಟ್ಟೆಯಾದ ಫ್ಲಿಪ್ ಕಾರ್ಟ್ ತನ್ನ ಬ್ಯುಸಿನೆಸ್ ಅಂಗಳಕ್ಕೆ ತೆಗೆದುಕೊಳ್ಳಲು ಸಜ್ಜಾಗಿದೆ. ಈ ವ್ಯವಹಾರವು ನಗದು-ಕಮ್-ಇಕ್ವಿಟಿ ಒಪ್ಪಂದವಾಗಿದೆ. ಕೋವೀಡ್ನ ಪರಿಣಾಮ ಸ್ವಂತ ಶ್ರಮದಿಂದ ಬೆಳೆದ ಕಂಪನಿ ಈ ರೀತಿಯಲ್ಲಿ ಕೈ ಬಿಟ್ಟು ಹೋಗುತ್ತಿರುವುದು ನೋವಿನ ಸಂಗತಿ. ಆದರೆ ಈ ಬಗ್ಗೆ ಫ್ಲಿಪ್‌ಕಾರ್ಟ್, ಕ್ಲಿಯರ್‌ಟ್ರಿಪ್ ಮತ್ತು ಅದರ ಹೂಡಿಕೆದಾರರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಕ್ಲೀಯರ್​ಟ್ರಿಪ್ ಶೀಘ್ರವೇ ತನ್ನ ಎಲ್ಲಾ ವ್ಯವಹಾರವನ್ನು ನಿಲ್ಲಿಸಿ ಕಂಪನಿಯನ್ನು ಲಾಕ್ ಮಾಡುವ ಹಂತದಲ್ಲಿತ್ತು. ಆದರೆ ಈಗ ಫ್ಲಿಪ್ ಕಾರ್ಟ್ ಮೂಲಕ ಟ್ರಾವೆಲ್ಲಿಂಗ್ ಮತ್ತು ಆತಿಥ್ಯ ಸೇವೆಯನ್ನು ಮುಂದುವರೆಸುವ ಹೊಸ ಬೆಳೆವಣಿಗೆ ಕಂಡು ಬಂದಿದೆ.

ಈಗಾಗಲೇ ಮಾತುಕತೆಗಳು ನಡೆಯುತ್ತಿದ್ದು, ಬಹು ಬೇಗ ವಹಿವಾಟು ಮುಕ್ತಾಯವಾಗುವ ನಿರೀಕ್ಷೆ ಇದೆ. ಒಪ್ಪಂದದ ನಿಖರವಾದ ನಿಯಮಗಳು ಇನ್ನೂ ಕಾರ್ಯರೂಪದಲ್ಲಿವೆ, ಬೇಗನೇ ಅದನ್ನು ಪ್ರಕಟಿಸುವ ನಿರೀಕ್ಷೆಯೂ ಇದೆ. ಭಾರತದ ಹೊರತಾಗಿ ಯುಎಇ, ಸೌದಿ ಅರೇಬಿಯಾ ಮತ್ತು ಈಜಿಪ್ಟ್‌ನಲ್ಲಿ ಕ್ಲಿಯರ್ ಟ್ರಿಪ್ ಕಾರ್ಯನಿರ್ವಹಿಸುತ್ತದೆ.

ಇದರ ಪ್ರಮುಖ ಹೂಡಿಕೆದಾರರು ಕಾನ್‌ಕೂರ್ ಟೆಕ್ನಾಲಜೀಸ್, ಡಿಎಜಿ ವೆಂಚರ್ಸ್ ಮತ್ತು ಗುಂಡ್ ಇನ್ವೆಸ್ಟ್‌ಮೆಂಟ್ ಕಾರ್ಪೊರೇಶನ್. ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಸ್ಟುವರ್ಟ್ ಕ್ರೈಟನ್ 2006 ರಲ್ಲಿ ಕ್ಲಿಯರ್ ಟ್ರಿಪ್ ಅನ್ನು ಸ್ಥಾಪಿಸಿದರು. ಕ್ಲಿಯರ್‌ಟ್ರಿಪ್ ಸ್ಥಾಪಿಸುವ ಮೊದಲು, ಸ್ಟುವರ್ಟ್ ಅಬ್ಯಾಕಸ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ಸ್, ಏಷ್ಯಾದ ಪ್ರಮುಖ ಜಿಡಿಎಸ್ (ಜಾಗತಿಕ ವಿತರಣಾ ವ್ಯವಸ್ಥೆ), ದಕ್ಷಿಣ ಮತ್ತು ಪಶ್ಚಿಮ ಏಷ್ಯಾದಲ್ಲಿ ಕೆಲಸ ಮಾಡಿದ್ದರು ಕೂಡ.

ಇಲ್ಲಿಯವರೆಗೆ ಕ್ಲೀಯರ್​ಟ್ರಿಪ್ ಸುಮಾರು 70 ಮಿಲಿಯನ್ ಹೂಡಿಕೆದಾರರ ಬಂಡವಾಳವನ್ನು ಸಂಗ್ರಹಿಸಿದೆ ಮತ್ತು ಕೊನೆಯ ನಿಧಿಸಂಗ್ರಹವನ್ನು 2016 ರಲ್ಲಿ ಮಾಡಿತ್ತು. ಅದರ ಮೌಲ್ಯ 300 ಮಿಲಿಯನ್ ಡಾಲರ್ ಎಂದು ವರದಿಯಾಗಿದೆ.

ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಪೇಟಿಎಂನಂತಹ ದೈತ್ಯ ಕಂಪನಿಗಳು ಸೂಪರ್-ಆ್ಯಪ್ ತಂತ್ರದ ಮೂಲಕ ಚಿಲ್ಲರೆ ವ್ಯಾಪಾರ, ಆಹಾರ ವಿತರಣೆ, ಪಾವತಿ ಸೇವೆಗಳು ಮತ್ತು ಪ್ರಯಾಣದಂತಹ ಪ್ರತಿಯೊಂದು ವ್ಯಾಪಾರ ವಿಭಾಗದಲ್ಲೂ ತಮ್ಮ ಅಸ್ತಿತ್ವವನ್ನು ಹೊಂದಿದ್ದಾರೆ. ಅಮೆಜಾನ್ ಮತ್ತು ಪೇಟಿಎಂ ಸಹ ಆನ್‌ಲೈನ್ ಪ್ರಯಾಣ ವಿಭಾಗದಲ್ಲಿವೆ. ಮೇ 2019 ರಲ್ಲಿ, ಅಮೆಜಾನ್ ಇಂಡಿಯಾ ತನ್ನ ಪಾವತಿ ಸೇವೆಯಾದ ಅಮೆಜಾನ್ ಪೇಗೆ ಫ್ಲೈಟ್ ಬುಕಿಂಗ್ ಆಯ್ಕೆಯನ್ನು ಸೇರಿಸಲು ಕ್ಲಿಯರ್‌ಟ್ರಿಪ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ.ಫ್ಲಿಪ್‌ಕಾರ್ಟ್ ತನ್ನ ಬ್ಯುಸಿನೆಸ್ ಕ್ಷೇತ್ರವನ್ನು ದೈತ್ಯವಾಗಿ ವಿಸ್ತರಿಸಿಕೊಳ್ಳುತ್ತಿದೆ. ಮೇಕ್‌ ಮೈ ಟ್ರಿಪ್‌ನ ಸಹಭಾಗಿತ್ವದ ಮೂಲಕ 2018 ರಲ್ಲಿ ಟ್ರಾವೆಲ್ ಬುಕಿಂಗ್ ಅನ್ನು ಪರಿಚಯಿಸಿತ್ತು. ಆದರೆ ನಂತರ ಮುಂದಿನ ವರ್ಷ ಇಕ್ಸಿಗೋಗೆ ಬದಲಾಯಿತು. ಅಕ್ಟೋಬರ್ 2020 ರಲ್ಲಿ ಆದಿತ್ಯ ಬಿರ್ಲಾ ಫ್ಯಾಶನ್ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಶೇ 7.8 ರಷ್ಟು ಪಾಲನ್ನು 1,500 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತು. ಮೂರು ತಿಂಗಳ ಹಿಂದೆ ಡೆನಿಮ್ ಬ್ರಾಂಡ್ ಫ್ಲೈಯಿಂಗ್ ಮೆಷಿನ್ ಅರವಿಂದ್ ಯೂತ್ ಬ್ರಾಂಡ್ಸ್‌ ಅನ್ನು 260 ಕೋಟಿ ರೂ. ಗೆ ಖರೀದಿಸಿತ್ತು. ಸ್ಕ್ಯಾಪಿಕ್ ಮತ್ತು ಸೋಷಿಯಲ್ ಮೀಡಿಯಾ ಗೇಮಿಂಗ್ ಸ್ಟಾರ್ಟ್ ಅಪ್ ಮೆಕ್ ಮೋಚಾವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬ್ಯುಸಿನೆಸ್ ಕ್ಷೇತ್ರದ ಎಲ್ಲಾ ವಿಭಾಗದಲ್ಲೂ ತನ್ನ ಸಿಂಹ ಹೆಜ್ಜೆಯನ್ನೇ ಇಡಲು ಫ್ಲಿಪ್‌ಕಾರ್ಟ್ ಸಜ್ಜಾಗಿದೆ.

ಇದಿಷ್ಟೇ ಅಲ್ಲದೇ ಟ್ರಾವೆಲ್ಲಿಂಗ್, ಹಾಸ್ಪಿಟಾಲಿಟಿ ಜೊತೆಗೆ ವಿಮೆ ಕ್ಷೇತ್ರದಲ್ಲಿ ಗ್ರಾಹಕರ ಸ್ನೇಹಿಯಾಗಿ ಮುಂದುವರೆದಿದೆ. ಸೆಪ್ಟೆಂಬರ್ 2020 ರಲ್ಲಿ, ಫ್ಲಿಪ್‌ಕಾರ್ಟ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕಾಯ್ದಿರಿಸಿದ ವಿಮಾನಗಳಿಗೆ ಪ್ರಯಾಣ ವಿಮೆಯನ್ನು ಒದಗಿಸಲು ಲಿಬರ್ಟಿ ಜನರಲ್ ಇನ್ಶೂರೆನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತು.

ಫ್ಯಾಷನ್‌ನಂತಹ ಬ್ರಾಂಡ್‌ಗಳಲ್ಲಿ ಪ್ಯಾಂಟಲೂನ್‌, ಅಲೆನ್ ಸೋಲಿ, ಮತ್ತು ಪೀಟರ್ ಇಂಗ್ಲೆಂಡ್ ಎಲ್ಲದರಲ್ಲೂ ತನ್ನ ಛಾಯೆಯನ್ನು ಫ್ಲಿಪ್‌ಕಾರ್ಟ್ ಬೀರಿದೆ. ಮ್ಯಾಸ್ಕೆಟ್ರಿಪ್ ಪ್ರತಿಸ್ಪರ್ಧಿ ಐಬಿಬೊ ಗ್ರೂಪ್ ಅನ್ನು ನಾಸ್ಪರ್ಸ್ ಮತ್ತು ಟೆನ್ಸೆಂಟ್ ಬೆಂಬಲದೊಂದಿಗೆ ಸುಮಾರು 1.8 ಬಿಲಿಯನ್‌ ಡಾಲರ್‌ಗೆ ಫ್ಲಿಪ್‌ಕಾರ್ಟ್ ಸೆಳೆದಿದೆ. ಭಾರತೀಯ ಆನ್‌ಲೈನ್ ಪ್ರಯಾಣ ಉದ್ಯಮದಲ್ಲಿ ಫ್ಲಿಪ್‌ಕಾರ್ಟ್ ರೋಚಕ ಪ್ರಯಾಣ ಮುಂದುವರೆದಿದೆ. ಫ್ಲಿಪ್‌ಕಾರ್ಟ್ ಪ್ರತಿಸ್ಪರ್ಧಿಗಳಾದ ಮೇಕ್‌ ಮೈ ಟ್ರಿಪ್, ಯಾತ್ರಾ, ಬುಕಿಂಗ್.ಕಾಮ್, ಈಸ್‌ ಮೈಟ್ರಿಪ್ ಮತ್ತು ಐಪಿಒ-ಬೌಂಡ್ ಇಕ್ಸಿಗೋ ಟ್ರಾವೆಲ್ಲಿಂಗ್ ಸಾಮ್ರಾಜ್ಯದಲ್ಲಿ ಬದಲಾವಣೆಗಳಾಗಿವೆ.
First published: April 15, 2021, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories