Flipkart Jobs: ಸೆ.18ರಿಂದ ಬಿಗ್​​​ ಬಿಲಿಯನ್​ ಡೇಸ್ ಸೇಲ್​;​ 70 ಸಾವಿರ ಉದ್ಯೋಗ ಸೃಷ್ಟಿಸಿದ ಫ್ಲಿಪ್​ಕಾರ್ಟ್​!

Flipkart Big Billion Days sale: ಸೆ.18 ರಿಂದ ಬಿಗ್​ ಬಿಲಿಯನ್​ ಡೇಸ್​ ಸೇಲ್​ ಪ್ರಾರಂಭವಾಗಿಗುತ್ತಿದೆ. ಅದಕ್ಕೂ ಮುಂಚಿತಾವಗಿ ಗ್ರಾಹಕರಿಗೆ ತಮ್ಮಿಷ್ಟದ  ವಸ್ತುಗಳನ್ನು ಬುಕ್​ ಮಾಡುವ ಅವಕಾಶವನ್ನು ಕಲ್ಪಿಸಿದೆ.

news18-kannada
Updated:September 15, 2020, 5:26 PM IST
Flipkart Jobs: ಸೆ.18ರಿಂದ ಬಿಗ್​​​ ಬಿಲಿಯನ್​ ಡೇಸ್ ಸೇಲ್​;​ 70 ಸಾವಿರ ಉದ್ಯೋಗ ಸೃಷ್ಟಿಸಿದ ಫ್ಲಿಪ್​ಕಾರ್ಟ್​!
ಫ್ಲಿಪ್​ಕಾರ್ಟ್
  • Share this:
ಆನ್​ಲೈನ್​ ಮಾರಾಟ ಮಳಿಗೆಯಾದ ಫ್ಲಿಪ್​ಕಾರ್ಟ್​ ‘ಬಿಗ್​ ಬಿಲಿಯನ್​ ಡೇಸ್’​ ಸೇಲ್​ ಹಮ್ಮಿಕೊಂಡಿದೆ. ಸೆ.18ರಿಂದ ಸೇಲ್​ ಪ್ರಾರಂಭವಾಗಿ 20ರವರೆಗೆ ನಡೆಯಲಿದೆ. ಈ ಸಮಯದಲ್ಲಿ ಫ್ಲಿಪ್​​ಕಾರ್ಟ್​ ಸುಮಾರು 70 ಸಾವಿರದಷ್ಟು ಉದ್ಯೋಗವನ್ನ ಸೃಷ್ಟಿಮಾಡಿದೆ.

ಫ್ಲಿಪ್​ಕಾರ್ಟ್​ ಡೆಲಿವರಿ ಎಕ್ಸಿಕ್ಯೂಟಿವ್​, ಪಿಕ್ಕರ್​, ಪ್ಯಾಕರ್​ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಾಡುತ್ತಿದೆ. ಆ ಮೂಲಕ ಅಭ್ಯರ್ಥಿಗಳಿಗೆ ಉದ್ಯೋಗ ಸೃಷ್ಠಿಸಿದೆ. ಬಿಗ್​ ಸೇವಿಂಗ್​ ಡೇಸ್​ ಸಮಯದಲ್ಲಿ ಅನೇಕ ವಸ್ತುಗಳು ಮಾರಾಟವಾಗುತ್ತದೆ. 3 ಕೋಟಿಗೂ ಅಧಿಕ ಎಲೆಕ್ಟ್ರಾನಿಕ್​ ಉತ್ಪನ್ನಗಳನ್ನು ಈ ಸೇಲ್​ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗಿರುವಾಗ ಗ್ರಾಹಕರು ಖರೀದಿಸಿದ ವಸ್ತುಗಳನ್ನು ಪ್ಯಾಕ್​ ಮಾಡಲು, ಸರಿಯಾದ ಜಾಗಕ್ಕೆ ತಲುಪಿಸುವಂತಹ ಕೆಲಸಗಳಿರುತ್ತದೆ.

ಸೆ 18 ರಿಂದ ಬಿಗ್​ ಬಿಲಿಯನ್​ ಡೇಸ್​ ಸೇಲ್​ ಪ್ರಾರಂಭವಾಗಿಗುತ್ತಿದೆ. ಅದಕ್ಕೂ ಮುಂಚಿತಾವಗಿ ಗ್ರಾಹಕರಿಗೆ ತಮ್ಮಿಷ್ಟದ  ವಸ್ತುಗಳನ್ನು ಬುಕ್​ ಮಾಡುವ ಅವಕಾಶವನ್ನು ಕಲ್ಪಿಸಿದೆ. ಇಂದಿನಿಂದ ಕೆಲವು ವಸ್ತುಗಳನ್ನು ಕೇವಲ 1 ರೂ.ಗೆ ಬುಕ್​ ಮಾಡಬಹುದಾಗಿದೆ. ಸೆ.20ರಂದು ಸೇಲ್ ಕೊನೆಗೊಳ್ಳಲಿದೆ

ಬಿಗ್​ ಬಿಲಿಯನ್​ ಡೇಸ್​ ಸೇಲ್​ನಲ್ಲಿ ಗ್ರಾಹಕರಿಗೆ ಎಕ್ಸ್​ಚೇಂಜ್​​ ಆಫರ್ ಅನ್ನು ನೀಡುತ್ತಿದೆ. ಕಡಿಮೆ ಬೆಲೆಗೆ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು, ಸ್ಮಾರ್ಟ್​ಫೋನ್​ಗಳನ್ನು ಕೊಂಡುಕೊಳ್ಳಬಹುದಾಗಿದೆ. ಐಫೋನ್ ಎಕ್ಸ್ಆರ್ 44,999 ರೂ.ಗೆ ಮಾರಾಟ ಮಾಡುತ್ತಿದೆ. ಐಫೋನ್ ಎಸ್ಇ 36,999 ರೂ, ಒಪ್ಪೋ ರೆನೋ ಮೇಲೆ 10 ಸಾವಿರ ಡಿಸ್ಕೌಂಟ್ ನೀಡುತ್ತಿದೆ. ಇನ್ನು ಆ್ಯಪಲ್ ಹೋಮ್​ಪ್ಯಾಡ್ 18, 900 ರೂ., ಗೂಗಲ್ ಹೋಮ್ ಮಿನಿ 2,299 ರೂ.ಗೆ ಮಾರಾಟ ಮಾಡುತ್ತಿದೆ. ಲ್ಯಾಪ್​ಟಾಪ್​​ , ವೈರ್​ಲೆಸ್​​ ಸ್ಪೀಕರ್, ಮೌಸ್, ಹೆಡ್​​ಫೋನ್​​ , ಪವರ್ ಬ್ಯಾಂಕ್, ಕೇಬಲ್ ಕಡಿಮೆ ಬೆಲೆಗೆ ಗ್ರಾಹಕರಿಗೆ ಸಿಗಲಿದೆ.

ಫ್ಲಿಪ್​ಕಾರ್ಟ್​ ಬಿಗ್ ಸೇವಿಂಗ್ ಡೇಸ್ ಸೇಲ್​​ನಲ್ಲಿ ವಸ್ತುಗಳನ್ನ ಖರೀದಿಸುವ ಎಸ್​ಬಿಐ ಬಳಕೆದಾರಿಗಾಗಿ ಶೇ 10 ರಷ್ಟು ಡಿಸ್ಕೌಂಟ್ ಸಿಗಲಿದೆ. ಎಸ್​ಬಿಐ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಸಿಕೊಂಡು ವಸ್ತುಗಳನ್ನು ಖರೀದಿಸಬಹುದಾಗಿದೆ.
Published by: Harshith AS
First published: September 15, 2020, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading