24.9 ಬಿಲಿಯನ್ ಡಾಲರ್ ಮೌಲ್ಯ ಹೆಚ್ಚಿಸಿಕೊಂಡ ಫ್ಲಿಪ್​ಕಾರ್ಟ್ ಸಂಸ್ಥೆ

2007 ರಲ್ಲಿ ಸ್ಥಾಪನೆಯಾದ ಫ್ಲಿಪ್‌ಕಾರ್ಟ್ ಸಮೂಹವು, ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್​ಗಳಾದ ಫೋನ್ ಪೇ, ಫ್ಯಾಶನ್ ಸ್ಪೆಷಾಲಿಟಿ, ಮತ್ತು ಇ-ಕಾರ್ಟ್ ಅನ್ನು ಒಳಗೊಂಡಿದೆ. ಮತ್ತು ದ್ವಿತೀಯ ಮತ್ತು ತೃತೀಯ ದರ್ಜೆಯ ಭಾರತದ ನಗರಗಳ ಕೊನೆಯ ಮೈಲಿಯವರೆಗೆ ಸರಕು ಸೇವೆಯನ್ನು ಒದಗಿಸುವ ಲಾಜಿಸ್ಟಿಕ್ಸ್ ಮತ್ತು ವಿತರಣಾ ಸಂಸ್ಥೆಯಾಗಿದೆ.

news18-kannada
Updated:July 14, 2020, 9:32 PM IST
24.9 ಬಿಲಿಯನ್ ಡಾಲರ್ ಮೌಲ್ಯ ಹೆಚ್ಚಿಸಿಕೊಂಡ ಫ್ಲಿಪ್​ಕಾರ್ಟ್ ಸಂಸ್ಥೆ
ಸಾಂದರ್ಭಿ ಚಿತ್ರ
  • Share this:
ಭಾರತ ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ಫ್ಲಿಪ್‌ಕಾರ್ಟ್ ಗ್ರೂಪ್ ತನ್ನ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಹೆಚ್ಚುವರಿ 1.2 ಬಿಲಿಯನ್ ಇಕ್ವಿಟಿ ಸ್ವತ್ತನ್ನು ಹೆಚ್ಚಿಸಿಕೊಂಡಿದೆ. ಫ್ಲಿಪ್​ಕಾರ್ಟ್​ನ ಬಹುಪಾಲು ಪಾಲುದಾರಿಕೆ ಹೊಂದಿರುವ ವಾಲ್​ಮಾರ್ಟ್​ ನೇತೃತ್ವದಲ್ಲಿ ಕಂಪನಿಯ ಇತರೆ ಷೇರುದಾರರು ಈ ಹೂಡಿಕೆ ಮಾಡಿದ್ದಾರೆ. ಇದರೊಂದಿಗೆ ಕಂಪನಿಯ ಮೌಲ್ಯ 24.9 ಬಿಲಿಯನ್ ಡಾಲರ್ ಆಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈ ಹಣವನ್ನು ಎರಡು ಕಂತುಗಳಲ್ಲಿ ನೀಡಲಾಗುವುದು.

ಇಂತಹ ಸವಾಲಿನ ಸಮಯದಲ್ಲಿ ನಾವು ನಮ್ಮ ಸಂಸ್ಥೆಯನ್ನು ಸದೃಢವಾಗಿ ಬೆಳೆಸುವುದಕ್ಕೆ ಮತ್ತು ಭಾರತೀಯರ ಅವಶ್ಯಕತೆಗಳನ್ನು ಪೂರೈಸುವಿಕೆ ಹೆಚ್ಚುತ್ತಿರುವುದರಿಂದ ನಮ್ಮ ಷೇರುದಾರರು ಬೆಂಬಲವಾಗಿ ನಿಂತಿದ್ದಕ್ಕೆ ಅವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಫ್ಲಿಪ್​ಕಾರ್ಟ್​ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ನಲ್ಲಿ ವಾಲ್‌ಮಾರ್ಟ್‌ ಹೂಡಿಕೆ ಆರಂಭ ಆದಾಗಿನಿಂದಲೂ ನಮ್ಮ  ತಂತ್ರಜ್ಞಾನ, ಪಾಲುದಾರಿಕೆ ಮತ್ತು ಹೊಸ ಸೇವೆಗಳ ಮೂಲಕ ನಾವು ನಮ್ಮ ಕೊಡುಗೆಯನ್ನು ಹೆಚ್ಚು ವಿಸ್ತರಿಸಿಕೊಂಡಿದ್ದೇವೆ. ಇಂದು, ನಾವು ಎಲೆಕ್ಟ್ರಾನಿಕ್ಸ್ ಮತ್ತು ಫ್ಯಾಷನ್‌ನಲ್ಲಿ ಹೆಚ್ಚು ಮುನ್ನಡೆಯುತ್ತಿದ್ದೇವೆ. ಮತ್ತು ನಮ್ಮ ಗ್ರಾಹಕರಿಗೆ ತಡೆರಹಿತ ಪಾವತಿ ಮತ್ತು ವಿತರಣೆ ಇತರೆ ಸಾಮಾನ್ಯ ಸರಕು ವಿಭಾಗಗಳು ಮತ್ತು ದಿನಸಿಗಳಲ್ಲಿ ಪಾಲನ್ನು ಹೆಚ್ಚಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 200 ಮಿಲಿಯನ್ ಭಾರತೀಯ ವ್ಯಾಪಾರಿಗಳನ್ನು ಆನ್‌ಲೈನ್‌ ವ್ಯವಸ್ಥೆಯಡಿ ತರುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದೇವೆ ಎಂದು ಸಿಇಒ ತಿಳಿಸಿದ್ದಾರೆ.

ಇದನ್ನು ಓದಿ: ರಿಲಾಯನ್ಸ್​ ಮುಖ್ಯಸ್ಥ ಮುಖೇಶ್​ ಅಂಬಾನಿ ಈಗ ವಿಶ್ವದ ಆರನೇ ಶ್ರೀಮಂತ ವ್ಯಕ್ತಿ

2007 ರಲ್ಲಿ ಸ್ಥಾಪನೆಯಾದ ಫ್ಲಿಪ್‌ಕಾರ್ಟ್ ಸಮೂಹವು, ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್​ಗಳಾದ ಫೋನ್ ಪೇ, ಫ್ಯಾಶನ್ ಸ್ಪೆಷಾಲಿಟಿ, ಮತ್ತು ಇ-ಕಾರ್ಟ್ ಅನ್ನು ಒಳಗೊಂಡಿದೆ. ಮತ್ತು ದ್ವಿತೀಯ ಮತ್ತು ತೃತೀಯ ದರ್ಜೆಯ ಭಾರತದ ನಗರಗಳ ಕೊನೆಯ ಮೈಲಿಯವರೆಗೆ ಸರಕು ಸೇವೆಯನ್ನು ಒದಗಿಸುವ ಲಾಜಿಸ್ಟಿಕ್ಸ್ ಮತ್ತು ವಿತರಣಾ ಸಂಸ್ಥೆಯಾಗಿದೆ. ಫ್ಲಿಪ್​ಕಾರ್ಟ್​ನಲ್ಲಿ  ವಾಲ್​ಮಾರ್ಟ್​  16 ಬಿಲಿಯನ್​ ಹೂಡಿಕೆ ಮಾಡುವ ಮೂಲಕ ಕಂಪನಿಯ ಬಹುಪಾಲು ಷೇರಗಳನ್ನು ಹೊಂದಿದೆ.
Published by: HR Ramesh
First published: July 14, 2020, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading