ನವದೆಹಲಿ(ಮಾ.23): ನಾಗರೀಕ ವಿಮಾನಯಾನ ಸಚಿವಾಲಯ ವಿಮಾನಗಳ ಕನಿಷ್ಠ ಟಿಕೆಟ್ ದರವನ್ನು ಶೇಕಡಾ 5 ರಷ್ಟು ಹೆಚ್ಚಳ ಮಾಡಿದ್ದು ಈ ನಿಯಮ ತಕ್ಷಣವೇ ಜಾರಿಗೆ ಬರಲಿದೆ. ನಾಗರೀಕ ವಿಮಾನಯಾನ ಸಚಿವರಾದ ಹರ್ದೀಪ್ ಸಿಂಗ್ ಪೂರಿಯವರು ನಿರಂತರ ವೈಮಾನಿಕ ಇಂಧನ ದರದ ಏರಿಕೆಯ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಶುಕ್ರವಾರ ಟ್ವೀಟ್ ಮಾಡಿದ್ದಾರೆ.
'ಕಳೆದ ಕೆಲವು ದಿನಗಳಿಂದ ಬಹುತೇಕ ರಾಜ್ಯಗಳಲ್ಲಿ ಆರ್ ಟಿ ಮತ್ತು ಪಿಸಿಆರ್ ಪರೀಕ್ಷೆಗಳ ಕಠಿಣ ಕ್ರಮಗಳ ಕಾರಣ ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನದಲ್ಲಿ ಶೇಕಡಾ 80 ರಷ್ಟು ಪ್ರಯಾಣಿಕರನ್ನು ಮಾತ್ರ ಭರ್ತಿ ಮಾಡಬೇಕಿದೆ' ಎಂದು ಹರ್ದೀಪ್ ಸಿಂಗ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
'ನಿರಂತರವಾಗಿ ವೈಮಾನಿಕ ಇಂಧನ ದರದ ಏರಿಕೆ ಕಾರಣ ಶೇಕಡಾ 5 ರಷ್ಟು ಕನಿಷ್ಠ ಟಿಕೆಟ್ ದರ ಏರಿಕೆ ಮಾಡಿದ್ದು, ಗರಿಷ್ಠ ದರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ' ಎಂದು ಮತ್ತೊಂದು ಟ್ವಿಟ್ ಮಾಡಿದ್ದಾರೆ.
ವಿಮಾನ ಪ್ರಯಾಣದ ಟಿಕೆಟ್ ದರ ಎಷ್ಟಿದೆ?
ನಾಗರೀಕ ವಿಮಾನಯಾನ ಸಚಿವಾಲಯವು ಕೋವಿಡ್ 19 ಬಳಿಕ ದೇಶಿಯಾ ಮತ್ತು ಅಂತರಾಷ್ಟ್ರೀಯ ವಿಮಾನಗಳ ಪ್ರಯಾಣವನ್ನು ನಿರ್ಬಂಧಿಸಿತ್ತು. ಜೊತೆಗೆ ವಿಮಾನಯಾನದ ಅವಧಿಯನ್ನು ಆಧರಿಸಿ ಟಿಕೆಟ್ ಬೆಲೆ ಹೆಚ್ಚಳ ಮಾಡಲಾಗಿತ್ತು.
Coronavirus: ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಕೊರೋನಾ ದುಷ್ಪರಿಣಾಮ; ಜಾಗತಿಕ ಆತಂಕ
ಮೊದಲು 40 ನಿಮಿಷಗಳ ಅವಧಿಯ ಪ್ರಯಾಣಕ್ಕೆ ಶೇಕಡಾ 5 ರಷ್ಟು ಹೆಚ್ಚಳ ಮಾಡಿದೆ ಅಂದರೆ, 2,200 ರೂ ನಿಂದ 2,320 ರೂಗೆ ಏರಿಕೆ ಮಾಡಲಾಗಿದೆ. ಗರಿಷ್ಠ ದರ 7,800 ರೂಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಆ ನಂತರದಲ್ಲಿ 40-60 ನಿಮಿಷಗಳು, 60-90 ನಿಮಿಷಗಳು, 90-120ನಿಮಿಷಗಳು, 120- 150ನಿಮಿಷಗಳು , 150 -180 ನಿಮಿಷಗಳು, 180-210 ನಿಮಿಷಗಳ ಅವಧಿಯನ್ನು ಒಳಗೊಂಡ ವಿಮಾನಗಳನ್ನ ಸೇರಿಸಲಾಗಿದೆ.
ಬೆಲೆ ಹೆಚ್ಚಳದ ನಂತರ ಸಚಿವಾಲಯದ ಪ್ರಕಾರ ಕ್ರಮವಾಗಿ ಈ ಬ್ಯಾಂಡ್ಗಳಿಗೆ ಕನಿಷ್ಠ ಮತ್ತು ಗರಿಷ್ಠ ದರ ಈ ರೀತಿಯಾಗಿದೆ. 2,940 ಮತ್ತು 9,800 ರೂ. 3,465 ಮತ್ತು 11,700 ರೂ. 4,094 ಮತ್ತು 13,000 ರೂ. 5,250 ಮತ್ತು 16,900 ರೂ. 6,405 ಮತ್ತು 20,400 ರೂ. 7,560 ಮತ್ತು 24,200 ರೂ. ಈ ಪರಿಷ್ಕೃತ ದರದ ಪಟ್ಟಿವು ತಾತ್ಕಾಲಿಕವಾಗಿದ್ದು, ಮೊದಲಿನಿಂತೆ ವಿಮಾನಯಾನದ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಇದನ್ನು ಮುಂದುವರೆಸುವುದಿಲ್ಲವೆಂದು ಸಚಿವಾಲಯ ತಿಳಿಸಿದೆ.
ಏರ್ಲೈನ್ಸ್ಗಳಲ್ಲಿ ಶೇಕಡಾ 80 ರಷ್ಟು ಪ್ರಯಾಣಿಕರ ಮುಂದುವರಿಕೆ
ಕೋವಿಡ್ ಟೆಸ್ಟ್ ನಿಂದಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಕುಸಿತವಾಗಿರುವ ಕಾರಣ ದೇಶೀಯ ವಿಮಾನಗಳಲ್ಲಿ ಶೇಕಡಾ 80 ರಷ್ಟು ಮಾತ್ರ ಪ್ರಯಾಣಿಕರನ್ನು ಒಳಗೊಂಡಿರಬೇಕು ಎನ್ನುವ ನಿಯಮವನ್ನು ಮುಂದಿನ ಆದೇಶದವರೆಗೆ ಪಾಲನೆ ಮಾಡಲಾಗುತ್ತದೆ. ಮಾರ್ಚ್ನಲ್ಲಿನ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆಯನ್ನು ವಿಮರ್ಶೆ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಚಿಸದ ವಿಮಾನಯಾನ ಅಧಿಕಾರಿಯೊಬ್ಬರು ಮಾಹಿತಿಯನ್ನು ಹಂಚಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ