ಜುಲೈ 31ರವರೆಗೆ ದೆಹಲಿ, ಮುಂಬೈ ಸೇರಿ 6 ನಗರಗಳಿಂದ ಕೊಲ್ಕತ್ತಾಗೆ ವಿಮಾನ ಹಾರಾಟ ನಿಷೇಧ

ಈಗಾಗಲೇ ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಮತ್ತು ಅಹಮದಾಬಾದ್​ ನಗರಗಳಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳಿವೆ. ಹೀಗಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ಈ ನಗರಗಳಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು.

news18-kannada
Updated:July 17, 2020, 9:23 PM IST
ಜುಲೈ 31ರವರೆಗೆ ದೆಹಲಿ, ಮುಂಬೈ ಸೇರಿ 6 ನಗರಗಳಿಂದ ಕೊಲ್ಕತ್ತಾಗೆ ವಿಮಾನ ಹಾರಾಟ ನಿಷೇಧ
ಕೊಲ್ಕತ್ತಾ ವಿಮಾನ ನಿಲ್ದಾಣ
  • Share this:
ನವದೆಹಲಿ(ಜು.17):  ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಮತ್ತು ಅಹಮದಾಬಾದ್​​ ನಗರಗಳಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳಿಗೆ ಜುಲೈ 31ರವರೆಗೆ ತಾತ್ಕಾಲಿಕ ನಿಷೇಧವನ್ನು ವಿಸ್ತರಿಸಲಾಗಿದೆ.

ಕೊಲ್ಕತ್ತಾ ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಕೋರಿಕೆಯ ಮೇರೆಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರೋನಾ ಹರಡುವಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಹರಡುತ್ತಿರುವ ನಗರಗಳಿಂದ ವಿಮಾನಯಾನ ಹಾರಾಟವನ್ನು ನಿಷೇಧಿಸಲಾಗಿದೆ.

Bangalore Coronavirus: ಕೊರೋನಾ ಚಿಕಿತ್ಸೆಗೆ ಬೆಡ್ ಮೀಸಲಿಡುವ ವಿಚಾರ; ನಾಳೆ ಖಾಸಗಿ ಆಸ್ಪತ್ರೆಗಳ ಜೊತೆ ಸಿಎಂ ಯಡಿಯೂರಪ್ಪ ಸಭೆ

ಮೊದಲು ಪಶ್ಚಿಮ ಬಂಗಾಳ ಸರ್ಕಾರ ಜುಲೈ 4ರಂದು ವಿಮಾನಯಾನ ಹಾರಾಟ ನಿಷೇಧದ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಈ ಪ್ರಕಾರ ಜುಲೈ 6ರಿಂದ ಜುಲೈ 19ರವರೆಗೆ ವಿಮಾನಯಾನ ಹಾರಾಟ ನಿಷೇಧವಾಗಿತ್ತು. ಈಗಾಗಲೇ ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಮತ್ತು ಅಹಮದಾಬಾದ್​ ನಗರಗಳಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳಿವೆ. ಹೀಗಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ಈ ನಗರಗಳಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಪಶ್ಚಿಮ ಬಂಗಾಳ ಸರ್ಕಾರವು ಮಂಗಳವಾರ ಕಂಟೈನ್ಮೆಂಟ್​ ಜೋನ್​ಗಳಲ್ಲಿನ ಲಾಕ್​ಡೌನ್​ನ್ನು ಜುಲೈ 19ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು. ಈ ಕಂಟೈನ್ಮೆಂಟ್ ಜೋನ್​ಗಳು ಕೊಲ್ಕತ್ತಾ ನಗರದ ಸಮೀಪದಲ್ಲೇ ಇವೆ. ಜಲ್ಪೈಗುರಿ, ಮಾಲ್ದಾ, ಕೂಚ್​ ಬೆಹರ್, ರೈಗಂಜ್ ಮತ್ತು ಸಿಲಿಗುರಿ-ಈ ಪ್ರದೇಶಗಳನ್ನು ಕಂಟೈನ್ಮೆಂಟ್​ ಜೋನ್​ಗಳೆಂದು ಘೋಷಣೆ ಮಾಡಲಾಗಿದೆ.
Published by: Latha CG
First published: July 17, 2020, 9:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading