Andhra Temple: ದೇವರ ಒಡವೆ ಕದ್ದು ತಪ್ಪಿಸಿಕೊಳ್ಳುವಾಗ ಕಿಟಕಿಯಲ್ಲೇ ಸಿಕ್ಕಿಬಿದ್ದ ಕಳ್ಳ

ಶ್ರೀಕಾಕುಳಂ ಜಿಲ್ಲೆಯ ಜಾಮಿ ಎಲ್ಲಮ್ಮ ದೇವಸ್ಥಾನದಲ್ಲಿ ಪಾಪಾ ರಾವ್ ಎಂಬಾತ ಒಂಬತ್ತು ಗ್ರಾಂ ಬೆಳ್ಳಿಯನ್ನು ಕದ್ದೊಯ್ದಿದ್ದಾನೆ. ದೇವಸ್ಥಾನದ ಆವರಣದ ಗೋಡೆಗೆ ರಂಧ್ರ ಮಾಡಿ ದೇವಸ್ಥಾನದ ಒಳಗೆ ಪ್ರವೇಶಿಸಿ ವಾಪಸ್ ಹೋಗುವಾಗ ಗುಂಡಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಗೋಡೆಯಲ್ಲೇ ಸಿಕ್ಕಿಹಾಕಿಕೊಂಡ ಕಳ್ಳ

ಗೋಡೆಯಲ್ಲೇ ಸಿಕ್ಕಿಹಾಕಿಕೊಂಡ ಕಳ್ಳ

  • Share this:
ಶ್ರೀಕಾಕುಳಂ(ಏ.07): ದೇವಸ್ಥಾನಗಳಲ್ಲಿ (Temple) ಒಡವೆಯೋ, ಬೆಲೆಬಾಳುವ ವಸ್ತುವೋ ಕಾಣೆಯಾದಾಗ ದೇವರೇ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವುದನ್ನು ಕೇಳಿರಬಹುದು. ಆದರೆ ಇಲ್ಲಿ ಈ ರೀತಿಯ ಡಯಲಾಗ್​ಗೆ ಅವಕಾಶವಿಲ್ಲ. ಕದಿಯೋಕೆ ಬಂದ ಕಳ್ಳ ತಪ್ಪಿಸಿಕೊಳ್ಳವಾಗ ದೇವಸ್ಥಾನದ ಕಿಟಿಕಿಯಲ್ಲೇ ಸಿಕ್ಕಿಹಾಕಿಕೊಂಡಿದ್ದಾನೆ. ಕಳ್ಳ (Thief) ಮಾಲು ಸಮೇತ ಸಿಕ್ಕಿಬಿದ್ದಿದ್ದು ಆತನ ಫೊಟೋ ವೈರಲ್ (Viral) ಆಗಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಾಮಿ ಎಲ್ಲಮ್ಮ ದೇವಸ್ಥಾನದಿಂದ ಕಳ್ಳನೊಬ್ಬ ಒಂಬತ್ತು ಗ್ರಾಂ ಬೆಳ್ಳಿಯೊಂದಿಗೆ (Silver) ಪರಾರಿಯಾಗುತ್ತಿದ್ದಾಗ ಗೋಡೆಯ ಗುಂಡಿಯಲ್ಲಿ ಸಿಲುಕಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಶ್ರೀಕಾಕುಳಂ ಜಿಲ್ಲೆಯ ಕಂಚಿಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ದಾಖಲಾಗಿದೆ.

ಗೋಡೆಯನ್ನೇ ಕೊರೆದು ಬಂದಿದ್ದ ಕಳ್ಳ

ಶ್ರೀಕಾಕುಳಂ ಜಿಲ್ಲೆಯ ಜಾಮಿ ಎಲ್ಲಮ್ಮ ದೇವಸ್ಥಾನದಲ್ಲಿ ಪಾಪಾ ರಾವ್ ಎಂಬಾತ ಒಂಬತ್ತು ಗ್ರಾಂ ಬೆಳ್ಳಿಯನ್ನು ಕದ್ದೊಯ್ದಿದ್ದಾನೆ. ದೇವಸ್ಥಾನದ ಆವರಣದ ಗೋಡೆಗೆ ರಂಧ್ರ ಮಾಡಿ ದೇವಸ್ಥಾನದ ಒಳಗೆ ಪ್ರವೇಶಿಸಿ ವಾಪಸ್ ಹೋಗುವಾಗ ಗುಂಡಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ರೆಡ್​ಹ್ಯಾಂಡ್ ಸಿಕ್ಕಿಬಿದ್ದ

ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ಕಂಚಿಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಚಿರಂಜೀವಿ ತಿಳಿಸಿದ್ದಾರೆ.

ದೇವಿಯ ಮೂಗುತಿ ಹಾಗೂ ಇತರ ಬೆಳ್ಳಿಯ ಆಭರಣಗಳನ್ನು ಕಳ್ಳರು ಗುಂಡಿಯಿಂದ ಹೊರಗೆ ಎಸೆಯುತ್ತಿರುವುದು ಕಂಡುಬಂದಿದೆ ಎಂದು ದೇವಸ್ಥಾನದ ಮಾಲೀಕ ಯೆಲ್ಲಮ್ಮ ತಿಳಿಸಿದ್ದಾರೆ.

ಇದನ್ನೂ ಓದಿ: Exams: ಆನ್ಸರ್ ಪೇಪರ್​ನಲ್ಲಿ ರಾಜಕೀಯ ಪಕ್ಷದ ಘೋಷಣೆ, ಸಿಂಬಲ್ ಮಾಡಿದ್ರೆ ಬೀಳುತ್ತೆ ದುಬಾರಿ ದಂಡ

ಈ ರೀತಿಯ ಘಟನೆಗಳು ಹಿಂದೆಂದೂ ನಡೆದಿರಲಿಲ್ಲ. ಕಳ್ಳನು ರಂಧ್ರದ ಮೂಲಕ ಪ್ರವೇಶಿಸಿದನು. ಅವನು ಒಳಗೆ ಬಂದನು ಆದರೆ ಹೊರಗೆ ಹೋಗಲು ಸಾಧ್ಯವಾಗಲಿಲ್ಲ, ಅವನು ದೇವಿಯ ಮೂಗುತಿ ಮತ್ತು ಇತರ ಬೆಳ್ಳಿಯ ಆಭರಣಗಳನ್ನು ಹೊರಗೆ ಎಸೆಯುತ್ತಿದ್ದನು,”ಎಂದು ದೇವಾಲಯದ ಮಾಲೀಕರು ಹೇಳಿದರು.

ಪ್ರೀತಿಗಾಗಿ ಕಳ್ಳತನ

ಆತ ಮಾವನ ಮಗಳನ್ನು ಪ್ರೀತಿಸುತ್ತಾ (Love) ಇದ್ದ. ಆಕೆಯ ಹೃದಯ (Heart) ಕದ್ದಿದ್ದ. ಅಷ್ಟೇ ಆಗಿದ್ರೆ ಪರವಾಗಿ ಇರಲಿಲ್ಲ, ಆಕೆಯನ್ನೇ ಮದುವೆಯಾಗಿ (Marriage) ಸುಖವಾಗಿ ಇರಬಹುದಿತ್ತು. ಆದ್ರೆ ಆತ ಅದನ್ನ ಮಾಡಿಲ್ಲ. ಪ್ರೀತಿಸಿದ ಹುಡುಗಿಯನ್ನು ಹೇಗೆ ಖುಷಿಯಾಗಿ ಇರಿಸುವುದು ಅಂತ ಯೋಚಿಸಿದ. ಆಕೆಯನ್ನು ರಾಣಿ (Queen) ಹಾಗೆ ನೋಡಿಕೊಳ್ಳಬೇಕು ಅಂತ ಮಾಡಬಾರದ ಕೆಲಸಕ್ಕೆ ಕೈ ಹಾಕಿದ. ನಾನು ಏನೂ ಮಾಡೇ ಇಲ್ಲ ಎನ್ನುವಂತೆ ಇದ್ದ. ಇದೀಗ ಆತನನ್ನು ಪೊಲೀಸರು (Police) ಅರೆಸ್ಟ್ (Arrest) ಮಾಡಿದ್ದಾರೆ. ಮದುವೆ ಆಗಿ ಮಾವನ ಮನೆಗೆ ಹೋಗಬೇಕಿದ್ದವ, ಈಗ ಜೈಲು (Jail) ಸೇರಿದ್ದಾನೆ.

ಇದನ್ನೂ ಓದಿ: Morning Digest: ಹಿಂದೂ ಅಂತ ನಂಬಿಸಿ ಲವ್ ಜಿಹಾದ್! ಮತ್ತೆ ಜಾಸ್ತಿಯಾಗುತ್ತಾ ಸ್ಕೂಲ್ ಫೀಸ್? ಕೆಜಿಎಫ್‌ ಬಗ್ಗೆ ಉರ್ಫಿ ಹೇಳಿದ್ದೇನು?

ಬೆಂಗಳೂರಿನ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಅದೇ ಪೊಲೀಸ್ ಠಾಣೆ ವ್ಯಾಪ್ತಿಯ ನವೀನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ತಾನು ಪ್ರೀತಿಸಿದ ಮಾವನ ಮಗಳಿಗಾಗಿ ಖರ್ಚು ಮಾಡಲು ಹಾಗೂ ಶೋಕಿ ಜೀವನ ನಡೆಸಲು ಪರಿಚಯಸ್ಥರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ‌ ಮಾಡಿದ್ದ ನವೀನ್ ಕುಮಾರ್.

ನವೀನ್ ಆಗಾಗ ಮನೆಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಶಂಕೆ ವ್ಯಕ್ತಪಡಿಸಿ ನವೀನ್ ವಿರುದ್ಧ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ‌ ಇನ್ಸ್​​ಪೆಕ್ಟರ್ ಸದಾನಂದ ಸಿಸಿಟಿವಿ ದೃಶ್ಯಾವಳಿ ಆಧರಿಸಿ‌ ಆರೋಪಿಯನ್ನು ಬಂಧಿಸಿದ್ದಾರೆ. ಪ್ರೀತಿಸಿದ ಹುಡುಗಿಗಾಗಿ ಹಾಗೂ ಮೋಜಿನ ಜೀವನ ನಡೆಸಲು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Published by:Divya D
First published: