• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Mamata Banerjee: ಬಂಗಾಳದಲ್ಲಿ ಮುಗಿಯದ ಪಕ್ಷಾಂತರ ಪರ್ವ; ಟಿಎಂಸಿ ಪಕ್ಷದ ಓರ್ವ ಸಚಿವ ಸೇರಿ 4 ಜನ ಶಾಸಕರು ಬಿಜೆಪಿ ಕಡೆಗೆ!

Mamata Banerjee: ಬಂಗಾಳದಲ್ಲಿ ಮುಗಿಯದ ಪಕ್ಷಾಂತರ ಪರ್ವ; ಟಿಎಂಸಿ ಪಕ್ಷದ ಓರ್ವ ಸಚಿವ ಸೇರಿ 4 ಜನ ಶಾಸಕರು ಬಿಜೆಪಿ ಕಡೆಗೆ!

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಪಶ್ಚಮ ಬಂಗಾಳದ ಗೌರಾ ಎಂಬಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಅಸಲಿಗೆ ಈ 5 ಜನ ತೃಣಮೂಲ ಕಾಂಗ್ರೆಸ್​ ನಾಯಕರು ಇದೇ ರ‍್ಯಾಲಿಯಲ್ಲಿ ಅಮಿತ್​ ಶಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಬೇಕಿತ್ತು.

  • Share this:

    ಪಶ್ಚಿಮ ಬಂಗಾಳ (ಜನವರಿ 30): ಬಹು ನಿರೀಕ್ಷಿತ ಪಶ್ಚಿಮ ಬಂಗಾಳ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆದರೆ, ಬಂಗಾಳದಲ್ಲಿ ಈ ಭಾರಿ ಸಿಎಂ ಮಮತಾ ಬ್ಯಾನರ್ಜಿಯನ್ನು ಅಧಿಕಾರದಿಂದ ಇಳಿಸಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಲೇಬೇಕು ಎಂದು ಬಿಜೆಪಿ ಹೈಕಮಾಂಡ್​ ತಿರ್ಮಾನಿಸಿದೆ. ಇದೇ ಕಾರಣಕ್ಕೆ ಈವರೆಗೆ ಟಿಎಂಸಿ ಪಕ್ಷದ ಪ್ರಮುಖ ನಾಯಕ ಸುವೆಂದು ಅಧಿಕಾರಿ ಸೇರಿದಂತೆ ಸಾಕಷ್ಟು ಹಿರಿಯ ನಾಯಕರು ಮತ್ತು ಸಚಿವರನ್ನೇ ತನ್ನೆಡೆಗೆ ಸೆಳೆದು ಪಕ್ಷಾಂತರ ಮಾಡಿಸುತ್ತಿದೆ. ಕಳೆದ ವಾರ ಸಹ ಓರ್ವ ಕ್ಯಾಬಿನೆಟ್ ಸಚಿವ ಸೇರಿದಂತೆ 9 ಜನ ಬಿಜೆಪಿ ಪಾಲಾಗಿದ್ದರು. ಇದೀಗ ಈ ಸರಣಿ ಮುಂದುವರೆಯುತ್ತಿದ್ದು, ಟಿಎಂಸಿ ಪಕ್ಷದಿಂದ ಮತ್ತೆ ಅರಣ್ಯ ಸಚಿವ ರಾಜೀಬ್ ಬ್ಯಾನರ್ಜಿ ಸೇರಿದಂತೆ 5 ಜನ ನಾಯಕರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೂ ಮುನ್ನ ನಡೆಯುತ್ತಿರುವ ಪಕ್ಷಾಂತರದ ಪರ್ವ ಸದ್ಯಕ್ಕಂತು ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.


    ಟಿಎಂಸಿ ಪಕ್ಷದ ಕ್ಯಾಬಿನೆಟ್​ ಸಚಿವ ರಾಜೀಬ್ ಬ್ಯಾನರ್ಜಿ ಜೊತೆಗೆ ಬಾಲಿಯ ತೃಣಮೂಲ ಶಾಸಕ ಬೈಶಾಲಿ ದಾಲ್ಮಿಯಾ, ಉತ್ತರಪಾರ ಶಾಸಕ ಪ್ರಬೀರ್ ಘೋಶಾಲ್, ಹೌರಾ ಮೇಯರ್ ರತಿನ್ ಚಕ್ರವರ್ತಿ ಮತ್ತು ಮಾಜಿ ಶಾಸಕ ರಣಘಾಟ್ ಪಾರ್ಥ ಸಾರಥಿ ಚಟರ್ಜಿ ಇದೀಗ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಐದೂ ಜನ ನಾಯಕರು ಟಿಎಂಸಿ ಪಕ್ಷದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ ಎಂಬುದು ಉಲ್ಲೇಖಾರ್ಹ.


    ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಪಶ್ಚಮ ಬಂಗಾಳದ ಗೌರಾ ಎಂಬಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಅಸಲಿಗೆ ಎಲ್ಲಾ ಅಂದುಕೊಂಡತೆ ನಡೆದಿದ್ದರೆ, ಈ 5 ಜನ ತೃಣಮೂಲ ಕಾಂಗ್ರೆಸ್​ ನಾಯಕರು ಇದೇ ರ‍್ಯಾಲಿಯಲ್ಲಿ ಅಮಿತ್​ ಶಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಬೇಕಿತ್ತು. ಆದರೆ, ಈಗ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಎಲ್ಲಾ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಇವರನ್ನು ಬಿಜೆಪಿಗೆ ಬರಮಾಡಿಕೊಳ್ಳಲು ಸಿದ್ಧತೆ ನಡೆಸಲಾಗಿದೆ.


    ಈ ಕುರಿತು ಮಾತನಾಡಿರುವ ಸಚಿವ ರಾಜೀಬ್ ಬ್ಯಾನರ್ಜಿ, "ಅಮಿತ್​ ಶಾ ಅವರು ಈ ರ‍್ಯಾಲಿಯನ್ನು ಮುಗಿಸಿ ಕೂಡಲೇ ದೆಹಲಿಗೆ ತಲುಪುತ್ತಿರುವುದರಿಂದ ಹೌರಾದಲ್ಲಿ ನಾವು ಬಿಜೆಪಿಗೆ ಸೇರ್ಪಡೆಯಾಗಲು ಸಾಧ್ಯವಾಗುತ್ತಿಲ್ಲ. ಆದರೆ, ನಮ್ಮನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಸಲುವಾಗಿ ದೆಹಲಿಯ ಪ್ರಧಾನ ಕಚೇರಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ನಮಗೆ ಚಾರ್ಟಡ್​ ವಿಮಾನವನ್ನೂ ಸಹ ಏರ್ಪಾಟು ಮಾಡಲಾಗಿದೆ. ಈ ವಿಮಾನದ ಮೂಲಕ ಇಂದೇ (ಶನಿವಾರ) ಸಂಜೆ 4 ಗಂಟೆ ವೇಳೆಗೆ ಬಂಗಾಳದಿಂದ ಹೊರಡಲಿದ್ದೇವೆ" ಎಂದು ತಿಳಿಸಿದ್ದಾರೆ.


    ಇದನ್ನೂ ಓದಿ: ಪಕ್ಷಾಂತರವೇ ಮಾರಕವಾಯ್ತಾ ಬಂಗಾಳ ಬಿಜೆಪಿಗೆ? ಅಧಿಕಾರಕ್ಕಾಗಿ ಮೂಲ-ವಲಸಿಗರ ನಡುವೆ ಮಾರಾಮಾರಿ, ವಾಹನಗಳಿಗೆ ಬೆಂಕಿ!


    ಇದಲ್ಲದೆ, "ಹೌರಾದ ಡುಮುರ್ಜೋಲಾದಲ್ಲಿ ಭಾನುವಾರದ ಮೆಗಾ ಬಿಜೆಪಿ ರ‍್ಯಾಲಿ ನಿಗದಿಯಂತೆ ನಡೆಯಲಿದೆ, ಈ ರ‍್ಯಾಲಿಯಲ್ಲಿ ಕೇಂದ್ರ ನಾಯಕರಾದ ಸ್ಮೃತಿ ಇರಾನಿ ಸೇರಿದಂತೆ ಅನೇಕರು ವರ್ಚುವಲ್ ಆಗಿ ಭಾಗವಹಿಸಿದ್ದಾರೆ" ಎಂದು ರಾಜೀಬ್ ಬ್ಯಾನರ್ಜಿ ತಿಳಿಸಿದ್ದಾರೆ.


    ಕಳೆದ ಎರಡು ತಿಂಗಳಿನಿಂದ ಅನೇಕ ಟಿಎಂಸಿ ಪಕ್ಷದ ಪ್ರಮುಖ ನಾಯಕರು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಈ ಪಕ್ಷಾಂತರ ಪರ್ವ ಈವರೆಗೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಆದರೆ, ಟಿಎಂಸಿ ಪಕ್ಷದ ಅಧಿನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತ್ರ ಈ ಕುರಿತು ತಲೆ ಕೆಡಿಸಿಕೊಳ್ಳುತ್ತಿಲ್ಲ. "ಪಕ್ಷದಿಂದ ಹೊರ ನಡೆಯಲು ಇಚ್ಛಿಸುವವರು ಧಾರಾಳವಾಗಿ ಹೊರ ನಡೆಯಿರಿ. ಪ್ರಾಮಾಣಿಕ ಕಾರ್ಯಕರ್ತರು ಈ ಕುರಿತು ಹೆಚ್ಚು ತಲೆ ಕಡೆಸಿಕೊಳ್ಳದೆ ಚುನಾವಣೆಯತ್ತ ಗಮನಹರಿಸಿ" ಎಂದು ತಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.

    Published by:MAshok Kumar
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು