EXIT POLLS - ಐದು ರಾಜ್ಯಗಳ ಚುನಾವಣೆ: ಮತಗಟ್ಟೆ ಸಮೀಕ್ಷೆಗಳು ಪ್ರಕಟ – ಗೆಲ್ಲೋದ್ಯಾರು?

ರಾಜಸ್ಥಾನ ಹಾಗೂ ಮಧ್ಯಪ್ರದೇಶದಲ್ಲಿ ಬಹುತೇಕ ಸಮೀಕ್ಷೆಗಳು ಕಾಂಗ್ರೆಸ್ ಗೆಲುವನ್ನು ಸೂಚಿಸಿವೆ. ಛತ್ತೀಸ್​ಗಡವನ್ನು ಬಿಜೆಪಿ ಉಳಿಸಿಕೊಳ್ಳಬಹುದು. ತೆಲಂಗಾಣದಲ್ಲಿ ಟಿಆರ್​ಎಸ್ ಕೂಡ ಮತ್ತೆ ಅಧಿಕಾರ ಮುಂದುವರಿಸುವ ಸೂಚನೆಗಳನ್ನು ಈ ಸಮೀಕ್ಷೆಗಳು ತೋರ್ಪಡಿಸಿವೆ.

Vijayasarthy SN | news18
Updated:December 8, 2018, 12:03 PM IST
EXIT POLLS - ಐದು ರಾಜ್ಯಗಳ ಚುನಾವಣೆ: ಮತಗಟ್ಟೆ ಸಮೀಕ್ಷೆಗಳು ಪ್ರಕಟ – ಗೆಲ್ಲೋದ್ಯಾರು?
ಸಮೀಕ್ಷೆಯ ವಿವರ
Vijayasarthy SN | news18
Updated: December 8, 2018, 12:03 PM IST
ಬೆಂಗಳೂರು(ಡಿ. 07): ಮಧ್ಯಪ್ರದೇಶ, ಛತ್ತೀಸ್​ಗಡ, ರಾಜಸ್ಥಾನ, ತೆಲಂಗಾಣ ಮತ್ತು ಮಿಝೋರಾಂ ರಾಜ್ಯಗಳ ವಿಧಾನಸಭಾ ಚುನಾವಣೆ ಇವತ್ತಿಗೆ ಸಂಪೂರ್ಣಗೊಂಡಿದೆ. ಈ ಐದೂ ರಾಜ್ಯಗಳಲ್ಲಿ ಚುನಾವಣೋತ್ತರ ಸಮೀಕ್ಷೆ ಅಥವಾ ಮತಗಟ್ಟೆ ಸಮೀಕ್ಷೆಗಳನ್ನ ನಡೆಸಿ ಪ್ರಕಟಿಸಲಾಗಿದೆ. ವಿವಿಧ ಸಂಸ್ಥೆಗಳು ನಡೆಸಿರುವ ಈ ಮತಗಟ್ಟೆ ಸಮೀಕ್ಷೆಗಳಲ್ಲಿ ಕೆಲವು ವಿಭಿನ್ನ ಫಲಿತಾಂಶವನ್ನು ಸೂಚಿಸುತ್ತಿವೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್​ಗಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಹಣಾಹಣಿ ಇದ್ದು, ಫಲಿತಾಂಶ ಏನು ಬೇಕಾದರೂ ಆಗಬಹುದು ಎಂಬುದನ್ನು ಈ ಸಮೀಕ್ಷೆಗಳು ಸೂಚಿಸುತ್ತಿವೆ. ತೆಲಂಗಾಣದಲ್ಲಿ ಪ್ರಜಾಕೂಟಮಿಗೆ ಹಿನ್ನಡೆಯಾಗಿ, ಟಿಆರ್​ಎಸ್ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳು ತೋರುತ್ತಿವೆ. ಮಿಝೋರಾಮ್ ರಾಜ್ಯದಲ್ಲಿ ಕಾಂಗ್ರೆಸ್ ಸ್ವಲ್ಪ ಹಿನ್ನಡೆ ಹೊಂದಬಹುದು.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್​ಗಡ ಈ ಮೂರೂ ರಾಜ್ಯಗಳಲ್ಲಿ ಬಿಜೆಪಿಯೇ ಅಧಿಕಾರದಲ್ಲಿತ್ತು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಅಧಿಕಾರ ಬಿಟ್ಟುಕೊಟ್ಟರೆ ಅಚ್ಚರಿ ಇಲ್ಲ. ಛತ್ತೀಸ್​ಗಡ ಮಾತ್ರ ಬಿಜೆಪಿ ಪಾಲಿಗೆ ಉಳಿಯಬಹುದು ಎನ್ನುತ್ತವೆ ಈ ಸಮೀಕ್ಷೆಗಳು.

ಮಧ್ಯಪ್ರದೇಶ ಚುನಾವಣೆ ಮತಗಟ್ಟೆ ಸಮೀಕ್ಷೆಗಳು:

ಮಧ್ಯಪ್ರದೇಶದ ಒಟ್ಟು ಸ್ಥಾನಗಳು: 230

ಬಹುಮತಕ್ಕೆ: 119

ಸಿಎನ್​ಎಕ್ಸ್ ಸಮೀಕ್ಷೆ:
ಬಿಜೆಪಿ: 126
Loading...

ಕಾಂಗ್ರೆಸ್: 89
ಇತರೆ: 119

ನೇತಾ ಸಮೀಕ್ಷೆ:
ಬಿಜೆಪಿ: 106
ಕಾಂಗ್ರೆಸ್: 112
ಇತರೆ: 12

ಆಕ್ಸಿಸ್ ಸಮೀಕ್ಷೆ:
ಬಿಜೆಪಿ: 102-120
ಕಾಂಗ್ರೆಸ್: 104-122
ಬಿಎಸ್​ಪಿ: 1-3
ಇತರೆ: 3-8

ಸಿವೋಟರ್ ಸಮೀಕ್ಷೆ:
ಬಿಜೆಪಿ: 90-106
ಕಾಂಗ್ರೆಸ್: 110-126
ಇತರೆ: 6-22

ಸಿಎಸ್​ಡಿಎಸ್:
ಬಿಜೆಪಿ: 94
ಕಾಂಗ್ರೆಸ್: 126

ಚಾಣಕ್ಯ ಸಮೀಕ್ಷೆ:
ಬಿಜೆಪಿ: 103
ಕಾಂಗ್ರೆಸ್: 125
ಇತರೆ: 2




 

ಛತ್ತೀಸ್​ಗಡ ಮತಗಟ್ಟೆ ಸಮೀಕ್ಷೆಗಳು:

ಛತ್ತೀಸ್​ಗಡದ ಒಟ್ಟು ಸ್ಥಾನಗಳು: 90
ಬಹುಮತಕ್ಕೆ: 46

ಜನ್ ಕೀ ಬಾತ್ ಸಮೀಕ್ಷೆ:
ಬಿಜೆಪಿ: 40-48
ಕಾಂಗ್ರೆಸ್: 37-43
ಜೆಸಿಸಿ+ಬಿಎಸ್​ಪಿ: 5-6

ಸಿಎನ್​ಎಕ್ಸ್ ಸಮೀಕ್ಷೆ:
ಬಿಜೆಪಿ: 46
ಕಾಂಗ್ರೆಸ್: 35
ಬಿಎಸ್​ಪಿ: 7

ಆಕ್ಸಿಸ್ ಸಮೀಕ್ಷೆ:
ಬಿಜೆಪಿ: 21-31
ಕಾಂಗ್ರೆಸ್: 55-65
ಇತರೆ: 4-8

ನೇತಾ ಸಮೀಕ್ಷೆ:
ಬಿಜೆಪಿ: 43
ಕಾಂಗ್ರೆಸ್: 40
ಇತರೆ: 7

ಸಿವೋಟರ್ ಸಮೀಕ್ಷೆ:
ಬಿಜೆಪಿ: 39
ಕಾಂಗ್ರೆಸ್: 46
ಇತರೆ: 5




 

ರಾಜಸ್ಥಾನ ಮತಗಟ್ಟೆ ಸಮೀಕ್ಷೆಗಳು

ಒಟ್ಟು ಸ್ಥಾನಗಳು: 200
ಬಹುಮತಕ್ಕೆ: 101

ಆಕ್ಸಿಸ್ ಸಮೀಕ್ಷೆ:
ಬಿಜೆಪಿ: 55-72
ಕಾಂಗ್ರೆಸ್: 119-141

ಸಿಎನ್​ಎಕ್ಸ್ ಸಮೀಕ್ಷೆ:
ಬಿಜೆಪಿ: 85
ಕಾಂಗ್ರೆಸ್: 105
ಬಿಎಸ್​ಪಿ: 2

ಜನ್ ಕೀ ಬಾತ್ ಸಮೀಕ್ಷೆ:
ಬಿಜೆಪಿ: 83-103
ಕಾಂಗ್ರೆಸ್: 81-101
ಇತರೆ: 7-11

ನೇತಾ ಸಮೀಕ್ಷೆ:
ಬಿಜೆಪಿ: 85
ಕಾಂಗ್ರೆಸ್: 105
ಇತರೆ: 2

ಸಿವೋಟರ್ ಸಮೀಕ್ಷೆ:
ಬಿಜೆಪಿ: 60
ಕಾಂಗ್ರೆಸ್: 137
ಇತರೆ: 3




 

ತೆಲಂಗಾಣ ಮತಗಟ್ಟೆ ಸಮೀಕ್ಷೆಗಳು:

ಒಟ್ಟು ಸ್ಥಾನಗಳು: 119
ಬಹುಮತಕ್ಕೆ: 60

ಇಂಟೆಲಿಜೆನ್ಸ್ ರಿಪೋರ್ಟ್:
ಟಿಆರ್​ಎಸ್​: 85
ಕಾಂಗ್ರೆಸ್: 22
ಟಿಡಿಪಿ: 3
ಬಿಜೆಪಿ: 1
ಎಂಐಎಂ: 7
ಇತರೆ: 1

ಆಕ್ಸಿಸ್ ಸಮೀಕ್ಷೆ:
ಟಿಆರ್​ಎಸ್: 79-91
ಕಾಂಗ್ರೆಸ್+ಟಿಡಿಪಿ: 21-33
ಎಐಎಂಐಎಂ: 4-7
ಬಿಜೆಪಿ: 1-3

ಸಿಎನ್​ಎಕ್ಸ್ ಸಮೀಕ್ಷೆ:
ಟಿಆರ್​ಎಸ್: 66
ಕಾಂಗ್ರೆಸ್+ಟಿಡಿಪಿ: 37
ಬಿಜೆಪಿ: 7
ಇತರೆ: 9

ಸಿವೋಟರ್ ಸಮೀಕ್ಷೆ:
ಟಿಆರ್​ಎಸ್: 48-60
ಕಾಂಗ್ರೆಸ್+ಟಿಡಿಪಿ: 47-59
ಬಿಜೆಪಿ: 5
ಇತರೆ: 1-13

ಜನ್ ಕೀ ಬಾತ್ ಸಮೀಕ್ಷೆ:
ಟಿಆರ್​ಎಸ್: 50-65
ಕಾಂಗ್ರೆಸ್+ಟಿಡಿಪಿ: 38-52
ಇತರೆ: 10-12

ನೇತಾ ಸಮೀಕ್ಷೆ:
ಟಿಆರ್​ಎಸ್: 57
ಕಾಂಗ್ರೆಸ್+ಟಿಡಿಪಿ: 46
ಇತರೆ: 16




 

ಮಿಝೋರಾಂ ಮತಗಟ್ಟೆ ಸಮೀಕ್ಷೆಗಳು:

ಒಟ್ಟು ಸ್ಥಾನಗಳು: 40
ಬಹುಮತಕ್ಕೆ: 21

ಸಿವೋಟರ್ ಸಮೀಕ್ಷೆ:
ಎಂಎನ್​ಎಫ್: 16-20
ಕಾಂಗ್ರೆಸ್: 14-18
ಇತರೆ: 3-10

ಸಿಎನ್​ಎಕ್ಸ್ ಸಮೀಕ್ಷೆ:
ಎಂಎನ್​ಎಫ್: 18
ಕಾಂಗ್ರೆಸ್: 16
ಇತರೆ: 6
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ