5 State Elections: ಕೊರೋನಾ ಕರಿನೆರಳ ನಡುವೆ ನಡೆಯುವ ಚುನಾವಣೆಯ 20 ಪ್ರಮುಖ ವಿಷಯಗಳು

ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಚಂದ್ರ ನಡೆಸಿದ ಸುದ್ದಿಗೋಷ್ಠಿ ಈವರೆಗಿನ ಚುನಾವಣಾ ಆಯೋಗದ ಸುದ್ದಿಗೋಷ್ಠಿಗಳಿಂದ ಭಾರೀ ಭಿನ್ನವಾಗಿತ್ತು‌.

ಚುನಾವಣಾ ಆಯೋಗ

ಚುನಾವಣಾ ಆಯೋಗ

  • Share this:
ನವದೆಹಲಿ, (ಜ.‌ 8): ಮುಂದಿನ‌ ತಿಂಗಳು ದೇಶಕ್ಕೆ ಕೊರೋನಾ ಮೂರನೇ ಅಲೆ (Corona Third Wave) ಸುನಾಮಿ ರೀತಿಯಲ್ಲಿ ಅಪ್ಪಳಿಸಬಹುದು ಎಂಬ ಆತಂಕ ಇದೆ. ಜೊತೆಗೆ ಓಮಿಕ್ರಾನ್ ವೈರಸ್ (Omicron Virus) ಕೂಡ ದಾಳಿ ಇಡುತ್ತಿದೆ. ಇದೇ ಕಾರಣಕ್ಕೆ ಚುನಾವಣೆಗಳನ್ನು ಮುಂದೂಡುವಂತೆ, ಚುನಾವಣಾ ಸಭೆ, ಸಮಾರಂಭ, ಸಮಾವೇಶ, ರೋಡ್ ಶೋಗಳನ್ನು ನಿರ್ಬಂಧಿಸುವಂತೆ ಮನವಿ ಮಾಡಲಾಗಿತ್ತು‌. ಇದೆಲ್ಲದರ ನಡುವೆ ಈಗ ಉತ್ತರ ಪ್ರದೇಶ (Uttar Pradesh), ಉತ್ತರಖಂಡಾ (Uttarkhand), ಪಂಜಾಬ್ (Punjab), ಗೋವಾ (Goa) ಮತ್ತು ಮಣಿಪುರ (Manipura) ರಾಜ್ಯಗಳ ವಿಧಾನಸಭಾ ಚುನಾವಣೆಗಳಿಗೆ  (Assembly Elections) 'ಕೋವಿಡ್ ನಿಯಮಾವಳಿಗಳ ಪ್ರಕಾರ' ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ (Central Election Commission) ದಿನಾಂಕ ಪ್ರಕಟಿಸಿದೆ.

ದೆಹಲಿಯ ‌ವಿಜ್ಞಾನ ಭವನದಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಚಂದ್ರ (Chief Election Commissioner Sunil Chandra) ಅವರು ನಡೆಸಿದ ಸುದ್ದಿಗೋಷ್ಠಿ ಈವರೆಗಿನ ಚುನಾವಣಾ ಆಯೋಗದ ಸುದ್ದಿಗೋಷ್ಠಿಗಳಿಂದ ಭಾರೀ ಭಿನ್ನವಾಗಿತ್ತು‌. ಅವರು ಹಲವು ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದರು. ಅಂತಹ 20 ಪ್ರಮುಖ ಸಂಗತಿಗಳು ಹೀಗಿವೆ.

1. ಕೊರೋನಾ ಕಾರಣಕ್ಕೆ ಎಲ್ಲಾ ಐದು ರಾಜ್ಯಗಳಲ್ಲಿ ಮತದಾನದ ಸಮಯವನ್ನು ಒಂದು ಗಂಟೆ ಹೆಚ್ಚಿಸಲಾಗಿದೆ.
2. ಕೊರೋನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಖಬೇಕಾದುದರಿಂದ ಶೇಕಡಾ 16ರಷ್ಟು ಮತಗಟ್ಟೆಗಳನ್ನು ಹೆಚ್ಚಿಸಲಾಗಿದೆ.
3. ಒಂದು ಮತಗಟ್ಟೆಯಲ್ಲಿ 1,250 ಜನರಿಗೆ ಮಾತ್ರ ಮತದಾನ ಮಾಡಲು ಅವಕಾಶ ಇರುತ್ತದೆ.
4. ಎಲ್ಲಾ ಮತಗಟ್ಟೆಗಳು ನೆಲಮಹಡಿಯಲ್ಲೇ ಇರಲಿವೆ.
5.  ಎಲ್ಲಾ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಿರಲಾಗುತ್ತದೆ.
6. ಮತಗಟ್ಟೆಯಲ್ಲಿ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದೆ.
7. ಕೊರೋನಾ ಸೋಂಕು ಪೀಡಿತರರಿಗೆ ಅಂಚೆ ಮತದಾನದ ಅವಕಾಶ ನೀಡಲಾಗಿದೆ.
8. ಚುನಾವಣಾ ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರುವುದು ಕಡ್ಡಾಯವಾಗಿದೆ.
9. ಚುನಾವಣಾ ಸಿಬ್ಬಂದಿಯನ್ನು ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಲಾಗಿದೆ.
10. ಚುನಾವಣಾ ಸಿಬ್ಬಂದಿ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ.

ಇದನ್ನು ಓದಿ: ಸೋಂಕಿತ ಮಗನನ್ನು ಕಾರ್ ಡಿಕ್ಕಿಯಲ್ಲಿ ಕೂಡಿದ ತಾಯಿ; ಕತ್ತಲೆಯಲ್ಲಿ ಕಂಗಾಲಾದ ಕಂದ

11. ಚುನಾವಣೆ ನಡೆಯುವ 7 ರಾಜ್ಯಗಳಲ್ಲಿ ಶೇಕಡಾ 100ರಷ್ಟು ವ್ಯಾಕ್ಸಿನೇಷನ್‌ ಮಾಡುವಂತೆ ಅಲ್ಲಿನ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
12. ಎರಡೂ ಡೋಸ್ ಗಳು ಕೂಡ ಶೇಕಡಾ 100ರಷ್ಟು ಆಗಿರಬೇಕೆಂದು ಸೂಚಿಸಲಾಗಿದೆ.
13. ಕೊರೋನಾ ಹಿನ್ನೆಲೆಯಲ್ಲಿ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆನ್ ಲೈನ್ ಮೂಲಕ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
14. ನೇರವಾಗಿ ನಾಮಪತ್ರ ಸಲ್ಲಿಸುವಾಗ ಇಬ್ಬರು ಮಾತ್ರ ಮತಗಟ್ಟೆಗೆ ಹೋಗಬೇಕು.
15. ಕೊರೋನಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಜನವರಿ ‌15ರವರೆಗೆ ಚುನಾವಣಾ ಸಮಾವೇಶಗಳನ್ನು ನಿರ್ಬಂಧಿಸಲಾಗಿದೆ.
16. ದೊಡ್ಡ ದೊಡ್ಡ ಸಮಾವೇಶ ಮಾತ್ರವಲ್ಲ ಜನವರಿ ‌15ರವರೆಗೆ ಸಣ್ಣ ಪುಟ್ಟ ಸಭೆ, ಸಮಾರಂಭಗಳನ್ನೂ ಮಾಡುವಂತಿಲ್ಲ.
17. ಪಾದಯಾತ್ರೆ, ರೋಡ್ ಶೋ, ಸೈಕಲ್ ರ್ಯಾಲಿ, ಬೈಕ್ ರ್ಯಾಲಿಗಳನ್ನೂ ಮಾಡುವಂತಿಲ್ಲ.
18. 5 ಜನರು ಮಾತ್ರ ಮನೆ ಮನೆಗೆ ಹೋಗಿ ಪ್ರಚಾರ ಮಾಡಬಹುದು.
19. ಚುನಾವಣೆ ಗೆದ್ದಮೇಲೆ ವಿಜಯೋತ್ಸವ, ಸಂಭ್ರಮಾಚರಣೆ ಮಾಡುವಂತಿಲ್ಲ.
20. ಕೊರೋನಾ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ದ ಕ್ರಮಕ್ಕೆ ಸೂಚಿಸಲಾಗಿದೆ.

ಇದನ್ನು ಓದಿ: ವಾರದೊಳಗೆ 2 ಕೋಟಿ ಲಸಿಕೆ; ಯುವಜನತೆ ಉತ್ಸಾಹಕ್ಕೆ ಮೆಚ್ಚುಗೆ

ಚುನಾವಣೆಗಳ ವಿವರ...
ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ
ಫೆಬ್ರವರಿ 10ರಂದು ಮೊದಲ ಹಂತದ ಮತದಾನಫೆಬ್ರವರಿ 14ರಂದು 2ನೇ ಹಂತದ ಮತದಾನಫೆಬ್ರವರಿ 20ರಂದು 3ನೇ ಹಂತದ ಮತದಾನಫೆಬ್ರವರಿ 23ರಂದು 4ನೇ ಹಂತದ ಮತದಾನಫೆಬ್ರವರಿ 27ರಂದು 5ನೇ ಹಂತದ ಮತದಾನಮಾರ್ಚ್​ 3ರಂದು 6ನೇ ಹಂತದ ಮತದಾನಮಾರ್ಚ್ 7ರಂದು 7ನೇ ಹಂತದ ಮತದಾನ
ಮಣಿಪುರದಲ್ಲಿ 2 ಹಂತಗಳಲ್ಲಿ ಮತದಾನಫೆಬ್ರವರಿ 27ರಂದು ಮೊದಲ ಹಂತದ ಮತದಾನಮಾರ್ಚ್​ 3ರಂದು 2ನೇ ಹಂತದ ಮತದಾನ
ಪಂಜಾಬ್, ಗೋವಾ, ಉತ್ತರಾಖಂಡಗಳಲ್ಲಿ ಫೆಬ್ರವರಿ 14ರಂದು ಒಂದೇ ಹಂತದಲ್ಲಿ ಮತದಾನ
ಮಾರ್ಚ್​ 10ಕ್ಕೆ ಎಲ್ಲಾ 5 ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟ.
Published by:Seema R
First published: