Hyatt Regency Mumbai: ಸಿಬ್ಬಂದಿಗೆ ಸಂಬಳ ಕೊಡಲು ದುಡ್ಡಿಲ್ಲ ಎಂದು ಪಂಚಾತಾರಾ ಹೋಟೆಲ್ ಬಂದ್ !

Hyatt Regency Mumbai: ವೇತನ ಪಾವತಿಸಲು ಅಥವಾ ಹೋಟೆಲ್‌ನ ಕಾರ್ಯಾಚರಣೆಯನ್ನು ಮುಂದುವರೆಸಲು ಹೋಟೆಲ್‌ನ ಮಾಲೀಕರು ಹಣ ನೀಡದ ಕಾರಣ ಹೋಟೆಲ್‌ನ ಕೆಲಸವನ್ನು ಮುಂದಿನ ಸೂಚನೆ ಬರುವವರೆಗೂ ಮುಚ್ಚಲ್ಪಡುತ್ತದೆ ಎಂದು ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ

ಹಯಾಯ್ ರೀಜೆನ್ಸಿ ಮುಂಬೈ

ಹಯಾಯ್ ರೀಜೆನ್ಸಿ ಮುಂಬೈ

  • Share this:
ಮುಂಬೈ: ಕೊರೊನಾ ಕಾರಣಗಳಿಂದಾಗಿ ಅನೇಕ ವ್ಯಾಪಾರ ವಹಿವಾಟುಗಳು ಸ್ಥಗಿತಗೊಂಡಿವೆ. ಬಡವರಿಗಷ್ಟೇ ಅಲ್ಲ, ಕೆಲ ದೊಡ್ಡ ದೊಡ್ಡ ಕಂಪನಿಗಳಿಗೂ ಹೊಡೆತ ಬಿದ್ದಿದೆ. ಲಾಕ್‌ಡೌನ್‌, ಕೋವಿಡ್ - 19 ವೈರಸ್‌ ಭೀತಿಯಿಂದ ಜನ ಮನೆಯಲ್ಲೇ ಉಳಿಯುವಂತಾಗಿದ್ದುಮ ಹೆಚ್ಚಾಗಿ ಹೋಟೆಲ್‌, ಲಾಡ್ಜ್‌ಗಳಿಗೆ ಹೋಗುತ್ತಿಲ್ಲ. ಇದರಿಂದ ದೊಡ್ಡ ದೊಡ್ಡ ಹೋಟೆಲ್‌ಗಳೇ ನಷ್ಟದಲ್ಲಿವೆ. ಇದೇ ರೀತಿ ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿರುವ ಪ್ರೀಮಿಯಂ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಹಯಾತ್‌ ರಿಜೆನ್ಸಿ ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ದೇಶದಲ್ಲಿರುವ ಜಾಗತಿಕ ಹಾಸ್ಪಿಟಾಲಿಟಿ ಪ್ರಮುಖ ಹೆಗ್ಗುರುತಿನ ಪ್ರಾಪರ್ಟಿ ಎಂದೇ ಪರಿಗಣಿತವಾಗಿದೆ ಹಯಾತ್‌ ರಿಜೆನ್ಸಿ. ಹಯಾತ್‌ನ ಮತ್ತೊಂದು ಭಾಗವಾಗಿರುವ ದೆಹಲಿಯ ಹೋಟೆಲ್‌ ಸದ್ಯ ಕಾರ್ಯಾಚರಿಸುತ್ತಿದೆ. ಆದರೂ, ಹಯಾತ್‌ ರಿಜೆನ್ಸಿ ದೆಹಲಿ ಬೇರೆ ಗ್ರೂಪ್‌ನ ಒಡೆತನದಲ್ಲಿದ್ದು, ಕಳೆದ ವರ್ಷ ಚಳಿಗಾಲದಿಂದಲೂ ಅದು ಸಹ ಹಯಾತ್‌ನ ಜಾಗತಿಕ ಬುಕಿಂಗ್‌ ವೆಬ್‌ಸೈಟ್‌ನಿಂದ ಹೊರಗಿದೆ. ಈ ಹಿನ್ನೆಲೆ ಜನರು ಡೈರೆಕ್ಟಾಗಿ ಬುಕಿಂಗ್ ಮಾಡುವ ಮೂಲಕ ಹಯಾತ್‌ ದೆಹಲಿ ಹೋಟೆಲ್‌ನಲ್ಲಿ ತಂಗಬಹುದಾಗಿದೆ. ಇನ್ನು, ಮುಂಬಯಿಯ ಸಹರ್ ವಿಮಾನ ನಿಲ್ದಾಣ ರಸ್ತೆಯಲ್ಲಿನ 401 ರೂಮ್‌ಗಳ ಹಯಾತ್‌ ರಿಜೆನ್ಸಿ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ತಕ್ಷಣದಿಂದಲೇ ಜಾರಿಗೆ ಬಂದಿದೆ. ಈ ಹಿನ್ನೆಲೆ ಸ್ಪಷ್ಟವಾಗಿ ಹಯಾತ್‌ನ ದೆಹಲಿ ಹಾಗೂ ಮುಂಬೈ ಸೇರಿ ಎರಡು ಪ್ರಮುಖ ಹೋಟೆಲ್‌ಗಳು ಸಮಸ್ಯೆಗಳನ್ನು ಎದುರಿಸುತ್ತಿದೆ.

"ಹೋಟೆಲ್‌ನ ಕಾರ್ಯಾಚರಣೆಯನ್ನು ಉಳಿಸಿಕೊಳ್ಳಲು ಹಯಾತ್‌ ರಿಜೆನ್ಸಿ ಮುಂಬೈನ ಮಾಲೀಕರಾದ ಏಷ್ಯಾದ ಹೋಟೆಲ್ಸ್ (ಪಶ್ಚಿಮ) ಲಿಮಿಟೆಡ್‌ನಿಂದ ಯಾವುದೇ ಹಣ ಮುಂಬರದ ಪರಿಣಾಮವಾಗಿ, ಹಯಾತ್ ರಿಜೆನ್ಸಿ ಮುಂಬೈನ ಎಲ್ಲಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಹೋಟೆಲ್ ಮುಚ್ಚಿರುತ್ತದೆ. ಹಯಾತ್‌ ಬುಕಿಂಗ್ ಚಾನೆಲ್‌ಗಳ ಮೂಲಕ ಭವಿಷ್ಯದ ಕಾಯ್ದಿರಿಸುವಿಕೆ ತಾತ್ಕಾಲಿಕವಾಗಿ ಲಭ್ಯವಿಲ್ಲ. ಹಯಾತ್‌ನಲ್ಲಿ, ನಮ್ಮ ಅತಿಥಿಗಳು ಮತ್ತು ಸಹೋದ್ಯೋಗಿಗಳು ಮೊದಲ ಆದ್ಯತೆಯಾಗಿದ್ದಾರೆ, ಮತ್ತು ಈ ಪರಿಸ್ಥಿತಿಯನ್ನು ಪರಿಹರಿಸಲು ನಾವು ಹೋಟೆಲ್ ಮಾಲೀಕರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಹಯಾತ್‌ನ ಉಪಾಧ್ಯಕ್ಷ ಮತ್ತು ಭಾರತದ ದೇಶದ ಮುಖ್ಯಸ್ಥ ಸುಂಜೇ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ಹಸು-ಕರುವಿಗೆ ಪಾನಿಪುರಿ ತಿನ್ನಿಸುತ್ತಾನೆ ಪುಣ್ಯಾತ್ಮ, ಅವೂ ಬಾಯಿಚಪ್ಪರಿಸಿಕೊಂಡು ಮೆಲ್ಲುತ್ತಿವೆ ನೋಡಿ !

''ವೇತನ ಪಾವತಿಸಲು ಅಥವಾ ಹೋಟೆಲ್‌ನ ಬೆಂಬಲ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸಲು ಹೋಟೆಲ್‌ನ ಮಾಲೀಕರು ಹಣ ನೀಡದ ಕಾರಣ ಹೋಟೆಲ್‌ನ ಕಾರ್ಯಾಚರಣೆಯನ್ನು ಮುಂದಿನ ಸೂಚನೆ ಬರುವವರೆಗೂ ಮುಚ್ಚಲ್ಪಡುತ್ತದೆ" ಎಂದು ಹಯಾತ್‌ ರಿಜೆನ್ಸಿ ಮುಂಬೈನ ಜನರಲ್‌ ಮ್ಯಾನೇಜರ್ ಹರ್ದೀಪ್‌ ಮಾರ್ವಾ ಅವರು ಉದ್ಯೋಗಿಗಳಿಗೆ ಸಂವಹನದಲ್ಲಿ ತಿಳಿಸಿದ್ದಾರೆ.

ಇನ್ನೊಂದೆಡೆ, ಹಯಾತ್‌ ರಿಜೆನ್ಸಿ ದೆಹಲಿ ಏಷ್ಯನ್ ಹೊಟೇಲ್ (ನಾರ್ತ್) ಲಿಮಿಟೆಡ್ ಒಡೆತನದಲ್ಲಿದ್ದು, ಹಯಾತ್‌ನ ಜಾಗತಿಕ ಬುಕಿಂಗ್ ವೆಬ್‌ಸೈಟ್‌ನಿಂದ ಕೆಲ ತಿಂಗಳುಗಳಿಂದಲೇ ಕಾಣಿಸಿಕೊಳ್ಳುತ್ತಿಲ್ಲ. ಆದರೆ, ''ದೆಹಲಿಯ ಹೋಟೆಲ್‌ ತೆರೆದಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಯಾರಾದರೂ ಬುಕ್ ಮಾಡಲು ಬಯಸಿದರೆ, ಅವರು ನೇರವಾಗಿ ಹೋಟೆಲ್‌ಗೆ ಬುಕ್ ಮಾಡಲು ಕರೆ ಮಾಡಬಹುದು ಅಥವಾ ಥರ್ಡ್‌ ಪಾರ್ಟಿ ಚಾನೆಲ್‌ಗಳ ಮೂಲಕವೂ ಅವರು ಮಾಡಬಹುದು” ಎಂದು ಹಯಾತ್ ರಿಜೆನ್ಸಿ ದೆಹಲಿಯ ಅಧಿಕಾರಿಯೊಬ್ಬರು ಸೋಮವಾರ ಹೇಳಿದ್ದಾರೆ. ಕಳೆದ ವರ್ಷ ಚಳಿಗಾಲದಿಂದಲೂ ಇದೇ ರೀತಿ ಬುಕಿಂಗ್ ಜಾರಿಯಲ್ಲಿದೆ ಎಂದೂ ವರದಿಯಾಗಿದೆ.
Published by:Soumya KN
First published: