Cloudburst: ಅಮರನಾಥ ಗುಹೆ ಬಳಿ ಮರಣಮೃದಂಗ! ಭಾರೀ ಮೇಘಸ್ಫೋಟಕ್ಕೆ 15 ಮಂದಿ ಸಾವು

ಮೇಘಸ್ಫೋಟದ ಸಂಗ್ರಹ ಚಿತ್ರ

ಮೇಘಸ್ಫೋಟದ ಸಂಗ್ರಹ ಚಿತ್ರ

ಸಂಜೆ 5.30ಕ್ಕೆ ಸಂಭವಿಸಿದ ಮೇಘಸ್ಫೋಟಕ್ಕೆ ಹದಿನೈದು ಮಂದಿ ಮೃತಪಟ್ಟಿದ್ದಾಗೆ ತಿಳಿದು ಬಂದಿದೆ. ಮೇಘಸ್ಫೋಟವಾಗುತ್ತಿದ್ದಂತೆ ಯಾತ್ರಾರ್ಥಿಗಳು ತಂಗಿದ್ದ ಡೇರೆಗಳು ಕೊಚ್ಚಿಕೊಂಡು ಹೋಗಿವೆ. ಪರಿಣಾಮ 15 ಜನ ಮೃತಪಟ್ಟಿದ್ದಾರೆ.

  • Share this:

ಅಮರನಾಥ, ಜಮ್ಮು ಮತ್ತು ಕಾಶ್ಮೀರ: ಹಿಂದೂಗಳ (Hindu) ಪವಿತ್ರ ಯಾತ್ರಾ ಸ್ಥಳಗಳಲ್ಲಿ (Holy Place) ಒಂದಾದ ಜಮ್ಮು ಮತ್ತು ಕಾಶ್ಮೀರ (Jammu and Kashmir) ರಾಜ್ಯದ ಅಮರನಾಥದಲ್ಲಿ (Amarnath) ಮಹಾ ನೈಸರ್ಗಿಕ ವಿರೋಪ ಸಂಭವಿಸಿದೆ. ಅಮರನಾಥದ ಪವಿತ್ರ ಗುಹೆ (Holy Cave) ಬಳಿ ಭಾರೀ ಮೇಘಸ್ಫೋಟವಾಗಿದೆ (Cloudburst). ಪರಿಣಾಮ 15 ಮಂದಿ ಮೃತಪಟ್ಟು (Death), ಹಲವರು ಗಾಯಗೊಂಡಿದ್ದಾರೆ (Injured).  ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೇಘಸ್ಫೋಟದ ಸ್ಥಳದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಶಂಕೆ ಇದ್ದು, ಎನ್‌ಡಿಆರ್‌ಎಫ್ (NDRF), ಎಸ್‌ಡಿಆರ್‌ಎಫ್ (SDRF) ಮತ್ತು ಜಮ್ಮು ಕಾಶ್ಮೀರ ಪೊಲೀಸರು (Police) ರಕ್ಷಣಾ ಕಾರ್ಯಾಚರಣೆ (Rescue operation) ನಡೆಸುತ್ತಿದ್ದಾರೆ.


ಅಮರನಾಥ ಪವಿತ್ರ ಗುಹೆ ಬಳಿ ಮಹಾ ಮೇಘಸ್ಫೋಟ


ಜಮ್ಮು ಮತ್ತು ಕಾಶ್ಮೀರ ರಾಜ್ಯದ ದಕ್ಷಿಣ ಕಾಶ್ಮೀರದ ಹಿಮಾಲಯ ಪರ್ವತ ಶ್ರೇಣಿಯ ತಪ್ಪಲಿನಲ್ಲಿ ಇರುವ ಅಮರನಾಥದ ಪವಿತ್ರ ಗುಹಾ ದೇಗುಲದ ಬಳಿ ಮೇಘಸ್ಫೋಟ ಸಂಭವಿಸಿದ್ದು, ಐವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವಾರ್ಷಿಕ 43 ದಿನಗಳ ಅಮರನಾಥ ಯಾತ್ರೆಯು ಆರಂಭವಾಗಿದೆ. ಇಲ್ಲಿಯವರೆಗೆ ಒಂದು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗುಹಾ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಕ್ತರು ಯಾತ್ರೆಗೆ ಆಗಮಿಸಿದ್ದ ವೇಳೆಯೇ ಮಹಾ ಮೇಘಸ್ಫೋಟ ಸಂಭವಿಸಿದೆ.



ಮೇಘ ಸ್ಫೋಟಕ್ಕೆ 15 ಮಂದಿ ಬಲಿ


ಸಂಜೆ 5.30ಕ್ಕೆ ಸಂಭವಿಸಿದ ಮೇಘಸ್ಫೋಟಕ್ಕೆ ಐವರು ಮೃತಪಟ್ಟಿದ್ದಾಗೆ ತಿಳಿದು ಬಂದಿದೆ. ಮೇಘಸ್ಫೋಟವಾಗುತ್ತಿದ್ದಂತೆ ಯಾತ್ರಾರ್ಥಿಗಳು ತಂಗಿದ್ದ ಡೇರೆಗಳು ಕೊಚ್ಚಿಕೊಂಡು ಹೋಗಿವೆ. ಪರಿಣಾಮ 15 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಕೊಚ್ಚಿ ಹೋಗಿದ್ದರೆ, ಕೆಲವರು ಗಾಯಗೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೇಘಸ್ಫೋಟದ ಸ್ಥಳದಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವ ಶಂಕೆ ಇದ್ದು, ಎನ್‌ಡಿಆರ್‌ಎಫ್ , ಎಸ್‌ಡಿಆರ್‌ಎಫ್ ಮತ್ತು ಜಮ್ಮು ಕಾಶ್ಮೀರ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.


ಇದನ್ನೂ ಓದಿ: Flood: ಬದುಕನ್ನೇ ಮುಳುಗಿಸುವ ಪ್ರವಾಹದಿಂದ ಪಾರಾಗಿ ಬದುಕುವುದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ


ಮುಂದುವರೆದ ರಕ್ಷಣಾ ಕಾರ್ಯ


ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​ ಸೇರಿದಂತೆ ವಿವಿಧ ರಕ್ಷಣಾ ತಂಡಗಳು ಪ್ರವಾಸಿಗರ ರಕ್ಷಣಾ ಕಾರ್ಯಚರಣೆಯನ್ನು ಭರದಿಂದ ನಡೆಸುತ್ತಿವೆ ಎಂದು ಜಂಟಿ ಪೊಲೀಸ್​ ನಿಯಂತ್ರಣ ಕೊಠಡಿ ಪಹಲ್ಗಾಮ್​ನಿಂದ ಮಾಹಿತಿ ನೀಡಲಾಗಿದೆ. ಮೇಲ್ಭಾಗದಲ್ಲಿ ಭಾರೀ ಮಳೆ ಉಂಟಾದ ಹಿನ್ನೆಲೆಯಲ್ಲಿ ಗುಹೆಯ ಮೇಲಿನಿಂದ ನೀರು ಬಂದಿದೆ. ಸಧ್ಯಕ್ಕೆ ಈ ಭಾಗದಲ್ಲಿ ಮಳೆ ನಿಂತಿದೆ. ಮೇಘ ಸ್ಪೋಟದಿಂದಾಗಿ ಅಮರನಾಥ ದೇಗುಲದ ಲಂಗರ್​ಗಳು ಹಾಗೂ ಟೆಂಟ್​ಗಳು ಕೊಚ್ಚಿ ಹೋಗಿವೆ. ಗಾಯಾಳುಗಳನ್ನು ರಕ್ಷಣೆ ಮಾಡಲು ಹೆಲಿಕಾಪ್ಟರ್ ಕೂಡ ಆಗಮಿಸಿದೆ.


ಜಮ್ಮು ಕಾಶ್ಮೀರದಲ್ಲಿ ಗುಡುಗು ಸಹಿತ ಮಳೆ


ಮುಂದಿನ 24 ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆ ಬರಲಿದ್ದು, ಹಲವೆಡೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.


ಇದನ್ನೂ ಓದಿ: Explained: ಸಿಡಿಲು-ಮಿಂಚಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ನೋಡಿ ಅತ್ಯುತ್ತಮ ಮಾಹಿತಿ


ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಭೂ ಕುಸಿತ


ಆಯಕಟ್ಟಿನ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಹಲವೆಡೆ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಹಲವೆಡೆ ಭೂಕುಸಿತ ಮತ್ತು ಕೆಸರಿನಿಂದಾಗಿ ಶ್ರೀನಗರ-ಜಮ್ಮು ಹೆದ್ದಾರಿಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಈ ಹೆದ್ದಾರಿಯನ್ನು ಅಮರನಾಥ ಯಾತ್ರಿಗಳು ಉತ್ತರ ಕಾಶ್ಮೀರ ಮತ್ತು ದಕ್ಷಿಣ ಕಾಶ್ಮೀರ ಮೂಲ ಶಿಬಿರಗಳನ್ನು ತಲುಪಲು ಬಳಸುತ್ತಾರೆ. ಇದೀಗ ಆ ರಸ್ತೆಯೂ ಮುಚ್ಚಿದೆ. ಎರಡೂ ಮಾರ್ಗಗಳಲ್ಲಿ ಹವಾಮಾನ ಪರಿಸ್ಥಿತಿಯಲ್ಲಿ ಸ್ವಲ್ಪ ಸುಧಾರಿಸಿದರೆ ಅಮರನಾಥ ಯಾತ್ರೆಯನ್ನು ಮತ್ತೆ ಪುನರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published by:Annappa Achari
First published: