ಬಿಹಾರದಲ್ಲಿ ಲಾಲೂ ಪಕ್ಷದ ಅರ್ಧಕ್ಕೂ ಹೆಚ್ಚು ಎಂಎಲ್​ಸಿಗಳು ಆಡಳಿತ ಪಕ್ಷಕ್ಕೆ ಸೇರ್ಪಡೆ

ರಘುವಂಶ್ ಪ್ರಸಾದ್ ಆರ್​ಜೆಡಿ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪರಿಷತ್ ಸದಸ್ಯರಾದ ಎಸ್.ಎಂ. ಖಮರ್ ಅಲಮ್, ಸಂಜಯ್ ಪ್ರಸಾದ್, ರಾಧಾ ಚರಣ್ ಶೇಠ್, ರಣವಿಜಯ್ ಕುಮಾರ್ ಸಿಂಗ್ ಮತ್ತು ದಿಲೀಪ್ ರಾಯ್ ಜೆಡಿಯು ಸೇರಿದ್ದಾರೆ.

news18
Updated:June 23, 2020, 6:26 PM IST
ಬಿಹಾರದಲ್ಲಿ ಲಾಲೂ ಪಕ್ಷದ ಅರ್ಧಕ್ಕೂ ಹೆಚ್ಚು ಎಂಎಲ್​ಸಿಗಳು ಆಡಳಿತ ಪಕ್ಷಕ್ಕೆ ಸೇರ್ಪಡೆ
ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್
  • News18
  • Last Updated: June 23, 2020, 6:26 PM IST
  • Share this:
ಪಾಟ್ನಾ(ಜೂನ್ 23): ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ನಡೆಗಳಾಗಿವೆ. ವಿಪಕ್ಷ ಆರ್​ಜೆಡಿಗೆ ಶಾಕ್ ಆಗುವ ಬೆಳವಣಿಗೆಗಳಾಗಿವೆ. ಪಕ್ಷದ ಉಪಾಧ್ಯಕ್ಷ ಸೇರಿದಂತೆ ಆರು ಮಂದಿ ರಾಜೀನಾಮೆ ನೀಡಿದ್ದಾರೆ. ವಿಧಾನಪರಿಷತ್​ನ ಐದು ಆರ್​ಜೆಡಿ ಸದಸ್ಯರು ಜೆಡಿಯು ಸೇರಿಕೊಂಡಿದ್ಧಾರೆ. ಉಪಾಧ್ಯಕ್ಷ ರಘುವಂಶ್ ಪ್ರಸಾದ್ ರಾಜೀನಾಮೆ ಬೆನ್ನಲ್ಲೇ ಈ ಪರಿಷತ್ ಸದಸ್ಯರು ಆರ್​ಜೆಡಿಗೆ ತಿಲಾಂಜಲಿ ಹೇಳಿ ಸರ್ಕಾರದ ಪಾಳಯಕ್ಕೆ ಹೋಗಿದ್ಧಾರೆ.

ಎಸ್.ಎಂ. ಖಮರ್ ಅಲಮ್, ಸಂಜಯ್ ಪ್ರಸಾದ್, ರಾಧಾ ಚರಣ್ ಶೇಠ್, ರಣವಿಜಯ್ ಕುಮಾರ್ ಸಿಂಗ್ ಮತ್ತು ದಿಲೀಪ್ ರಾಯ್ ಅವರು ಜೆಡಿಯು ಸೇರಿದ ಶಾಸಕರು. ಬಿಹಾರ ವಿಧಾನ ಪರಿಷತ್​ನಲ್ಲಿ ಆರ್​ಜೆಡಿ ಕೇವಲ 8 ಸದಸ್ಯರ ಬಲ ಹೊಂದಿತ್ತು. ಐದು ಸದಸ್ಯರು ರಾಜೀನಾಮೆ ನೀಡಿರುವುದರಿಂದ ಅವರನ್ನ ಪ್ರತ್ಯೇಕ ಬಣವೆಂದು ಪರಿಗಣಿಸಲಾಗಿದೆ. ಅವರ ಆ ಬಣವು ಜೆಡಿಯು ಜೊತೆ ವಿಲೀನಗೊಂಡಿತು. ಈ ಮೂಲಕ ಕಾನೂನಾತ್ಮಕವಾಗಿ ಉಚ್ಛಾಟನೆ ಕ್ರಮ ಅನ್ವಯ ಆಗದೇ ಈ ಐವರು ದಡ ಸೇರಿಕೊಂಡಿದ್ದಾರೆ.

ಇದೇ ವೇಳೆ, ಕೋವಿಡ್-19 ಸೋಂಕಿಗೆ ತುತ್ತಾಗಿರುವ ಮಾಜಿ ಕೇಂದ್ರ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಅವರು ಆರ್​ಜೆಡಿಯ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ಧಾರೆ. ಪಾಟ್ನಾದ ಏಮ್ಸ್ ಆಸ್ಪತ್ರೆಯಿಂದಲೇ ಅವರು ರಾಜೀನಾಮೆ ಪತ್ರವನ್ನು ವರಿಷ್ಠರಿಗೆ ಕಳುಹಿಸಿದ್ಧಾರೆ. ಆರ್​​ಜೆಡಿಗೆ ಇತ್ತೀಚೆಗೆ ಸೇರುತ್ತಿರುವ ಜನರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆನ್ನಲಾಗಿದೆ.

ಇದನ್ನೂ ಓದಿ: ‘ಗಾಲ್ವಾನ್​​ ಕಣಿವೆಯಲ್ಲಿ ಭಾರತ ಯೋಧರ ಮೇಲೆ ದಾಳಿ ಮಾಡುವಂತೆ ಚೀನಾ ಆದೇಶಿಸಿತ್ತು‘ - ಅಮೆರಿಕ ಗುಪ್ತಚರ ಇಲಾಖೆ

ಇನ್ನು, 75 ಸದಸ್ಯ ಬಲ ಇರುವ ಬಿಹಾರ ವಿಧಾನಪರಿಷತ್​ನಲ್ಲಿ ಜೆಡಿಯು-ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟದ ಬಲ ಈಗ 39ಕ್ಕೆ ಏರಿದೆ. ವಿಪಕ್ಷಗಳ ಬಲ 7ಕ್ಕೆ ಕ್ಷೀಣಿಸಿದೆ.ಇನ್ನೂ 29 ಪರಿಷತ್ ಸ್ಥಾನಗಳು ಖಾಲಿ ಇವೆ. ಈ ವರ್ಷವೇ ಇವೆಲ್ಲವೂ ಭರ್ತಿಯಾಗುವ ನಿರೀಕ್ಷೆ ಇದೆ. ವಿಧಾನಸಭೆಯಿಂದ ಪರಿಷತ್​ಗೆ ಆರಿಸಲಾಗುವ 9 ಸ್ಥಾನಗಳು ಖಾಲಿ ಇವೆ. ಪದವೀಧ ಮತ್ತು ಶಿಕ್ಷಕರ ಕ್ಷೇತ್ರಗಳಿಂದ 8 ಸ್ಥಾನಗಳು ತುಂಬಬೇಕಿದೆ. 12 ನಾಮನಿರ್ದೇಶಿತ ಸ್ಥಾನಗಳೂ ಕೂಡ ಭರ್ತಿಯಾಗಬೇಕಿದೆ. ಆಡಳಿತಾರೂಢ ಎನ್​ಡಿಎಗೆ ಬಿಹಾರ ವಿಧಾನಪರಿಷತ್​ನಲ್ಲಿ ಅಭೂತಪೂರ್ವ ಬಲವರ್ಧನೆ ನಿಶ್ಚಿತವೆನಿಸಿದೆ.
First published: June 23, 2020, 6:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading