Rajasthan Rape Case: ರಾಜಸ್ಥಾನದಲ್ಲಿ ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ ಇಬ್ಬರ ಬಂಧನ -ಇನ್ನುಳಿದ ಮೂವರು ಆರೋಪಿಗಳಿಗೆ ಶೋಧ

Accused Arrest: ಈ ಘಟನೆ ಕುರಿತು ಸಂತ್ರಸ್ತೆಯ ತಂದೆ ಭಾನುವಾರ ರಾತ್ರಿ ನಾಗೌರ್ನ‌ನ ಜಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆ ಬಳಿಕ ಪೊಲೀಸರು ಭಾನುವಾರ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಇದೀಗ ಅತ್ಯಾಚಾರ ಘಟನೆಗಳು ದೇಶಾದ್ಯಂತ ಕೆಲವೆಡೆ ನಡೆದಿರುವ ಬಗ್ಗೆ ವರದಿಯಾಗುತ್ತಿದ್ದು, ಇಡೀ ದೇಶದ ಜನರನ್ನು ತಲ್ಲಣಗೊಳಿಸಿದೆ.16 ವರ್ಷದ ಬಾಲಕಿ ಮೇಲೆ ಒಬ್ಬ ಅಪ್ರಾಪ್ತ ಸೇರಿದಂತೆ ಐದು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ರಾಜಸ್ಥಾನದ ನಾಗೌರ್‌ನಲ್ಲಿ ಗುರುವಾರ ರಾತ್ರಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಈ ಘಟನೆ ಕುರಿತು ಸಂತ್ರಸ್ತೆಯ ತಂದೆ ಭಾನುವಾರ ರಾತ್ರಿ ನಾಗೌರ್ನ‌ನ ಜಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆ ಬಳಿಕ ಪೊಲೀಸರು ಭಾನುವಾರ 20 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಸೋಮವಾರ ಅಪ್ರಾಪ್ತ ಯುವಕನನ್ನು ಬಂಧನಕ್ಕೊಳಪಡಿಸಿದ್ದಾರೆ.


ಕಳೆದ ಗುರುವಾರ ಆ ಬಾಲಕಿಯನ್ನು ನೆರೆಹೊರೆಯವನಾದ ಹರಿಪ್ರಸಾದ್ ಎಂಬ ವ್ಯಕ್ತಿ ತನ್ನ ಮನೆಗೆ ಕೆಲಸದ ನಿಮ್ಮಿತ್ತ ಕರೆದಿದ್ದನು. ಆ ವೇಳೆ ಆರೋಪಿಗಳಾದ ನಾಲ್ವರು ಆತನ ಮನೆಯಲ್ಲಿಯೇ ಇದ್ದರು. ನಂತರ ಈ ಐವರು ಆಕೆಯ ಮೇಲೆ ಅತ್ಯಾಚಾರ ಎಸಗಿ ಘಟನೆ ಬಗ್ಗೆ ಯಾರ ಮುಂದೆಯೂ ಹೇಳಬಾರದೆಂದು ಬಾಲಕಿಗೆ ಬೆದರಿಸಿದ್ದರು ಎಂದು ಸರ್ಕಲ್ ಆಫೀಸರ್ ರಾಮೇಶ್ವರ್ ಲಾಲ್ ಘಟನೆ ಬಗ್ಗೆ ವಿವರಿಸಿದರು.


ಘಟನೆ ಬಳಿಕ ಬಾಲಕಿಯು ಖಿನ್ನತೆಗೆ ಒಳಗಾಗಿದ್ದಳು. ನಂತರ ಆಕೆಯ ವರ್ತನೆಯಲ್ಲೂ ಬದಲಾವಣೆ ಕಂಡು ಬಂದಿತು. ಇದನ್ನು ಗಮನಿಸಿದ ಕುಟುಂಬಸ್ಥರು ಕಾರಣ ಕೇಳಿದರು. ನಂತರ ಆಕೆ ಐವರು ಅತ್ಯಾಚಾರ ಎಸಗಿದ ಬಗ್ಗೆ ಮನೆಯವರ ಎದುರು ಬಾಯಿಬಿಟ್ಟಿದ್ದಾಳೆ. ನಂತರ ಪೊಲೀಸರ ಬಳಿ ದೂರು ದಾಖಲಿಸಲಾಯಿತು ಎಂದು ಹೇಳಿದರು.


ಇದನ್ನೂ ಓದಿ: ಅಪಹರಣವಾಗಿದ್ದ ಬೆಂಗಳೂರು ಮೂಲದ ಮಗುವಿಗೀಗ ಹಿಂದೂ ಹಾಗೂ ಮುಸ್ಲಿಂ ಪೋಷಕರು..!

ಜಹಾಂಗೀರ್ (20) ಎಂಬ ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದ್ದು, ಅಪ್ರಾಪ್ತ ಆರೋಪಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಸರ್ಕಲ್ ಅಧಿಕಾರಿ ತಿಳಿಸಿದ್ದಾರೆ. ಹರಿಪ್ರಸಾದ್, ಸೌರಭ್ ಮತ್ತು ಒಬ್ಬ ಅಪರಿಚಿತ ಆರೋಪಿ ತಲೆಮರೆಸಿಕೊಂಡಿದ್ದಾರೆ ಮತ್ತು ಅವರನ್ನು ಈಗಾಗಲೇ ನಿಯೋಜಿಸಲಾದ ತಂಡ ಹುಡುಕಾಟ ಆರಂಭಿಸಿದೆ ಎಂದು ಅವರು ಹೇಳಿದರು.


ಜಯಲ್ ಪೊಲೀಸ್ ಠಾಣೆ ಅಧಿಕಾರಿ ಸುರೇಂದ್ರ ಕುಮಾರ್ ದೂರಿನಲ್ಲಿ ಸಂತ್ರಸ್ತೆಯ ತಂದೆಯು ತನ್ನ ನೆರೆಯವರಾದ 20 ವರ್ಷದ ಆರೋಪಿ, ತನ್ನ ಮನೆಗೆ ಆಗಸ್ಟ್ 26ರಂದು ಮಗಳನ್ನು ಕೆಲಸದ ನೆಪವೊಡ್ಡಿ ಕರೆಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ ಎಂದು ಹೇಳಿದರು.


ಈ ವರ್ಷದ ಜೂನ್ ತಿಂಗಳಲ್ಲಿ ಇದೇ ರೀತಿಯ ಘಟನೆ ನಾಗೌರ್ ಜಿಲ್ಲೆಯಲ್ಲಿ ನಡೆದಿತ್ತು. ಅಂದರೆ 13 ವರ್ಷದ ಬಾಲಕಿಯ ಮೇಲೆ ಇಬ್ಬರು ವ್ಯಕ್ತಿಗಳು ಮಧ್ಯರಾತ್ರಿ ಆಮಿಷವೊಡ್ಡಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಒಬ್ಬ ಆರೋಪಿಯು ಸಂತ್ರಸ್ತೆಯ ಕುಟುಂಬಕ್ಕೆ ತಿಳಿದವನಾಗಿದ್ದನು. ನಂತರ ಠಾಣೆಯಲ್ಲಿ ಎಫ್‍ಐಆರ್ ದಾಖಲಾದ ಎರಡು ಗಂಟೆಗಳಲ್ಲಿ ನಾಗೌರ್ ಪೊಲೀಸ್ ಆರೋಪಿಗಳನ್ನು ಬಂಧಿಸಿದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: