• Home
  • »
  • News
  • »
  • national-international
  • »
  • Sea Gold: ಆ ಮೀನಿಗೆ 1.33 ಕೋಟಿ ರೂಪಾಯಿ ಕೊಟ್ಟು ಕೊಂಡರು, ಅವರು ಕೊಟ್ಟ ಹಣ ನೋಡಿ ಮೀನುಗಾರನೇ ಶಾಕ್! ಅದ್ರಲ್ಲಿ ಅಂಥದ್ದೇನಿದೆ?

Sea Gold: ಆ ಮೀನಿಗೆ 1.33 ಕೋಟಿ ರೂಪಾಯಿ ಕೊಟ್ಟು ಕೊಂಡರು, ಅವರು ಕೊಟ್ಟ ಹಣ ನೋಡಿ ಮೀನುಗಾರನೇ ಶಾಕ್! ಅದ್ರಲ್ಲಿ ಅಂಥದ್ದೇನಿದೆ?

ಕೋಟಿ ಬೆಲೆಯ ಘೋಲ್ ಮೀನು

ಕೋಟಿ ಬೆಲೆಯ ಘೋಲ್ ಮೀನು

Fish worth crores: ಮೀನುಗಾರನೊಬ್ಬರಿಗೆ ಎಂಥಾ ಬಂಪರ್ ಲಾಟರಿ ಹೊಡೆದಂತಾಗಿದೆ ಎಂದರೆ ಆತ ಹಿಡಿದ ಒಂದು ಗುಂಪು ಮೀನಿಗೆ (School of Ghol Fish) ಜನ ಕಾಂಪಿಟೇಶನ್ ಮೇಲೆ ಹಣ ಕೊಟ್ಟು ಖರೀದಿಸಿದ್ದಾರೆ.. ಅದೂ 1.33 ಕೋಟಿ ರೂಪಾಯಿ ನೀಡಿ! ಅದಿನ್ನೆಂಥಾ ಮೀನು, ಅದ್ಯಾಕೆ ಅಷ್ಟೊಂದು ದುಬಾರಿ. ಜನರಿಗೆ ಅಷ್ಟು ಹಣ ಕೊಡುವಷ್ಟರ ಮಟ್ಟಿಗೆ ಆ ಮೀನು ಉಪಯುಕ್ತವಾ? ಈ ಬಗ್ಗೆ ಫುಲ್ ಡೀಟೆಲ್ಸ್ ಇಲ್ಲಿದೆ.

ಮುಂದೆ ಓದಿ ...
  • Share this:

Fish worth crores: ಒಬ್ಬ ಮೀನುಗಾರ (Fisherman) ಒಂದು ದಿನಕ್ಕೆ ಎಷ್ಟು ದುಡಿಯಬಹುದು ಹೇಳಿ? ದಿನಗಟ್ಟಲೆ ಸಮುದ್ರದ ಜೊತೆಗೆ ಸೆಣಸಾಡಿದ್ರು ಅನೇಕ ಬಾರಿ ಅಲ್ಲಿಗಲ್ಲಿಗೆ ಎನ್ನುವಂತೆ ಆಗಿಬಿಟ್ಟಿರುತ್ತೆ ಅವರ ಪಾಡು. ಅಂಥಾದ್ರಲ್ಲಿ ಮಹಾರಾಷ್ಟ್ರದ ಮೀನುಗಾರನೊಬ್ಬರಿಗೆ ಎಂಥಾ ಬಂಪರ್ ಲಾಟರಿ ಹೊಡೆದಂತಾಗಿದೆ ಎಂದರೆ ಆತ ಹಿಡಿದ ಒಂದು ಗುಂಪು ಮೀನಿಗೆ (School of Ghol Fish) ಜನ ಕಾಂಪಿಟೇಶನ್ ಮೇಲೆ ಹಣ ಕೊಟ್ಟು ಖರೀದಿಸಿದ್ದಾರೆ.. ಅದೂ 1.33 ಕೋಟಿ ರೂಪಾಯಿ ನೀಡಿ! ಅದಿನ್ನೆಂಥಾ ಮೀನು, ಅದ್ಯಾಕೆ ಅಷ್ಟೊಂದು ದುಬಾರಿ. ಜನರಿಗೆ ಅಷ್ಟು ಹಣ ಕೊಡುವಷ್ಟರ ಮಟ್ಟಿಗೆ ಆ ಮೀನು ಉಪಯುಕ್ತವಾ? ಈ ಬಗ್ಗೆ ಫುಲ್ ಡೀಟೆಲ್ಸ್ ಇಲ್ಲಿದೆ.ಎಂದಿನಂತೆ ಮೀನು ಹಿಡಿಯೋಕೆ ಸಮುದ್ರಕ್ಕೆ ಇಳಿದಿದ್ದ ಬೆಸ್ತ ಚಂದ್ರಕಾಂತ್ ತಾರೆಗೆ ತಾನು ಅಂದು ಹಿಡಿಯುವ ಮೀನು ತನ್ನ ನಸೀಬನ್ನೇ ಬದಲಿಸಿಬಿಡುತ್ತದೆ ಎಂದು ಖಂಡಿತಾ ಗೊತ್ತಿರಲಿಲ್ಲ. ಮಹಾರಾಷ್ಟ್ರದ ಪಾಲ್​ಘರ್ ಕರಾವಳಿ ಪ್ರದೇಶದಲ್ಲಿ ಆಗಸ್ಟ್ 28ರಂದು ಮೀನು ಹಿಡಿಯೋಕೆ ಹೋದ ಚಂದ್ರಕಾಂತ್ ಬರುವಾಗ ಭಾಗ್ಯವನ್ನೇ ಪಡೆದು ಬಂದಿದ್ದ. ಘೋಲ್ ಎನ್ನುವ ಮೀನು ಅಂದು ಆತನ ಬಲೆಗೆ ಸಿಕ್ಕಿತ್ತು. ಒಂದಲ್ಲ, ಎರಡಲ್ಲ, ಬರೋಬ್ಬರಿ 157 ಘೋಲ್ ಮೀನುಗಳನ್ನು ಬುಟ್ಟಿಯಲ್ಲಿ ತಂದಿದ್ದ ಆತನಿಂದ ಅವಿಷ್ಟನ್ನೂ ಉತ್ತರ ಪ್ರದೇಶ ಮತ್ತು ಬಿಹಾರದ ವ್ಯಾಪಾರಿಗಳು ಕೊಂಡುಕೊಂಡರು..ಎಷ್ಟು ರೂಪಾಯಿಗೆ ಗೊತ್ತಾ? 1.33 ಕೋಟಿ ರೂಪಾಯಿಗಳಿಗೆ! ಅದೃಷ್ಟ ಅಂದ್ರೆ ಇದೇ ತಾನೇ?ಇದನ್ನೂ ಓದಿ: ಒಂದು ಮೀನು, 17 ಕೆಜಿ: ಕೃಷ್ಣಾ ನದಿಯಲ್ಲಿ ಮೀನುಗಾರರಿಗೆ ಬಂಪರ್, ಭಾರೀ ಗಾತ್ರದ ಮೀನು ಎಳೆದು ತರುವಷ್ಟರಲ್ಲಿ ಬೇಸ್ತು ಬಿದ್ದ ಬೆಸ್ತರು!

ತಾನು ಹಿಡಿದಿದ್ದು ಅತಿ ಅಪರೂಪದ ಘೋಲ್ ಮೀನು ಅನ್ನೋದು ಬಹಳ ಸಮಯದವರಗೆ ಚಂದ್ರಕಾಂತ್​ಗೆ ಗೊತ್ತೇ ಇರಲಿಲ್ವಂತೆ. ಆಗಸ್ಟ್ 15ರಂದು 10 ಜನ ಸಹಚರರ ಜೊತೆಗೆ ದೋಣಿಯಲ್ಲಿ ಮೀನು ಹಿಡಿಯೋಕೆ ಸಮುದ್ರಕ್ಕೆ ಇಳಿದಿದ್ದ ಚಂದ್ರಕಾಂತ್. ಮರಳಿ ಬಂದ ನಂತರ ಬದಲಾದ ತನ್ನ ಅದೃಷ್ಟದಿಂದ ಇದುವರಗೆ ತನಗೆ ಇರುವ ಎಲ್ಲಾ ಸಾಲಗಳು ಒಂದೇ ಏಟಿಗೆ ತೀರಿ ಹೋದವು ಎಂದಿದ್ದಾನೆ ಆತ.


ಈತ ಘೋಲ್ ಮೀನು ಹಿಡಿದಿದ್ದಾನೆ ಎನ್ನುವ ವಿಚಾರ ಕ್ಷಣಮಾತ್ರದಲ್ಲಿ ಎಲ್ಲರಿಗೂ ಗೊತ್ತಾಗಿ ಹೋಯ್ತಂತೆ. ನಾ ಮುಂದು ತಾ ಮುಂದು ಎಂದು ವ್ಯಾಪಾರಿಗಳು, ಪ್ರವಾಸಿಗರು ಎಲ್ಲರೂ ಬಂದು ಕೊಳ್ಳುವ ಆಸಕ್ತಿ ತೋರಿಸಿದ್ರಂತೆ. ಅತೀ ಹೆಚ್ಚು ಹಣ ನೀಡಿದ ವ್ಯಕ್ತಿಗೆ ಮೀನು ಮಾರಿದ್ದಾನೆ ಚಂದ್ರಕಾಂತ್.Protonibea diacanthus ಎನ್ನುವ ವೈಜ್ಞಾನಿಕ ಹೆಸರಿರುವ ಘೋಲ್ ಮೀನು Blackspotted Croaker fish ಎಂದೂ ಕರೆಯುತ್ತಾರೆ. ಥೈಲ್ಯಾಂಡ್, ಹಾಂಕಾಂಗ್, ಸಿಂಗಾಪೊರ್, ಮಲೇಷ್ಯಾ, ಇಂಡೋನೇಷ್ಯಾದಲ್ಲಿ ಈ ಮೀನಿಗೆ ಭಾರೀ ಬೇಡಿಕೆ ಇದೆ. ಈ ಮೀನನ್ನು ಸಮುದ್ರದ ಬಂಗಾರ ಎಂದೂ ಕರೆಯುತ್ತಾರಂತೆ. ಘೋಲ್ ಮೀನುಗಳ ರೆಕ್ಕೆಗಳಿಗೆ ಅತ್ಯುತ್ತಮ ಔಷಧೀಯ ಗುಣಗಳಿವೆ. ಇವು ಕರಗಬಲ್ಲ ಹೊಲಿಗೆಗಳ ತಯಾರಿಕೆಯಲ್ಲಿ ಬಳಕೆಯಾಗುತ್ತವೆ. ಸಿಂಗಾಪುರದಲ್ಲಿ ಇದನ್ನು ವೈನ್ ಪ್ಯೂರಿಫಿಕೇಶನ್​ಗೂ ಬಳಸುತ್ತಾರೆ.


ಸಮುದ್ರದಲ್ಲಿ ಮಾಲಿನ್ಯ ಹೆಚ್ಚಾಗಿರೋದ್ರಿಂದ ಈ ಮೀನುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಹಾಗಾಗಿ ಈ ಮೀನುಗಳಿಗಾಗಿ ಮೀನುಗಾರರು ಸಮುದ್ರದಲ್ಲಿ ಬಹಳ ಆಳದವರಗೆ ಹೋಗಬೇಕಾಗುತ್ತದೆ. ಅದಕ್ಕಾಗಿ ತಗಲುವ ಖರ್ಚು ಕೂಡಾ ಹೆಚ್ಚಾಗಿರುವುದರಿಂದ ಮmೀನಿನ ಬೆಲೆಯೂ ದುಬಾರಿಯಾಗಿದೆ ಎನ್ನಲಾಗಿದೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

Published by:Soumya KN
First published: